BMRCL Namma Metro
ನಮ್ಮ ಮೆಟ್ರೋ ಎಂದು ಕರೆಯಲ್ಪಡುವ ಬೆಂಗಳೂರಿನ ಮೆಟ್ರೋ ರೈಲು ಸೇವೆಯನ್ನು ಸರ್ಕಾರಿ ಸ್ವಾಮ್ಯದ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನಿರ್ವಹಣೆ ಮಾಡುತ್ತಿದೆ. 2011ರಲ್ಲಿ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸೇವೆ ಮೊದಲಿಗೆ ಆರಂಭವಾಯಿತು. ಬಿಎಂಆರ್‌ಸಿಎಲ್ ಬೆಂಗಳೂರಿನಲ್ಲಿ ಮೆಟ್ರೋ ರೈಲು ವ್ಯವಸ್ಥೆಯ ಯೋಜನೆ, ನಿರ್ಮಾಣ ಮತ್ತು ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ನಮ್ಮ ಮೆಟ್ರೋ ಬಹು ಮಾರ್ಗಗಳನ್ನು ಒಳಗೊಂಡಿದೆ. ಇವುಗಳಲ್ಲಿ ಪರ್ಪಲ್ ಲೈನ್ ಮತ್ತು ಗ್ರೀನ್ ಲೈನ್ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಮಾರ್ಗಗಳಾಗಿವೆ. ನಗರದ ವಿವಿಧ ಭಾಗಗಳಿಗೆ ಸುಧಾರಿತ ಸಂಪರ್ಕವನ್ನು ಒದಗಿಸುವ ಮೂಲಕ ಹೆಚ್ಚಿನ ಪ್ರದೇಶಗಳನ್ನು ಒಳಗೊಳ್ಳಲು ಮೆಟ್ರೋ ಜಾಲವು ನಿರಂತರವಾಗಿ ವಿಸ್ತರಿಸುತ್ತಿದೆ. ಬಿಎಂಆರ್‌ಸಿಎಲ್ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಆಧುನೀಕರಿಸುವ ಮೂಲಕ ಮೆಟ್ರೋ ಸೇವೆಗಳನ್ನು ಬಸ್ ಮತ್ತು ಇತರ ರೀತಿಯ ಸಾರಿಗೆಯೊಂದಿಗೆ ಸಂಯೋಜಿಸಿದೆ. ಈ ಮೂಲಕ ತಡೆರಹಿತ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ
ಬೆಂಗಳೂರಿಗರಿಗೆ ಗುಡ್ ನ್ಯೂಸ್: ನಮ್ಮ ಮೆಟ್ರೋ 3ನೇ ಹಂತಕ್ಕೆ ಕೇಂದ್ರ ಸರ್ಕಾರದಿಂದ ಶೀಘ್ರ ಅನುಮೋದನೆ ಸಾಧ್ಯತೆ
ಬೆಂಗಳೂರಿನ ನಮ್ಮ ಮೆಟ್ರೋ 3ನೇ ಹಂತದ ಡಬಲ್ ಡೆಕ್ಕರ್ ಯೋಜನೆಗೆ RITES ಸಕಾರಾತ್ಮಕ ವರದಿ ನೀಡಿದ್ದು, ಕೇಂದ್ರ ಸರ್ಕಾರದಿಂದ ಶೀಘ್ರದಲ್ಲೇ ಅಂತಿಮ ಅನುಮೋದನೆ ದೊರೆಯುವ ಸಾಧ್ಯತೆ ದಟ್ಟವಾಗಿದೆ. ಮೆಟ್ರೋ ಮಾರ್ಗದ ಮೇಲೆಯೇ ಫ್ಲೈಓವರ್ ನಿರ್ಮಾಣವಾದರೆ ಪ್ರಯಾಣಿಕರು ಮೆಟ್ರೋ ಬಳಕೆ ಕಡಿಮೆ ಮಾಡಬಹುದು ಎಂಬ ಕಾರಣ ನೀಡಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಯೋಜನೆಯ ಸಾಮಾಜಿಕ-ಆರ್ಥಿಕ ಕಾರ್ಯಸಾಧ್ಯತೆ ಬಗ್ಗೆ ಈ ಹಿಂದೆ ಪ್ರಶ್ನೆ ಎತ್ತಿತ್ತು.
- Prasanna Hegde
- Updated on: Jun 11, 2026
- 9:06 am
ಫ್ರೀ ಬಸ್ ಪಾಸ್ ಬೆನ್ನಲ್ಲೇ ರಿಯಾಯಿತಿಯಲ್ಲಿ ಮೆಟ್ರೋ ಪಾಸ್ ನೀಡುವಂತೆ ಬೆಂಗಳೂರು ವಿದ್ಯಾರ್ಥಿಗಳ ಮನವಿ
ರಾಜ್ಯ ಸರ್ಕಾರ ಪ್ರಾಥಮಿಕ ಶಾಲೆಯಿಂದ ಸ್ನಾತಕೋತ್ತರ ಹಂತದವರೆಗಿನ ಪುರುಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್‌ಗಳನ್ನು ನೀಡಲು ಘೋಷಣೆ ಮಾಡಿದೆ. ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನವೇ ಈ ಮೊದಲ ಘೋಷಣೆ ಮಾಡಿದ್ದಾರೆ. ಆದರೆ, ಇತ್ತ ಬೆಂಗಳೂರಿನಲ್ಲಿ ನಮ್ಮ ಮೆಟ್ರೋದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ತಿಂಗಳ ಅಥವಾ ಇಯರ್ಲಿ ಪಾಸ್ ನೀಡುವಂತೆ ವಿದ್ಯಾರ್ಥಿಗಳು ಸಿಎಂಗೆ ಮನವಿ ಮಾಡಿದ್ದಾರೆ.
- Kiran Surya
- Updated on: Jun 9, 2026
- 10:38 pm
ಮೆಟ್ರೋ ಪ್ರಯಾಣಿಕರಿಗೆ ಸಹಿ ಸುದ್ದಿ: ಪಿಂಕ್ ಲೈನ್ ಮೆಟ್ರೋ ಲೋಕಾರ್ಪಣೆಗೆ ಮುಹೂರ್ತ ಬಹುತೇಕ ಫಿಕ್ಸ್
Namma Metro Pink Line Launch Date: ನಮ್ಮ ಮೆಟ್ರೋದ ಪಿಂಕ್ ಲೈನ್ ಮಾರ್ಗದ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಎಲಿವೇಟೆಡ್ ಟ್ರ್ಯಾಕ್ನಲ್ಲಿ ಆಗಸ್ಟ್ 15 ರಂದು ಮೆಟ್ರೋ ಸಂಚಾರ ಆರಂಭವಾಗುವ ಸಾಧ್ಯತೆಯಿದೆ. ಈಗಾಗಲೇ ಆರ್‌ಡಿಎಸ್‌ಒ ಸಂಸ್ಥೆಯಿಂದ 90 ಕಿ.ಮೀ ವೇಗದ ಪ್ರಮಾಣ ಪತ್ರ ದೊರೆತಿದ್ದು, ಬಿಎಂಆರ್‌ಸಿಎಲ್ ಅಂತಿಮ ಹಂತದ ಸಿದ್ಧತೆಯಲ್ಲಿದೆ.
- Kiran Surya
- Updated on: Jun 9, 2026
- 8:56 am
CM DKS in Metro: ಮೆಟ್ರೋ ಪ್ರಯಾಣಿಕರ ಜೊತೆ ಸಿಎಂ ಡಿ.ಕೆ ಶಿವಕುಮಾರ್ ಫೋಟೋ !
ಸಿಎಂ ಆದ ಬಳಿಕ ಸ್ವಕ್ಷೇತ್ರ ಕನಕಪುರಕ್ಕೆ ಮೊದಲ ಭಾರಿಗೆ ಭೇಟಿ ನೀಡುತ್ತಿರುವ ಡಿಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇಂದು ವಿಧಾನಸೌಧದಿಂದ ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣ ಬೆಳೆಸಿದರು. ಈ ವೇಳೆ ಬಿಎಂಆರ್‌ಸಿಎಲ್ ಉನ್ನತಾಧಿಕಾರಿಗಳಿಂದ ಬೆಂಗಳೂರಿನ ಮೆಟ್ರೋ ಜಾಲ ಮತ್ತು ಮುಂಬರುವ ಸಂಪರ್ಕ ಯೋಜನೆಗಳ ಕುರಿತು ಪ್ರಮುಖ ಮಾಹಿತಿಗಳನ್ನು ಪಡೆದುಕೊಂಡರು.
- Bhavana Hegde
- Updated on: Jun 7, 2026
- 12:08 pm
ನಮ್ಮ ಮೆಟ್ರೋದಿಂದ ಪರಿಸರಸ್ನೇಹಿ ಹೆಜ್ಜೆ: ಬೆಂಗಳೂರಿನಲ್ಲಿ 2 ಲಕ್ಷ ಗಿಡ ನೆಡಲು ಮುಂದಾದ ಬಿಎಂಆರ್‌ಸಿಎಲ್
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯಕ್ಕೆ ಬ್ರೇಕ್ ಹಾಕಲು ಬಿಎಂಆರ್‌ಸಿಎಲ್ ಮಹತ್ವದ ಹೆಜ್ಜೆ ಇಟ್ಟಿದೆ. ನಮ್ಮ ಮೆಟ್ರೋ ಹಳದಿ ಮತ್ತು ಹಸಿರು ಮಾರ್ಗಗಳ ಪ್ರಮುಖ ನಿಲ್ದಾಣಗಳ ಸುತ್ತಮುತ್ತ ಪರಿಸರಸ್ನೇಹಿ ಯೋಜನೆ ಅಡಿಯಲ್ಲಿ 2 ಲಕ್ಷ ಗಿಡಗಳನ್ನು ನೆಡಲು ಮುಂದಾಗಿದೆ. ಈ ಕಾರ್ಯಕ್ಕೆ ಜನರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
- Kiran Surya
- Updated on: Jun 6, 2026
- 8:01 am
ನಮ್ಮ ಮೆಟ್ರೋ ಹಳದಿ ಮಾರ್ಗದಿಂದ ಪ್ರಯಾಣಿಕರ ಆರೋಗ್ಯ ಸುಧಾರಣೆ! ಐಐಎಸ್ಸಿ ಅಧ್ಯಯನದಲ್ಲಿ ಬಯಲಾಯ್ತು ಇಂಟರೆಸ್ಟಿಂಗ್ ಮಾಹಿತಿ
ನಮ್ಮ ಮೆಟ್ರೋದ ‘ಯೆಲ್ಲೋ ಲೈನ್’ ಮಾರ್ಗದಿಂದಾಗಿ ಸಾರ್ವಜನಿಕರ ಮಾನಸಿಕ ಒತ್ತಡ ಕಡಿಮೆಯಾಗಿದ್ದು, ಪ್ರಯಾಣಿಕರಿಗೆ ವಾರಕ್ಕೆ 50-75 ನಿಮಿಷಗಳ ಹೆಚ್ಚುವರಿ ದೈಹಿಕ ಚಟುವಟಿಕೆ ಲಭ್ಯವಾಗುತ್ತಿದೆ. ಇದರ ಪರಿಣಾಮ ಜನರ ಆರೋಗ್ಯ ಸುಧಾರಿಸಿದೆ ಎಂದು ಐಐಎಸ್ಸಿ (IISc) ಇತ್ತೀಚೆಗೆ ನಡೆಸಿದ ವಿಶೇಷ ಅಧ್ಯಯನ ವರದಿ ತಿಳಿಸಿದೆ.
- Kiran Surya
- Updated on: Jun 5, 2026
- 6:57 am
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ನ್ಯೂಸ್: ಬೆಂಗಳೂರಿಗೆ ಬಂದೇ ಬಿಡ್ತು ಮೊದಲ ‘ಬ್ಲೂ ಲೈನ್’ ರೈಲು
ಇದು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಂತಸದ ಸುದ್ದಿ. ಕೆಂಪೇಗೌಡ ಏರ್ಪೋರ್ಟ್ ಮಾರ್ಗಕ್ಕೆ ಮೊದಲ ಬ್ಲೂ ಲೈನ್ ಮೆಟ್ರೋ ರೈಲು ಆಗಮಿಸಿದೆ. ಈ ಟ್ರೈನ್ ಸೆಟ್ ಬೆಂಗಳೂರಿನ ಬೈಯಪ್ಪನಹಳ್ಳಿ ಡಿಪೋ ತಲುಪಿದೆ. ಸಿಲ್ಕ್ ಬೋರ್ಡ್‌ನಿಂದ ಬೆಂಗಳೂರು ಏರ್ಪೋರ್ಟ್ವರೆಗಿನ 58.19 ಕಿ.ಮೀ ಉದ್ದದ ಮಾರ್ಗ ಇದಾಗಿದೆ.
- Kiran Surya
- Updated on: Jun 4, 2026
- 3:59 pm
ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್ನ್ಯೂಸ್, ಬುಧವಾರದಿಂದ 2 ಹೆಚ್ಚುವರಿ ರೈಲು ಸೇರ್ಪಡೆ
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಜನಜಂಗುಳಿ ಹೆಚ್ಚಾಗುತ್ತಿದೆ. ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವ ಪರಿಣಾಮ ಟ್ರಾಫಿಕ್ ಜಾಮ್‌ಗಳಿಗೆ ಕಾರಣವಾಗುತ್ತಿದೆ. ಟ್ರಾಫಿಕ್ ದಟ್ಟಣೆಯಿಂದ ಪಾರಾಗಲು ಬಹುತೇಕರು ಮೆಟ್ರೋ ಸೇವೆ ಬಳಕೆ ಮಾಡುತ್ತಿದ್ದಾರೆ. ಇಂತಹ ಜನರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಹೌದು..ಯೆಲ್ಲೋ ಲೈನ್ ನಲ್ಲಿ ಹೆಚ್ಚುವರಿ ರೈಲು ಸೇರ್ಪಡೆಯಾಗುತ್ತಿವೆ. ಹೀಗಾಗಿ ರೈಲುಗಳ ನಡುವಿನ ಸಮಯ ಇಳಿಕೆಯಾಗಲಿದೆ.
- Kiran Surya
- Updated on: Jun 2, 2026
- 9:57 pm
ಮೆಟ್ರೋ ಪ್ರಯಾಣಿಕರೇ ಗಮನಿಸಿ: ನೇರಳೆ ಮಾರ್ಗ ಸಂಬಂಧ ಮಹತ್ವದ ಮಾಹಿತಿ ಹಂಚಿಕೊಂಡ BMRCL
ನೇರಳೆ ಮಾರ್ಗದ ಮೆಟ್ರೋ ಕಾಮಗಾರಿ ನಿಗದಿತ ಸಮಯಕ್ಕಿಂತ ಮೊದಲೇ ಪೂರ್ಣಗೊಂಡಿದ್ದು, ಭಾನುವಾರ ಬೆಳಿಗ್ಗೆ 7 ಗಂಟೆಯಿಂದಲೇ ರೈಲು ಸಂಚಾರ ಎಂದಿನಂತೆ ಆರಂಭವಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ದೀಪಾಂಜಲಿನಗರ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್ ಮೆಜೆಸ್ಟಿಕ್) ಮೆಟ್ರೋ ನಿಲ್ದಾಣಗಳ ನಡುವೆ ಬೆಳಿಗ್ಗೆ 7 ಗಂಟೆಯಿಂದ 9ರ ವರೆಗೆ ಮೆಟ್ರೋ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ಮೇ 29ರಂದು ಪ್ರಕಟಣೆ ಮೂಲಕ ಬಿಎಂಆರ್‌ಸಿಎಲ್ ತಿಳಿಸಿತ್ತು.
- Kiran Surya
- Updated on: May 31, 2026
- 7:57 am
IPL ಫೈನಲ್ ದಿನದಂದು ಆರ್‌ಸಿಬಿ ಫ್ಯಾನ್ಸ್ಗೆ ಉಚಿತ ಮೆಟ್ರೋ ಪ್ರಯಾಣ: ಅಂತೆಕಂತೆಗಳಿಗೆ BMRCL ಸ್ಪಷ್ಟನೆ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಐಪಿಎಲ್ ಫೈನಲ್ ದಿನ RCB ಅಭಿಮಾನಿಗಳಿಗೆ ಉಚಿತ ಮೆಟ್ರೋ ಪ್ರಯಾಣ ಮಾಹಿತಿ ಸುಳ್ಳು ಎಂದು BMRCL ಸ್ಪಷ್ಟಪಡಿಸಿದೆ. ಮೇ 31ರ ಅಹಮದಾಬಾದ್ ಐಪಿಎಲ್ ಫೈನಲ್‌ಗೆ ಯಾವುದೇ ಉಚಿತ ಮೆಟ್ರೋ ಸೌಲಭ್ಯವಿಲ್ಲ. ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ಎಲ್ಲರೂ ಟಿಕೆಟ್ ಪಡೆದು ಪ್ರಯಾಣಿಸಬೇಕು ಎಂದು ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.
- Kiran Surya
- Updated on: May 30, 2026
- 4:02 pm
ಹಳದಿ ಮಾರ್ಗದಲ್ಲಿ ಮೆಟ್ರೋ ರೈಲುಗಳ ಕೊರತೆ ಹಿನ್ನೆಲೆ ನಿತ್ಯ ಪರದಾಟ: BMRCL ವಿರುದ್ಧ ಪ್ರಯಾಣಿಕರ ಆಕ್ರೋಶ
ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ರೈಲುಗಳ ಸಂಚಾರ ತಡವಾಗುತ್ತಿರುವುದಕ್ಕೆ ಪ್ರಯಾಣಿಕರು ಬಿಎಂಆರ್‌ಸಿಎಲ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪೀಕ್ ಅವರ್‌ನಲ್ಲೂ 9 ರಿಂದ 14 ನಿಮಿಷ ಕಾಯಬೇಕಾದ ದುಸ್ಥಿತಿ ಇದೆಯೆಂಬ ಮಾತುಗಳು ಕೇಳಿಬಂದಿದ್ದು, 9 ಮತ್ತು 10ನೇ ರೈಲುಗಳು ಶೀಘ್ರವಾಗಿ ವಾಣಿಜ್ಯ ಸಂಚಾರಕ್ಕೆ ಲಭ್ಯವಾಗಬೇಕು ಎಂಬ ಆಗ್ರಹವೂ ಕೇಳಿಬಂದಿದೆ.
- Kiran Surya
- Updated on: May 29, 2026
- 7:03 pm
ಬೆಂಗಳೂರು ಮೆಟ್ರೋಗೆ ‘ಬಂಗಾಳ ಎಲೆಕ್ಷನ್ ಶಾಕ್’: 10 ಸಾವಿರ ಕಾರ್ಮಿಕರು ನಾಪತ್ತೆ, ಪಿಂಕ್-ಬ್ಲೂ ಲೈನ್ ಕಾಮಗಾರಿ ಬಂದ್!
ಬೆಂಗಳೂರಿನ ನಮ್ಮ ಮೆಟ್ರೋ ಪಿಂಕ್ ಮತ್ತು ಬ್ಲೂ ಲೈನ್ ಮಾರ್ಗಗಳ ಉದ್ಘಾಟನೆಗೆ ಪಶ್ಚಿಮ ಬಂಗಾಳದ ಚುನಾವಣೆ ಭಾರಿ ಹಿನ್ನಡೆ ತಂದಿದೆ. ಮತದಾನ ಮಾಡಲು ಸ್ವಗ್ರಾಮಗಳಿಗೆ ತೆರಳಿದ 10 ಸಾವಿರಕ್ಕೂ ಹೆಚ್ಚು ಬಂಗಾಳಿ ಕಾರ್ಮಿಕರು ಮರಳಿ ಬಾರದ ಕಾರಣ ಕಾಮಗಾರಿಗಳು ಸ್ಥಗಿತಗೊಂಡಿವೆ. ಜೂನ್‌ನಲ್ಲಿ ಆರಂಭವಾಗಬೇಕಿದ್ದ ಕಾಳೇನ ಅಗ್ರಹಾರ-ತಾವರೆಕೆರೆ ಮಾರ್ಗ ಹಾಗೂ ಡಿಸೆಂಬರ್‌ನ ಸಿಲ್ಕ್ ಬೋರ್ಡ್-ಕೆ.ಆರ್. ಪುರಂ ಮೆಟ್ರೋ ಕಾಮಗಾರಿ ವಿಳಂಬವಾಗುವ ಸಂಪೂರ್ಣ ವಿವರ ಇಲ್ಲಿದೆ.
- Kiran Surya
- Updated on: May 28, 2026
- 12:08 pm