ಪಾಕಿಸ್ತಾನವನ್ನ ಬಗ್ಗು ಬಡಿದ ಭಾರತದ ಯುವ ಪಡೆ, ಅಂಡರ್-19 ವಿಶ್ವಕಪ್ ಫೈನಲ್​ಗೆ ಭರ್ಜರಿ ಎಂಟ್ರಿ

ನಿರೀಕ್ಷೆಯಂತೆ ಅಂಡರ್ 19 ವಿಶ್ವಕಪ್​ನ ಸೆಮಿಫೈನಲ್ ಪಂದ್ಯದಲ್ಲಿ, ಭಾರತದ ಯುವ ಪಡೆ ಬದ್ಧವೈರಿ ಪಾಕಿಸ್ತಾನದ ಹೆಡೆ ಮುರಿ ಕಟ್ಟಿ ಫೈನಲ್​ಗೆ ಭರ್ಜರಿ ಎಂಟ್ರಿ ಕೊಟ್ಟಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ: ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ರೊಹೈಲ್ ನಜೀರ್ ಮೊದಲು ಬ್ಯಾಟಿಂಗ್ ಮಾಡೋಕೆ ಮುಂದಾಗ್ತಾನೆ. ಆದ್ರೆ ಪಾಕ್ ನಾಯಕನ ಲೆಕ್ಕಾಚಾರವನ್ನ ಭಾರತದ ಬೌಲರ್​ಗಳು ಆರಂಭದಿಂದಲೇ ಉಲ್ಟಾ ಮಾಡುತ್ತ ಮುನ್ನುಗ್ಗಿದ್ರು. ಆರಂಭಿಕ ಮೊಹಮ್ಮದ್ ಹುರೈರಾಗೆ ಸುಶಾಂತ್ ಮಿಶ್ರಾ ಗೇಟ್ ಪಾಸ್ ನೀಡಿದ್ರೆ, ಇನ್ನು ಖಾತೆ […]

ಪಾಕಿಸ್ತಾನವನ್ನ ಬಗ್ಗು ಬಡಿದ ಭಾರತದ ಯುವ ಪಡೆ, ಅಂಡರ್-19 ವಿಶ್ವಕಪ್ ಫೈನಲ್​ಗೆ ಭರ್ಜರಿ ಎಂಟ್ರಿ
Follow us
ಸಾಧು ಶ್ರೀನಾಥ್​
|

Updated on: Feb 05, 2020 | 9:54 AM

ನಿರೀಕ್ಷೆಯಂತೆ ಅಂಡರ್ 19 ವಿಶ್ವಕಪ್​ನ ಸೆಮಿಫೈನಲ್ ಪಂದ್ಯದಲ್ಲಿ, ಭಾರತದ ಯುವ ಪಡೆ ಬದ್ಧವೈರಿ ಪಾಕಿಸ್ತಾನದ ಹೆಡೆ ಮುರಿ ಕಟ್ಟಿ ಫೈನಲ್​ಗೆ ಭರ್ಜರಿ ಎಂಟ್ರಿ ಕೊಟ್ಟಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ: ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ರೊಹೈಲ್ ನಜೀರ್ ಮೊದಲು ಬ್ಯಾಟಿಂಗ್ ಮಾಡೋಕೆ ಮುಂದಾಗ್ತಾನೆ. ಆದ್ರೆ ಪಾಕ್ ನಾಯಕನ ಲೆಕ್ಕಾಚಾರವನ್ನ ಭಾರತದ ಬೌಲರ್​ಗಳು ಆರಂಭದಿಂದಲೇ ಉಲ್ಟಾ ಮಾಡುತ್ತ ಮುನ್ನುಗ್ಗಿದ್ರು. ಆರಂಭಿಕ ಮೊಹಮ್ಮದ್ ಹುರೈರಾಗೆ ಸುಶಾಂತ್ ಮಿಶ್ರಾ ಗೇಟ್ ಪಾಸ್ ನೀಡಿದ್ರೆ, ಇನ್ನು ಖಾತೆ ತೆರೆಯದ ಫಹಾದ್ ಮುನೀರ್​ಗೆ ರವಿ ಪೆವಿಲಿಯನ್ ಹಾದಿ ತೊರಿಸಿದ.

ಅರ್ಧಶತಕ ಸಿಡಿಸಿದ ಹೈದರ್, ನಾಯಕ ನಜೀರ್: 34 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಪಾಕ್​ಗೆ ಆಸರೆಯಾಗಿದ್ದು ಆರಂಭಿಕ ಹೈದರ್ ಅಲಿ ಮತ್ತು ನಾಯಕ ರೊಹೈಲ್ ನಜೀರ್. ತಲಾ ಅರ್ಧಶತಕ ಸಿಡಿಸಿದ ಈ ಜೋಡಿ ಪಾಕ್​ ಚೇತರಿಸಿಕೊಳ್ಳೋದಕ್ಕೆ ಕಾರಣವಾದ್ರು. ಆದ್ರೆ 56 ರನ್​ಗಳಿಸಿದ್ದ ಹೈದರ್​ಗೆ ಜೈಸ್ವಾಲ್ ಗೇಟ್ ಪಾಸ್ ನೀಡಿದ್ರೆ, 62 ರನ್​ಗಳಿಸಿದ್ದ ನಾಯಕ ನಜೀರ್ ಆರ್ಭಟಕ್ಕೆ ಸುಶಾಂತ್ ಬ್ರೇಕ್ ಹಾಕಿದ. ಇವರಿಬ್ರು ಗೂಡ ಸೇರಿಕೊಂಡ ಬಳಿಕ ಬಂದ ಪಾಕ್ ಬ್ಯಾಟ್ಸ್​ಮನ್​ಗಳಿಗೆ, ಭಾರತದ ಹುಡುಗ್ರು ಅಕ್ಷರಷಃ ಕಂಟಕವಾಗಿಬಿಟ್ರು.

ಮೈ ನವಿರೇಳಿಸೋ ಕ್ಯಾಚ್ ಹಿಡಿದ ದಿವ್ಯಾಂಶ್ ಸಕ್ಸೇನಾ: ಇನ್ನು ಅಥರ್ವ್ ಅಂಕೋಲೇಕರ್ ಬೌಲಿಂಗ್​ನಲ್ಲಿ ಪಾಕ್​ನ ಮೊಹಮ್ಮದ್ ಹ್ಯಾರಿಸ್ ನೀಡಿದ ಕ್ಯಾಚ್ ಅನ್ನ, ದಿವ್ಯಾಂಶ್ ಸಕ್ಸೇನಾ ಡೀಪ್ ಮಿಡ್ ವಿಕೆಟ್​ನಲ್ಲಿ ಮೈ ನವಿರೇಳಿಸೋ ಹಾಗೇ ಹಿಡಿದಿದ್ದು ಪಂದ್ಯದ ವಿಶೇಷವಾಗಿತ್ತು.

26 ರನ್​ಗಳಿಗೆ ಕೊನೆ 5 ವಿಕೆಟ್ ಕಳೆದುಕೊಂಡ ಪಾಕ್: ಇನ್ನು ಕೊನೆಯಲ್ಲಿ ಭಾರತೀಯ ಬೌಲರ್​ಗಳು ಎಂತಾ ಕರಾರುವಕ್ ದಾಳಿ ನಡೆಸಿದ್ರು ಅಂದ್ರೆ, ಕೇವಲ 26 ರನ್​ಗಳಿಗೆ ಪಾಕಿಸ್ತಾನದ ಕೊನೆಯ ಐದು ವಿಕೆಟ್​ಗಳನ್ನ ಪಡೆದ್ರು.

172 ರನ್​ಗಳಿಗೆ ಆಲೌಟ್ ಆದ ಪಾಕಿಸ್ತಾನ: ಪ್ರಿಯಮ್ ಪಡೆಯ ಬೊಂಬಾಟ್ ಬೌಲಿಂಗ್ ಮುಂದೆ ಪ್ರತ್ಯುತ್ತರ ನೀಡೋಕಾಗದ ಪಾಕ್ 43.1 ಓವರ್​ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 172 ರನ್​ಗಳಿಗೆ ಆಲೌಟ್ ಆಯ್ತು. ಭಾರತದ ಪರ ಸುಶಾಂತ್ ಮಿಶ್ರಾ 3 ವಿಕೆಟ್ ಪಡೆದ್ರೆ, ಕಾರ್ತಿಕ್ ತ್ಯಾಗಿ ಮತ್ತು ರವಿ ಬಿಷ್ಣೋಯಿ ತಲಾ 2 ವಿಕೆಟ್ ಪಡೆದು ಮಿಂಚಿದ್ರು.

ಪಾಕ್ ಬೌಲರ್​ಗಳನ್ನ ಚೆಂಡಾಡಿದ ಜೈಸ್ವಾಲ್, ಸಕ್ಸೇನಾ: ಪಾಕ್ ನೀಡಿದ 173 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಭಾರತಕ್ಕೆ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ದಿವ್ಯಾಂಶ್ ಸಕ್ಸೇನಾ ಜೋಡಿ ಈ ಟಾರ್ಗೆಟ್ ನಮಗೆ ಲೆಕ್ಕವೇ ಇಲ್ಲಾ ಅನ್ನೋ ಹಾಗೇ ಬ್ಯಾಟಿಂಗ್ ಮಾಡಿತು. ಪಾಕ್ ಬೌಲರ್​ಗಳನ್ನ ಯಾವುದೇ ಮುಲಾಜಿಲ್ಲದೇ ದಂಡಿಸಿದ ಈ ಜೋಡಿ, ರನ್ ಮಳೆ ಹರಿಸಿ ತಲಾ ಅರ್ಧಶತಕ ಸಿಡಿಸಿ ಸಂಭ್ರಮಿಸಿತು.

ಭರ್ಜರಿ ಸಿಕ್ಸರ್​ನೊಂದಿಗೆ ಚೊಚ್ಚಲ ಶತಕ ಸಿಡಿಸಿದ ಜೈಸ್ವಾಲ್: ಒಂದೆಡೆ ದಿವ್ಯಾಂಶ್ ಸಕ್ಸೆನಾ ಕೂಲ್ ಆಗಿ ಬ್ಯಾಟಿಂಗ್ ಮಾಡಿದ್ರೆ, ಮತ್ತೊಂದೆಡೆ ಪಾಕ್ ಬೌಲರ್​ಗಳ ಮೇಲೆ ಸವಾರಿ ಮಾಡಿದ್ದು ಯಶಸ್ವಿ ಜೈಸ್ವಾಲ್. ಬೊಂಬಾಟ್ ಬ್ಯಾಟಿಂಗ್ ಮಾಡಿದ ಜೈಸ್ವಾಲ್ ತನ್ನ ಅದ್ಭುತ ಶಾಟ್ ಸೆಲೆಕ್ಷನ್​ನಿಂದ ಪಾಕ್ ಬೌಲರ್​ಗಳು ಮೈ ಪರಚಿಕೊಳ್ಳೋ ಹಾಗೇ ಮಾಡಿದೆ. ಅಷ್ಟೇ ಅಲ್ಲ. ಭರ್ಜರಿ ಸಿಕ್ಸರ್​ನೊಂದಿಗೆ ಭಾರತಕ್ಕೆ ಗೆಲುವು ತಂದುಕೊಟ್ಟಿದೆ.

ಅಂತಿಮವಾಗಿ ಭಾರತ ಅಂಡರ್ ನೈಂಟೀನ್ ತಂಡ ಕೇವಲ 35. 2 ಓವರ್​ಗಳಿಗೆ ಪಾಕ್ ನೀಡಿದ ಗುರಿಯನ್ನ ಯಾವುದೇ ವಿಕೆಟ್ ನಷ್ಟವಿಲ್ಲದೇ 10 ವಿಕೆಟ್​ಗಳ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿತು. ಇನ್ನು ಬೌಲಿಂಗ್​ನಲ್ಲಿ ಒಂದು ವಿಕೆಟ್. ಬ್ಯಾಟಿಂಗ್​ನಲ್ಲಿ ಭರ್ಜರಿ ಶತಕ ಸಿಡಿಸಿ ಗೆಲುವು ತಂದುಕೊಟ್ಟ ಜೈಸ್ವಾಲ್, ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದ್ರು. ಈ ಗೆಲುವಿನೊಂದಿಗೆ ಭಾರತ ಅಂಡರ್ ನೈಂಟೀನ್ ವಿಶ್ವಕಪ್​ನಲ್ಲಿ 7ನೇ ಬಾರಿಗೆ ಫೈನಲ್​ಗೆ ಎಂಟ್ರಿ ಕೊಟ್ಟಂತಾಗಿದೆ.

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ