Sign In

By signing in or creating an account, you agree with Associated Broadcasting Company's Terms & Conditions and Privacy Policy.

Pro Kabaddi: ಏಳನೇ ಬಾರಿ ಸೋಲುಂಡ ತೆಲುಗು ಟೈಟಾನ್ಸ್: ಮತ್ತೆ ಗೆದ್ದ ದಬಾಂಗ್ ಡೆಲ್ಲಿ

ವಿಜಯ್‌ ಕುಮಾರ್‌ ಅವರ ಸೂಪರ್‌ ರೈಡಿಂಗ್‌ ಸಾಹಸದಿಂದ ಹರ್ಯಾಣ ಸ್ಟೀಲರ್ ವಿರುದ್ಧ ದಬಾಂಗ್‌ ದಿಲ್ಲಿ 28-25 ಅಂತರದಿಂದ ಗೆಲುವು ಸಾಧಿಸಿ ಮತ್ತೆ ಹಳಿ ಏರಿತು. ಇನ್ನು ಯುಪಿ ಯೋಧ ವಿರುದ್ಧದ ಪಂದ್ಯದಲ್ಲೂ ತೆಲುಗು ಟೈಟಾನ್ಸ್ (UP Yoddha vs Telugu Titans) ಗೆಲುವು ಕಾಣಲು ಸಾಧ್ಯವಾಗಲಿಲ್ಲ.

Pro Kabaddi: ಏಳನೇ ಬಾರಿ ಸೋಲುಂಡ ತೆಲುಗು ಟೈಟಾನ್ಸ್: ಮತ್ತೆ ಗೆದ್ದ ದಬಾಂಗ್ ಡೆಲ್ಲಿ
UP Yoddha edge Telugu Titans
Follow us
TV9 Web
| Updated By: Vinay Bhat

Updated on: Jan 16, 2022 | 8:31 AM

ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ನಲ್ಲಿ (Pro Kabaddi League) ತೆಲುಗು ಟೈಟಾನ್ಸ್ ತಂಡದ ಸೋಲಿನ ಪಯಣ ಮುಂದುವರೆದಿದೆ. ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಯುಪಿ ಯೋಧ ವಿರುದ್ಧದ ಪಂದ್ಯದಲ್ಲೂ ತೆಲುಗು ಟೈಟಾನ್ಸ್ (UP Yoddha vs Telugu Titans) ಗೆಲುವು ಕಾಣಲು ಸಾಧ್ಯವಾಗಲಿಲ್ಲ. 39-33 ಅಂತರದಿಂದ ಗೆದ್ದ ಯೋಧ ತಂಡ ಟೂರ್ನಿಯಲ್ಲಿನ ತನ್ನ ಮೂರನೇ ಗೆಲುವನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಈ ಬಾರಿಯ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 9 ಪಂದ್ಯಗಳನ್ನಾಡಿರುವ ತೆಲುಗು ಟೈಟಾನ್ಸ್ ಯಾವುದೇ ಪಂದ್ಯದಲ್ಲಿ ಜಯ ಸಾಧಿಸದೇ 7 ಪಂದ್ಯಗಳಲ್ಲಿ ಸೋತು ಉಳಿದೆರಡು ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಯುಪಿ ಪರ ಶ್ರೀಕಾಂತ್‌ ಜಾಧವ್‌, ಸುರೇಂದರ್‌ ಗಿಲ್‌, ನಿತೀಶ್‌ ಕುಮಾರ್‌ ಸಾಂ ಕ ಪ್ರದರ್ಶನ ನೀಡಿ ತಲಾ 7 ಅಂಕ ಗಳಿಸಿ ಕೊಟ್ಟರು. ತೆಲುಗು ಟೈಟಾನ್ಸ್‌ನ ರೈಡರ್‌ಗಳಾದ ರಜನೀಶ್‌ ಮತ್ತು ಅಂಕಿತ್‌ ಬೇನಿವಾಲ್‌ (ತಲಾ 9 ಅಂಕ) ಉತ್ತಮ ಹೋರಾಟ ನೀಡಿದರೂ ತಂಡವನ್ನು ದಡ ಸೇರಿಸುವಲ್ಲಿ ವಿಫ‌ಲರಾದರು.

ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ವಿಜಯ್‌ ಕುಮಾರ್‌ ಅವರ ಸೂಪರ್‌ ರೈಡಿಂಗ್‌ ಸಾಹಸದಿಂದ ಹರ್ಯಾಣ ಸ್ಟೀಲರ್ ವಿರುದ್ಧ ದಬಾಂಗ್‌ ದಿಲ್ಲಿ 28-25 ಅಂತರದಿಂದ ಗೆಲುವು ಸಾಧಿಸಿ ಮತ್ತೆ ಹಳಿ ಏರಿತು. ಪಂದ್ಯದ ಮುಕ್ತಾಯಕ್ಕೆ ಇನ್ನೇನು ಒಂದು ನಿಮಿಷ ಬಾಕಿ ಇರುವಾಗ 2 ಅಂಕದಮುನ್ನಡೆ ಹೊಂದಿದ್ದ ಹರ್ಯಾಣ ತನ್ನ ಅತಿಯಾದ ಆತ್ಮವಿಶ್ವಾಸದ ಆಟಕ್ಕಿಳಿದು ಕೈ ಸುಟ್ಟುಕೊಂಡಿತು.

ವಿಜಯ್ ಕಲೆಹಾಕಿದ ಈ 11 ಅಂಕಗಳ ಪೈಕಿ 5 ಅಂಕಗಳು ಪಂದ್ಯದಲ್ಲಿನ ತನ್ನ ಕೊನೆಯ 2 ರೈಡ್‌ನಲ್ಲಿ ಬಂದದ್ದು ದಬಾಂಗ್ ಡೆಲ್ಲಿ ತಂಡಕ್ಕೆ ಗೆಲುವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿತು. ಗಾಯದ ಸಮಸ್ಯೆಗೆ ಒಳಗಾದ ನವೀನ್ ಕುಮಾರ್ ಅನುಪಸ್ಥಿತಿಯಲ್ಲಿ ದ್ವಿತೀಯ ವಿಭಾಗದಲ್ಲಿ ಕಣಕ್ಕಿಳಿದ ದಬಾಂಗ್ ಡೆಲ್ಲಿ ಹರಿಯಾಣ ರೈಡರ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.

ಪಂದ್ಯದ ಮೊದಲನೇ ಭಾಗ ಕಡಿಮೆ ಅಂಕಗಳ ಹಣಾಹಣಿಯಿಂದ ಕೂಡಿತ್ತು. 8 ಬಾರಿ ರೈಡ್ ಮಾಡಿದ ದಬಾಂಗ್ ಡೆಲ್ಲಿ ತಂಡದ ನವೀನ್ ಕುಮಾರ್ ಅವರನ್ನು 4 ಬಾರಿ ಟ್ಯಾಕಲ್ ಮಾಡಿದ ಹರಿಯಾಣ ಸ್ಟೀಲರ್ಸ್ ಸುರೇಂದರ್ ನಾಡಾ ಮತ್ತು ಯುವ ಆಟಗಾರ ಜೈದೀಪ್ ಸಹಾಯದಿಂದ ಉತ್ತಮವಾಗಿ ಡಿಫೆನ್ಸ್ ಮಾಡಿತು. ಮಾಡು ಇಲ್ಲವೇ ಮಡಿ ರೇಡ್ ವೇಳೆ ಹರಿಯಾಣ ಸ್ಟೀಲರ್ಸ್ ಸಾಕಷ್ಟು ಹರಸಾಹಸ ಪಟ್ಟಿತು. ಪಂದ್ಯದ ಮಧ್ಯಂತರದ ವೇಳೆಗೆ ಸಮಬಲವನ್ನು ಸಾಧಿಸಿದ ಇತ್ತಂಡಗಳು 11 – 11 ಅಂಕಗಳನ್ನು ಪಡೆದುಕೊಂಡವು.

ಹೀಗಾಗಿ ಪಂದ್ಯದ ದ್ವಿತೀಯಾರ್ಧ ಸಾಕಷ್ಟು ರೋಚಕತೆಗೆ ಸಾಕ್ಷಿಯಾಯಿತು. ದ್ವಿತೀಯಾರ್ಧದ ಮೊದಲ ಹತ್ತು ನಿಮಿಷಗಳ ಕಾಲ ನಿಧಾನಗತಿಯ ಆಟವನ್ನಾಡಿದ ಎರಡೂ ತಂಡಗಳು ಪಂದ್ಯ ಮುಗಿಯಲು ಇನ್ನೂ 5 ನಿಮಿಷಗಳು ಬಾಕಿ ಇರುವಾಗ 21 – 21 ಸಮಬಲವನ್ನು ಸಾಧಿಸಿದವು. ಅಂತಿಮವಾಗಿ ಕೊನೆಯ 2 ರೈಡ್ ಮಾಡಿದ ದಬಾಂಗ್ ಡೆಲ್ಲಿ ತಂಡದ ಆಟಗಾರ ವಿಜಯ್ 2 ಅಂಕಗಳ ರೈಡ್ ಮತ್ತು 3 ಅಂಕಗಳ ಸೂಪರ್ ರೈಡ್ ಮಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

U19 World Cup 2022: ಯಶ್ ಧುಲ್ ಭರ್ಜರಿ ಆಟ: ಅಂಡರ್-19 ವಿಶ್ವಕಪ್​ನ ಮೊದಲ ಪಂದ್ಯದಲ್ಲೇ ಭಾರತಕ್ಕೆ ಗೆಲುವು