AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

PBKS vs DC IPL 2026 Live Score: ಪಂಜಾಬ್​ಗೆ ಸ್ಫೋಟಕ ಆರಂಭ

Punjab Kings vs Delhi Capitals, IPL 2026 Live Score Updates: ಐಪಿಎಲ್ 2026 ರ 55 ನೇ ಪಂದ್ಯ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯುತ್ತಿದೆ. 19 ನೇ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಎರಡೂ ತಂಡಗಳು ಮುಖಾಮುಖಿಯಾಗುತ್ತಿರುವುದು ಇದು ಎರಡನೇ ಬಾರಿ. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ದುಕೊಂಡಿದೆ.

PBKS vs DC IPL 2026 Live Score: ಪಂಜಾಬ್​ಗೆ ಸ್ಫೋಟಕ ಆರಂಭ
Pbks Bs Dc
ಪೃಥ್ವಿಶಂಕರ
|

Updated on:May 11, 2026 | 7:53 PM

Share

LIVE NEWS & UPDATES

  • 11 May 2026 07:53 PM (IST)

    PBKS vs DC IPL 2026: 50 ರನ್ ಪೂರ್ಣ

    ಪಂಜಾಬ್ ಮೊದಲ ಮೂರು ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 51 ರನ್ ಗಳಿಸಿತು.

  • 11 May 2026 07:41 PM (IST)

    PBKS vs DC IPL 2026: ಪಂಜಾಬ್​ಗೆ ಸ್ಫೋಟಕ ಆರಂಭ

    ಮಿಚೆಲ್ ಸ್ಟಾರ್ಕ್ ಅವರ ಮೊದಲ ಎಸೆತದಲ್ಲಿ ಪ್ರಿಯಾಂಶ್ ಆರ್ಯ ಬೌಂಡರಿ ಬಾರಿಸುವ ಮೂಲಕ ತಮ್ಮ ತಂಡದ ಖಾತೆ ತೆರೆದರು. ಪ್ರಿಯಾಂಶ್ ಮೊದಲ ಓವರ್‌ನಲ್ಲಿ ಎರಡು ಸಿಕ್ಸರ್‌ಗಳನ್ನು ಬಾರಿಸಿದರೆ, ಪ್ರಭ್ಸಿಮ್ರಾನ್ ಸಿಂಗ್ ಒಂದು ಬೌಂಡರಿ ಬಾರಿಸಿದರು. ಈ ಓವರ್‌ನಲ್ಲಿ ಒಟ್ಟು 22 ರನ್‌ಗಳು ಬಂದವು.

  • 11 May 2026 07:19 PM (IST)

    PBKS vs DC IPL 2026: ಡೆಲ್ಲಿ ಕ್ಯಾಪಿಟಲ್ಸ್

    ಅಭಿಷೇಕ್ ಪೊರೆಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸಾಹಿಲ್ ಪರಾಖ್, ಟ್ರಿಸ್ಟಾನ್ ಸ್ಟಬ್ಸ್, ಡೇವಿಡ್ ಮಿಲ್ಲರ್, ಅಕ್ಷರ್ ಪಟೇಲ್ (ನಾಯಕ), ಮಾಧವ್ ತಿವಾರಿ, ಮುಖೇಶ್ ಕುಮಾರ್, ಆಕಿಬ್ ನಬಿ, ಲುಂಗಿ ಎನ್‌ಗಿಡಿ, ಮಿಚೆಲ್ ಸ್ಟಾರ್ಕ್.

  • 11 May 2026 07:18 PM (IST)

    PBKS vs DC IPL 2026: ಪಂಜಾಬ್ ಕಿಂಗ್ಸ್

    ಪ್ರಭ್ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ, ಕೂಪರ್ ಕೊನೊಲಿ, ಶ್ರೇಯಸ್ ಅಯ್ಯರ್ (ನಾಯಕ), ಸೂರ್ಯಾಂಶ್ ಶೆಡ್ಜ್, ಮಾರ್ಕಸ್ ಸ್ಟೊಯಿನಿಸ್, ಶಶಾಂಕ್ ಸಿಂಗ್, ಮಾರ್ಕೊ ಯಾನ್ಸೆನ್, ಬೆನ್ ದ್ವಾರ್ಶುಯಿಸ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.

  • 11 May 2026 07:03 PM (IST)

    PBKS vs DC IPL 2026: ಟಾಸ್ ಗೆದ್ದ ಡೆಲ್ಲಿ

    ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ದುಕೊಂಡಿದೆ.

ಐಪಿಎಲ್ 2026 ರ 55 ನೇ ಪಂದ್ಯ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯುತ್ತಿದೆ. 19 ನೇ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಎರಡೂ ತಂಡಗಳು ಮುಖಾಮುಖಿಯಾಗುತ್ತಿರುವುದು ಇದು ಎರಡನೇ ಬಾರಿ. ಶ್ರೇಯಸ್ ಅಯ್ಯರ್ ಪಂಜಾಬ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅಕ್ಷರ್ ಪಟೇಲ್ ದೆಹಲಿ ತಂಡದ ನಾಯಕರಾಗಿದ್ದಾರೆ. ಪಂಜಾಬ್ ಈ ಪಂದ್ಯವನ್ನು ಗೆದ್ದು ಪ್ಲೇಆಫ್‌ಗೆ ಹತ್ತಿರವಾಗುವ ಅವಕಾಶವನ್ನು ಹೊಂದಿದೆ. ಏತನ್ಮಧ್ಯೆ, ದೆಹಲಿ ತಂಡವು ತಮ್ಮ ಕೊನೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದೆ.

Published On - May 11,2026 7:03 PM

Follow Us