Sunil Chhetri Retires: ಅಂತಾರಾಷ್ಟ್ರೀಯ ವೃತ್ತಿ ಬದುಕಿಗೆ ಕಣ್ಣೀರಿನ ವಿದಾಯ ಹೇಳಿದ ಕಾಲ್ಚೆಂಡಿನ ಚತುರ ಸುನಿಲ್ ಛೆಟ್ರಿ
Sunil Chhetri Retires: 39 ವರ್ಷದ ಛೆಟ್ರಿ ಕುವೈತ್ ವಿರುದ್ಧದ ಪಂದ್ಯದ ನಂತರ ತಮ್ಮ 19 ವರ್ಷಗಳ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಈ ಮೊದಲೇ ಘೋಷಿಸಿದ್ದರು. ಅದರಂತೆ ಇಂದು ನಡೆದ ಕುವೈತ್ ವಿರುದ್ಧದ ಪಂದ್ಯದ ಅಂತ್ಯದೊಂದಿಗೆ ಭಾರತ ಫುಟ್ಬಾಲ್ಗೆ ತನ್ನ ಆಟದಿಂದ ಮೆರಗು ತಂದಿದ್ದ ಕಾಲ್ಚೆಂಡಿನ ಚತುರನ ಅಂತಾರಾಷ್ಟ್ರೀಯ ವೃತ್ತಿಜೀವನವೂ ಅಂತ್ಯಗೊಂಡಿದೆ.
ಜೂನ್ 6 ರಂದು, ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂ (Salt Lake stadium in Kolkata) ತನ್ನ 40 ವರ್ಷಗಳ ಇತಿಹಾಸದಲ್ಲೇ ಅತಿದೊಡ್ಡ ಫುಟ್ಬಾಲ್ ಪಂದ್ಯಕ್ಕೆ ಸಾಕ್ಷಿಯಾಯಿತು. 1 ಲಕ್ಷದ 10 ಸಾವಿರ ಪ್ರೇಕ್ಷಕರ ಸಾಮರ್ಥ್ಯದ ಈ ಕ್ರೀಡಾಂಗಣದಲ್ಲಿ ಭಾರತೀಯ ಫುಟ್ಬಾಲ್ನ ಲೆಜೆಂಡರಿ ಆಟಗಾರ ಸುನಿಲ್ ಛೆಟ್ರಿ (Sunil Chhetri) ಇಂದು ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದ ಕೊನೆಯ ಪಂದ್ಯವನ್ನು ಆಡಿದರು. 39 ವರ್ಷದ ಛೆಟ್ರಿ ಕುವೈತ್ (Kuwait) ವಿರುದ್ಧದ ಪಂದ್ಯದ ನಂತರ ತಮ್ಮ 19 ವರ್ಷಗಳ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಈ ಮೊದಲೇ ಘೋಷಿಸಿದ್ದರು. ಅದರಂತೆ ಇಂದು ನಡೆದ ಕುವೈತ್ ವಿರುದ್ಧದ ಪಂದ್ಯದ ಅಂತ್ಯದೊಂದಿಗೆ ಭಾರತ ಫುಟ್ಬಾಲ್ಗೆ ತನ್ನ ಆಟದಿಂದ ಮೆರಗು ತಂದಿದ್ದ ಕಾಲ್ಚೆಂಡಿನ ಚತುರನ ಅಂತಾರಾಷ್ಟ್ರೀಯ ವೃತ್ತಿಜೀವನವೂ ಅಂತ್ಯಗೊಂಡಿದೆ.
ನಿರ್ಣಾಯಕ ಪಂದ್ಯ ಡ್ರಾದಲ್ಲಿ ಅಂತ್ಯ
ಸುಮಾರು 5 ವರ್ಷಗಳ ಹಿಂದೆ ವಿಡಿಯೋ ಮಾಡಿ ಟೀಂ ಇಂಡಿಯಾದ ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಆಗಮಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದ ಭಾರತ ತಂಡದ ನಾಯಕ ಸುನಿಲ್ ಛೆಟ್ರಿಯ ಕೊನೆಯ ಅಂತಾರಾಷ್ಟ್ರೀಯ ಪಂದ್ಯಕ್ಕೆ ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣ ಸಂಪೂರ್ಣ ಭರ್ತಿಯಾಗಿತ್ತು. ಛೆಟ್ರಿಯ ಪ್ರತಿ ಟಚ್, ಪಾಸ್ ಮತ್ತು ಶಾಟ್‌ಗೆ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟುತ್ತಿತ್ತು. ಅಲ್ಲದೆ, ಟೀಂ ಇಂಡಿಯಾ ಗೋಲು ಗಳಿಸಲು ಮಾಡುತ್ತಿದ್ದ ಪ್ರತಿಯೊಂದು ಪ್ರಯತ್ನಕ್ಕೂ ನಿರಂತರವಾಗಿ ಪ್ರೋತ್ಸಾಹಿ ಸಿಕ್ಕಿತು.
ದುರದೃಷ್ಟವಶಾತ್ ಸುಮಾರು 100 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಒಂದೇ ಒಂದು ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಲಿಲ್ಲ. ಹಲವು ಬಾರಿ ಗೋಲು ಬಾರಿಸಿ ತಂಡವನ್ನು ಕಾಪಾಡಿದ್ದ ನಾಯಕ ಛೆಟ್ರಿ ಕೂಡ ಈ ಬಾರಿ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಂದ್ಯವು 0-0 ಯಿಂದ ಡ್ರಾದಲ್ಲಿ ಕೊನೆಗೊಂಡಿತು. ಮ್ಯಾಚ್ ರೆಫರಿಯ ಅಂತಿಮ ವಿಸಿಲ್ ಬಿದ್ದ ಕೂಡಲೇ, ಛೆಟ್ರಿ ಸೇರಿದಂತೆ ಎಲ್ಲಾ ಭಾರತೀಯ ಆಟಗಾರರ ಮುಖದಲ್ಲಿ ನಿರಾಶೆ ತುಂಬಿತ್ತು.
ಭಾರತದಲ್ಲಿ ಫುಟ್ಬಾಲ್ ಕ್ರಾಂತಿಗೆ ಹೊಸ ಹೆಜ್ಜೆಯಿಟ್ಟ ಟಿವಿ9; ಚಾಲನೆ ನೀಡಿದ CEO ಬರುಣ್ ದಾಸ್
ಎಲ್ಲರ ಕಣ್ಣಲ್ಲೂ ಕಣ್ಣೀರು
ಪಂದ್ಯವೆನೋ ಡ್ರಾದಲ್ಲಿ ಕೊನೆಗೊಂಡಿತು. ಆದರೆ ಇದರ ನಂತರ ಕಂಡುಬಂದ ದೃಶ್ಯ ಎಲ್ಲರ ಕಣ್ಣಲ್ಲೂ ನೀರು ಜಿನುಗುವಂತೆ ಮಾಡಿತು. ಏಕೆಂದರೆ ಕ್ರೀಡಾಂಗಣದಲ್ಲಿದ್ದ ಪ್ರತಿಯೊಬ್ಬ ಭಾರತೀಯ ಅಭಿಮಾನಿಗಳು ಭಾವುಕರಾಗಿದ್ದರು. ಛೆಟ್ರಿ ಕೂಡ ತಮ್ಮ ಕಣ್ಣೀರನ್ನು ನಿಯಂತ್ರಿಸಿತ್ತಾ, ಎಲ್ಲಾ ಆಟಗಾರರನ್ನು ತಬ್ಬಿಕೊಂಡು ಹಸ್ತಲಾಘವ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದರು. ಆ ಬಳಿಕ ಮೈದಾನದ ಸುತ್ತ ಸುತ್ತು ಹಾಕುವ ಮೂಲಕ ತಮ್ಮ ವೃತ್ತಿಜೀವನದ ಈ ಕೊನೆಯ ಪ್ರಯಾಣದಲ್ಲಿ ತನ್ನೊಂದಿಗೆ ಜೊತೆಯಾಗಿದ್ದಕ್ಕೆ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು. ಈ ವೇಳೆ ಅನೇಕ ಅಭಿಮಾನಿಗಳ ಕಣ್ಣಲ್ಲಿ ನೀರು ಕಾಣಿಸಿಕೊಂಡಿತು.
A very emotional moment for Sunil Chhetri. He couldn’t hold his tears as the team members give him guard of honor. pic.twitter.com/wt2qjuDs9A
— Himanshu Pareek (@Sports_Himanshu) June 6, 2024
ಲೆಜೆಂಡರಿ ಆಟಗಾರನಿಗೆ ಗೌರವ ಸಮರ್ಪಣೆ
ಇದಾದ ನಂತರ ಸುಮಾರು 19 ವರ್ಷಗಳ ಕಾಲ ರಾಷ್ಟ್ರೀಯ ತಂಡದಲ್ಲಿ ಆಡಿದ 39 ವರ್ಷದ ಛೆಟ್ರಿ ಅವರನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಮತ್ತು ಈಸ್ಟ್ ಬೆಂಗಾಲ್ ಮತ್ತು ಮೋಹನ್ ಬಗಾನ್‌ನಂತಹ ಪ್ರಸಿದ್ಧ ಫುಟ್‌ಬಾಲ್ ಕ್ಲಬ್‌ಗಳು ಸಹ ಗೌರವಿಸಿದವು. ಕೋಲ್ಕತ್ತಾದ ಈ ಎರಡೂ ಖ್ಯಾತ ಕ್ಲಬ್‌ಗಳೊಂದಿಗೆ ಛೆಟ್ರಿ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಹಲವು ವರ್ಷಗಳನ್ನು ಕಳೆದಿದ್ದರು. ಕಳೆದ 12 ವರ್ಷಗಳಿಂದ ಭಾರತ ತಂಡದ ನಾಯಕರಾಗಿದ್ದ ಛೆಟ್ರಿ ಅವರು ದೇಶದ ಪರ 151 ಪಂದ್ಯಗಳನ್ನು ಆಡಿದ್ದು, ದಾಖಲೆಯ 94 ಗೋಲುಗಳನ್ನು ಬಾರಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:25 pm, Thu, 6 June 24