AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಹೋಟೆಲ್‌ ರೂಮ್‌ನಲ್ಲಿರುವ ಈ ವಸ್ತುಗಳನ್ನು ಫ್ರೀಯಾಗಿ ತಗೊಂಡು ಹೋಗ್ಬೋದು

ಹೋಟೆಲ್‌ನಲ್ಲಿರುವ ಹೇರ್ ಡ್ರೈಯರ್, ದಿಂಬುಗಳು ಕರ್ಟನ್‌ಗಳು, ದೀಪಗಳು ನೋಡಲು ಆಕರ್ಷಕವಾಗಿರುತ್ತವೆ. ಹಾಗಂತ ಇದನ್ನೆಲ್ಲಾ ಕದ್ದು ಮುಚ್ಚಿ ಮನೆಗೆ ತೆಗೆದುಕೊಳ್ಳುವಂತಿಲ್ಲ. ಒಂದು ವೇಳೆ ಸಿಕ್ಕಿ ಬಿದ್ದರೆ ಆ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ, ದಂಡ ವಿಧಿಸಲಾಗುತ್ತದೆ. ಆದರೆ ವೈಯುಕ್ತಿಕ ಕಿಟ್ ಗಳು, ಶ್ಯಾಂಪೂ, ಕಂಡೀಷನರ್, ಸೋಪ್, ಚಹಾ ಹಾಗೂ ಕಾಫಿ ಸಾಮಗ್ರಿಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಅವಕಾಶವಿದೆ.

Viral: ಹೋಟೆಲ್‌ ರೂಮ್‌ನಲ್ಲಿರುವ ಈ ವಸ್ತುಗಳನ್ನು ಫ್ರೀಯಾಗಿ ತಗೊಂಡು ಹೋಗ್ಬೋದು
ಹೋಟೆಲ್‌ ರೂಮ್‌Image Credit source: Thomas Barwick/DigitalVision/Getty Images
ಸಾಯಿನಂದಾ
|

Updated on: Nov 06, 2026 | 10:43 AM

Share

ಮುಖ್ಯಾಂಶಗಳು

  • ಟ್ರಿಪ್‌ ಪ್ಲಾನ್‌ ಮಾಡಿದಾಗ ಹೋಟೆಲ್‌ ರೂಮ್‌ಗಳನ್ನು ಬುಕ್‌ ಮಾಡುವುದು ಸಹಜ
  • ಹೋಟೆಲ್ ರೂಮ್‌ಗಳಲ್ಲಿರುವ ಈ ವಸ್ತುಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಅವಕಾಶವಿದೆ
  • ಹೋಟೆಲ್‌ ಪ್ರಾಪರ್ಟಿಯಾಗಿರುವ ಈ ಕೆಲ ವಸ್ತುಗಳನ್ನು ತೆಗೆದುಕೊಂಡು ಹೋದರೆ ದಂಡ ವಿಧಿಸಲಾಗುತ್ತದೆ.

ಕೆಲವರಿಗೆ ಕಂಡದೆಲ್ಲಾ ಬೇಕು, ಬಾಯಿ ಬಿಟ್ಟೆ ಕೇಳುತ್ತಾರೆ. ಇನ್ನು, ಕೆಲವರು ಹೋಟೆಲ್ ಗಳಲ್ಲಿ ರೂಮ್ ಮಾಡಿದಾಗ ಅಲ್ಲಿದ್ದ ವಸ್ತುಗಳನ್ನು ಹೇಳದೇನೇ ತೆಗೆದುಕೊಂಡು ಹೋಗ್ತಾರೆ. ಆದರೆ ಹೋಟೆಲ್ ರೂಮ್‌ಗಳಲ್ಲಿರುವ (Hotel room) ಈ ವಸ್ತುಗಳನ್ನು ಆರಾಮಾಗಿ ತೆಗೆದು ಕೊಂಡು ಹೋಗಲು ಅವಕಾಶವಿದೆ. ನೀವು ಬಳಸಿದ ಕೆಲ ವಸ್ತುಗಳನ್ನು ಚೆಕ್ ಔಟ್ ನಂತರ ಎಸೆಯಲಾಗುತ್ತದೆ. ಹೀಗಾಗಿ ರೂಮ್‌ನಲ್ಲಿ ಹಿಡಿದು ಶೌಚಾಲಯದಲ್ಲಿರುವ ಈ ಸಣ್ಣ ಪುಟ್ಟ ವಸ್ತುಗಳನ್ನು ಮನೆಗೆ ತರಬಹುದಾಗಿದೆ.

ಹೋಟೆಲ್‌ನಲ್ಲಿ ಯಾವೆಲ್ಲಾ ವಸ್ತುಗಳನ್ನು ಫ್ರೀಯಾಗಿ ತೆಗೆದುಕೊಂಡು ಹೋಗ್ಬಹುದು?

  •  ಶೌಚಾಲಯದಲ್ಲಿರುವ ಶ್ಯಾಂಪೂ, ಕಂಡಿಷನರ್, ಲೋಷನ್, ಸೋಪ್ ಈ ವಸ್ತುಗಳನ್ನು ನೀವು ತೆಗೆದುಕೊಂಡು ಹೋಗ್ಬಹುದು.
  • ವೈಯುಕ್ತಿಕ ಬಳಕೆಗೆಂದು ಇಡಲಾದ ಟೂತ್‌ಬ್ರಷ್, ಪೇಸ್ಟ್ , ರೇಸರ್, ಬಾಚಣಿಗೆ ಈ ವಸ್ತುಗಳನ್ನು ತೆಗೆದು ಹೋದರೆ ಯಾರು ಪ್ರಶ್ನೆ ಮಾಡಲ್ಲ.
  • ಐಷಾರಾಮಿ ಹೋಟೆಲ್‌ಗಳಲ್ಲಿ ಹೆಚ್ಚಾಗಿ ಯೂಸ್ ಆಂಡ್ ಥ್ರೋ ಚಪ್ಪಲಿಗಳನ್ನು ಇಟ್ಟಿರುತ್ತಾರೆ. ನೀವು ಚಪ್ಪಲಿಯನ್ನು ಬಳಸಿದ್ದರೆ ಚೆಕ್ ಔಟ್ ಬಳಿಕ ಅದನ್ನು ಎಸೆಯಲಾಗುತ್ತದೆ. ಹೀಗಾಗಿ ಈ ಚಪ್ಪಲಿಯನ್ನು ಮನೆಗೆ ತೆಗೆದುಕೊಂಡು ಹೋಗಲು ಅವಕಾಶವಿದೆ.
  • ಹೋಟೆಲ್ ರೂಮ್‌ನಲ್ಲಿ ಇಟ್ಟಿರುವ ಸಿಲ್ಡ್ ಕುಡಿಯುವ ನೀರಿನ ಬಾಟಲಿಗಳು ಸೇರಿವೆ.
  • ಟೀ ಬ್ಯಾಗ್, ಕಾಫಿ ಹಾಗೂ ಸಕ್ಕರೆ ಪ್ಯಾಕೆಟ್‌ಗಳು, ಬಿಸಿ ಚಾಕೊಲೇಟ್ ಪ್ಯಾಕೆಟ್‌ಗಳನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಬಹುದು.

ಇದನ್ನೂ ಓದಿ: ಹೋಟೆಲ್‌ಗಳಲ್ಲಿ ರೂಮ್ ನಂಬರ್ 13 ಇಲ್ಲದಿರುವುದರ ಹಿಂದಿದೆ ಈ ಕಾರಣ

  • ಹೋಟೆಲ್ ಲೋಗೋ ಇರುವ ನೋಟ್‌ಪ್ಯಾಡ್, ಪೆನ್, ಪೆನ್ಸಿಲ್ ಗಳನ್ನು ಆರಾಮಾಗಿ ತೆಗೆದುಕೊಂಡು ಹೋಗಲು ಅವಕಾಶವಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More