Viral: ಯುಟ್ಯೂಬ್ ನೋಡಿ ರೋಗಿಗೆ ಇಸಿಜಿ ಟೆಸ್ಟ್ ಮಾಡಿದ ಲ್ಯಾಬ್ ಅಟೆಂಡೆಂಟ್; ವಿಡಿಯೋ ವೈರಲ್
ಈ ಹಿಂದೆ ನಕಲಿ ವೈದ್ಯನೊಬ್ಬ ಯುಟ್ಯೂಬ್ ನೋಡಿ 15 ವರ್ಷದ ಬಾಲಕನಿಗೆ ಶಸ್ತ್ರ ಚಿಕಿತ್ಸೆ ಮಾಡಿದ ಸುದ್ದಿಯೊಂದು ಭಾರೀ ವೈರಲ್ ಆಗಿತ್ತು. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ವೈದ್ಯರು ಮತ್ತು ಲ್ಯಾಬ್ ಟೆಕ್ನಿಷಿಯನ್ ರಜೆಯಲ್ಲಿದ್ದ ಕಾರಣ ಆಸ್ಪತ್ರೆಗೆ ಬಂದ ರೋಗಿಗೆ ಲ್ಯಾಬ್ ಅಟೆಂಡರ್ ಯುಟ್ಯೂಬ್ ನೋಡಿ ಇಸಿಜಿ ಮಾಡಿದ್ದಾನೆ. ಸದ್ಯ ಈ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಯುಟ್ಯೂಬ್, ಗೂಗಲ್ ನೋಡಿಕೊಂಡೇ ಹೆಚ್ಚಿನವರು ಹೊಸ ಹೊಸ ವಿಷಯಗಳನ್ನು ಕಲಿಯುತ್ತಿರುತ್ತಾರೆ. ಇಲ್ಲಿ ಅಡುಗೆಯಿಂದ ಹಿಡಿದು ಆಟ ಪಾಠದ ವರೆಗೂ ಎಲ್ಲಾ ಮಾಹಿತಿಗಳು ಲಭ್ಯವಿದೆ. ಕೆಲವರು ಯುಟ್ಯೂಬ್ ನೋಡಿಕೊಂಡು ಒಳ್ಳೆ ಒಳ್ಳೆಯ ವಿಷಯಗಳನ್ನು ಕಲಿತರೆ, ಇನ್ನೂ ಯುಟ್ಯೂಬ್ ನೋಡಿ ಕಳ್ಳತನ ಮಾಡುವುದು, ಆಪರೇಷನ್ ಮಾಡುವುದು, ಬಾಂಬ್ ತಯಾರಿಸುವುದನ್ನು ಕಲಿತವರು ಕೂಡಾ ಇದ್ದಾರೆ. ಈ ಘಟನೆಗಳ ಸುದ್ದಿಗಳು ಈ ಹಿಂದೆ ವೈರಲ್ ಆಗಿದ್ದವು. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ವೈದ್ಯರು ಮತ್ತು ಲ್ಯಾಬ್ ಟೆಕ್ನಿಷಿಯನ್ ರಜೆಯಲ್ಲಿ ಇದ್ದ ಕಾರಣ ಆಸ್ಪತ್ರೆಗೆ ಬಂದ ರೋಗಿಗೆ ಲ್ಯಾಬ್ ಅಟೆಂಡರ್ ಯುಟ್ಯೂಬ್ ನೋಡಿ ಇಸಿಜಿ ಮಾಡಿದ್ದಾನೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ಆಘಾತಕಾರಿ ಘಟನೆ ರಾಜಸ್ಥಾನದ ಜೋಧ್‌ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು, ದೀಪಾವಳಿಯ ಪ್ರಯುಕ್ತ ವೈದ್ಯರು ಮತ್ತು ಲ್ಯಾಬ್ ಸಿಬ್ಬಂದಿಗಳು ರಜೆಯಲ್ಲಿದ್ದ ಕಾರಣ ಆಸ್ಪತ್ರೆಗೆ ಬಂದ ರೋಗಿಗೆ ಯುಟ್ಯೂಬ್ ನೋಡಿಕೊಂಡು ಅಟೆಂಡರ್ ಇಸಿಜಿ ಟೆಸ್ಟ್ ಮಾಡಿದ್ದಾನೆ. ಅಕ್ಟೋಬರ್ 31 ರಂದು ಈ ಘಟನೆ ನಡೆದಿದ್ದು, ರೋಗಿಯ ಸಂಬಂಧಿ ನಿಮಗೆ ತಿಳಿದಿಲ್ಲ ಅಂದ್ರೆ ದಯವಿಟ್ಟು ಈ ಎಡವಟ್ಟು ಕೆಲಸಕ್ಕೆ ಕೈ ಹಾಕಬೇಡಿ ಎಂದು ಹೇಳಿದರೂ ಅವರ ಮಾತನ್ನು ಕೇಳದೆ ಅಟೆಂಡರ್ ಯುಟ್ಯೂಬ್ ನೋಡಿ ಎಲೆಕ್ಟ್ರೋಕಾರ್ಡಿಯೋಗ್ರಾಮ್ (ಇಸಿಜಿ) ಪರೀಕ್ಷೆಯನ್ನು ಮಾಡಿದ್ದಾನೆ.
ಭವಾನಿ ಸಿಂಗ್ (BhawaniSinghjpr) ಎಂಬವರು ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಯುಟ್ಯೂಬ್‌ನಲ್ಲಿ ಇಸಿಜಿ ಹೇಗೆ ಮಾಡುವುದು ಎಂಬುದನ್ನು ನೋಡಿ ಆಸ್ಪತ್ರೆ ಸಹಾಯಕ ರೋಗಿಯೊಬ್ಬರಿಗೆ ಇಸಿಜಿ ಪರೀಕ್ಷೆ ಮಾಡಲು ಮುಂದಾಗುತ್ತಿರುವ ದೃಶ್ಯವನ್ನು ಕಾಣಬಹುದು. ರೋಗಿಯ ಕುಟುಂಬಸ್ಥರು ಇದರ ಬಗ್ಗೆ ಸರಿಯಾದ ಜ್ಞಾನವಿಲ್ಲದೆ ನೀವು ಸ್ಕ್ಯಾನ್ ಮಾಡಿದರೆ ಅವನ ಪ್ರಾಣಕ್ಕೆ ಕಂಟಕವಾಗಬಹುದು ಎಂದು ಹೇಳಿದರೂ ಲ್ಯಾಬ್ ಟೆಕ್ನಿಷಿಯನ್ ದೀಪಾವಳಿ ರಜೆಯ ನಿಮಿತ್ತ ಮನೆಗೆ ಹೋಗಿದ್ದಾರೆ, ಇಸಿಜಿಗೆ ಬೇಕಾದ ಯಂತ್ರಗಳನ್ನು ಸರಿಯಾಗಿ ಅಳವಡಿಸಲಾಗಿದೆ, ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿ ಅಟೆಂಡರ್ ರೋಗಿಗೆ ಯುಟ್ಯೂಬ್ ನೋಡಿ ಇಸಿಜಿ ಮಾಡಿದ್ದಾನೆ.
ಇದನ್ನೂ ಓದಿ: ಪುಣ್ಯ ಜಲ ಎಂದು ತಪ್ಪಾಗಿ ಭಾವಿಸಿ ಎಸಿ ನೀರನ್ನು ಕುಡಿದ ಭಕ್ತರು; ವಿಡಿಯೋ ವೈರಲ್
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಜೋಧ್‌ಪುರ ವೈದ್ಯಕೀಯ ಕಾಲೇಜಿನ ಮುಖ್ಯಸ್ಥ ಬಿಎಸ್ ಜೋಧಾ ಅವರು ಈ ಬಗ್ಗೆ ತನಿಖೆಯನ್ನು ಮಾಡಲಾಗುವುದು ಮತ್ತು ಆತನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಹಾಗೂ ಇಸಿಜಿ ಪರೀಕ್ಷೆಯು ಜೀವಕ್ಕೆ ಯಾವುದೇ ಅಪಾಯವನ್ನು ಉಂಟು ಮಾಡುವುದಿಲ್ಲ. ತಪ್ಪಾದ ಇಸಿಜಿ ಪಾಯಿಂಟ್ ಪ್ಲೇಸ್‌ಮೆಂಟ್ ರೋಗಿಗೆ ಯಾವುದೇ ಅಪಾಯವನ್ನು ಉಂಟು ಮಾಡುವುದಿಲ್ಲ ಆದ್ರೆ ಇದು ತಪ್ಪು ರಿಸಲ್ಟ್ ಅನ್ನು ನೀಡುತ್ತದೆ ಎಂಬ ಮಾಹಿತಿಯನ್ನು ಕೂಡಾ ನೀಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ