AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಐಸ್ ಕ್ರೀಮ್ ಬೇಕೆಂದು ಹಠ ಹಿಡಿದ ಪುಟಾಣಿ, ವೈರಲ್ ಆಯ್ತು ದೃಶ್ಯ

ಪುಟಾಣಿಗಳು ಹಠ ಹಿಡಿದರೆ ಅವುಗಳನ್ನು ರಮಿಸಿ ಸಮಾಧಾನ ಪಡಿಸುವಷ್ಟರಲ್ಲಿ ಸಾಕಾಗಿ ಹೋಗಿರುತ್ತದೆ. ಈ ಪುಟಾಣಿಯದ್ದು ಅದೇ ಕಥೆ. ಶಾಲೆಗೆ ಹೊರಟ ಪುಟಾಣಿ ಐಸ್ ಕ್ರೀಮ್ ಬೇಕೆಂದು ಅಳುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ. ಈ ಕುರಿತಾದ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

Video: ಐಸ್ ಕ್ರೀಮ್ ಬೇಕೆಂದು ಹಠ ಹಿಡಿದ ಪುಟಾಣಿ, ವೈರಲ್ ಆಯ್ತು ದೃಶ್ಯ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Jun 08, 2026 | 2:15 PM

Share

ಚಿಕ್ಕ ಮಕ್ಕಳಿಗೆ (little kids) ಐಸ್ ಕ್ರೀಮ್ ಅಂದ್ರೆ ತುಂಬಾನೇ ಇಷ್ಟ. ಹೆತ್ತವರು ಹೇಳಿದ ಮಾತನ್ನು ಕೇಳದದ್ದಿದರೆ ಐಸ್ ಕ್ರೀಮ್ ಕೊಡಿಸುವೆ ಅಂದ್ರೆ ಸಾಕು, ಮರು ಮಾತಾಡದೇ ದಾರಿಗೆ ಬರುತ್ತಾರೆ. ಆದರೆ ಈ ಪುಟಾಣಿಗಳು ಐಸ್ ಕ್ರೀಮ್ (ice cream) ಬೇಕೆಂದು ಹಠ ಹಿಡಿಯುವುದನ್ನು ನೀವು ನೋಡಿರಬಹುದು. ಶಾಲಾ ಸಮವಸ್ತ್ರ ಧರಿಸಿರುವ ಈ ಪುಟ್ಟ ಹುಡುಗಿ ಐಸ್ ಕ್ರೀಮ್ ಬೇಕೆಂದು ಹಠ ಹಿಡಿದಿದ್ದು, ಜೋರಾಗಿ ಅಳುತ್ತಿದೆ. ಈ ಕ್ಯೂಟ್ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.

Neyha limbu ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಪುಟಾಣಿಯ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಪುಟಾಣಿ ಸಮವಸ್ತ್ರ ಧರಿಸಿ ಸ್ಕೂಲ್ ಗೆ ಹೊರಟಂತಿದೆ. ಇದೇ ವೇಳೆ ನನಗೆ ಐಸ್ ಕ್ರೀಮ್ ಬೇಕೆಂದು ಹಠ ಹಿಡಿದು ಜೋರಾಗಿ ಅಳಲು ಶುರು ಮಾಡಿರುವ ಪುಟಾಣಿಯನ್ನು ನೀವು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

View this post on Instagram

A post shared by NeYha limbu👸 (@neyha_28)

ಇದನ್ನೂ ಓದಿ: ಗೊಂಬೆಗೆ ಸ್ನಾನ ಮಾಡಿಸಿ ಆರೈಕೆ ಮಾಡಿದ ಪುಟಾಣಿ, ವೈರಲ್‌ ಆಯ್ತು ದೃಶ್ಯ

ಈ ವಿಡಿಯೋ ಒಂದು ಲಕ್ಷ ಅರವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿವೆ. ಒಬ್ಬ ಬಳಕೆದಾರ ದಯವಿಟ್ಟು ಯಾರಾದ್ರೂ ಅವಳಿಗೆ ಐಸ್ ಕ್ರೀಮ್ ತೆಗಿಸಿ ಕೊಡಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ನನ್ನ ಬಾಲ್ಯದ ದಿನಗಳನ್ನು ನೆನಪಿಸಿದಂತಾಯಿತು ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ. ಮತ್ತೊಬ್ಬರು, ಬಾಲ್ಯವೇ ಚಂದ. ಅಳುತ್ತಲೇ ಎಲ್ಲವನ್ನೂ ಪಡೆಯುತ್ತಿದ್ದೆವು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sainandha P
Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More