AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಗೋಲ್ಗಪ್ಪಾ ವಿಭಿನ್ನವಾಗಿ ತಿನ್ಬಹುದೆಂದು ತೋರಿಸಿಕೊಟ್ಟ ಪುಟಾಣಿ

ಗೋಲ್ಗಪ್ಪಾ ಈ ಹೆಸರು ಕೇಳಿದರೇನೇ ಬಾಯಲ್ಲಿ ನೀರೂರುತ್ತದೆ. ಮಕ್ಕಳಿಂದ ದೊಡ್ಡವರವರೆಗೂ ಬಾಯಿ ಚಪ್ಪರಿಸಿಕೊಂಡು ತಿನ್ನುವ ತಿನಿಸು ಇದು. ಆದರೆ ಈ ಪುಟ್ಟ ಹುಡುಗಿ ಗೋಲ್ಗಪ್ಪಾ ತಿನ್ನೋ ಸ್ಟೈಲ್ ಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಈ ಪುಟಾಣಿ ಗೋಲ್ಗಪ್ಪಾ ತಿನ್ನುವ ಅಸಾಂಪ್ರದಾಯಿಕ ವಿಧಾನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಗೋಲ್ಗಪ್ಪಾ ವಿಭಿನ್ನವಾಗಿ ತಿನ್ಬಹುದೆಂದು ತೋರಿಸಿಕೊಟ್ಟ ಪುಟಾಣಿ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Jun 09, 2026 | 10:40 AM

Share

ಗೋಲ್ಗಪ್ಪಾ (golgappa) ಎಲ್ಲರ ನೆಚ್ಚಿನ ಭಾರತದ ಸ್ಟ್ರೀಟ್ ಫುಡ್ ಗಳಲ್ಲಿ ಒಂದು. ಪುಟಾಣಿ ಮಕ್ಕಳಿಗೂ (little girl) ಗೋಲ್ಗಪ್ಪಾ ಅಂದ್ರೆ ಪಂಚ ಪ್ರಾಣ. ಇನ್ನು ಸಂಜೆ ವೇಳೆ ಫ್ರೆಂಡ್ಸ್ ಜತೆಗೆ ಹೊರಗಡೆ ಹೋದಾಗ ಯುವಕ ಯುವತಿಯರು ಗೋಲ್ಗಪ್ಪಾ ತಿನ್ನದೇ ಇರಲ್ಲ. ಇದೀಗ ಪುಟಾಣಿಯೊಬ್ಬಳು ಗೋಲ್ಗಪ್ಪಾ ತಿನ್ನುವ ಅಸಾಂಪ್ರದಾಯಿಕ ವಿಧಾನದ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಪುಟಾಣಿಯ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡಿದ್ದಾರೆ.

ಟೆನ್ಸಿಂಗ್ ಸೆಲ್ಡನ್ (tenz_seldon19) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪುಟಾಣಿ ಗೋಲ್ಗಪ್ಪಾ ತಿನ್ನುವ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ ಸಿಹಿ ಹಾಗೂ ಖಾರ ಎರಡನ್ನೂ ಆಯ್ಕೆ ಮಾಡಲು ಸಾಧ್ಯವಿಲ್ಲ, ಆದ್ದರಿಂದ ನಾನು ಎರಡನ್ನೂ ಒಂದೇ ಸಮಯದಲ್ಲಿ ಸೇವಿಸುತ್ತಿದ್ದೇನೆ ಎಂದು ಶೀರ್ಷಿಕೆ ನೀಡಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಈ ಕ್ಲಿಪಿಂಗ್ ನಲ್ಲಿ ಒಂದೇ ಬಾರಿಗೆ ಸಿಹಿ ಮತ್ತು ಮಸಾಲೆಯುಕ್ತ ಪದಾರ್ಥವನ್ನು ಒಟ್ಟಿಗೆ ಸವಿದಿದ್ದಾಳೆ. ಪುಟಾಣಿ ಪಾನಿ ಪುರಿ ಸ್ಟಾಲ್‌ನಲ್ಲಿ ಒಂದು ಕೈಯಲ್ಲಿ ಗೋಲ್ಗಪ್ಪಾದ ತಟ್ಟೆಯನ್ನು ಹಿಡಿದುಕೊಂಡು, ಇನ್ನೊಂದು ಕೈಯಲ್ಲಿ ಕ್ಯಾಂಡಿಯಂತೆ ಕಾಣುವ ಸಿಹಿ ತಿಂಡಿಯನ್ನು ಹಿಡಿದು ನಿಂತಿರುವುದು ಕಾಣಬಹುದು. ಗೋಲ್ಗಪ್ಪಾ ತಿನ್ನುವ ಮೊದಲು ಆಕೆ ಸಿಹಿ ತಿಂಡಿ ತಿನ್ನುತ್ತಾಳೆ. ಆ ಬಳಿಕ ಒಂದೇ ಬಾರಿಗೆ ಇಡೀ ಪಾನಿ ಪುರಿಯನ್ನು ಬಾಯಿಗೆ ಹಾಕುತ್ತಿರುವುದನ್ನು ನೀವು ನೋಡಬಹುದು.

ಇದನ್ನೂ ಓದಿ: ಐಸ್ ಕ್ರೀಮ್ ಬೇಕೆಂದು ಹಠ ಹಿಡಿದ ಪುಟಾಣಿ, ವೈರಲ್ ಆಯ್ತು ದೃಶ್ಯ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಪಾನಿ ಪುರಿಯನ್ನು ಈ ರೀತಿ ತಿನ್ನುವ ಬಗ್ಗೆ ಎಂದಿಗೂ ಯೋಚಿಸಿರಲಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ಹೊಸ ತಂತ್ರಗಳು ಅನ್‌ಲಾಕ್ ಆಗಿವೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈ ಪುಟಾಣಿ ಮುಂದೊಂದು ದಿನ ಕೋಟ್ಯಾಧಿಪತಿಯಾಗುವುದರಲ್ಲಿ ಸಂದೇಹವಿಲ್ಲ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ