AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 9 ಸೆಂಟಿಮೀಟರ್​ನಿಂದ ನೀರಜ್ ಚೋಪ್ರಾಗೆ ಕೈತಪ್ಪಿದ ಅಗ್ರಸ್ಥಾನ!

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆದ ಪ್ರತಿಷ್ಠಿತ ಲೂಸೇನ್ ಡೈಮಂಡ್ ಲೀಗ್ 2026 ರ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಜಗತ್ತಿನ ಪ್ರಮುಖ ಅಥ್ಲೀಟ್‌ಗಳ ನಡುವೆ ತೀವ್ರ ಪೈಪೋಟಿ ಕಂಡುಬಂದಿತು. ಈ ರೋಮಾಂಚಕ ಜಿದ್ದಾಜಿದ್ದಿನಲ್ಲಿ ಅಗ್ರ ಐದು ಸ್ಥಾನಗಳನ್ನು ಪಡೆದ ಕ್ರೀಡಾಪಟುಗಳ ಅಧಿಕೃತ ಅಂತಿಮ ಫಲಿತಾಂಶಗಳ ಪಟ್ಟಿ ಇಲ್ಲಿದೆ.

ಕೇವಲ 9 ಸೆಂಟಿಮೀಟರ್​ನಿಂದ ನೀರಜ್ ಚೋಪ್ರಾಗೆ ಕೈತಪ್ಪಿದ ಅಗ್ರಸ್ಥಾನ!
Neeraj Chopra
ಝಾಹಿರ್ ಯೂಸುಫ್
|

Updated on: Aug 22, 2026 | 9:58 AM

Share

ಭಾರತದ ಹೆಮ್ಮೆಯ ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರು ಲೂಸೇನ್ ಡೈಮಂಡ್ ಲೀಗ್ 2026 ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರೂ, ಕೂದಲೆಳೆ ಅಂತರದಲ್ಲಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಕೇವಲ 9 ಸೆಂಟಿಮೀಟರ್‌ಗಳ ವ್ಯತ್ಯಾಸದಿಂದ ಶ್ರೀಲಂಕಾದ ಉದಯೋನ್ಮುಖ ತಾರೆ ರುಮೇಶ್ ತರಂಗ ಪತಿರಾಗೆ ಅವರು ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಗಾಯದ ಬಳಿಕ ಭರ್ಜರಿ ಕಂಬ್ಯಾಕ್:

ಬೆನ್ನು ನೋವಿನ ಗಾಯದಿಂದ ಚೇತರಿಸಿಕೊಂಡು ಮೈದಾನಕ್ಕೆ ಮರಳಿದ್ದ ನೀರಜ್ ಚೋಪ್ರಾ, ತಮಗೆ ಸವಾಲಾಗಿದ್ದ 88 ಮೀಟರ್ ಗಡಿಯನ್ನು ಈ ಸೀಸನ್‌ನಲ್ಲಿ ಇದೇ ಮೊದಲ ಬಾರಿಗೆ ದಾಟಿದರು. ತಮ್ಮ ಎರಡನೇ ಯತ್ನದಲ್ಲಿ 88.05 ಮೀಟರ್ ದೂರ ಭರ್ಜಿ ಎಸೆದು ನೀರಜ್ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು.

9 ಸೆಂಟಿಮೀಟರ್‌ಗಳ ವ್ಯತ್ಯಾಸ:

ನೀರಜ್ ಚೋಪ್ರಾ ಅವರ ಈ ಭರ್ಜರಿ ಪ್ರದರ್ಶನಕ್ಕೆ ಶ್ರೀಲಂಕಾದ ರುಮೇಶ್ ಪತಿರಾಗೆ ತಕ್ಷಣವೇ ಕೌಂಟರ್ ನೀಡಿದರು. ತಮ್ಮ ಮೂರನೇ ಯತ್ನದಲ್ಲಿ 88.14 ಮೀಟರ್ ದೂರಕ್ಕೆ ಭರ್ಜಿ ಎಸೆಯುವ ಮೂಲಕ ನೀರಜ್ ಚೋಪ್ರಾ ಅವರನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡರು. ಇದು ಈ 2026 ರ ಸೀಸನ್‌ನಲ್ಲಿ ನೀರಜ್ ವಿರುದ್ಧ ಪತಿರಾಗೆ ಸಾಧಿಸಿದ ಸತತ ಮೂರನೇ ಜಯವಾಗಿದೆ (ದೋಹಾ ಡೈಮಂಡ್ ಲೀಗ್ ಮತ್ತು ಗ್ಲ್ಯಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಪತಿರಾಗೆ ಗೆದ್ದಿದ್ದರು). ಆದರೆ ಈ ಬಾರಿ ಇಬ್ಬರ ನಡುವಣ ವ್ಯತ್ಯಾಸ ಕೇವಲ 9 ಸೆಂಟಿಮೀಟರ್‌ಗಳ ಮಾತ್ರ ಎಂಬುದು ವಿಶೇಷ.

ಅಂದರೆ ರುಮೇಶ್ ಪತಿರಾಗೆ 88.14 ಮೀಟರ್ ದೂರಕ್ಕೆ ಎಸೆದು ಅಗ್ರಸ್ಥಾನ ಪಡೆದರೆ, ನೀರಜ್ ಚೋಪ್ರಾ 88.05 ಮೀಟರ್ ದೂರದೊಂದಿಗೆ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಇದನ್ನೂ ಓದಿ: WTC ಫೈನಲ್​ಗೇರಲು ಪಾಕಿಸ್ತಾನ್ ತಂಡಕ್ಕೆ ಇದೆಯೇ ಅವಕಾಶ? ಇಲ್ಲಿದೆ ಲೆಕ್ಕಾಚಾರ!

ಇನ್ನು ಗ್ರೆನಡಾದ ಅಂಡರ್ಸನ್ ಪೀಟರ್ಸ್ 86.69 ಮೀಟರ್ ಎಸೆದು ತೃತೀಯ ಸ್ಥಾನ ಪಡೆದರೆ, ಟ್ರಿನಿಡಾಡ್ ಮತ್ತು ಟೊಬಾಗೋದ ಕೆಶಾರ್ನ್ ವಾಲ್ಕಾಟ್ (83.71 ಮೀಟರ್) ನಾಲ್ಕನೇ ಸ್ಥಾನ ಪಡೆದರು.

ಲೂಸೇನ್ ಡೈಮಂಡ್ ಲೀಗ್ ಫಲಿತಾಂಶಗಳು:

ಸ್ಥಾನ  ಅಥ್ಲೀಟ್ ದೇಶ ದೂರ
1 ರುಮೇಶ್ ಪತಿರಾಗೆ  ಶ್ರೀಲಂಕಾ 88.14 ಮೀಟರ್
2 ನೀರಜ್ ಚೋಪ್ರಾ  ಭಾರತ 88.05 ಮೀಟರ್
3 ಅಂಡರ್ಸನ್ ಪೀಟರ್ಸ್ ಗ್ರೆನಡಾ 86.69 ಮೀಟರ್
4 ಕೆಶಾರ್ನ್ ವಾಲ್ಕಾಟ್  ಟ್ರಿನಿಡಾಡ್ ಮತ್ತು ಟೊಬಾಗೊ 83.71 ಮೀಟರ್
5 ಮಾರ್ಕ್ ಆಂಥೋನಿ  ಅಮೆರಿಕ  80.06 ಮೀಟರ್

Follow Us
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ
2 ಕೋಟಿ ರೂ. ವೆಚ್ಚದಲ್ಲಿ 700 ವರ್ಷಗಳ ಪುರಾತನ ದೇಗುಲ ಜೀರ್ಣೋದ್ಧಾರ
2 ಕೋಟಿ ರೂ. ವೆಚ್ಚದಲ್ಲಿ 700 ವರ್ಷಗಳ ಪುರಾತನ ದೇಗುಲ ಜೀರ್ಣೋದ್ಧಾರ