ದಿನ ಕಳೆದಂತೆ ಹೊಸ ಹೊಸ ಶೈಲಿಯ ಉಡುಗೆ ತೊಡುಗೆಗಳು ಟ್ರೆಂಡ್ ಆಗುತ್ತಲೇ ಇರುತ್ತವೆ. ಅದರಲ್ಲಿಯೂ ವಿವಿಧ ವಿನ್ಯಾಸದ ಸೀರೆಗಳು ಮಹಿಳೆಯರಿಗೆ ಇಷ್ಟವಾಗುತ್ತದೆ. ಈಗೀಗ ಹೊಸ ವಿನ್ಯಾಸದೊಂದಿಗೆ ಮಹಿಳೆಯರು ಸೀರೆಯುಟ್ಟು ಸ್ಟೈಲ್ ಆಗಿ ರೆಡಿಯಾಗುತ್ತಿದ್ದಾರೆ. ಹೊಸ ವಿನ್ಯಾಸದಲ್ಲಿ ಕಾಣಿಸುವಂತೆ ಮಗಳ ಕಾಸ್ಟ್ಲಿಯೆಸ್ಟ್ ಬೆಲ್ಟ್ ಧರಿಸಿದ್ದಾರೆ ಇಲ್ಲೋರ್ವರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೊ ಬಾರೀ ಸುದ್ದಿಯಲ್ಲಿದೆ. ಹೊಸ ರೀತಿಯ ಸ್ಟೈಲ್ ನೆಟ್ಟಿಗರ ಮನ ಸೆಳೆದಿದೆ.
ತಾಯಿ ಪಿಂಕ್ ಬಣ್ಣದ ಪ್ಲೇನ್ ಸೀರೆಯುಟ್ಟು ನಗುತ್ತಾ ನಿಂತಿದ್ದಾರೆ. ಅವರ ಮುಖದಲ್ಲಿನ ಸಂತೋಷವನ್ನು ನೋಡಬಹುದು. ತಮ್ಮ ಮಗಳು ಖರೀದಿಸಿದ ಬೆಲ್ಟ್ ಧರಿಸಿ ನಿಂತಿದ್ದಾರೆ. ಈ ಹೊಸ ತೆರೆನಾದ ವಿನ್ಯಾಸವು ನೆಟ್ಟಿಗರ ಮನ ಗೆದ್ದಿದೆ.
ಮಗಳು ಈ ಹಿಂದೆ ಖರೀದಿಸಿದ ಬೆಲ್ಟ್ ದುಡ್ಡು ನೋಡಿ ಮಹಿಳೆ ಶಾಕ್ ಆಗಿದ್ದರು. ಈ ಬೆಲ್ಟ್ಗೆ 35,000 ರೂಪಾಯಿ ಅಂದಾಕ್ಷಣ.. ದುಡ್ಡು ಮಾತ್ರ ಇಷ್ಟಿದೆ.. ನೋಡಲು ಒಳ್ಳೆ ಸ್ಕೂಲ್ ಬೆಲ್ಟ್ನಂತೆಯೇ ಇದೆ ಎಂದು ಹೇಳಿರುವ ದೃಶ್ಯ ಎಲ್ಲರ ಮುಖದಲ್ಲಿ ನಗು ತರಿಸಿತ್ತು. ಇದೀಗ ಅದೇ ಬೆಲ್ಟ್ ಧರಿಸಿ ಸ್ಟೈಲಿಶ್ ಆಗಿ ನಿಂತಿರುವ ಫೋಟೋ ನೆಟ್ಟಿಗರ ನ ಗೆದ್ದಿದೆ.
ಮೊದಲು ಬೆಲ್ಟ್ ನೋಡಿದ ಯುವತಿಯ ತಾಯಿ ಅದನ್ನು ಎಲ್ಲಾ ರೀತಿಯಲ್ಲೂ ಪರಿಶೀಲಿಸಿ ಇದು ಡೆಲ್ಲಿ ಪಬ್ಲಿಕ್ ಸ್ಕೂಲ್ ಮಕ್ಕಳ ಯೂನಿಫಾರ್ಮ್ ಬೆಲ್ಟ್ ಇದ್ದ ಹಾಗಿದೆ ಎಂದು ಒಂದೇ ಮಾತಿನಲ್ಲಿ ತೀರ್ಪು ಕೊಟ್ಟುಬಿಟ್ಟಿದ್ದರು. ನಂತರ ಅದರ ಮೌಲ್ಯ 35 ಸಾವಿರ ರೂಪಾಯಿ ಎಂದಾಗ ಶಾಕ್ಗೆ ಒಳಗಾದ ಯುವತಿಯ ಅಮ್ಮ, ಇದಕ್ಯಾಕೆ ಅಷ್ಟೊಂದು ದುಡ್ಡು? 150 ರೂಪಾಯಿಗೆ ಈ ಥರದ್ದು ಸಿಗುತ್ತಿತ್ತು ಎಂದು ಹೇಳಿ ಮಗಳನ್ನೇ ದಿಟ್ಟಿಸಿದ್ದರು..
ಆದರೆ, ಇದನ್ನೆಲ್ಲಾ ವಿಡಿಯೋ ಮಾಡಿಕೊಳ್ಳುತ್ತಿದ್ದ ಮಗಳು ಮಾತ್ರ ಅಮ್ಮನ ಮಾತು ಕೇಳಿ ಬಿದ್ದು ಬಿದ್ದು ನಕ್ಕಿದ್ದರು. ಆದರೆ ಮಕ್ಕಳು ಏನೇ ಕೊಂಡರೂ ಸಹ ಅಮ್ಮಂದಿರು ಖುಷಿ ಪಡುತ್ತಾರೆ. ಅವರೂ ಧರಿಸಿ ಮಕ್ಕಳ ಸಂತೋಷವನ್ನೇ ಬಯಸುತ್ತಾರೆ ಎಂಬುದು ಈ ಫೋಟೋ ಮೂಲಕ ವ್ಯಕ್ತವಾಗಿದೆ. ಬೆಲ್ಟ್ ದರ ಕೇಳಿದ ಅಮ್ಮ ಮೊದಲು ಸಿಡಿದೆದ್ದಿದ್ದರೂ ಸಹ ಇದೀಗ ಮಗಳ ಮುಖದಲ್ಲಿ ಸಂತೋಷ ಕಾಣಲು ಅವರೇ ಬೆಲ್ಟ್ ಧರಿಸಿ ಸ್ಟೈಲ್ ಆಗಿ ನಿಂತಿರುವ ಫೋಟೋ ಸಾಕ್ಷಿ.
ಇದನ್ನೂ ಓದಿ:
Published On - 11:40 am, Sun, 4 July 21