- TV9 Kannada Kannada News Photos Cricket Photos India vs NZ T20s: Ishan Kishan Ruled Out 3rd t20 Due to Muscle Strain
ಭಾರತಕ್ಕೆ ಗಾಯದ ಆಘಾತ; 3ನೇ ಟಿ20 ಪಂದ್ಯಕ್ಕೂ ಇಶಾನ್ ಕಿಶನ್ ಅಲಭ್ಯ..!
ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತಕ್ಕೆ ಆಘಾತ ಎದುರಾಗಿದೆ. ವಿಕೆಟ್‌ಕೀಪರ್ ಇಶಾನ್ ಕಿಶನ್ ಸ್ನಾಯು ಸೆಳೆತದಿಂದಾಗಿ 2 ಮತ್ತು 3ನೇ ಟಿ20 ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಮೊದಲ ಪಂದ್ಯದಲ್ಲಿ ಗಾಯಗೊಂಡ ಇಶಾನ್ ಬಿಸಿಸಿಐ ವೈದ್ಯಕೀಯ ತಂಡದ ನಿಗಾದಲ್ಲಿದ್ದಾರೆ. ಅವರ ಸ್ಥಾನಕ್ಕೆ ಕುಮಾರ್ ಕುಶಾಗ್ರ ಅವರನ್ನು ಸೇರಿಸಿಕೊಳ್ಳಲಾಗಿದ್ದು, ವೈಭವ್ ಸೂರ್ಯವಂಶಿಗೆ ಪ್ಲೇಯಿಂಗ್ XIನಲ್ಲಿ ಅವಕಾಶ ಲಭಿಸಿದೆ.
Updated on: Oct 24, 2026 | 2:48 PM

ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡಕ್ಕೆ ಒಂದು ಕೆಟ್ಟ ಸುದ್ದಿ ಎದುರಾಗಿದೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಸ್ನಾಯು ಸೆಳೆತದ ಕಾರಣದಿಂದ ಎರಡನೇ ಟಿ20 ಮಾತ್ರವಲ್ಲದೆ, ಮೂರನೇ ಟಿ20 ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ(PC-PTI).

ಗುರುವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ ಸ್ನಾಯು ಸೆಳೆತದಿಂದ ಬಳಲಿದರು. ಹೀಗಾಗಿ ಆ ಪಂದ್ಯದಲ್ಲಿ ಅವರು ನಾಲ್ಕನೇ ಕ್ರಮಾಂಕದ ಬದಲು ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ತಿಲಕ್ ವರ್ಮಾ ಮೂರನೇ ಕ್ರಮಾಂಕದಲ್ಲಿ ಆಡಿದ್ದರು. ಆದರೆ, ಇಶಾನ್ ಕೇವಲ 3 ಎಸೆತಗಳನ್ನು ಎದುರಿಸಿ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು(PC-PTI).

ಎರಡನೇ ಟಿ20 ಪಂದ್ಯಕ್ಕೂ ಮುನ್ನ ಕಿಶನ್ ಗಾಯದ ಬಗ್ಗೆ ಮಾಹಿತಿ ನೀಡಿದ್ದ ಬಿಸಿಸಿಐ, ‘ಇಶಾನ್ ಕಿಶನ್ ಅವರ ಬಲಗಾಲಿನಲ್ಲಿ ಸೆಳೆತ ಉಂಟಾಗಿದೆ. ಸದ್ಯ ಅವರು ಬಿಸಿಸಿಐ ವೈದ್ಯಕೀಯ ತಂಡದ ನಿಗಾದಲ್ಲಿದ್ದಾರೆ. ಹೀಗಾಗಿ, ಎರಡನೇ ಪಂದ್ಯದಲ್ಲಿ ಕಿಶನ್ ಕಣಕ್ಕಿಳಿಯುವುದಿಲ್ಲ’ ಎಂಬ ಮಾಹಿತಿ ನೀಡಿತ್ತು. ಹೀಗಾಗಿ ಕಿಶನ್ 2ನೇ ಟಿ20 ಪಂದ್ಯವನ್ನು ಆಡದಿರುವುದು ಖಚಿತವಾಗಿತ್ತು(PC-PTI).

ಆದಾಗ್ಯೂ ಮೂರನೇ ಟಿ20 ಪಂದ್ಯದ ವೇಳೆಗೆ ಕಿಶನ್ ಚೇತರಿಸಿಕೊಳ್ಳುವ ನಿರೀಕ್ಷೆಯನ್ನು ಅಭಿಮಾನಿಗಳು ಹೊಂದಿದ್ದರು. ಆದರೀಗ ವರದಿಯಾಗಿರುವಂತೆ ಕಿಶನ್ ಚೇತರಿಕೆಗೆ ಇನ್ನು ಕಾಲಾವಕಾಶ ಬೇಕಾಗಿರುವುದರಿಂದ ಅವರನ್ನು ಮೂರನೇ ಟಿ20 ಪಂದ್ಯದಿಂದಲೂ ಹೊರಗಿಡಲಾಗುತ್ತಿದೆ. ಆದರೆ ಈ ಬಗ್ಗೆ ಬಿಸಿಸಿಐ ಯಾವುದೇ ಪ್ರಕಟಣೆ ಹೊರಡಿಸದಿದ್ದರೂ 2ನೇ ಪಂದ್ಯದ ಬಳಿಕ ಮಾಹಿತಿ ನೀಡುವ ಸಾಧ್ಯತೆಗಳಿವೆ(PC-PTI).

ಇನ್ನು ಎರಡನೇ ಟಿ20 ಪಂದ್ಯದಿಂದ ಹೊರಬಿದ್ದಿರುವ ಇಶಾನ್ ಕಿಶನ್ ಬದಲು ತಂಡದ ಆಡುವ ಹನ್ನೊಂದರ ಬಳಗದಲ್ಲಿ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಲಾಗಿದೆ. ಅಲ್ಲದೆ ಇಶಾನ್ ಕಿಶನ್ ಬದಲಿಗೆ ತಂಡಕ್ಕೆ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕುಮಾರ್ ಕುಶಾಗ್ರ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ(PC-PTI).

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More



