Viral: ಮ್ಯೂಸಿಕಲ್‌ ಫ್ಯಾಮಿಲಿ; ʼಹಚ್ಚೇವು ಕನ್ನಡದ ದೀಪʼ ಎಂದು ಬಹಳ ಸೊಗಸಾಗಿ ಹಾಡಿದ ಕುಟುಂಬ ಸದಸ್ಯರು

ಸೋಷಿಯಲ್‌ ಮಿಡಿಯಾದಲ್ಲಿ ಪ್ರತಿನಿತ್ಯ ನಮ್ಮ ಮನಸ್ಸಿಗೆ ಮುದ ನೀಡುವಂತಹ ದೃಶ್ಯಗಳು ಕಾಣಸಿಗುತ್ತಿರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ವಿಡಿಯೋ ವೈರಲ್‌ ಆಗಿದ್ದು, ಫ್ಯಾಮಿಲಿ ಗೆಟ್‌ ಟು ಗೆದರ್‌ನಲ್ಲಿ ಕುಟುಂಬಸ್ಥರೆಲ್ಲರೂ ಜೊತೆಯಾಗಿ ಕುಳಿತು ಕವಿ ಡಿ.ಎಸ್.‌ ಕರ್ಕಿಯವರ ಹಚ್ಚೇವು ಕನ್ನಡದ ದೀಪ…. ಗೀತೆಯನ್ನು ಸೊಗಸಾಗಿ ಹಾಡಿದ್ದಾರೆ. ಬಹಳ ಸುಂದರವಾದ ಈ ದೃಶ್ಯ ನೋಡುಗರ ಮನ ಗೆದ್ದಿದೆ. ‌

Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 04, 2024 | 2:33 PM

ಹಬ್ಬ, ರಜೆಯ ಸಂದರ್ಭಗಳಲ್ಲಿ ಕುಟುಂಬಸ್ಥರೆಲ್ಲಾ ಜೊತೆಯಾಗಿ ಒಂದು ಕಡೆ ಸೇರುವುದೆಂದರೆಯೇ ಅದೊಂದು ಸಂಭ್ರಮ. ಅದರಲ್ಲೂ ಫ್ಯಾಮಿಲಿ ಗೆಟ್‌ ಟು ಗೆದರ್‌ನಲ್ಲಿ ಕುಟುಂಬಸ್ಥರೆಲ್ಲಾ ಸೇರಿದ ಸಂದರ್ಭದಲ್ಲಿ ಆಟ, ಡಾನ್ಸ್‌, ಹಾಡು ಅಂತ ಮಜಾ ಮಾಡುವುದರ ಖುಷಿಯೇ ಬೇರೆ. ಇದೀಗ ಇಲ್ಲೊಂದು ಮ್ಯೂಸಿಕಲ್‌ ಫ್ಯಾಮಿಲಿಯ ವಿಡಿಯೋ ವೈರಲ್‌ ಆಗಿದ್ದು, ದೀಪಾಫ್ಯಾಮಿಲಿ ಗೆಟ್‌ ಟು ಗೆದರ್‌ನಲ್ಲಿ ಕುಟುಂಬಸ್ಥರೆಲ್ಲರೂ ಸೇರಿ ಕವಿ ಡಿ.ಎಸ್.‌ ಕರ್ಕಿಯವರ ಹಚ್ಚೇವು ಕನ್ನಡದ ದೀಪ…. ಗೀತೆಯನ್ನು ಸೊಗಸಾಗಿ ಹಾಡಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದ್ದು, ಬಹಳ ಸುಂದರವಾದ ಈ ದೃಶ್ಯ ನೋಡುಗರ ಮನ ಗೆದ್ದಿದೆ. ‌

ಹಚ್ಚೇವು ಕನ್ನಡದ ದೀಪ…. ಕರುನಾಡ ದೀಪ ಸಿರುನುಡಿಯ ದೀಪ… ಒಲವೆತ್ತಿ ತೋರುವ ದೀಪ… ಕನ್ನಡದ ಬಹಳ ಸೊಗಸಾದ ಭಾವಗೀತೆಯನ್ನು ಕೇಳುವುದೇ ಕಿವಿಗೆ ಇಂಪು. ಕವಿ ಡಿ.ಎಸ್‌ ಕರ್ಕಿಯವರ ಈ ಗೀತೆಯನ್ನು ಇಲ್ಲೊಂದು ಕುಟುಂಬಸ್ಥರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಹಳ ಸೊಗಸಾಗಿ ಹಾಡಿದ್ದಾರೆ. ಈ ವಿಡಿಯೋವನ್ನು ಚೈತ್ರಿಕಾ ವಿ.ಕೆ (chai_vk) ಎಂಬವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

View this post on Instagram

A post shared by Chaithrika V K (@chai_vk)

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಕುಟುಂಬಸ್ಥರೆಲ್ಲರೂ ಜೊತೆಯಾಗಿ ಕುಳಿತು ಹಚ್ಚೇವು ಕನ್ನಡದ ದೀಪ…. ಕರುನಾಡ ದೀಪ ಸಿರುನುಡಿಯ ದೀಪ… ಒಲವೆತ್ತಿ ತೋರುವ ದೀಪ… ಗೀತೆಯನ್ನು ಹಾಡುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಪುಣ್ಯ ಜಲ ಎಂದು ತಪ್ಪಾಗಿ ಭಾವಿಸಿ ಎಸಿ ನೀರನ್ನು ಕುಡಿದ ಭಕ್ತರು; ವಿಡಿಯೋ ವೈರಲ್‌

ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 41 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼವಾವ್ಹ್‌ ತುಂಬಾ ಅದ್ಭುತವಾದ ಕಾರ್ಯಕ್ರಮʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ದೃಶ್ಯ ನನ್ನ ಹೃದಯ ಮುಟ್ಟಿತುʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ