AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 10,499 ರೂ. ಗೆ ಖರೀದಿಸಿ 6000mAh ಬ್ಯಾಟರಿ, 50MP ಕ್ಯಾಮೆರಾದ ಈ ಸ್ಮಾರ್ಟ್​ಫೋನ್

ಗ್ಯಾಲಕ್ಸಿ M13 4G ಫೋನ್ ಭರ್ಜರಿ ಡಿಸ್ಕೌಂಟ್​ನಲ್ಲಿ ಕಾಣಿಸಿಕೊಂಡಿದೆ. 4ಜಿ ಆವೃತ್ತಿಯ ಫೋನ್​ನಲ್ಲಿ ಬರೋಬ್ಬರಿ 6000mAh ಸಾಮರ್ಥ್ಯದ ಬಿಗ್ ಬ್ಯಾಟರಿ ನೀಡಲಾಗಿದೆ. ಆಕರ್ಷಕ ಕ್ಯಾಮೆರಾ ಕೂಡ ಇದೆ.

ಕೇವಲ 10,499 ರೂ. ಗೆ ಖರೀದಿಸಿ 6000mAh ಬ್ಯಾಟರಿ, 50MP ಕ್ಯಾಮೆರಾದ ಈ ಸ್ಮಾರ್ಟ್​ಫೋನ್
Samsung Galaxy M13
Follow us
TV9 Web
| Updated By: Vinay Bhat

Updated on: Oct 05, 2022 | 6:06 AM

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ ಅನೇಕ ಹೊಚ್ಚ ಹೊಸ ಸ್ಮಾರ್ಟ್​ಫೋನ್​ಗಳು ಬಂಪರ್ ಡಿಸ್ಕೌಂಟ್​ಗೆ ಮಾರಾಟ ಆಗುತ್ತಿದೆ. ಇದರಲ್ಲಿ ಸ್ಯಾಮ್​ಸಂಗ್ ಕಂಪನಿಯ ಗ್ಯಾಲಕ್ಸಿ ಎಮ್​13 (Samsung Galaxy M13) ಸ್ಮಾರ್ಟ್​​ಫೋನ್ ಕೂಡ ಇದೆ. ಇದು 4G ಮತ್ತು 5G ಎರಡು ಆವೃತ್ತಿಯಲ್ಲಿ ಕಳೆದ ಜುಲೈನಲ್ಲಿ ಅನಾವರಣಗೊಂಡಿತ್ತು. ಇದರಲ್ಲಿ ಗ್ಯಾಲಕ್ಸಿ M13 4G (Galaxy M13 4G) ಫೋನ್ ಭರ್ಜರಿ ಡಿಸ್ಕೌಂಟ್​ನಲ್ಲಿ ಕಾಣಿಸಿಕೊಂಡಿದೆ. 4ಜಿ ಆವೃತ್ತಿಯ ಫೋನ್​ನಲ್ಲಿ ಬರೋಬ್ಬರಿ 6000mAh ಸಾಮರ್ಥ್ಯದ ಬಿಗ್ ಬ್ಯಾಟರಿ ನೀಡಲಾಗಿದೆ. ಆಕರ್ಷಕ ಕ್ಯಾಮೆರಾ ಕೂಡ ಇದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಫೀಚರ್ಸ್​ ಏನು?, ಆಫರ್ ಏನಿದೆ? ಎಂಬುದನ್ನು ನೋಡೋಣ.

ಗ್ಯಾಲಕ್ಸಿ M13 4G ಸ್ಮಾರ್ಟ್​​ಫೋನ್ ಒಟ್ಟು ಎರಡು ಮಾದರಿಯಲ್ಲಿ ರಿಲೀಸ್ ಆಗಿತ್ತು. ಇದರ 4GB + 64GB ಸ್ಟೋರೆಜ್ ಮಾದರಿಗೆ 14,999 ರೂ. ಇತ್ತು. ಆದರೀಗ ಅಮೆಜಾನ್​ನಲ್ಲಿ ಈ ಫೋನ್ ಕೇವಲ 10,499 ರೂ. ಗೆ ಸೇಲ್ ಕಾಣುತ್ತಿದೆ. ಜೊತೆಗೆ 9,850 ರೂ. ವರೆಗೆ ಎಕ್ಸ್​ಚೇಂಜ್ ಆಫರ್ ಕೂಡ ನೀಡಲಾಗಿದೆ.

ಈ ಸ್ಮಾರ್ಟ್‌ಫೋನ್‌ 6.6 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಎಲ್​ಸಿಡಿ ಡಿಸ್​ ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 480 ನಿಟ್ಸ್​ ಬ್ರೈಟ್​ನೆಸ್​ ಅನ್ನು ನೀಡುತ್ತದೆ. ಗೋರಿಲ್ಲ ಗ್ಲಾಸ್ 5 ಪ್ರೊಟೆಕ್ಷನ್ ಕೂಡ ಇದೆ. ಎಕ್ಸಿನೋಸ್ 850 SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 ಅನ್ನು ಒನ್​ಯುಐ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ
Image
Jio Book Laptop: ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ ಜಿಯೋ ಬುಕ್ ಲ್ಯಾಪ್​ಟಾಪ್: ಇದರ ಬೆಲೆ ಕೇವಲ …
Image
Galaxy A04s: ಸ್ಯಾಮ್​ಸಂಗ್ ಕಂಪನಿಯಿಂದ ಕೇವಲ 13,499 ರೂ. ಗೆ ಗ್ಯಾಲಕ್ಸಿ A04s ಸ್ಮಾರ್ಟ್‌ಫೋನ್‌ ಬಿಡುಗಡೆ: ಏನಿದೆ ಫೀಚರ್ಸ್?
Image
Xiaomi 12T: ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿಂದು 200MP ಕ್ಯಾಮೆರಾದ ಶವೋಮಿ 12T ಸರಣಿ ಬಿಡುಗಡೆ: ಬೆಲೆ ಎಷ್ಟು?
Image
Oppo A16K: ಬಜೆಟ್ ಬೆಲೆಯ ಒಪ್ಪೋ A16K ಸ್ಮಾರ್ಟ್‌ಫೋನ್ ದರದಲ್ಲಿ ಭರ್ಜರಿ ಇಳಿಕೆ: ನೂತನ ದರ ಇಲ್ಲಿದೆ

ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ–ವೈಡ್ ಲೆನ್ಸ್‌ ಹೊಂದಿದ್ದು, 120 ಡಿಗ್ರಿಗಳ ಫೀಲ್ಡ್ ಆಫ್ ವ್ಯೂ ನೀಡಲಿದೆ. ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಗ್ಯಾಲಕ್ಸಿ M13 ಸ್ಮಾರ್ಟ್‌ಫೋನ್‌ ಬರೋಬ್ಬರಿ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi, ಬ್ಲೂಟೂತ್, ಸ್ಯಾಮ್​ಸಂಗ್ ನಾಕ್ಸ್ ಸೆಕ್ಯೂರಿಟಿ ಜೊತೆಗೆ ಫಿಂಗರ್‌ಪ್ರಿಂಟ್ ಸೆನ್ಸಾರ್‌ ನೀಡಲಾಗಿದೆ.

ಇನ್ನು ಗ್ಯಾಲಕ್ಸಿ M13 5G ಸ್ಮಾರ್ಟ್​​ಫೋನ್ ಕೂಡ ಬಂಪರ್ ಆಫರ್​ನಲ್ಲಿ ಕಾಣಿಸಿಕೊಂಡಿದೆ. ಇದರ 4GB + 64GB ಸ್ಟೋರೆಜ್ ಮಾದರಿಗೆ 16,999 ರೂ. ಇದೆ. ಆದರೀಗ ಡಿಸ್ಕೌಂಟ್​ನಲ್ಲಿ ಇದನ್ನು ಕೇವಲ 11,999 ರೂ. ಗೆ ನಿಮ್ಮದಾಗಿಸಬಹುದು. ಈ ಸ್ಮಾರ್ಟ್‌ಫೋನ್‌ 6.5 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಎಲ್​ಸಿಡಿ ಡಿಸ್​ ಪ್ಲೇ ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್‌ ನೀಡಲಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್​ನಲ್ಲಿದ್ದರೆ ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಇದೆ. ಅಂತೆಯೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಆರ್​ಸಿಬಿ ಗೆಲುವಿನ ಸಂಭ್ರಮಾಚರಣೆ ಹೇಗಿತ್ತು? ವಿಡಿಯೋ ನೋಡಿ
ಆರ್​ಸಿಬಿ ಗೆಲುವಿನ ಸಂಭ್ರಮಾಚರಣೆ ಹೇಗಿತ್ತು? ವಿಡಿಯೋ ನೋಡಿ
ಗಾಜಿಯಾಬಾದ್ ಅಪಾರ್ಟ್​ಮೆಂಟ್​​ ಲಿಫ್ಟ್‌ನಲ್ಲಿ ಸಿಲುಕಿದ ಮಗು
ಗಾಜಿಯಾಬಾದ್ ಅಪಾರ್ಟ್​ಮೆಂಟ್​​ ಲಿಫ್ಟ್‌ನಲ್ಲಿ ಸಿಲುಕಿದ ಮಗು
ಆರ್​ಸಿಬಿ ವಿರುದ್ಧ ಶತಕ ಬಾರಿಸಿ ಪಲ್ಟಿ ಹೊಡೆದ ಪಂತ್
ಆರ್​ಸಿಬಿ ವಿರುದ್ಧ ಶತಕ ಬಾರಿಸಿ ಪಲ್ಟಿ ಹೊಡೆದ ಪಂತ್
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ
ರೌಡಿಶೀಟರ್ ಅನಿಸ್ಕೊಂಡು ಬದುಕು ನಡೆಸುವುದು ಬಹಳ ಕಷ್ಟ: ನವಾಬ್ ಪಾಶಾ
ರೌಡಿಶೀಟರ್ ಅನಿಸ್ಕೊಂಡು ಬದುಕು ನಡೆಸುವುದು ಬಹಳ ಕಷ್ಟ: ನವಾಬ್ ಪಾಶಾ
ನಕಲಿ ಫೋಟೋ ವಿವಾದದ ಬಗ್ಗೆ ಪಾಕ್ ಪಿಎಂ, ಸೇನಾ ಮುಖ್ಯಸ್ಥರನ್ನು ಕೆಣಕಿದ ಓವೈಸಿ
ನಕಲಿ ಫೋಟೋ ವಿವಾದದ ಬಗ್ಗೆ ಪಾಕ್ ಪಿಎಂ, ಸೇನಾ ಮುಖ್ಯಸ್ಥರನ್ನು ಕೆಣಕಿದ ಓವೈಸಿ
ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ
ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ
ವಿಜಯೇಂದ್ರ ನಾಯಕತ್ವದಲ್ಲಿ 245/224 ಸೀಟು ಬಂದರೂ ಅಚ್ಚರಿಯಿಲ್ಲ: ಯತ್ನಾಳ್
ವಿಜಯೇಂದ್ರ ನಾಯಕತ್ವದಲ್ಲಿ 245/224 ಸೀಟು ಬಂದರೂ ಅಚ್ಚರಿಯಿಲ್ಲ: ಯತ್ನಾಳ್