Pro Kabaddi 2022: ಬೆಂಗಳೂರು ಬುಲ್ಸ್​ನ ಕಟ್ಟಿಹಾಕಿದ ಯು ಮುಂಬಾ

U Mumba vs Bengaluru Bulls: ಪರಿಣಾಮ ಮೊದಲಾರ್ಧದಲ್ಲಿ ಬೆಂಗಳೂರು ಬುಲ್ಸ್ ಪರ ಪವನ್ ಕುಮಾರ್ ಶೆಹ್ರಾವತ್ 10 ರೈಡಿಂಗ್ ಪಾಯಿಂಟ್ ಕಲೆಹಾಕಿದರೆ, ಯು ಮುಂಬಾ ಪರ ಅಭಿಷೇಕ್ 8 ರೈಡಿಂಗ್ ಪಾಯಿಂಟ್​ಗಳಿಸಿದರು. ಆದರೆ ರಾಹುಲ್ ಸೆತ್ಪಾಲ್ ಟ್ಯಾಕಲ್​ಗಳ ಮೂಲಕ 6 ಅಂಕಗಳನ್ನು ಗಳಿಸಿದ್ದು ಯು ಮುಂಬಾಗೆ ಪ್ಲಸ್ ಪಾಯಿಂಟ್ ಆಯಿತು.

Pro Kabaddi 2022: ಬೆಂಗಳೂರು ಬುಲ್ಸ್​ನ ಕಟ್ಟಿಹಾಕಿದ ಯು ಮುಂಬಾ
PKL 8
Follow us
TV9 Web
| Updated By: ಝಾಹಿರ್ ಯೂಸುಫ್

Updated on:Jan 26, 2022 | 8:41 PM

ಪ್ರೋ ಕಬಡ್ಡಿ ಲೀಗ್​ನ 78ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ದ ಯು ಮುಂಬಾ ಭರ್ಜರಿ ಜಯ ಸಾಧಿಸಿದೆ. ಭಾರೀ ಪೈಪೋಟಿಗೆ ಕಾರಣವಾಗಿದ್ದ ಈ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ಅಂತಿಮ ಹಂತದಲ್ಲಿ ಸೋಲೊಪ್ಪಿಕೊಂಡಿತು. ಏಕೆಂದರೆ ಉಭಯ ತಂಡಗಳು ಮೊದಲಾರ್ಧದಲ್ಲಿ ಸಮಬಲದ ಹೋರಾಟ ನಡೆಸಿತ್ತು. ಬೆಂಗಳೂರು ಬುಲ್ಸ್ ಪರ ನಾಯಕ ಪವನ್ ಕುಮಾರ್ ಶೆಹ್ರಾವತ್ ಅತ್ಯುತ್ತಮ ಪ್ರದರ್ಶನ ನೀಡಿದರೆ, ಅಭಿಷೇಕ್ ಸಿಂಗ್ ಮಿಂಚಿದ್ದರು.

ಪರಿಣಾಮ ಮೊದಲಾರ್ಧದಲ್ಲಿ ಬೆಂಗಳೂರು ಬುಲ್ಸ್ ಪರ ಪವನ್ ಕುಮಾರ್ ಶೆಹ್ರಾವತ್ 10 ರೈಡಿಂಗ್ ಪಾಯಿಂಟ್ ಕಲೆಹಾಕಿದರೆ, ಯು ಮುಂಬಾ ಪರ ಅಭಿಷೇಕ್ 8 ರೈಡಿಂಗ್ ಪಾಯಿಂಟ್​ಗಳಿಸಿದರು. ಆದರೆ ರಾಹುಲ್ ಸೆತ್ಪಾಲ್ ಟ್ಯಾಕಲ್​ಗಳ ಮೂಲಕ 6 ಅಂಕಗಳನ್ನು ಗಳಿಸಿದ್ದು ಯು ಮುಂಬಾಗೆ ಪ್ಲಸ್ ಪಾಯಿಂಟ್ ಆಯಿತು. ಇದಾಗ್ಯೂ ಮೊದಲಾರ್ಧದಲ್ಲಿ ಉಭಯ ತಂಡಗಳು ತಲಾ 2 ಬಾರಿ ಆಲೌಟ್ ಆಗಿದ್ದರು. ಪರಿಣಾಮ ಫಸ್ಟ್​ ಹಾಫ್​ನಲ್ಲಿ ಯು ಮುಂಬಾ 22 ಅಂಕಗಳಿಸಿದರೆ, ಬೆಂಗಳೂರು ಬುಲ್ಸ್ ತಂಡವು 20 ಪಾಯಿಂಟ್​ಗಳನ್ನು ಕಲೆಹಾಕಿತು.

ಮೊದಲಾರ್ಧದಲ್ಲಿ ಕೇವಲ 2 ಪಾಯಿಂಟ್ ಮಾತ್ರ ಮುನ್ನಡೆ ಪಡೆದಿದ್ದ ಯು ಮುಂಬಾ ದ್ವಿತಿಯಾರ್ಧದ ಆರಂಭದಲ್ಲೇ ಒಂದು ಪಾಯಿಂಟ್ ಕಲೆಹಾಕಿತು. ಇದರ ಬೆನ್ನಲ್ಲೇ ಎರಡು ರೈಡ್ ಪಾಯಿಂಟ್ ತಂದುಕೊಡುವ ಮೂಲಕ ಅಂಕವನ್ನು ಏಕಾಏಕಿ 25 ಕ್ಕೇರಿಸಿದರು. ಈ ಅಂತರವನ್ನು ಕಾಯ್ದುಕೊಂಡ ಯು ಮುಂಬಾ ಪಂದ್ಯದ ಮೇಲೆ ಹಿಡಿತ ಸಾಧಿಸಿತು.

ಇದಾಗ್ಯೂ ಬೆಂಗಳೂರು ಬುಲ್ಸ್ ತಂಡವು ಕಂಬ್ಯಾಕ್ ಮಾಡುವ ಪ್ರಯತ್ನ ಮಾಡಿತು. ಆದರೆ ಯು ಮುಂಬಾ ತಂಡದ ಹೊಂದಾಣಿಕೆಯ ಆಟದ ಮುಂದೆ ಬೆಂಗಳೂರು ಬುಲ್ಸ್​ ಪಾಯಿಂಟ್ ಕಲೆಹಾಕುವಲ್ಲಿ ಹಿಂದೆ ಉಳಿಯಿತು. ಅದರಂತೆ ಕೊನೆಯ 5 ನಿಮಿಷಗಳಿರುವಾಗ ಯು ಮುಂಬಾ 36 ಪಾಯಿಂಟ್​ಗಳಿಸಿದರೆ, ಬೆಂಗಳೂರು ಬುಲ್ಸ್ ತಂಡವು 28 ಅಂಕವನ್ನು ಪಡೆದಿತ್ತು. ಅಂದರೆ ಅಂತಿಮ ನಿಮಿಷಗಳ ಪಂದ್ಯಗಳು ಬಾಕಿ ಇರುವಾಗ ಯು ಮುಂಬಾ 8 ಪಾಯಿಂಟ್​ಗಳ ಮುನ್ನಡೆಯನ್ನು ಪಡೆದುಕೊಂಡಿತ್ತು.

ಕೊನೆಯ ನಿಮಿಷಗಳಿರುವಾಗ ಬೆಂಗಳೂರು ಬುಲ್ಸ್ ತಂಡವನ್ನು ಮತ್ತೊಮ್ಮೆ ಆಲೌಟ್ ಮಾಡಿದ ಯು ಮುಂಬಾ ಪಾಯಿಂಟ್​ ಅನ್ನು ಏಕಾಏಕಿ 40 ದಾಟಿಸಿದರು. ಈ ವೇಳೆ ಬೆಂಗಳೂರು ಬುಲ್ಸ್ ಕಲೆಹಾಕಿದ್ದು ಕೇವಲ 2 ಪಾಯಿಂಟ್. ಅದರಂತೆ ಅಂತಿಮ 2 ನಿಮಿಷಗಳು ಬಾಕಿಯಿದ್ದಾಗ ಯು ಮುಂಬಾ 42 ಅಂಕ ಪಡೆದರೆ, ಬುಲ್ಸ್ 30 ರಲ್ಲೇ ಉಳಿಯಿತು. ಅಂತಿಮವಾಗಿ ಯು ಮುಂಬಾ 45 ಪಾಯಿಂಟ್​ಗಳಿಸಿದರೆ, ಬೆಂಗಳೂರು ಬುಲ್ಸ್ 34 ಪಾಯಿಂಟ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಯು ಮುಂಬಾ ತಂಡವು 9 ಪಾಯಿಂಟ್​​ಗಳಿಂದ ಜಯ ಸಾಧಿಸಿತು.

ಯು ಮುಂಬಾ ಪರ ಅಭಿಷೇಕ್ 11 ಪಾಯಿಂಟ್ ಕಲೆಹಾಕಿದರೆ, ರಾಹುಲ್ ಹಾಗೂ ಅಜಿತ್ ಕುಮಾರ್ ತಲಾ 8 ಪಾಯಿಂಟ್​ಗಳಿಸಿದರು. ಇನ್ನು ಬೆಂಗಳೂರು ಬುಲ್ಸ್ ಪರ ಪವನ್ ಕುಮಾರ್ ಶೆಹ್ರಾವತ್ 14 ಅಂಕ ಪಡೆದರೆ, ಭರತ್ 7 ಪಾಯಿಂಟ್ ಕಲೆಹಾಕಿದ್ದರು. ಈ ಸೋಲಿನ ಹೊರತಾಗಿಯೂ ಬೆಂಗಳೂರು ಬುಲ್ಸ್ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟ: ಕೊಹ್ಲಿ-ರೋಹಿತ್ ನಡುವೆ ಪೈಪೋಟಿ

ಇದನ್ನೂ ಓದಿ: IPL 2022 Auction: ಲಕ್ನೋ ತಂಡದ ಮೊದಲ ಟಾರ್ಗೆಟ್ ಯಾರು ಎಂಬುದನ್ನು ಬಹಿರಂಗಪಡಿಸಿದ ರಾಹುಲ್

Published On - 8:40 pm, Wed, 26 January 22

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು