Viral Video: ಬಿಯರ್ ಖರೀದಿಸುವಾಗ ತಂದೆ ಕೈಗೆ ತಗ್ಲಾಕೊಂಡ ಯುವಕ, ಬಾರ್​​​ನಲ್ಲಿ ಎಲ್ಲರ ಮುಂದೆ ಮಗನಿಗೆ ಚಪ್ಪಲಿ ಏಟು

ಬಾರ್ ಒಂದರಲ್ಲಿ ಬಿಯರ್ ಖರೀದಿಸುತ್ತಿರುವಾಗ ಯುವಕಕನೊಬ್ಬ ತನ್ನ ತಂದೆಯ ಕೈಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, ಮಗನಿಗೆ ಕುಡಿತ ಚಟ ಇದೆ ಎಂದು ಗೊತ್ತಾದ ತಕ್ಷಣ ಬಾರ್ನಲ್ಲಿ ಎಲ್ಲರ ಎದುರೇ ಆ ತಂದೆ ತಮ್ಮ ಮಗನಿಗೆ ಚಪ್ಪಲಿಯಲ್ಲಿ ಧರ್ಮದೇಟು ನೀಡಿದ್ದಾರೆ. ತಂದೆ ಮಗನ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ತಂದೆಯ ನಡೆಗೆ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ.

Viral Video: ಬಿಯರ್ ಖರೀದಿಸುವಾಗ ತಂದೆ ಕೈಗೆ ತಗ್ಲಾಕೊಂಡ ಯುವಕ, ಬಾರ್​​​ನಲ್ಲಿ ಎಲ್ಲರ ಮುಂದೆ ಮಗನಿಗೆ ಚಪ್ಪಲಿ ಏಟು
Edited By:

Updated on: Jun 10, 2024 | 4:15 PM

ಪ್ರತಿಯೊಬ್ಬ ತಂದೆ ತಾಯಿಯು ತಮ್ಮ ಮಗ ಕುಡಿತದ ಚಟಕ್ಕೆ ದಾಸನಾಗಬಾರದು ಅಂತಾನೇ ಬಯಸುತ್ತಾರೆ. ಆದ್ರೆ ಈ ಚಾಲಾಕಿ ಯುವಕರು ತಂದೆ ತಾಯಿಯ ಕಣ್ತಿಪ್ಪಿಸಿ ಸ್ನೇಹಿತ ಜೊತೆ ಸೇರಿ ಕುಡಿಯುತ್ತಾ ಮಜಾ ಮಾಡುತ್ತಾರೆ. ಒಂದು ವೇಳೆ ಡ್ರಿಂಕ್ಸ್ ಮಾಡಿದ್ದು ಗೊತ್ತಾದ್ರೇ ತಂದೆಯ ಕೈಯಿಂದ ಇವರುಗಳಿಗೆ ಧರ್ಮದೇಟು ಬೀಳುವುದಂತೂ ಗ್ಯಾರಂಟಿ. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ಯುವಕನೊಬ್ಬ ಬಾರ್ ಒಂದರಲ್ಲಿ ಬಿಯರ್ ಖರೀದಿಸುತ್ತಿದ್ದ ವೇಳೆ ಆತನ ತಂದೆಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬೀಳುತ್ತಾನೆ. ನನ್ ಮಗ್ನೆ ಬಾರ್ಗೆ ಬಂದು ಕುಡಿಯುವಷ್ಟು ಬೆಳೆದುಬಿಟ್ಟಿಯಾ ಎಂದು ಸಿಟಿಗೆದ್ದ ತಂದೆ ಅಲ್ಲೇ ಎಲ್ಲರ ಎದುರಲ್ಲಿ ತಮ್ಮ ಮಗನಿಗೆ ಚಪ್ಪಲಿಯನ್ನು ಧರ್ಮದೇಟು ನೀಡಿದ್ದಾರೆ. ತಂದೆ ಮಗನ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ತಂದೆಯ ಈ ನಡೆಗೆ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ.

ಈ ಘಟನೆ ಹರಿಯಾಣದಲ್ಲಿ ನಡೆದಿದ್ದು, ಇಲ್ಲಿನ ಸ್ಥಳೀಯ ಬಾರ್ ಒಂದರಲ್ಲಿ ಬಿಯರ್ ಖರೀದಿಸುತ್ತಿದ್ದಾಗ ಯುವಕನೊಬ್ಬ ತನ್ನ ತಂದೆಯ ಕೈಗೆ ರೆಡ್ಹ್ಯಾಂಡ್ ಸಿಕ್ಕಿಬಿದ್ದಿದ್ದಾನೆ. ಮಗನಿಗೆ ಕುಡಿತದ ಚಟ ಇದೆ ಎಂದು ಸಿಟ್ಟಿಗೆದ್ದ ತಂದೆ, ಈತ ಈ ಜನ್ಮದಲ್ಲಿ ಇನ್ನೂ ಕುಡಿಯಬಾರದು ಎಂದು ಬಾರ್ನಲ್ಲಿ ಎಲ್ಲರ ಎದುರೇ ಮಗನಿಗೆ ಚಪ್ಪಲಿ ಏಟು ನೀಡಿದ್ದಾರೆ.

ಈ ವಿಡಿಯೋವನ್ನು peddlermedia ಎಂಬ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ತಂದೆಯ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮಗನಿಗೆ ಧರ್ಮದೇಟು ಬೀಳುತ್ತಿರುವ ದೃಶ್ಯವನ್ನು ಕಾಣಬಹುದು. ಯುವಕನೊಬ್ಬ ಬಾರ್ ಒಂದರಲ್ಲಿ ಬಿಯರ್ ಖರೀದಿಸುತ್ತಿದ್ದ ವೇಳೆ ಆತನ ತಂದೆಯ ಕೈಗೆ ಸಿಕ್ಕಿ ಬೀಳುತ್ತಾನೆ. ನನ್ ಮಗ್ನೆ ಬಾರ್ಗೆ ಬಂದು ಕುಡಿಯುವಷ್ಟು ಬೆಳೆದುಬಿಟ್ಟಿಯಾ ಎಂದು ಸಿಟಿಗೆದ್ದ ತಂದೆ ಅಲ್ಲೇ ಸಾರ್ವಜನಿಕರ ಎದುರಲ್ಲೇ ಮಗನಿಗೆ ಚಪ್ಪಲಿ ಏಟು ನೀಡಿದ್ದಾರೆ.

ಇದನ್ನೂ ಓದಿ: ತೂಕ ಇಳಿಸಿಕೊಳ್ಳಿ ಭರ್ಜರಿ ಬೋನಸ್ ಪಡೆಯಿರಿ, ಉದ್ಯೋಗಿಗಳ ಆರೋಗ್ಯಕ್ಕೆ ಹೊಸ ಕ್ರಮ ತಂದ ಟೆಕ್ ಕಂಪೆನಿ

ಜೂನ್ 01 ರಂದು ಹಂಚಿಕೊಳ್ಳಲಾದ ಈ ವಿಡಿಯೋ 8.6 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ತಂದೆಯ ಈ ನಡೆ, ಮತ್ತು ಮಗನ ಮೇಲಿನ ಕಾಳಜಿಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

 

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us