ಕೊರೊನಾ ಭೀತಿ: ಈ ಬಾರಿ ಐಪಿಎಲ್ ನಡೆಯೋದೇ ಅನುಮಾನ!

ದೈತ್ಯ ಕೊರೊನಾ ವೈರಸ್​ನಿಂದಾಗಿ ಈ ಬಾರಿಯ ಐಪಿಎಲ್ ಸೀಸನ್ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಯಾಕಂದ್ರೆ ಐಪಿಎಲ್ ಪಂದ್ಯಗಳು ನಡೆಯೋ ಒಂದೊಂದೇ ರಾಜ್ಯಗಳು ಕೊರೊನಾ ಭೀತಿಯಿಂದಾಗಿ ತಮ್ಮಲ್ಲಿ ಐಪಿಎಲ್ ಪಂದ್ಯಗಳು ನಡೆಯೋದು ಬೇಡಾ ಅಂತಾ ಪಟ್ಟು ಹಿಡಿಯುತ್ತಿವೆ. ಮೊದಲಿಗೆ ಮಹಾರಾಷ್ಟ್ರ ಸರ್ಕಾರ ಮುಂಬೈನಲ್ಲಿ ಐಪಿಎಲ್ ಪಂದ್ಯಗಳು ನಡೆಯೋದು ಬೇಡಾ ಅಂತಾ ಅಪಸ್ವರ ತೆಗೆದ ಬೆನ್ನಲ್ಲೇ, ನಮ್ಮ ಕರುನಾಡಿನಲ್ಲೂ ಐಪಿಎಲ್ ಪಂದ್ಯಗಳು ನಡೆಯೋದು ಬೇಡಾ ಅನ್ನೋ ಕೂಗು ಕೇಳಿ ಬಂದಿದೆ. ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಐಪಿಎಲ್ ಪಂದ್ಯಗಳನ್ನ […]

ಕೊರೊನಾ ಭೀತಿ: ಈ ಬಾರಿ ಐಪಿಎಲ್ ನಡೆಯೋದೇ ಅನುಮಾನ!
Follow us
ಸಾಧು ಶ್ರೀನಾಥ್​
|

Updated on: Mar 12, 2020 | 10:48 AM

ದೈತ್ಯ ಕೊರೊನಾ ವೈರಸ್​ನಿಂದಾಗಿ ಈ ಬಾರಿಯ ಐಪಿಎಲ್ ಸೀಸನ್ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಯಾಕಂದ್ರೆ ಐಪಿಎಲ್ ಪಂದ್ಯಗಳು ನಡೆಯೋ ಒಂದೊಂದೇ ರಾಜ್ಯಗಳು ಕೊರೊನಾ ಭೀತಿಯಿಂದಾಗಿ ತಮ್ಮಲ್ಲಿ ಐಪಿಎಲ್ ಪಂದ್ಯಗಳು ನಡೆಯೋದು ಬೇಡಾ ಅಂತಾ ಪಟ್ಟು ಹಿಡಿಯುತ್ತಿವೆ.

ಮೊದಲಿಗೆ ಮಹಾರಾಷ್ಟ್ರ ಸರ್ಕಾರ ಮುಂಬೈನಲ್ಲಿ ಐಪಿಎಲ್ ಪಂದ್ಯಗಳು ನಡೆಯೋದು ಬೇಡಾ ಅಂತಾ ಅಪಸ್ವರ ತೆಗೆದ ಬೆನ್ನಲ್ಲೇ, ನಮ್ಮ ಕರುನಾಡಿನಲ್ಲೂ ಐಪಿಎಲ್ ಪಂದ್ಯಗಳು ನಡೆಯೋದು ಬೇಡಾ ಅನ್ನೋ ಕೂಗು ಕೇಳಿ ಬಂದಿದೆ. ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಐಪಿಎಲ್ ಪಂದ್ಯಗಳನ್ನ ನಡೆಸದಿರುವಂತೆ ಕೇಂದ್ರಕ್ಕೆ ಪತ್ರ ಬರೆದಿರೋದಾಗಿ ತಿಳಿಸಿದ್ರು.

ಇನ್ನೂ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ತವರು ಕ್ರೀಡಾಂಗಣವಾಗಿರೋ ಚಿನ್ನಸ್ವಾಮಿಯಲ್ಲಿ ಒಟ್ಟು 7 ಐಪಿಎಲ್ ಪಂದ್ಯಗಳು ನಡೆಯಲಿವೆ. ಇದ್ರಿಂದ ರಾಜ್ಯ ಕ್ರಿಕೆಟ್ ಸಂಸ್ಥೆ ಕೂಡ, ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತೋ ಅದೇ ನಮ್ಮ ನಿರ್ಧಾರ ಅಂತ ತಿಳಿಸಿದೆ.

ಐಪಿಎಲ್ ತಡೆಗೆ ಮದ್ರಾಸ್ ಹೈಕೋರ್ಟ್​ನಲ್ಲಿ ಅರ್ಜಿ! ಆದ್ರೀಗ ಐಪಿಎಲ್ ನಡೆಸಲೇಬಾರದು ಅಂತಾ ದೇಶಾದ್ಯಂತ ಕೂಗು ಜೋರಾಗಿದೆ. ಈ ನಡುವೆ ಇದೇ ಮಾರ್ಚ್ 29 ರಿಂದ ಐಪಿಎಲ್ ಪ್ರಾರಂಭವಾಗಬೇಕಿದೆ. ಆದ್ರೆ ಐಪಿಎಲ್​ಗೆ ತಡೆ ನೀಡಲು ಬಿಸಿಸಿಐಗೆ ಕೇಂದ್ರ ಸರ್ಕಾರ ಸೂಚಿಸುವಂತೆ ಆದೇಶ ಹೊರಡಿಸಲು ಕೋರಿ ಮದ್ರಾಸ್ ಹೈಕೋರ್ಟ್​ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ. ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಐಪಿಎಲ್​ಗೆ ಅವಕಾಶ ಮಾಡಿಕೊಡಬಾರದು. ಕೇಂದ್ರ ಸರ್ಕಾರ ಬಿಸಿಸಿಐಗೆ ಆಟ ರದ್ದುಗೊಳಿಸುವಂತೆ ಸೂಚನೆ ನೀಡಬೇಕೆಂದು ಸೂಚಿಸಲು ಕೋರ್ಟ್ ಆದೇಶ ಹೊರಡಿಸಿ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಐಪಿಎಲ್ ಟಿಕೆಟ್ ಮಾರಾಟಕ್ಕೆ ನಿರ್ಬಂಧ: ಈಗಾಗಲೇ ಮಹರಾಷ್ಟ್ರ ಸರಕಾರದ ಆರೋಗ್ಯ ಸಚಿವ ರಾಜೇಶ್ ಥೋಪೆ, ಐಪಿಎಲ್ ಮುಂದೂಡಬೇಕು. ಮಹಾರಾಷ್ಟ್ರದಲ್ಲಿ ಐಪಿಎಲ್ ಪಂದ್ಯಗಳನ್ನ ನಡೆಸಬಾರದು ಅಂತಾ, ಕೇಂದ್ರಕ್ಕೆ ಪ್ರತ ಬರೆದಿದ್ರು. ರಾಜೇಶ್ ಥೋಪೆ ಹೀಗೆ ಪತ್ರ ಬರದ ಮೇಲೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ವೇಳಾಪಟ್ಟಿಯಂತೆ ಐಪಿಎಲ್ ನಡೆಸೇ ತೀರ್ತಿವಿ ಅಂದಿದ್ರು. ಆದ್ರೀಗ ಒಂದು ಹೆಜ್ಜೆ ಮುಂದಿಟ್ಟಿರೋ ಮಹಾರಾಷ್ಟ್ರ ಸರಕಾರ ಐಪಿಎಲ್ ಟಿಕೆಟ್ ಮಾರಾಟಕ್ಕೆ ನಿರ್ಬಂಧ ಹೇರಲು ಮುಂದಾಗಿದೆ.

ಧರ್ಮಶಾಲಾದಲ್ಲೇ ಅಭಿಮಾನಿಗಳ ಕೊರತೆ: ಇನ್ನು ಇಂದಿನಿಂದ ಆರಂಭವಾಗಿರೋ ಇಂಡೋ-ಆಫ್ರಿಕಾ ಏಕದಿನ ಸರಣಿಗೂ ಕೊರೊನಾ ಭೂತ ಕಾಡ್ತಿದೆ. ಇಂದು ಧರ್ಮಶಾಲಾದಲ್ಲಿ ನಡೆಯೋ ಮೊದಲ ಏಕದಿನ ಪಂದ್ಯಕ್ಕೂ ಅಭಿಮಾನಿಗಳ ಕೊರತೆ ಕಾಡ್ತಿದೆ. ಸರಿ ಸುಮಾರು ಆರು ಸಾವಿರ ಟಿಕೆಟ್​ಗಳ ಮಾರಾಟವಾಗದೇ ಹಾಗೇ ಉಳಿದಿದೆ. ಈಗ ನಡೆಯುತ್ತಿರೋ ಏಕದಿನ ಪಂದ್ಯಕ್ಕೆ ಹೀಗಾದ್ರೆ, ಮಾರ್ಚ್ 29ರಿಂದ ಆರಂಭವಾಗೋ ಐಪಿಎಲ್ ಪಂದ್ಯಗಳಿಗೆ ಭಾರಿ ಪ್ರಮಾಣದಲ್ಲಿ ಅಭಿಮಾನಿಗಳ ಅಲಭ್ಯತೆ ಕಾಡೋದ್ರಲ್ಲಿ ಅನುಮಾನವೇ ಇಲ್ಲ.

ಐಪಿಎಲ್ ಆಯೋಜನೆ ಕಷ್ಟಸಾಧ್ಯ: ಮತ್ತೊಂದೆಡೆ ಬಿಸಿಸಿಐ ಸಾವಿರಾರು ಕೋಟಿ ರೂಪಾಯಿ ನಷ್ಟವಾಗುತ್ತೆ ಅನ್ನೋ ಕಾರಣಕ್ಕೆ ಐಪಿಎಲ್ ಅನ್ನ ವೇಳಾಪಟ್ಟಿಯಂತೆ ನಡೆಸೋದಕ್ಕೆ ಮುಂದಾಗಿದೆ. ಆದ್ರೆ ದಿನದಿಂದ ದಿನಕ್ಕೆ ಭಾರತದಲ್ಲೂ ಕೊರೊನಾ ವೈರಸ್ ಪ್ರಕರಣ ಜಾಸ್ತಿಯಾಗ್ತಿದೆ. ಹೀಗಾಗಿ ಈಗಲೇ ಮಹಾರಾಷ್ಟ್ರ ಮತ್ತು ನಮ್ಮ ಕರ್ನಾಟಕ ಸರ್ಕಾರ ಐಪಿಎಲ್ ಪಂದ್ಯ ರದ್ದು ಮಾಡ್ಬೇಕು ಇಲ್ಲಾ ಬೇರೆ ಕಡೆ ಸ್ಥಳಾಂತರಿಸಬೇಕು ಅಂತಾ ಪಟ್ಟು ಹಿಡಿದಿವೆ.

ಇದೇ ಕೂಗು ದೇಶಾದ್ಯಂತ ಜೋರಾದ್ರೆ, ಈ ಸೀಸನ್​ನ ಐಪಿಎಲ್ ರದ್ದಾಗೋದ್ರಲ್ಲಿ ಅನುಮಾನವೇ ಇಲ್ಲ. ಯಾಕಂದ್ರೆ, ಈಗಿನ ವೇಳಾಪಟ್ಟಿಯಂತೆ ಐಪಿಎಲ್ ಆಯೋಜಿಸದೇ ಇದ್ರೆ, ಈ ವರ್ಷ ಐಪಿಎಲ್ ನಡೆಯಲ್ಲ. ಐಪಿಎಲ್ ನಂತ್ರ ಆಸ್ಟ್ರೇಲಿಯಾದಲ್ಲಿ ಟಿ-ಟ್ವೆಂಟಿ ವಿಶ್ವಕಪ್ ನಡೆಯಲಿದೆ. ಆದಾದ ನಂತ್ರ ಎಲ್ಲಾ ತಂಡಗಳು ಬ್ಯಾಕ್ ಟು ಬ್ಯಾಕ್ ಸರಣಿಗಳನ್ನ ಆಡಲಿವೆ. ಹೀಗಾಗಿ ಈ ವರ್ಷ ಐಪಿಎಲ್ ಆಯೋಜನೆ ಕಷ್ಟಸಾಧ್ಯ.

ಭಾರತದಲ್ಲಿ ಕಿಲ್ಲರ್ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದ್ದು, ಅದನ್ನ ಮಟ್ಟಹಾಕೋದಕ್ಕೆ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲೇಬೇಕಿದೆ. ಯಾಕಂದ್ರೆ ಕೊರೊನಾ ಸೋಂಕಿತರು ಹಾದು ಹೋದ ರಾಜ್ಯದಲ್ಲೆಲ್ಲಾ ಕೊರೊನಾ ವೈರಸ್ ಹರಡ್ತಿದೆ. ಇಂತಹದ್ರಲ್ಲಿ ಒಂದೇ ಕಡೆ ಸಾವಿರಾರು ಸಂಖ್ಯೆಯ ಅಭಿಮಾನಿಗಳು ನರೆದ್ರೆ, ಅದರಿಂದಾಗೋ ಅಡ್ಡ ಪರಿಣಾಮವನ್ನ ಊಹಿಸಿಕೊಳ್ಳೋದು ಕಷ್ಟ ಸಾಧ್ಯ.

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್