AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐದು ಬಾರಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಮುಂಬೈ ಇಂಡಿಯನ್ಸ್ ಹಾದಿ ಹೀಗಿದೆ ನೋಡಿ..

ಮರಳುಗಾಡಿನ ಮಹಾಯುದ್ಧದಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಈ ಮೂಲಕ ಮುಂಬೈ, ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನೋ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಲ್ಲಿ, ಅತೀ ಹೆಚ್ಚು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಹಿರಿಮೆಯನ್ನ ತನ್ನದಾಗಿಸಿಕೊಂಡಿದೆ. ನಿಜ.. ಈ ಬಾರಿಯೂ ಐಪಿಎಲ್ ಕಿರೀಟ ಮುಡಿಗೇರಿಸಿಕೊಳ್ಳೋ ಮೂಲಕ ಮುಂಬೈ ಇಂಡಿಯನ್ಸ್ ತಂಡ, ಐಪಿಎಲ್​ನಲ್ಲಿ ಒಟ್ಟು ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಸಾಧನೆ ಮಾಡಿದೆ. 2013, ಮೇ 26, ಭಾನುವಾರ ಚೆನ್ನೈ ಮಣಿಸಿ ಚಾಂಪಿಯನ್ 2013ರ […]

ಐದು ಬಾರಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಮುಂಬೈ ಇಂಡಿಯನ್ಸ್ ಹಾದಿ ಹೀಗಿದೆ ನೋಡಿ..
ಆಯೇಷಾ ಬಾನು
ಆಯೇಷಾ ಬಾನು|

Updated on: Nov 11, 2020 | 10:17 AM

Share

ಮರಳುಗಾಡಿನ ಮಹಾಯುದ್ಧದಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಈ ಮೂಲಕ ಮುಂಬೈ, ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನೋ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಲ್ಲಿ, ಅತೀ ಹೆಚ್ಚು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಹಿರಿಮೆಯನ್ನ ತನ್ನದಾಗಿಸಿಕೊಂಡಿದೆ.

ನಿಜ.. ಈ ಬಾರಿಯೂ ಐಪಿಎಲ್ ಕಿರೀಟ ಮುಡಿಗೇರಿಸಿಕೊಳ್ಳೋ ಮೂಲಕ ಮುಂಬೈ ಇಂಡಿಯನ್ಸ್ ತಂಡ, ಐಪಿಎಲ್​ನಲ್ಲಿ ಒಟ್ಟು ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಸಾಧನೆ ಮಾಡಿದೆ. 2013, ಮೇ 26, ಭಾನುವಾರ ಚೆನ್ನೈ ಮಣಿಸಿ ಚಾಂಪಿಯನ್ 2013ರ ಐಪಿಎಲ್ ಫೈನಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡ, ಚೆನ್ನೈ ತಂಡವನ್ನ ಮಣಿಸಿ ಚೊಚ್ಚಲ ಚಾಂಪಿಯನ್ ಪಟ್ಟವನ್ನ ಅಲಂಕರಿಸಿತು.

2015, ಮೇ 24, ಭಾನುವಾರ ಚೆನ್ನೈ ಮಣಿಸಿ ಚಾಂಪಿಯನ್ 2014ರ ಸಮ ಸಂಖ್ಯೆಯ ವರ್ಷದಲ್ಲಿ ಪ್ಲೇ ಆಫ್​ನಲ್ಲೇ ಹೊರ ನಡೆದ ಮುಂಬೈ ಇಂಡಿಯನ್ಸ್ ತಂಡ 2015ರಲ್ಲಿ ಮತ್ತೊಮ್ಮೆ ಚೆನ್ನೈ ತಂಡವನ್ನ ಮಣಿಸಿ 2ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ರು.

2017, ಮೇ 21, ಭಾನುವಾರ ಪುಣೆ ಮಣಿಸಿ ಚಾಂಪಿಯನ್ 2016ರ ಲೀಗ್ ಸ್ಟೇಜ್​ನಲ್ಲೇ ಹೊರ ನಡೆದ ಮುಂಬೈ ಇಂಡಿಯನ್ಸ್ 107ರ ಬೆಸ ಸಂಖ್ಯೆಯ ವರ್ಷದಲ್ಲಿ ಪುಣೆ ಸೂಪರ್ ಜೈಂಟ್ಸ್ ತಂಡವನ್ನ ಮಣಿಸಿ 3ನೇ ಬಾರಿಗೆ ಚಾಂಪಿಯನ್ ಆಯ್ತು.

2019 ಮೇ 12 ಭಾನುವಾರ ಚೆನ್ನೈ ಮಣಿಸಿ ಚಾಂಪಿಯನ್ ಹಾಗೇ 2018ರಲ್ಲಿ ನಡೆದ ಐಪಿಎಲ್​ನಲ್ಲೂ ಲೀಗ್ ಸ್ಟೇಜ್​ನಲ್ಲೇ ಸುಸ್ತಾದ ಮುಂಬೈ 2019ರಲ್ಲಿ 3ನೇ ಬಾರಿ ಫೈನಲ್​ನಲ್ಲಿ ಚೆನ್ನೈ ತಂಡವನ್ನ ಮಣಿಸಿ 4ನೇ ಬಾರಿ ಐಪಿಎಲ್ ಕಿರೀಟವನ್ನ ಮುಡಿಗೇರಿಸಿಕೊಳ್ತು.

2020 ನವೆಂಬರ್ 10 ಮಂಗಳವಾರ ಡೆಲ್ಲಿ ಮಣಿಸಿ ಚಾಂಪಿಯನ್ ಕಳೆದ ವರ್ಷ ಚೆನ್ನೈ ಮಣಿಸಿ ನಾಲ್ಕನೇ ಬಾರಿ ಟ್ರೋಫಿ ಎತ್ತಿ ಹಿಡಿದಿದ್ದ ಮುಂಬೈ ಈ ಬಾರಿ ಡೆಲ್ಲಿ ತಂಡವನ್ನ ಮಣಿಸಿ 5ನೇ ಬಾರಿ ಚಾಂಪಿಯನ್ ಪಟ್ಟವನ್ನ ಅಲಂಕರಿಸಿತು.

ಇನ್ನೊಂದು ಇಂಟ್ರಸ್ಟಿಂಗ್ ವಿಷ್ಯ ಏನಂದ್ರೆ, ಪ್ರತಿ ಸೀಸನ್​ನಲ್ಲೂ ಮುಂಬೈ ತಂಡ ಬೆಸ ಸಂಖ್ಯೆಯ ವರ್ಷದಲ್ಲೇ ಚಾಂಪಿಯನ್ ಆಗ್ತಿತ್ತು. ಆದ್ರೆ ಈ ಬಾರಿ ಮುಂಬೈ 2020ರ ಸಮಸಂಖ್ಯೆಯ ವರ್ಷದಲ್ಲಿ ಗೆದ್ದು ಇತಿಹಾಸವನ್ನ ಉಲ್ಟಾ ಮಾಡಿದೆ.

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.