AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಕ್ರೋಚ್ ಜನತಾ ಪಾರ್ಟಿಗೆ ಪಾಕಿಸ್ತಾನ ಬಾಂಗ್ಲಾದೇಶದಲ್ಲೇ ಹೆಚ್ಚು ಫಾಲೋವರ್ಸ್‌: ಇದು ದೊಡ್ಡ ಸಂಚು ಎಂದ ನೆಟ್ಟಿಗರು

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ 'ಕಾಕ್ರೋಚ್ ಜನತಾ ಪಾರ್ಟಿ' (CJP) ಖಾತೆ 1.48 ಕೋಟಿ ಜಾಗತಿಕ ಅಭಿಮಾನಿಗಳನ್ನು ಹೊಂದಿದೆ. ಈ ಪೇಜ್‌ನ ಫಾಲೋವರ್ ವಿತರಣೆಯ ಗ್ರಾಫಿಕಲ್ ವಿಡಿಯೋ ಈಗ ಸದ್ದು ಮಾಡುತ್ತಿದೆ. ಆಘಾತಕಾರಿ ಸಂಗತಿ ಎಂದರೆ, ಒಟ್ಟು ಅಭಿಮಾನಿಗಳಲ್ಲಿ ಶೇ.49ರಷ್ಟು ಪಾಕಿಸ್ತಾನದಿಂದ ಬಂದಿದ್ದಾರೆ. ಭಾರತದಿಂದ ಶೇ.9ರಷ್ಟು ಮಾತ್ರ ಇದ್ದು, ಇದು ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದೆ. ಯುವ ಪೀಳಿಗೆಯ ಗಮನ ಸೆಳೆದಿರುವ CJP, ಅದರ ಜಾಗತಿಕ ಜನಪ್ರಿಯತೆಯು ಚರ್ಚೆಗೆ ಗ್ರಾಸವಾಗಿದೆ.

ಕಾಕ್ರೋಚ್ ಜನತಾ ಪಾರ್ಟಿಗೆ ಪಾಕಿಸ್ತಾನ ಬಾಂಗ್ಲಾದೇಶದಲ್ಲೇ ಹೆಚ್ಚು ಫಾಲೋವರ್ಸ್‌: ಇದು ದೊಡ್ಡ ಸಂಚು ಎಂದ ನೆಟ್ಟಿಗರು
ಸಾಂದರ್ಭಿಕ ಚಿತ್ರ Image Credit source: AI image
ಅಕ್ಷಯ್​ ಪಲ್ಲಮಜಲು​​
|

Updated on: May 22, 2026 | 11:26 AM

Share

ದೆಹಲಿ, ಮೇ.22: ಪ್ರಸ್ತುತ ಸೋಶಿಯಲ್​​ ಮೀಡಿಯಾದಲ್ಲಿ ಜಗತ್ತಿನಲ್ಲಿ ವಿಭಿನ್ನ ಹಾಗೂ ತಮಾಷೆಯ ಕಂಟೆಂಟ್ ಮೂಲಕ ಯುವ ಪೀಳಿಗೆಯ ಗಮನ ಸೆಳೆದಿರುವ ಟ್ರೆಂಡಿಂಗ್ ಖಾತೆ ‘ಕಾಕ್ರೋಚ್ ಜನತಾ ಪಾರ್ಟಿ’ (Cockroach Janta Party). “ರಾಜಕೀಯದ ಮುಖವಾಡ, ಯುವಕರಿಂದ ಯುವಕರಿಗಾಗಿ” ಎಂಬ ಟ್ಯಾಗ್‌ಲೈನ್ ಹೊಂದಿರುವ ಈ ಪೇಜ್ ಸದ್ಯ ವಿಶ್ವಾದ್ಯಂತ ಬರೋಬ್ಬರಿ 14.8 ಮಿಲಿಯನ್ (1.48 ಕೋಟಿ) ಫಾಲೋವರ್ಸ್ ಹೊಂದುವ ಮೂಲಕ ಹೊಸ ದಾಖಲೆ ಬರೆದಿದೆ. ಆದರೆ, ಈ ಕೋಟಿ ಕೋಟಿ ಅಭಿಮಾನಿಗಳು ಯಾವ ದೇಶದಿಂದ ಬಂದಿದ್ದಾರೆ ಎಂಬ ಆಸಕ್ತಿದಾಯಕ ದೇಶವಾರು ಅಂಕಿ-ಅಂಶಗಳ (Follower Distribution by Country) ಗ್ರಾಫಿಕಲ್ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಪಾಕಿಸ್ತಾನದಲ್ಲೇ ಅತಿ ಹೆಚ್ಚು ಫಾಲೋವರ್ಸ್!:

ವೈರಲ್ ಆಗಿರುವ ವರದಿಯ ಪ್ರಕಾರ, ಈ ಪೇಜ್ ಹೊಂದಿರುವ ಒಟ್ಟು ಫಾಲೋವರ್ಸ್‌ಗಳ ಪೈಕಿ ಸಿಂಹಪಾಲು ಅಂದರೆ ಬರೋಬ್ಬರಿ ಶೇಕಡಾ 49 ರಷ್ಟು (ಶೇ. 49) ಜನರು ಪಾಕಿಸ್ತಾನ ಮೂಲದವರಾಗಿದ್ದಾರೆ! ಇದು ಇಂಟರ್ನೆಟ್ ವಲಯದಲ್ಲಿ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.

ಇಲ್ಲಿದೆ ನೋಡಿ ವೈರಲ್ ಪೋಸ್ಟ್​​:

ಉಳಿದ ದೇಶಗಳ ಅಂಕಿ-ಅಂಶಗಳು ಹೀಗಿವೆ:

ಅಮೆರಿಕ (USA): ಶೇ. 14

ಬಾಂಗ್ಲಾದೇಶ (Bangladesh): ಶೇ. 14

ಭಾರತ (India): ಶೇ. 9

ಬ್ರಿಟನ್ (UK): ಶೇ. 3

ಆಸ್ಟ್ರೇಲಿಯಾ (Australia): ಶೇ. 3

ಸೌದಿ ಅರೇಬಿಯಾ: ಶೇ. 3

ಯುಎಇ (UAE): ಶೇ. 2

ಕಾಕ್ರೋಚ್ ಜನತಾ ಪಾರ್ಟಿಗೆ ಟರ್ಕಿ ನಂಟು!

ಇತ್ತೀಚಿನ ಜಾಗತಿಕ ಅಂಕಿ-ಅಂಶಗಳ ಬ್ರೇಕ್‌ಡೌನ್ ವರದಿಯ ಪ್ರಕಾರ, ಈ ಖಾತೆಗೆ ಕೇವಲ ಪಾಕಿಸ್ತಾನ (ಶೇ. 49) ಮತ್ತು ಬಾಂಗ್ಲಾದೇಶ (ಶೇ. 14) ಮಾತ್ರವಲ್ಲದೆ, ಇಸ್ಲಾಮಿಕ್ ರಾಷ್ಟ್ರವಾದ ಟರ್ಕಿ (Turkey) ಮೂಲದ ಲಕ್ಷಾಂತರ ಫಾಲೋವರ್ಸ್‌ಗಳು ಕೂಡ ಹಠಾತ್ತನೆ ಸೇರ್ಪಡೆಯಾಗುತ್ತಿರುವುದನ್ನು ನೆಟ್ಟಿಗರು ಪತ್ತೆಹಚ್ಚಿ ಧ್ವಜ ಎತ್ತಿದ್ದಾರೆ (Flagged). ಭಾರತೀಯ ಯುವಕರ ನಿರುದ್ಯೋಗ ಮತ್ತು ‘ನೀಟ್’ (NEET) ಪರೀಕ್ಷೆಯ ಅಕ್ರಮಗಳ ಆಕ್ರೋಶವನ್ನು ಮುಂದಿಟ್ಟುಕೊಂಡು ಆರಂಭವಾದ ಈ ಡಿಜಿಟಲ್ ಮೂವ್‌ಮೆಂಟ್‌ನ ಹಿಂದೆ, ಭಾರತದ ಆಂತರಿಕ ರಾಜಕೀಯ ವ್ಯವಸ್ಥೆಯನ್ನು ಅಲುಗಾಡಿಸಲು ವಿದೇಶಿ ‘ಬಾಟ್ಸ್’ (Bots) ಮತ್ತು ಪೇಡ್ ಅಕೌಂಟ್‌ಗಳನ್ನು ಬಳಸಲಾಗುತ್ತಿದೆಯೇ ಎಂಬ ಸಂಶಯ ಈಗ ದಟ್ಟವಾಗಿದೆ.

ಇದು ಕೇವಲ ಟ್ರೆಂಡ್ ಅಲ್ಲ, ಪೂರ್ವನಿಯೋಜಿತ ಸ್ಕೆಚ್?

ಅಭಿಜೀತ್ ದಿಪ್ಕೆ ನೇತೃತ್ವದ ಈ ಸಾಟೈರಿಕಲ್ (ವ್ಯಂಗ್ಯಭರಿತ) ಚಳವಳಿಯು ಭಾರತದ ಡಿಜಿಟಲ್ ಸ್ಪೇಸ್‌ನಲ್ಲಿ ಭಾರಿ ದೊಡ್ಡ ಮಟ್ಟದ ಅಶಾಂತಿ ಮೂಡಿಸಲು ಪ್ರಯತ್ನಿಸುತ್ತಿದೆ ಎಂದು ಐಟಿ ತಜ್ಞರು ಆಪಾದಿಸುತ್ತಿದ್ದಾರೆ. “ಯೂತ್ ಇಂಡಿಯಾ ಮತ್ತು ಭರತ್ ಎಂಬ ದೇಶಪ್ರೇಮಿ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಇನ್‌ಸ್ಟಾಗ್ರಾಮ್ ರೀಲ್ಸ್‌ಗಳ ಮೂಲಕ ಯುವಕರನ್ನು ಸೆಳೆಯಲಾಗುತ್ತಿದೆ. ಆದರೆ ಇದಕ್ಕೆ ಸಿಗುತ್ತಿರುವ ಬಹುಪಾಲು ಲೈಕ್ಸ್ ಮತ್ತು ಫಾಲೋವರ್ಸ್ ಪಾಕಿಸ್ತಾನ ಹಾಗೂ ಟರ್ಕಿಯಿಂದ ಬರುತ್ತಿರುವುದು ಜಾಗತಿಕ ಮಟ್ಟದ ಸೈಬರ್ ಸಂಚನ್ನು (Global Cyber Conspiracy) ಎತ್ತಿ ತೋರಿಸುತ್ತದೆ” ಎಂದು ಎಕ್ಸ್ (ಟ್ವಿಟರ್) ನಲ್ಲಿ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.

ಕಾಂಗ್ರೆಸ್, ಆಪ್ ಹಾಗೂ SDPI ನಂಟು?

ಮತ್ತೊಂದೆಡೆ, ಈ ಇಡೀ ಡಿಜಿಟಲ್ ಟ್ರೆಂಡ್‌ನ ಹಿಂದೆ ಭಾರತದ ಕೆಲವು ಪ್ರಮುಖ ರಾಜಕೀಯ ಪಕ್ಷಗಳ ಕೈವಾಡ ಇದೆ ಎಂದು ನೆಟ್ಟಿಗರು ದೂರಿದ್ದಾರೆ. “ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಟರ್ಕಿಯಂತಹ ವಿದೇಶಿ ಖಾತೆಗಳ ಜೊತೆಗೆ ಭಾರತದ ಕಾಂಗ್ರೆಸ್ , ಆಮ್ ಆದ್ಮಿ ಪಾರ್ಟಿಹಾಗೂ ಎಸ್‌ಡಿಪಿಐ ಪಕ್ಷದ ಬೆಂಬಲಿಗರೆಲ್ಲರೂ ಒಟ್ಟಾಗಿ ಕಾಕ್ರೋಚ್ ಜನತಾ ಪಕ್ಷವನ್ನು ಪ್ರಚಾರ ಮಾಡಲು ಮತ್ತು ದೇಶದ ಇಮೇಜ್ ಹಾಳು ಮಾಡಲು ಮುಂದಾಗಿದ್ದಾರೆ” ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಸದ್ಯಕ್ಕೆ ಈ ಎಲ್ಲಾ ಆಪಾದನೆಗಳು ಹಾಗೂ ವೈರಲ್ ಆಗುತ್ತಿರುವ ಅಂಕಿ-ಅಂಶಗಳ ಯಾವುದೇ ಸ್ವತಂತ್ರ ಹಾಗೂ ಅಧಿಕೃತ ಪರಿಶೀಲನೆ ಸಾರ್ವಜನಿಕವಾಗಿ ಲಭ್ಯವಾಗಿಲ್ಲದಿದ್ದರೂ, ಇಂಟರ್ನೆಟ್‌ನಲ್ಲಂತೂ ತೀವ್ರ ಸಂಚಲನ ಮೂಡಿಸಿದೆ.

ಇದನ್ನೂ ಓದಿ: ಏನಿದು ಕಾಕ್ರೋಚ್ ಜನತಾ ಪಾರ್ಟಿ, ಹುಟ್ಟಿಕೊಂಡಿದ್ಹೇಗೆ? ಯಾರ್ಯಾರ ಬೆಂಬಲವಿದೆ?

ಭಾರತೀಯ ಮೂಲದ ರಾಜಕೀಯ ಮತ್ತು ಯೂತ್ ಟ್ರೆಂಡ್‌ಗಳ ಹ್ಯಾಶ್‌ಟ್ಯಾಗ್ ಬಳಸಿ ಹರಿದಾಡುತ್ತಿದೆ ಈ ವಿಡಿಯೋ. ನೆಟ್ಟಿಗರು ಕಮೆಂಟ್‌ ಬಾಕ್ಸ್‌ನಲ್ಲಿ “ಕಾಕ್ರೋಚ್ ಪಾರ್ಟಿಗೆ ಭಾರತಕ್ಕಿಂತ ನೆರೆಹೊರೆಯ ದೇಶಗಳಲ್ಲೇ ಕ್ರೇಜ್ ಜಾಸ್ತಿ ಇದೆ ಮಾರಾಯ್ರೆ” ಎಂದು ತಮಾಷೆ ಮಾಡುತ್ತಿದ್ದಾರೆ. ಇನ್ನು ಕೆಲವರು ಇದೊಂದು ದೊಡ್ಡ ಸಂಚು. ಪಾಕಿಸ್ತಾನ, ಅಮೆರಿಕ, ಬಾಂಗ್ಲಾದೇಶ ದೊಡ್ಡ ರಾಜತಾಂತ್ರಿಕ ಸಂಚು ರೂಪಿಸಿದೆ ಎಂದು ಹೇಳಿದ್ದಾರೆ. ಇದನ್ನು ಯಾವ ಕಾರಣಕ್ಕೂ ಫಾಲೋ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Akshay Pallamajalu
Akshay Pallamajalu

ನನ್ನ ಹೆಸರು ಅಕ್ಷಯ್ ಕುಮಾರ್ ಪಲ್ಲಮಜಲು, ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಡಿಜಿಟಲ್​ ವಿಭಾಗದಲ್ಲಿ 3 ವರ್ಷಗಳ ಅನುಭವ, ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಟಿವಿ9ನಲ್ಲೂ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದೇನೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಲೇಖನಗಳನ್ನು ಬರೆಯುತ್ತೇನೆ.

Read More