Paralympics 2024: ಭಾರತಕ್ಕೆ ಮತ್ತೆರಡು ಚಿನ್ನ: ಪದಕಗಳ ಸಂಖ್ಯೆ 24 ಕ್ಕೆ ಏರಿಕೆ
Paralympics 2024: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಮೂಲಕ ಭಾರತೀಯ ಕ್ರೀಡಾಪಟುಗಳು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅದು ಸಹ 20 ಪದಕಗಳನ್ನು ಗೆಲ್ಲುವ ಮೂಲಕ ಎಂಬುದು ವಿಶೇಷ. ಅಂದರೆ ಪ್ಯಾರಾಂಪಿಕ್ಸ್ನಲ್ಲಿ ಇದೇ ಮೊದಲ ಬಾರಿಗೆ ಭಾರತೀಯರು 24 ಪದಕಗಳನ್ನು ಗೆದ್ದಿದ್ದಾರೆ. 2020 ರಲ್ಲಿ ನಡೆದ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ 5 ಚಿನ್ನದ ಪದಕ, 8 ಬೆಳ್ಳಿ ಪದಕ ಮತ್ತು 6 ಕಂಚಿನ ಪದಕಗಳೊಂದಿಗೆ ಭಾರತೀಯರು ಒಟ್ಟು 19 ಪದಕಗಳನ್ನು ಗೆದ್ದಿದ್ದರು.
ಪ್ಯಾರಿಸ್ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯರ ಪದಕ ಬೇಟೆ ಮುಂದುವರೆದಿದೆ. ಸೆಪ್ಟೆಂಬರ್ 4 ರಂದು ಭಾರತೀಯ ಕ್ರೀಡಾಪಟುಗಳು 2 ಚಿನ್ನ ಹಾಗೂ 2 ಬೆಳ್ಳಿ ಪದಕಗಳನ್ನು ಗೆಲ್ಲುವ ಮೂಲಕ ಪದಕಗಳ ಸಂಖ್ಯೆಯನ್ನು 24 ಕ್ಕೇರಿಸಿದ್ದಾರೆ. ಪುರುಷರ ಆರ್ಚರಿ ಸ್ಪರ್ಧೆಯ ವೈಯಕ್ತಿಕ ರಿಕರ್ವ್ ಓಪನ್ ಫೈನಲ್‌ನಲ್ಲಿ ಹರ್ವಿಂದರ್ ಸಿಂಗ್ ಚಿನ್ನದ ಪದಕ ಗೆದ್ದರೆ, ಕ್ಲಬ್ ಥ್ರೋನಲ್ಲಿ ಧರಂಬೀರ್ ನೈನ್ ಬಂಗಾರದ ಪದಕಕ್ಕೆ ಕೊರೊಳೊಡ್ಡಿದ್ದಾರೆ.
ಇನ್ನು ಶಾಟ್‌ಪುಟ್‌ನಲ್ಲಿ ಸಚಿನ್ ಖಿಲಾರಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಹಾಗೆಯೇ ಕ್ಲಬ್ ಥ್ರೋನಲ್ಲಿ ಪ್ರಣವ್ ಸೂರ್ಮಾ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಭಾರತವು ಒಟ್ಟು 5 ಚಿನ್ನದ ಪದಕ, 9 ಬೆಳ್ಳಿ ಪದಕ ಹಾಗೂ 10 ಕಂಚಿನ ಪದಕಗಳೊಂದಿಗೆ ಒಟ್ಟು 24 ಮೆಡಲ್ಗಳನ್ನು ಗೆದ್ದಿದೆ. ಇನ್ನು ಭಾನುವಾರದವರೆಗೆ ಕ್ರೀಡಾಕೂಟ ಮುಂದುವರೆಯಲಿದ್ದು, ಹೀಗಾಗಿ ಭಾರತದ ಒಟ್ಟು ಪದಕಗಳ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
ಸಂ. | ಕ್ರೀಡಾಪಟು | ಕ್ರೀಡೆ | ಈವೆಂಟ್ | ಪದಕ |
---|---|---|---|---|
1 | ಅವನಿ ಲೇಖನಾ | ಶೂಟಿಂಗ್ | ಮಹಿಳೆಯರ 10ಮೀ ಏರ್ ರೈಫಲ್ ಸ್ಟ್ಯಾಂಡಿಂಗ್ SH1 | ಚಿನ್ನ |
2 | ಮೋನಾ ಅಗರ್ವಾಲ್ | ಶೂಟಿಂಗ್ | ಮಹಿಳೆಯರ 10ಮೀ ಏರ್ ರೈಫಲ್ ಸ್ಟ್ಯಾಂಡಿಂಗ್ SH1 | ಕಂಚು |
3 | ಪ್ರೀತಿ ಪಾಲ್ | ಅಥ್ಲೆಟಿಕ್ಸ್ | ಮಹಿಳೆಯರ 100ಮೀ ಟಿ35 | ಕಂಚು |
4 | ಮನೀಶ್ ನರ್ವಾಲ್ | ಶೂಟಿಂಗ್ | ಪುರುಷರ 10 ಮೀ ಏರ್ ಪಿಸ್ತೂಲ್ SH1 | ಬೆಳ್ಳಿ |
5 | ರುಬಿನಾ ಫ್ರಾನ್ಸಿಸ್ | ಶೂಟಿಂಗ್ | ಮಹಿಳೆಯರ 10ಮೀ ಏರ್ ಪಿಸ್ತೂಲ್ SH1 | ಕಂಚು |
6 | ಪ್ರೀತಿ ಪಾಲ್ | ಅಥ್ಲೆಟಿಕ್ಸ್ | ಮಹಿಳೆಯರ 200ಮೀ ಟಿ35 | ಕಂಚು |
7 | ನಿಶಾದ್ ಕುಮಾರ್ | ಅಥ್ಲೆಟಿಕ್ಸ್ | ಪುರುಷರ ಎತ್ತರ ಜಿಗಿತ T47 | ಬೆಳ್ಳಿ |
8 | ಯೋಗೇಶ್ ಕಥುನಿಯಾ | ಅಥ್ಲೆಟಿಕ್ಸ್ | ಪುರುಷರ ಡಿಸ್ಕಸ್ ಥ್ರೋ F56 | ಬೆಳ್ಳಿ |
9 | ನಿತೇಶ್ ಕುಮಾರ್ | ಬ್ಯಾಡ್ಮಿಂಟನ್ | ಪುರುಷರ ಸಿಂಗಲ್ಸ್ SL3 | ಚಿನ್ನ |
10 | ತುಳಸಿಮತಿ ಮುರುಗೇಶನ್ | ಬ್ಯಾಡ್ಮಿಂಟನ್ | ಮಹಿಳೆಯರ ಸಿಂಗಲ್ಸ್ SU5 | ಬೆಳ್ಳಿ |
11 | ಮನಿಷಾ ರಾಮದಾಸ್ | ಬ್ಯಾಡ್ಮಿಂಟನ್ | ಮಹಿಳೆಯರ ಸಿಂಗಲ್ಸ್ SU5 | ಕಂಚು |
12 | ಸುಹಾಸ್ ಯತಿರಾಜ್ | ಬ್ಯಾಡ್ಮಿಂಟನ್ | ಪುರುಷರ ಸಿಂಗಲ್ಸ್ SL4 | ಬೆಳ್ಳಿ |
13 | ರಾಕೇಶ್ ಕುಮಾರ್ / ಶೀತಲ್ ದೇವಿ | ಬಿಲ್ಲುಗಾರಿಕೆ | ಮಿಶ್ರ ತಂಡ | ಕಂಚು |
14 | ಸುಮಿತ್ ಆಂಟಿಲ್ | ಅಥ್ಲೆಟಿಕ್ಸ್ | ಜಾವೆಲಿನ್ ಎಸೆತ F64 | ಚಿನ್ನ |
15 | ನಿತ್ಯ ಶ್ರೀ ಶಿವನ್ | ಬ್ಯಾಡ್ಮಿಂಟನ್ | ಮಹಿಳೆಯರ ಸಿಂಗಲ್ಸ್ SH6 | ಕಂಚು |
16 | ದೀಪ್ತಿ ಜೀವನಜಿ | ಅಥ್ಲೆಟಿಕ್ಸ್ | ಮಹಿಳೆಯರ 400 ಮೀ ಟಿ20 | ಕಂಚು |
17 | ಮರಿಯಪ್ಪನ್ ತಂಗವೇಲು | ಅಥ್ಲೆಟಿಕ್ಸ್ | ಪುರುಷರ ಎತ್ತರ ಜಿಗಿತ T63 | ಕಂಚು |
18 | ಶರದ್ ಕುಮಾರ್ | ಅಥ್ಲೆಟಿಕ್ಸ್ | ಪುರುಷರ ಎತ್ತರ ಜಿಗಿತ T63 | ಬೆಳ್ಳಿ |
19 | ಅಜೀತ್ ಸಿಂಗ್ | ಅಥ್ಲೆಟಿಕ್ಸ್ | ಪುರುಷರ ಜಾವೆಲಿನ್ ಎಸೆತ F46 | ಬೆಳ್ಳಿ |
20 | ಸುಂದರ್ ಸಿಂಗ್ ಗುರ್ಜರ್ | ಅಥ್ಲೆಟಿಕ್ಸ್ | ಪುರುಷರ ಜಾವೆಲಿನ್ ಎಸೆತ F46 | ಕಂಚು |
21 | ಸಚಿನ್ ಖಿಲಾರಿ | ಅಥ್ಲೆಟಿಕ್ಸ್ | ಪುರುಷರ ಶಾಟ್ ಪುಟ್ F46 | ಬೆಳ್ಳಿ |
22 | ಹರ್ವಿಂದರ್ ಸಿಂಗ್ | ಬಿಲ್ಲುಗಾರಿಕೆ | ಪುರುಷರ ವೈಯಕ್ತಿಕ ರಿಕರ್ವ್ | ಚಿನ್ನ |
23 | ಧರಂಬೀರ್ | ಅಥ್ಲೆಟಿಕ್ಸ್ | ಪುರುಷರ ಕ್ಲಬ್ ಥ್ರೋ F51 | ಚಿನ್ನ |
24 | ಪರ್ಣವ್ ಸೂರ್ಮಾ | ಅಥ್ಲೆಟಿಕ್ಸ್ | ಪುರುಷರ ಕ್ಲಬ್ ಥ್ರೋ F51 | ಬೆಳ್ಳಿ |
Published On - 7:32 am, Thu, 5 September 24