ವಿಶ್ವ ಚಾಂಪಿಯನ್​ಗೆ ಸೋಲುಣಿಸಿ, ಸೋತು ಗೆದ್ದ ಆರ್. ಪ್ರಗ್ನಾನಂದಗೆ ಪ್ರಧಾನಿ ಮೋದಿ ಅಭಿನಂದನೆ

R. Praggnanandhaa: 16 ವರ್ಷದ ಪ್ರಗ್ನಾನಂದ ಖ್ಯಾತ ಚೆಸ್ ಪಟುಗಳಾದ ಕಾರ್ಲ್ಸನ್, ಲೆವ್ ಅರೋನಿಯನ್, ರಷ್ಯಾದ ಆಂಡ್ರೆ ಎಸ್ಪಿಯೆಂಕೊ, ಮಾಜಿ ಮಹಿಳಾ ವಿಶ್ವ ಚಾಂಪಿಯನ್ ಅಲೆಕ್ಸಾಂಡ್ರಾ ಕೊಸ್ಟಾನ್ಯುಕ್ ಮತ್ತು ಕೆಮರ್ ಅವರನ್ನು ಟಾಪ್ 10 ರಲ್ಲಿ ಸೋಲಿಸಿ ವಿಶ್ವದ ಗಮನ ಸೆಳೆದಿದ್ದಾರೆ.

ವಿಶ್ವ ಚಾಂಪಿಯನ್​ಗೆ ಸೋಲುಣಿಸಿ, ಸೋತು ಗೆದ್ದ ಆರ್. ಪ್ರಗ್ನಾನಂದಗೆ ಪ್ರಧಾನಿ ಮೋದಿ ಅಭಿನಂದನೆ
Rameshbabu Praggnanandhaa
Follow us
TV9 Web
| Updated By: ಝಾಹಿರ್ ಯೂಸುಫ್

Updated on: Feb 23, 2022 | 4:17 PM

ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ ಇತ್ತೀಚೆಗೆ ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದ ಭಾರತದ ಲಿಟ್ಲ್ ಗ್ರ್ಯಾಂಡ್ ಮಾಸ್ಟರ್  ರಮೇಶ್ ಬಾಬು ಪ್ರಗ್ನಾನಂದ (R Praggnanandhaa) ಅವರನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಅಭಿನಂದಿಸಿದ್ದಾರೆ . “ಯುವ ಪ್ರತಿಭೆ ಆರ್ ಪ್ರಗ್ನಾನಂದ ಅವರ ಯಶಸ್ಸಿನ ಬಗ್ಗೆ ನಾವೆಲ್ಲರೂ ಸಂತೋಷಪಡುತ್ತೇವೆ. ಹೆಸರಾಂತ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ ಗೆದ್ದ ಅವರ ಸಾಧನೆಯ ಬಗ್ಗೆ ಹೆಮ್ಮೆ ಇದೆ. ಪ್ರತಿಭಾವಂತ ಪ್ರಗ್ನಾನಂದ ಅವರ ಭವಿಷ್ಯದ ಪ್ರಯತ್ನಗಳಿಗೆ ನಾನು ಶುಭ ಹಾರೈಸುತ್ತೇನೆ ಎಂದು ಪಿಎಂ ಮೋದಿ ತಮ್ಮ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

16 ವರ್ಷದ ಪ್ರಗ್ನಾನಂದ (R Praggnanandhaa) ಸಾರ್ವಕಾಲಿಕ ಐದನೇ ಕಿರಿಯ ಗ್ರ್ಯಾಂಡ್‌ಮಾಸ್ಟರ್, ಆನ್‌ಲೈನ್ ರ್ಯಾಪಿಡ್ ಚೆಸ್ ಸ್ಪರ್ಧೆಯಾದ ಏರ್‌ಥಿಂಗ್ಸ್ ಮಾಸ್ಟರ್ಸ್‌ನ ಎಂಟನೇ ಸುತ್ತಿನಲ್ಲಿ ಕಾರ್ಲ್‌ಸೆನ್ ಅವರನ್ನು ದಿಗ್ಭ್ರಮೆಗೊಳಿಸಿದರು. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಈ ಪಂದ್ಯದಲ್ಲಿ ವಿಶ್ವ ಚಾಂಪಿಯನ್, ನಂಬರ್ ಒನ್ ಚೆಸ್ ಮಾಸ್ಟರ್ ಮ್ಯಾಗ್ನಸ್ ಕಾರ್ಲ್‌ಸೆನ್​​ಗೆ (Magnus Carlsen) ಸೋಲುಣಿಸಿ ಪ್ರಗ್ನಾನಂದ ಹೊಸ ಇತಿಹಾಸ ಬರೆದಿದ್ದರು. ಇದಾಗ್ಯೂ ಪ್ರಗ್ನಾನಂದ ಪ್ರಸ್ತುತ ನಡೆಯುತ್ತಿರುವ ಏರ್‌ಥಿಂಗ್ಸ್ ಮಾಸ್ಟರ್ಸ್‌ನ ನಾಕೌಟ್‌ ಹಂತಕ್ಕೆ ಅರ್ಹತೆ ಪಡೆಯಲು ವಿಫಲರಾಗಿದ್ದಾರೆ. ರೌಂಡ್-ರಾಬಿನ್ ಹಂತದಿಂದ ಕೇವಲ ಎಂಟು ಮಂದಿ ಮಾತ್ರ ನಾಕೌಟ್‌ಗೆ ಅರ್ಹತೆ ಪಡೆಯಲಿದ್ದಾರೆ. ಆದರೆ ಸಣ್ಣ ಪುಟ್ಟ ತಪ್ಪುಗಳಿಂದಾಗಿ ಪ್ರಗ್ನಾನಂದ ಅಂಕಪಟ್ಟಿಯಲ್ಲಿ 11 ನೇ ಸ್ಥಾನವನ್ನು ಪಡೆದಿದ್ದಾರೆ. ಹೀಗಾಗಿ ನಾಕೌಟ್ ಹಂತದಿಂದ ಹೊರಬಿದ್ದಿದ್ದಾರೆ. ಇದಾಗ್ಯೂ ಯುವ ಚೆಸ್ ಪ್ರತಿಭೆಯ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹಾಡಿ ಹೊಗಳುವ ಮೂಲಕ ಭಾರತದ ಲಿಟ್ಲ್ ಗ್ರ್ಯಾಂಡ್ ಮಾಸ್ಟರ್ ಧೈರ್ಯ ತುಂಬಿದ್ದಾರೆ.

ಆದಾಗ್ಯೂ, ಭಾರತೀಯ ಗ್ರ್ಯಾಂಡ್‌ಮಾಸ್ಟರ್, 32 ನಡೆಗಳ ಕಾಲ ನಡೆದ ಪಂದ್ಯದಲ್ಲಿ ಕೆಮರ್ ವಿರುದ್ಧ ವಿಜಯವನ್ನು ದಾಖಲಿಸುವ ಮೂಲಕ ತನ್ನ ಅಭಿಯಾನವನ್ನು ಕೊನೆಗೊಳಿಸಿದ್ದಾರೆ. 15 ಸುತ್ತುಗಳ ಪ್ರಾಥಮಿಕ ಸುತ್ತಿನಲ್ಲಿ ಆರ್. ಪ್ರಗ್ನಾನಂದ ಐದು ಗೇಮ್‌ಗಳನ್ನು ಗೆದ್ದರು, ನಾಲ್ಕು ಗೇಮ್‌ಗಳನ್ನು ಡ್ರಾ ಮಾಡಿಕೊಂಡಿದ್ದರು. ಇನ್ನು ಸಣ್ಣ ಪುಟ್ಟ ಪ್ರಮಾದಗಳಿಂದಾಗಿ ಆರು ಗೇಮ್‌ಗಳನ್ನು ಕಳೆದುಕೊಂಡರು. ಈ ಸೋಲುಗಳೇ ಲಿಟ್ಲ್​ ಮಾಸ್ಟರ್​ ಅನ್ನು ಟೂರ್ನಿಯಿಂದ ಹೊರಬೀಳುವಂತೆ ಮಾಡಿದೆ.

ಆದರೆ ಆಡಿರುವ 15 ಸುತ್ತುಗಳ ಪಂದ್ಯಗಳಲ್ಲಿ 16 ವರ್ಷದ ಪ್ರಗ್ನಾನಂದ ಖ್ಯಾತ ಚೆಸ್ ಪಟುಗಳಾದ ಕಾರ್ಲ್ಸನ್, ಲೆವ್ ಅರೋನಿಯನ್, ರಷ್ಯಾದ ಆಂಡ್ರೆ ಎಸ್ಪಿಯೆಂಕೊ, ಮಾಜಿ ಮಹಿಳಾ ವಿಶ್ವ ಚಾಂಪಿಯನ್ ಅಲೆಕ್ಸಾಂಡ್ರಾ ಕೊಸ್ಟಾನ್ಯುಕ್ ಮತ್ತು ಕೆಮರ್ ಅವರನ್ನು ಟಾಪ್ 10 ರಲ್ಲಿ ಸೋಲಿಸಿ ವಿಶ್ವದ ಗಮನ ಸೆಳೆದಿದ್ದಾರೆ. ಹಾಗೆಯೇ 10 ಮತ್ತು 12 ರ ಸುತ್ತುಗಳಲ್ಲಿ ಆಂಡ್ರೆ ಎಸಿಪೆಂಕೊ ಮತ್ತು ಅಲೆಕ್ಸಾಂಡ್ರಾ ಕೊಸ್ಟೆನಿಯುಕ್ ವಿರುದ್ಧ ಎರಡು ವಿಜಯಗಳನ್ನು ದಾಖಲಿಸಿದ್ದರು. ಈ ಸೋಲಿನ ಹೊರತಾಗಿಯೂ 16 ವರ್ಷದ ಯುವ ಚೆಸ್ ಸೆನ್ಸೇಷನ್ ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದು ಹೆಮ್ಮೆ ವಿಚಾರ.

ಇದನ್ನೂ ಓದಿ: World Record: ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಯುವ ಬ್ಯಾಟ್ಸ್​ಮನ್

ಇದನ್ನೂ ಓದಿ: Dewald Brevis: ಐಪಿಎಲ್​ನಲ್ಲಿ ಹರಾಜಾದ ಬಳಿಕ ಬೇಬಿ ಎಬಿ ಫುಲ್ ಫ್ಲಾಪ್..!

(Rameshbabu Praggnanandhaa misses out on quarter finals at Airthings Masters)