AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಿಯ ಜತೆ ಜಗಳ: ನಾನು ಸಾಯುತ್ತೇನೆ ಎಂದು ಕುಮಾರಧಾರ ನದಿಗೆ ಹಾರಿದ ಮಹಿಳೆ ಮೇಲೆ ಮೊಸಳೆ ದಾಳಿ; ಮುಂದೆ ನಡೆಯಿತು ದೊಡ್ಡ ಪವಾಡ

ವಿಧ ಬರಹದಲ್ಲಿ ನಾವು ಬದುಕಲೇ ಬೇಕು ಎಂದರೆ ಅದನ್ನು ಯಾರಿಂದಲ್ಲೂ ತಪ್ಪಿಸಲು ಸಾಧ್ಯವಿಲ್ಲ, ಸಾವನ್ನು ನಾವು ಅರಸಿದರು, ಆಯುಷ್ಯ ಮುಗಿಯುವರೇ ಯಾವುದೋ ಒಂದು ರೂಪದಲ್ಲಿ ಪಾರಾಗುತ್ತೇವೆ ಎಂಬುದಕ್ಕೆ ದಕ್ಷಿಣ ಕನ್ನಡದಲ್ಲಿ ನಡೆದ ಘಟನೆಯೇ ಸಾಕ್ಷಿ. ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಗೆ ಆತ್ಮಹತ್ಯೆ ಮಾಡಿಕೊಳ್ಳು ಹಾರಿದ ಉಡುಪಿಯ ರೇಖಾ ಎಂಬ ಮಹಿಳೆ ಮೊಸಳೆ ದಾಳಿಯಿಂದಲೂ ಪಾರಾಗಿ ಜೀವಂತವಾಗಿ ಬದುಕಿ ಬಂದಿದ್ದಾರೆ.

ಪತಿಯ ಜತೆ ಜಗಳ: ನಾನು ಸಾಯುತ್ತೇನೆ ಎಂದು ಕುಮಾರಧಾರ ನದಿಗೆ ಹಾರಿದ ಮಹಿಳೆ ಮೇಲೆ ಮೊಸಳೆ ದಾಳಿ; ಮುಂದೆ ನಡೆಯಿತು ದೊಡ್ಡ ಪವಾಡ
ಸಾಂದರ್ಭಿಕ ಚಿತ್ರ
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on:Nov 06, 2026 | 10:19 AM

Share

ಮಂಗಳೂರು, ನ.6: “ಸಾವು ತನಗೆ ಬೇಕೆನಿಸಿದಾಗ ಬರುವುದಿಲ್ಲ, ವಿಧಿ ಬರೆದ ಆಯುಷ್ಯ ಮುಗಿಯದೇ ಯಾರ ಜೀವವೂ ಹೋಗುವುದಿಲ್ಲ” ಎಂಬ ಮಾತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಾಕ್ಷಿಯೊಂದು ದೊರೆತಿದೆ. ಸಂಸಾರಿಕ ಕಲಹದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಭೋರ್ಗರೆಯುವ ಕುಮಾರಧಾರ ನದಿಗೆ ಹಾರಿದ ಮಹಿಳೆಯೊಬ್ಬರು, ನದಿಯಲ್ಲಿದ್ದ ಮೊಸಳೆಯ ದಾಳಿಯಿಂದಲೂ ಪವಾಡಸದೃಶವಾಗಿ ಪಾರಾಗಿ ಜೀವಂತವಾಗಿ ಬದುಕಿ ಬಂದ ಅಪರೂಪದ ಘಟನೆ ನಡೆದಿದೆ.

ಉಡುಪಿ ಮೂಲದ 38 ವರ್ಷದ ರೇಖಾ ಜೀವಾಪಾಯದಿಂದ ಪಾರಾದ ಅದೃಷ್ಟಶಾಲಿ ಮಹಿಳೆ. ಪೊಲೀಸರು ಮತ್ತು ಸ್ಥಳೀಯರ ಪ್ರಕಾರ, ಉಡುಪಿ ಮೂಲದ ರೇಖಾ ಅವರು ಬುಧವಾರ ತಮ್ಮ ಕುಟುಂಬದ ಸದಸ್ಯರೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ದೇವರ ದರ್ಶನಕ್ಕಾಗಿ ಆಗಮಿಸಿದ್ದರು. ಬುಧವಾರ ರಾತ್ರಿ ಪತಿಯೊಂದಿಗೆ ಕೌಟುಂಬಿಕ ವಿಚಾರಕ್ಕೆ ಮನಸ್ತಾಪ ಹಾಗೂ ಗಲಾಟೆ ಮಾಡಿಕೊಂಡಿದ್ದರು. ಇದರಿಂದ ತೀವ್ರ ಮನನೊಂದ ರೇಖಾ, ಸಾಯುವ ನಿರ್ಧಾರ ಮಾಡಿ, ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯ ಸೇತುವೆಯ ಮೇಲಿಂದ ರಾತ್ರಿ ವೇಳೆ ನದಿಗೆ ಧುಮುಕಿದ್ದಾರೆ.

ಸಾವು ಅರಸಿ ನೀರಿಗೆ ಹಾರಿದ ರೇಖಾಗೆ ಕಾಯುತ್ತಿದ್ದುದು ಮತ್ತೊಂದು ಭೀಕರ ಅಪಾಯ, ನದಿಯ ನೀರಿಗೆ ಧುಮುಕುತ್ತಿದ್ದಂತೆ ಅಲ್ಲೇ ಸಾಗುತ್ತಿದ್ದ ಮೊಸಳೆಯೊಂದು ಆಕೆಯ ಮೇಲೆ ಏಕಾಏಕಿ ದಾಳಿ ನಡೆಸಿದೆ. ಸಾವು ಕಣ್ಣಮುಂದೆ ಕಾಣುತ್ತಿದ್ದಂತೆ ಆಕೆ ರಕ್ಷಣೆಗಾಗಿ ಜೋರಾಗಿ ಚೀರಾಡಲು ಪ್ರಾರಂಭಿಸಿದ್ದಾರೆ. ನದಿಯ ಹತ್ತಿರದಲ್ಲಿದ್ದ ಖಾಸಗಿ ಲಾಡ್ಜ್‌ ಒಂದರ ಸಿಬ್ಬಂದಿಗೆ ರಾತ್ರಿಯ ವೇಳೆಯಲ್ಲಿ ಮಹಿಳೆಯ ಆಕ್ರಂದನ ಮತ್ತು ನೀರಿನಲ್ಲಿ ಒದ್ದಾಡುತ್ತಿದ್ದ ಶಬ್ದ ಕೇಳಿಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಸುಬ್ರಹ್ಮಣ್ಯ ಪೊಲೀಸರು ಮತ್ತು ಸ್ಥಳೀಯ ಈಜುಗಾರರು ಸ್ಥಳಕ್ಕೆ ದೌಡಾಯಿಸಿ, ಹಗ್ಗ ನೆರವಿನಿಂದ ನದಿಯಲ್ಲಿದ್ದ ಮೊಸಳೆಯನ್ನು ಹೆದರಿಸಿ ದೂರ ಅಟ್ಟಿದ್ದಾರೆ. ಬಳಿಕ ಕಾರ್ಯಾಚರಣೆ ನಡೆಸಿ ರೇಖಾ ಅವರನ್ನು ನೀರಿನಿಂದ ದಡಕ್ಕೆ ಎಳೆದು ತರುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ರೇಖಾ ಅವರಿಗೆ ಮೊಸಳೆಯ ದಾಳಿಯಿಂದ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಸುಬ್ರಹ್ಮಣ್ಯದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ.

ಇದನ್ನೂ ಓದಿ: ನ್ಯೂ ಇಯರ್​​​ಗೆ ಗೋವಾಕ್ಕೆ ಹೋಗುವವರಿಗೆ ಬಿಗ್ ಶಾಕ್: ತಿರುಪತಿ ಸೇರಿ ಡಿಸೆಂಬರ್​​ನಲ್ಲಿ 8 ಪ್ರಮುಖ ರೈಲುಗಳು ರದ್ದು

ಪ್ರಕರಣ ಕುರಿತು ಮಾಹಿತಿ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ಅರುಣ್ ಕೆ. ಅವರು, “ಮಹಿಳೆಯ ಮೇಲೆ ದಾಳಿ ಮಾಡಿದ್ದು ಬಹುಶಃ ಚಿಕ್ಕ ವಯಸ್ಸಿನ ಮೊಸಳೆ ಆಗಿರಬಹುದು. ಹೀಗಾಗಿ ಆಕೆಗೆ ಪ್ರಾಣಾಪಾಯ ಸಂಭವಿಸಿಲ್ಲ ಮತ್ತು ಪವಾಡಸದೃಶವಾಗಿ ಬದುಕಿ ಬಂದಿದ್ದಾರೆ” ಎಂದು ತಿಳಿಸಿದ್ದಾರೆ. ಚಿಕಿತ್ಸೆಯ ನಂತರ ಮಹಿಳೆಗೆ ಕೌನ್ಸೆಲಿಂಗ್ ನಡೆಸಿ, ಕುಟುಂಬಸ್ಥರೊಂದಿಗೆ ಕಳುಹಿಸಿಕೊಡಲಾಗಿದ್ದು, ಯಾವುದೇ ಪೊಲೀಸ್ ಪ್ರಕರಣ ದಾಖಲಾಗಿಲ್ಲ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:17 am, Fri, 6 November 26

Follow Us
ಪೃಥ್ವಿರಾಜ್​ ಬಿ.ಯು. ಮಂಗಳೂರು
ಪೃಥ್ವಿರಾಜ್​ ಬಿ.ಯು. ಮಂಗಳೂರು

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More