Paris Olympics 2024: ಚಿನ್ನ ಗೆದ್ದ ಸಹ ಆಟಗಾರ್ತಿಗೆ ಮದುವೆ ಪ್ರಸ್ತಾಪವಿಟ್ಟ ಸಹ ಆಟಗಾರ; ವಿಡಿಯೋ ನೋಡಿ
Paris Olympics 2024: ಪದಕ ಪಡೆದು ವೇದಿಕೆಯಿಂದ ಹೊರಬಂದ ಹುವಾಂಗ್ ಯಾ ಕಿಯೊಂಗ್ ಅವರಿಗೆ ಚೀನಾದ ಮತ್ತೊಬ್ಬ ಬ್ಯಾಡ್ಮಿಂಟನ್ ಆಟಗಾರ ಲಿ ಯುಚೆನ್ ತಮ್ಮ ಮೊಣಕಾಲಿನ ಮೇಲೆ ಕುಳಿತು ಪ್ರೇಮ ನಿವೇದನೆ ಮಾಡಿಕೊಂಡಿದಲ್ಲದೆ, ವಿಲ್ ಯು ಮ್ಯಾರಿ ಮಿ? ಎಂಬ ಪ್ರಶ್ನೆಯನ್ನು ಮುಂದೆಯಿಟ್ಟ. ಇದನ್ನು ನೋಡಿದ ಹುವಾಂಗ್ ಯಾ ಕಿಯೊಂಗ್ ಕೆಲ ಸಮಯ ಆಶ್ಚರ್ಯಚಕಿತರಾದರು. ನಂತರ ಯುಚೆನ್ ಅವರ ಮದುವೆ ಪ್ರಸ್ತಾಪಕ್ಕೆ ಸಮ್ಮತಿಯನ್ನು ನೀಡಿದರು.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಇಲ್ಲಿಯವರೆಗೆ 7 ದಿನಗಳ ಆಟಗಳು ಪೂರ್ಣಗೊಂಡಿವೆ. ಪ್ರತಿಯೊಂದು ದೇಶವೂ ಸಾಧ್ಯವಾದಷ್ಟು ಪದಕಗಳನ್ನು ಗೆಲ್ಲಲು ಪ್ರಯತ್ನಿಸುತ್ತಿದೆ. ಈ ಬಾರಿಯ ಒಲಿಂಪಿಕ್ಸ್‌ನಲ್ಲೂ ಒಂದಷ್ಟು ವಿವಾದಗಳು ಕಂಡು ಬರುತ್ತಿವೆ. ಆದರೆ ಇದೆಲ್ಲದರ ನಡುವೆಯೂ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿಯುವಂತಹ ಕೆಲವು ಸುಂದರ ಕ್ಷಣಗಳಿಗೂ ಈ ಬಾರಿಯ ಒಲಿಂಪಿಕ್ಸ್ ಸಾಕ್ಷಿಯಾಗುತ್ತಿದೆ. ಪಂದ್ಯ ನಡೆಯುವ ಸಮಯದಲ್ಲಿ ಗ್ಯಾಲರಿಯಲ್ಲಿ ಕುಳಿತಿದ್ದ ಪ್ರೇಕ್ಷಕರಲ್ಲಿ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುವ ಸಲುವಾಗಿಯೋ ಅಥವಾ ಇನ್ನಿತ್ತರ ಕಾರಣಗಳಿಗಾಗಿಯೋ, ತಮ್ಮ ಗೆಳತಿಯರಿಗೆ ಪ್ರೇಮ ನಿವೇದನೆ, ಮದುವೆ ಪ್ರಸ್ತಾಪ ಅಥವಾ ಕ್ಯಾಮರಾ ಮುಂದೆಯೇ ಚುಂಬಿಸುವ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾನ್ಯವಾಗಿ ನಾವು ನೋಡುತ್ತಿವೆ. ಆದರೆ ಪ್ರಸ್ತುತ ನಡೆಯುತ್ತಿರುವ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಚೀನೀ ಆಟಗಾರ, ತನ್ನ ಸಹ ಆಟಗಾರ್ತಿಗೆ ಮದುವೆ ಪ್ರಸ್ತಾಪ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾನೆ.
ಸಹ ಆಟಗಾರ್ತಿಗೆ ಮದುವೆ ಪ್ರಸ್ತಾಪ
ಆಗಸ್ಟ್ 2 ರಂದು ನಡೆದ ಮಿಶ್ರ ಡಬಲ್ಸ್‌ನಲ್ಲಿ ಚೀನಾದ ಹುವಾಂಗ್ ಯಾ ಕಿಯೊಂಗ್ ಹಾಗೂ ಝೆಂಗ್ ಸಿವೀ ಜೋಡಿ, ದಕ್ಷಿಣ ಕೊರಿಯಾದ ಕಿಮ್ ವಾನ್ ಹೊ ಮತ್ತು ಜಿಯೋಂಗ್ ನಾ ಯುನ್ ಜೋಡಿಯನ್ನು ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿತು. ಈ ಪಂದ್ಯದಲ್ಲಿ ಚೀನಾ ಜೋಡಿ ಪ್ರಾಬಲ್ಯ ಮೆರೆದಿದ್ದು, ದಕ್ಷಿಣ ಕೊರಿಯಾ ಜೋಡಿಯನ್ನು 41 ನಿಮಿಷಗಳಲ್ಲಿ 21-8, 21-11 ಅಂತರದಿಂದ ಸೋಲಿಸಿತು. ಮಿಶ್ರ ಡಬಲ್ಸ್ ಈವೆಂಟ್ ಮುಗಿದ ನಂತರ, ಪದಕ ಸಮಾರಂಭವು ನಡೆಯಿತು. ಅಲ್ಲಿ ಚೀನಾದ ಜೋಡಿಗೆ ಪದಕ ವಿತರಣೆ ಕೂಡ ನಡೆಯಿತು. ಆದರೆ ಆ ನಂತರ ನಡೆದಿದ್ದೆ, ಒಲಿಂಪಿಕ್ಸ್‌ನ ಸ್ಮರಣಿಯ ಘಟನೆಯಾಗಿದೆ.
ಪದಕ ಪಡೆದು ವೇದಿಕೆಯಿಂದ ಹೊರಬಂದ ಹುವಾಂಗ್ ಯಾ ಕಿಯೊಂಗ್ ಅವರಿಗೆ ಚೀನಾದ ಮತ್ತೊಬ್ಬ ಬ್ಯಾಡ್ಮಿಂಟನ್ ಆಟಗಾರ ಲಿ ಯುಚೆನ್ ತಮ್ಮ ಮೊಣಕಾಲಿನ ಮೇಲೆ ಕುಳಿತು ಪ್ರೇಮ ನಿವೇದನೆ ಮಾಡಿಕೊಂಡಿದಲ್ಲದೆ, ವಿಲ್ ಯು ಮ್ಯಾರಿ ಮಿ? ಎಂಬ ಪ್ರಶ್ನೆಯನ್ನು ಮುಂದೆಯಿಟ್ಟ. ಇದನ್ನು ನೋಡಿದ ಹುವಾಂಗ್ ಯಾ ಕಿಯೊಂಗ್ ಕೆಲ ಸಮಯ ಆಶ್ಚರ್ಯಚಕಿತರಾದರು. ನಂತರ ಯುಚೆನ್ ಅವರ ಮದುವೆ ಪ್ರಸ್ತಾಪಕ್ಕೆ ಸಮ್ಮತಿಯನ್ನು ನೀಡಿದರು. ಇದೇ ವೇಳೆ ಯುಚೆನ್, ಹುವಾಂಗ್ ಅವರಿಗೆ ಉಂಗುರವನ್ನು ತೊಡಿಸಿದರು.
“I’ll love you forever! Will you marry me?” “Yes! I do!”
OMG!!! Romance at the Olympics!!!❤️❤️❤️
Huang Yaqiong just had her “dream come true”, winning a badminton mixed doubles gold medal🥇with her teammate Zheng Siwei
Then her boyfriend Liu Yuchen proposed! 🎉🎉🎉 pic.twitter.com/JxMIipF7ij
— Li Zexin (@XH_Lee23) August 2, 2024
ಇದು ಎರಡನೇ ಘಟನೆ
ಹುವಾಂಗ್ ಯಾ ಕಿಯೊಂಗ್ ಮತ್ತು ಲಿ ಯುಚೆನ್‌ಗಿಂತ ಮುಂಚೆಯೇ, ಒಲಿಂಪಿಕ್ಸ್‌ನ ಆರಂಭದಲ್ಲಿ ಇದೇ ರೀತಿಯ ದೃಶ್ಯ ಕಂಡುಬಂದಿತ್ತು. ಉದ್ಘಾಟನಾ ಸಮಾರಂಭದಲ್ಲಿ ಅರ್ಜೆಂಟೀನಾದ ಆಟಗಾರನೊಬ್ಬ ತನ್ನ ಸಹ ಆಟಗಾರ್ತಿಗೆ ಎಲ್ಲರ ಮುಂದೆ ಪ್ರಪೋಸ್ ಮಾಡಿದ್ದರು. ಅರ್ಜೆಂಟೀನಾ ಪುರುಷರ ಹ್ಯಾಂಡ್‌ಬಾಲ್ ತಂಡದ ಆಟಗಾರ ಪ್ಯಾಬ್ಲೊ ಸಿಮೊನೆಟ್ ಅರ್ಜೆಂಟೀನಾ ಮಹಿಳಾ ಹಾಕಿ ತಂಡದ ಆಟಗಾರ್ತಿ ಮರಿಯಾ ಕ್ಯಾಂಪೊಯ್‌ಗೆ ಪ್ರೇಮ ನಿವೇದನೆ ಮಾಡಿದ್ದರು. ಇಬ್ಬರೂ ಆಟಗಾರರು 2015 ರಿಂದ ಪರಸ್ಪರ ಡೇಟಿಂಗ್ ನಡೆಸುತ್ತಿದ್ದರು. ಒಲಂಪಿಕ್ ಗೇಮ್ಸ್ ಸ್ವತಃ ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ ಈ ವಿಶೇಷ ಕ್ಷಣದ ವೀಡಿಯೊವನ್ನು ಹಂಚಿಕೊಂಡಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ