AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೊ ಕಬಡ್ಡಿ ಲೀಗ್‌ ಆರಂಭಕ್ಕೆ ದಿನಗಣನೆ; ಬೆಂಗಳೂರಿನಲ್ಲಿ ಎಷ್ಟು ಪಂದ್ಯಗಳು ನಡೆಯಲ್ಲಿವೆ? ಬುಲ್ಸ್ ವೇಳಾಪಟ್ಟಿ ಹೇಗಿದೆ?

Bengaluru Bulls schedule in Pro Kabaddi 2023: ಪ್ರೊ ಕಬಡ್ಡಿ ಲೀಗ್‌ನ 10ನೇ ಸೀಸನ್ ಸಿದ್ದವಾಗಿದೆ. ಈ ಲೀಗ್ ಡಿಸೆಂಬರ್ 2 ರಿಂದ ಆರಂಭವಾಗಲಿದ್ದು, ಈ ಪಂದ್ಯಾವಳಿಯು 21 ಫೆಬ್ರವರಿ 2024 ರವರೆಗೆ ನಡೆಯಲಿದೆ. ಉದ್ಘಾಟನಾ ಪಂದ್ಯ ಗುಜರಾತ್ ಜೈಂಟ್ಸ್ ಮತ್ತು ತೆಲುಗು ಟೈಟಾನ್ಸ್ ನಡುವೆ ನಡೆಯಲ್ಲಿದ್ದು, ಒಟ್ಟು 12 ನಗರಗಳು ಈ ಲೀಗ್​ಗೆ ಆತಿಥ್ಯವಹಿಸುತ್ತಿವೆ.

ಪ್ರೊ ಕಬಡ್ಡಿ ಲೀಗ್‌ ಆರಂಭಕ್ಕೆ ದಿನಗಣನೆ; ಬೆಂಗಳೂರಿನಲ್ಲಿ ಎಷ್ಟು ಪಂದ್ಯಗಳು ನಡೆಯಲ್ಲಿವೆ? ಬುಲ್ಸ್ ವೇಳಾಪಟ್ಟಿ ಹೇಗಿದೆ?
ಬೆಂಗಳೂರು ಬುಲ್ಸ್ ತಂಡ
ಪೃಥ್ವಿಶಂಕರ
|

Updated on:Nov 24, 2023 | 5:51 PM

Share

ಇಷ್ಟು ದಿನ ಏಕದಿನ ವಿಶ್ವಕಪ್ (ODI World Cup 2023) ಸಂಭ್ರಮದಲ್ಲಿ ಮಿಂದೆದ್ದ ಕ್ರೀಡಾ ಅಭಿಮಾನಿಗಳಿಗೆ ಮತ್ತೊಂದು ರಸದೌತಣ ನೀಡಲು ಪ್ರೊ ಕಬಡ್ಡಿ ಲೀಗ್‌ನ 10ನೇ (Pro Kabaddi League 2023) ಸೀಸನ್ ಸಿದ್ದವಾಗಿದೆ. ಈ ಲೀಗ್ ಡಿಸೆಂಬರ್ 2 ರಿಂದ ಆರಂಭವಾಗಲಿದ್ದು, 21 ಫೆಬ್ರವರಿ 2024 ರವರೆಗೆ ನಡೆಯಲಿದೆ. ಉದ್ಘಾಟನಾ ಪಂದ್ಯ ಗುಜರಾತ್ ಜೈಂಟ್ಸ್ ಮತ್ತು ತೆಲುಗು ಟೈಟಾನ್ಸ್ ನಡುವೆ ನಡೆಯಲ್ಲಿದ್ದು, ಒಟ್ಟು 12 ನಗರಗಳು ಈ ಲೀಗ್​ಗೆ ಆತಿಥ್ಯವಹಿಸುತ್ತಿವೆ. ಎಲ್ಲಾ ತಂಡಗಳು ಪ್ರತಿ ನಗರದಲ್ಲಿ ತಲಾ 6 ಪಂದ್ಯಗಳನ್ನು ಆಡಲಿವೆ. ಮೊದಲ 6 ದಿನಗಳ ಪಂದ್ಯಗಳು ಅಹಮದಾಬಾದ್‌ನಲ್ಲಿ ನಡೆಯಲಿದ್ದು, ನಂತರ ಎಲ್ಲಾ ತಂಡಗಳು ಬೆಂಗಳೂರು, ಪುಣೆ, ಚೆನ್ನೈ, ನೋಯ್ಡಾ, ಮುಂಬೈ, ಜೈಪುರ, ಹೈದರಾಬಾದ್, ಪಾಟ್ನಾ ಮತ್ತು ನಂತರ ದೆಹಲಿ ಮತ್ತು ಕೋಲ್ಕತ್ತಾಗೆ ಪ್ರಯಾಣ ಬೆಳೆಸಲಿವೆ. ಇನ್ನು ಬೆಂಗಳೂರಿನಲ್ಲಿ ಎಷ್ಟು ಪಂದ್ಯಗಳು ನಡೆಯಲ್ಲಿವೆ? ಬೆಂಗಳೂರು ಬುಲ್ಸ್ (Bengaluru Bulls) ತಂಡದ ವೇಳಾಪಟ್ಟಿ ಹೇಗಿದೆ ಎಂಬುದನ್ನು ನೋಡುವುದಾದರೆ..

ಬೆಂಗಳೂರಿನಲ್ಲಿ ನಡೆಯಲ್ಲಿರುವ ಪಂದ್ಯಗಳು

  • ಡಿಸೆಂಬರ್ 8 – ಬೆಂಗಳೂರು ಬುಲ್ಸ್ Vs ದಬಾಂಗ್ ದೆಹಲಿ
  • ಡಿಸೆಂಬರ್ 8 – ಪುಣೇರಿ ಪಲ್ಟನ್ Vs ಯೂ ಮುಂಬಾ
  • ಡಿಸೆಂಬರ್ 9 – ಬೆಂಗಳೂರು ಬುಲ್ಸ್ Vs ಹರಿಯಾಣ ಸ್ಟೀಲರ್ಸ್
  • ಡಿಸೆಂಬರ್ 9- ಯುಪಿ ವಾರಿಯರ್ಸ್ Vs ತೆಲುಗು ಟೈಟಾನ್ಸ್
  • ಡಿಸೆಂಬರ್ 10- ಬೆಂಗಾಲ್ ವಾರಿಯರ್ಸ್ Vs ತಮಿಳ್ ತಲೈವಾಸ್
  • ಡಿಸೆಂಬರ್ 10- ದಬಾಂಗ್ ದೆಹಲಿ Vs ಹರಿಯಾಣ ಸ್ಟೀಲರ್ಸ್
  • ಡಿಸೆಂಬರ್ 11- ಜೈಪುರ ಪಿಂಕ್ ಪ್ಯಾಂಥರ್ಸ್ Vs ಗುಜರಾತ್ ಜೈಂಟ್ಸ್
  • ಡಿಸೆಂಬರ್ 11- ಬೆಂಗಳೂರು ಬುಲ್ಸ್ Vs ಯುಪಿ ಯೋದ್ಧ
  • ಡಿಸೆಂಬರ್ 12- ಬೆಂಗಾಲ್ ವಾರಿಯರ್ಸ್ Vs ಪಟ್ನಾ ಪೈರೆಟ್ಸ್
  • ಡಿಸೆಂಬರ್ 13 – ತಮಿಳು ತಲೈವಾಸ್ Vs ತೆಲುಗು ಟೈಟಾನ್ಸ್
  • ಡಿಸೆಂಬರ್ 13 – ಬೆಂಗಳೂರು ಬುಲ್ಸ್ Vs ಜೈಪುರ ಪಿಂಕ್ ಪ್ಯಾಂಥರ್ಸ್

ಬೆಂಗಳೂರು ಬುಲ್ಸ್ ವೇಳಾಪಟ್ಟಿ

ದಿನಾಂಕ ಪಂದ್ಯ ಸ್ಥಳ
03-12-2023 ಗುಜರಾತ್ ಜೈಂಟ್ಸ್ vs ಬೆಂಗಳೂರು ಬುಲ್ಸ್ ಅಹಮದಾಬಾದ್
04-12-2023 ಬೆಂಗಳೂರು ಬುಲ್ಸ್ vs ಬೆಂಗಾಲ್ ವಾರಿಯರ್ಸ್ ಅಹಮದಾಬಾದ್
08-12-2023 ಬೆಂಗಳೂರು ಬುಲ್ಸ್ vs ದಬಾಂಗ್ ದೆಹಲಿ ಬೆಂಗಳೂರು
09-12-2023 ಬೆಂಗಳೂರು ಬುಲ್ಸ್ vs ಹರಿಯಾಣ ಸ್ಟೀಲರ್ಸ್ ಬೆಂಗಳೂರು
11-12-2023 ಬೆಂಗಳೂರು ಬುಲ್ಸ್ vs ಯುಪಿ ಯೋಧಾಸ್ ಬೆಂಗಳೂರು
13-12-2023 ಬೆಂಗಳೂರು ಬುಲ್ಸ್ vs ಜೈಪುರ ಪಿಂಕ್ಸ್ ಪ್ಯಾಂಥರ್ಸ್ ಬೆಂಗಳೂರು
20-12-2023 ಪುಣೇರಿ ಪಲ್ಟನ್ vs ಬೆಂಗಳೂರು ಬುಲ್ಸ್ ಪುಣೆ
24-12-2023 ಬೆಂಗಳೂರು ಬುಲ್ಸ್ vs ತೆಲುಗು ಟೈಟಾನ್ಸ್ ಚೆನ್ನೈ
29-12-2023 ಯುಪಿ ಯೋಧಾಸ್ vs ಬೆಂಗಳೂರು ಬುಲ್ಸ್ ನೋಯ್ಡಾ
31-12-2023 ತಮಿಳು ತಲೈವಾಸ್ vs ಬೆಂಗಳೂರು ಬುಲ್ಸ್ ನೋಯ್ಡಾ
05-01-2024 ಯು ಮುಂಬಾ vs ಬೆಂಗಳೂರು ಬುಲ್ಸ್ ಮುಂಬೈ
08-01-2024 ಬೆಂಗಳೂರು ಬುಲ್ಸ್ vs ಪಾಟ್ನಾ ಪೈರೇಟ್ಸ್ ಮುಂಬೈ
15-01-2024 ಬೆಂಗಾಲ್ ವಾರಿಯರ್ಸ್ vs ಬೆಂಗಳೂರು ಬುಲ್ಸ್ ಜೈಪುರ
19-01-2024 ತೆಲುಗು ಟೈಟಾನ್ಸ್ vs ಬೆಂಗಳೂರು ಬುಲ್ಸ್ ಹೈದರಾಬಾದ್
21-01-2024 ತಮಿಳು ತಲೈವಾಸ್ vs ಬೆಂಗಳೂರು ಬುಲ್ಸ್ ಹೈದರಾಬಾದ್
28-01-2024 ಜೈಪುರ ಪಿಂಕ್ ಪ್ಯಾಂಥರ್ಸ್ vs ಬೆಂಗಳೂರು ಬುಲ್ಸ್ ಪಾಟ್ನಾ
31-01-2024 ಪಾಟ್ನಾ ಪೈರೇಟ್ಸ್ vs ಬೆಂಗಳೂರು ಬುಲ್ಸ್ ಪಾಟ್ನಾ
04-02-2024 ಬೆಂಗಳೂರು ಬುಲ್ಸ್ vs ಯು ಮುಂಬಾ ದೆಹಲಿ
07-02-2024 ಬೆಂಗಳೂರು ಬುಲ್ಸ್ vs ಪುಣೇರಿ ಪಲ್ಟನ್ ದೆಹಲಿ
11-02-2024 ಬೆಂಗಳೂರು ಬುಲ್ಸ್ vs ಗುಜರಾತ್ ಜೈಂಟ್ಸ್ ಕೋಲ್ಕತ್ತಾ
18-02-2024 ದಬಾಂಗ್ ದೆಹಲಿ vs ಬೆಂಗಳೂರು ಬುಲ್ಸ್ ಪಂಚಕುಲ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:47 pm, Fri, 24 November 23