Video: ಫಿಶ್ ಟ್ಯಾಂಕ್ ಒಳಗಿಳಿದು ಮೀನು ಹಿಡಿದ ಪುಟ್ಟ ಬಾಲಕ, ವೈರಲ್‌ ಆಯ್ತು ದೃಶ್ಯ

ಮಕ್ಕಳು ಒಂದೇ ಒಂದು ದಿನ ರಜೆ ಸಿಕ್ಕಿದ್ರೆ ಸಾಕು, ಹೆತ್ತವರಿಗೆ ಹೇಗಪ್ಪಾ ಈ ತರಲೆ ಮಕ್ಕಳನ್ನು ಸಂಭಾಳಿಸುವುದು ಎನ್ನುವ ಟೆನ್ಶನ್ ಶುರುವಾಗುತ್ತದೆ. ಮನೆಯಲ್ಲಿ ಯಾರು ಇರದ ಸಮಯದಲ್ಲೇ ಈ ಪುಟಾಣಿಗಳು ಒಂದಲ್ಲ ಒಂದು ಎಡವಟ್ಟುಗಳನ್ನು ಮಾಡ್ತಿರುತ್ತಾರೆ. ಈ ವಿಡಿಯೋ ನೋಡಿದ್ರೆ ನಿಮಗೂ ಹಾಗೆ ಅನಿಸಬಹುದು. ಪುಟ್ಟ ಹುಡುಗನೊಬ್ಬ ಮನೆಯಲ್ಲಿದ್ದ ಅಕ್ವೇರಿಯಂ ಟ್ಯಾಂಕ್ ಹತ್ತಿ ಮೀನು ಹಿಡಿದಿದ್ದಾನೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಫಿಶ್ ಟ್ಯಾಂಕ್ ಒಳಗಿಳಿದು ಮೀನು ಹಿಡಿದ ಪುಟ್ಟ ಬಾಲಕ, ವೈರಲ್‌ ಆಯ್ತು ದೃಶ್ಯ
ವೈರಲ್‌ ವಿಡಿಯೋ
Image Credit source: Instagram

Updated on: Jun 09, 2026 | 7:36 PM

ಪುಟಾಣಿಗಳ (little kids) ಆಟ ತುಂಟಾಟಗಳನ್ನು ನೋಡುವ ಖುಷಿಯೇ ಬೇರೆ. ಕೀಟಲೆ ಮಾಡುವ ಮಕ್ಕಳನ್ನು ಕಂಡರೆ ಪಿತ್ತ ನೆತ್ತಿಗೇರುತ್ತದೆ. ಇಂತಹ ಮಕ್ಕಳನ್ನು ಹೆತ್ತವರು ಹೇಗೆ ಸಹಿಸಿಕೊಳ್ತಾರೆ ಎಂದು ಮನಸ್ಸಲ್ಲೇ ಅಂದುಕೊಳ್ಳುವುದಿದೆ. ಈ ದೃಶ್ಯ ನೋಡಿದ್ರೆ ನಿಮಗೆ ಹಾಗೆ ಅನಿಸಬಹುದು. ಪುಟ್ಟ ಹುಡುಗನೊಬ್ಬ ಫಿಶ್ ಟ್ಯಾಂಕ್ ಒಳಗಿಳಿದು ಮೀನು ಹಿಡಿಯಲು ಪ್ರಯತ್ನಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

ಯಲ್ಯಾಂಗ್ ಅಕ್ವೇರಿಯಂ (Ylang Aquarium) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪುಟಾಣಿಯ ಖತರ್ನಾಕ್ ಕೆಲಸವನ್ನು ನೋಡಬಹುದು. ಮನೆಯಲ್ಲಿ ಯಾರು ಇರದ ಸಂದರ್ಭದಲ್ಲಿ ಪುಟ್ಟ ಹುಡುಗನೊಬ್ಬ ಅಕ್ವೇರಿಯಂ ಟ್ಯಾಂಕ್ ಒಳಗೆ ಇಳಿದು ಮೀನು ಹಿಡಿಯಲು ಪ್ರಯತ್ನಿಸಿದ್ದಾನೆ. ಇದೇ ವೇಳೆ ಮೀನು ಹಾರಿ ನೆಲದ ಮೇಲೆ ಬಿದ್ದಿರುವುದನ್ನು ಕಾಣಬಹುದು. ಈ ಪುಟ್ಟ ಹುಡುಗನು  ಪಟ್ಟು ಬೀಡದೇ ನೆಲಕ್ಕೆ ಬಿದ್ದ ಮೀನನ್ನು ಹುಡುಕುತ್ತಿರುವುದನ್ನು ನೀವು ನೋಡಬಹುದು.

ವೈರಲ್‌ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಗೋಲ್ಗಪ್ಪಾ ವಿಭಿನ್ನವಾಗಿ ತಿನ್ಬಹುದೆಂದು ತೋರಿಸಿಕೊಟ್ಟ ಪುಟಾಣಿ

ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನನ್ನ ಸಂಬಂಧಿಕರ ಮಗನು ಇಷ್ಟೇ ತರಲೆ ಎಂದಿದ್ದಾರೆ. ಇನ್ನೊಬ್ಬರು, ಕೈಯಲ್ಲಿ ಸ್ಮಾರ್ಟ್ ಫೋನ್ ಇಲ್ಲದೆ ಇದ್ದಾಗ ಈ ಪುಟಾಣಿಯ ಸರ್ಕಸ್ ಎಂದು ಹೇಳಿದ್ದಾರೆ. ಮತ್ತೊಬ್ಬರು, ಟ್ಯಾಂಕ್ ಗುಣಮಟ್ಟಕ್ಕೆ ನನ್ನದೊಂದು ಸಲಾಂ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Follow Us