WhatsApp: 10 ಲಕ್ಷಕ್ಕೂ ಅಧಿಕ ಭಾರತೀಯರ ವಾಟ್ಸ್ಆ್ಯಪ್ ಖಾತೆ ಬ್ಯಾನ್ ಮಾಡಿದ ಕಂಪನಿ: ನೀವು ಎಚ್ಚರದಿಂದಿರಿ
WhatsApp Ban: ಇದೀಗ ಫೆಬ್ರವರಿಯಲ್ಲೂ 10 ಲಕ್ಷಕ್ಕೂ ಅಧಿಕ ಭಾರತೀಯರ ವಾಟ್ಸ್ಆ್ಯಪ್ ಖಾತೆ ಬ್ಯಾನ್ ಆಗಿದೆ ಎಂದು ಕಂಪನಿ ಮಾಹಿತಿ ನೀಡಿದೆ. ವಾಟ್ಸ್ಆ್ಯಪ್ ನೀತಿಗಳ ಉಲ್ಲಂಘನೆಯಿಂದಾಗಿ ಹೆಚ್ಚಿನ ಖಾತೆಗಳನ್ನು ನಿಷೇಧಿಸಲಾಗಿದೆಯಾದರೂ, ಭಾರತದಲ್ಲಿನ ಇತರ ಬಳಕೆದಾರರು ವರದಿ ಮಾಡುವ ಕುಂದುಕೊರತೆಗಳ ಮೇಲೆ ಅಕೌಂಟ್ ಬ್ಯಾನ್ ಮಾಡುವ ಕ್ರಮ ತೆಗೆದುಕೊಳ್ಳುತ್ತದೆ.
ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಆಕರ್ಷಕ ಫೀಚರ್ಗಳನ್ನು ಪರಚಯಿಸುತ್ತಾ ಇರುತ್ತದೆ. ಇದರ ಜೊತೆಗೆ ಕಳೆದ ಕೆಲವು ಸಮಯದಿಂದ ಬಳಕೆದಾರರು ನೀಡುತ್ತಿರುವ ದೂರನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದು ಕಠಿಣ ಕ್ರಮಗಳನ್ನು ಕೂಡ ಕೈಗೊಳ್ಳುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಜನವರಿ ತಿಂಗಳಿನಲ್ಲಿ ಭಾರತದ 18,58,000 ವಾಟ್ಸ್ಆ್ಯಪ್ (WhatsApp) ಖಾತೆಗಳನ್ನು ನಿಷೇಧ ಮಾಡಿತ್ತು. ಐಟಿ ನಿಯಮಗಳಿಗೆ ಅನುಸಾರವಾಗಿ ಈ ಅಕೌಂಟ್ಗಳನ್ನು ಬ್ಯಾನ್ ಮಾಡಲಾಗಿದೆ. ಇದೀಗ ಫೆಬ್ರವರಿಯಲ್ಲೂ 10 ಲಕ್ಷಕ್ಕೂ ಅಧಿಕ ಭಾರತೀಯರ ವಾಟ್ಸ್ಆ್ಯಪ್ ಖಾತೆ ಬ್ಯಾನ್ ಆಗಿದೆ ಎಂದು ಕಂಪನಿ ಮಾಹಿತಿ ನೀಡಿದೆ. ವಾಟ್ಸ್ಆ್ಯಪ್ ನೀತಿಗಳ ಉಲ್ಲಂಘನೆಯಿಂದಾಗಿ ಹೆಚ್ಚಿನ ಖಾತೆಗಳನ್ನು ನಿಷೇಧಿಸಲಾಗಿದೆಯಾದರೂ, ಭಾರತದಲ್ಲಿನ ಇತರ ಬಳಕೆದಾರರು ವರದಿ ಮಾಡುವ ಕುಂದುಕೊರತೆಗಳ ಮೇಲೆ ಅಕೌಂಟ್ ಬ್ಯಾನ್ ಮಾಡುವ ಕ್ರಮ ತೆಗೆದುಕೊಳ್ಳುತ್ತದೆ. ಇತ್ತೀಚಿನ ವರದಿಯ ಪ್ರಕಾರ 2,069,000 ಕ್ಕೂ ಅಧಿಕ ಭಾರತೀಯರ ವಾಟ್ಸ್ಆ್ಯಪ್ ಖಾತೆಗಳನ್ನು ನಿಷೇಧಿಸಲಾಗಿದೆ (WhatsApp Bans) ಎಂದು ಕಂಪನಿ ಹೇಳಿದೆ.
ವಾಟ್ಸ್ಆ್ಯಪ್ ಫೆಬ್ರವರಿ ತಿಂಗಳ ಮಾಸಿಕ ವರದಿಯಲ್ಲಿ, ಸೊಶೀಯಲ್ ಮೀಡಿಯಾ ನಿಯಮ ಉಲ್ಲಂಘನೆ ಜೊತೆಗೆ ವಾಟ್ಸ್ಆ್ಯಪ್ನಿಯಮಗಳನ್ನು ಉಲ್ಲಂಘಿಸಿರುವವರ ಖಾತೆಗಳನ್ನು ನಿಷೇದಿಸಲಾಗಿದೆ ಎಂದು ಹೇಳಿದೆ. ಅಲ್ಲದೆ ವಾಟ್ಸ್ಆ್ಯಪ್ನಲ್ಲಿ ಬಳಕೆದಾರರು ಮಾಡುವ ರಿಪೋರ್ಟ್ ಆಧಾರದ ಮೇಲೂ ಕೂಡ ಅನೇಕ ಅಕೌಂಟ್ಗಳನ್ನು ನಿಷೇಧ ಮಾಡಿದೆ. ಭಾರತದಲ್ಲಿ ಹೊಸ ಐಟಿ ನಿಯಮ ಜಾರಿಗೆ ಬಂದ ನಂತರ ಪ್ರತಿ ತಿಂಗಳು ಕೂಡ ಕುಂದುಕೊರತೆಯ ವರದಿ ನೀಡುವುದು ಕಡ್ಡಾಯವಾಗಿದೆ. ಅದರಂತೆ ವಾಟ್ಸ್ಆ್ಯಪ್ ಜನವರಿ ತಿಂಗಳ ಅವಧಿಯಲ್ಲಿ ತಾನು ತೆಗೆದುಕೊಂಡ ನಿರ್ಧಾರಗಳ ಬಗ್ಗೆ ವರದಿಯಲ್ಲಿ ತಿಳಿಸಿದೆ.
ಬ್ಯಾನ್ ಆಗಲು ಕಾರಣವೇನು?:
ವಾಟ್ಸ್ಆ್ಯಪ್ ತನ್ನ ಬಳಕೆದಾರರ ಸುರಕ್ಷತೆಗೆ ಹೆಚ್ಚು ಗಮನ ಹರಿಸುತ್ತಿದೆ. ಆದರೆ ಇದಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುವ ಚಂದಾದಾರರ ಮೇಲೆ ವಿಷೇಧ ವಿಧಿಸುತ್ತದೆ. ಈ ಬಗ್ಗೆ ವಕ್ತಾರರೊಬ್ಬರು ಮಾತನಾಡಿ, “ವಾಟ್ಸ್ಆ್ಯಪ್ ನಿಂದನೆಯನ್ನು ತಡೆಗಟ್ಟುವ ಉದ್ಯಮದ ಮುಂಚೂಣಿಯಲ್ಲಿದೆ, ಎಂಡ್-ಟು-ಎಂಡ್ ಎನ್ಕ್ರಿಪ್ಟ್ ಮಾಡಿದ ಸಂದೇಶ ಸೇವೆಗಳ ಬಗ್ಗೆ ಹೆಚಚಿನ ಗಮನ ಹರಿಸುತ್ತಿದೆ. ವರ್ಷಗಳಲ್ಲಿ, ನಮ್ಮ ಬಳಕೆದಾರರನ್ನು ನಮ್ಮ ಪ್ಲಾಟ್ಫಾರ್ಮ್ನಲ್ಲಿ ಸುರಕ್ಷಿತವಾಗಿರಿಸಲು ನಾವು ಕೃತಕ ಬುದ್ಧಿಮತ್ತೆ ಮತ್ತು ಇತರ ಅತ್ಯಾಧುನಿಕ ತಂತ್ರಜ್ಞಾನ, ಡೇಟಾ ವಿಜ್ಞಾನಿಗಳು, ತಜ್ಞರು ಮತ್ತು ಇನ್ನಿತರ ಪ್ರಕ್ರಿಯೆಗಳಲ್ಲಿ ಸತತವಾಗಿ ಹೂಡಿಕೆ ಮಾಡಿದ್ದೇವೆ” ಎಂದಿದ್ದಾರೆ.
ವಾಟ್ಸ್ಆ್ಯಪ್ ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ಕಾನೂನು ಬಾಹಿರ, ಅಶ್ಲೀಲ, ಮಾನಹಾನಿಕರ, ಬೆದರಿಕೆಯ, ಕಿರುಕುಳದ, ದ್ವೇಷಪೂರಿತ ಸಂದೇಶಗಳನ್ನು ಕಳುಹಿಸಿದರೆ ನಿಮ್ಮನ್ನು ವಾಟ್ಸ್ಆ್ಯಪ್ ಬ್ಯಾನ್ ಮಾಡುತ್ತದೆ. ಹಿಂಸಾತ್ಮಕ ಅಪರಾಧಗಳನ್ನು ಪ್ರಚೋದಿಸುವ ಅಥವಾ ಉತ್ತೇಜಿಸುವ ಸಂದೇಶಗಳನ್ನು ಕಳುಹಿಸಿದರೂ ವಾಟ್ಸ್ಆ್ಯಪ್ ನಿಮ್ಮನ್ನು ಬ್ಯಾನ್ ಮಾಡಬಹುದು. ಹೀಗಾಗಿ ಎಚ್ಚರದಿಂದಿರಿ.
ಪ್ರಮುಖವಾಗಿ ನೀವು ತುಂಬಾ ಖಾಸಾಗಿ ವಿಷಯಗಳನ್ನು ಯಾವುದೇ ಕಾರಣಕ್ಕೂ ವಾಟ್ಸ್ಆ್ಯಪ್ನಲ್ಲಿ ಹಂಚಿಕೊಳ್ಳಬೇಡಿ. ಒಂದು ವೇಳೆ ನೀವು ವಾಟ್ಸ್ಆ್ಯಪ್ನಲ್ಲಿ ಅಶ್ಲೀಲ (ಪೋರ್ನ್ ವಿಡಿಯೋ) ವಿಡಿಯೋಗಳನ್ನು ಕಳುಹಿಸಿದರೆ ನಿಮ್ಮನ್ನು ಜೈಲಿಗೆ ತಳ್ಳಬಹುದು. ಅಂತಹ ವಿಡಿಯೋಗಳನ್ನು ಕಳುಹಿಸುವಾಗ ನಿಮ್ಮ ಸಂಖ್ಯೆಯನ್ನು ಯಾರಾದರೂ ವರದಿ ಮಾಡಿದರೆ, ನಿಮ್ಮ ಖಾತೆಯನ್ನು ಸಹ ನಿಷೇಧಿಸಬಹುದು.
Galaxy M33 5G: 6000mAh ಬ್ಯಾಟರಿ, 50MP ಕ್ಯಾಮೆರಾ: ಭಾರತಕ್ಕೆ ಕಾಲಿಟ್ಟ ಬಜೆಟ್ ಬೆಲೆಯ ಗ್ಯಾಲಕ್ಸಿ M33 5G
One Plus 10 Pro: 66,999 ರೂ. ಬೆಲೆಯ ಹೊಸ ಒನ್ಪ್ಲಸ್ 10 ಪ್ರೊ ಫೋನ್ ಖರೀದಿಸಬಹುದೇ?