Video: ಸಲೂನ್ ಶಾಪ್‌ಗೆ ತೆರಳಿ ಮಸಾಜ್ ಮಾಡಿಸಿಕೊಂಡ ಕೋತಿ, ವೈರಲ್‌ ಆಯ್ತು ದೃಶ್ಯ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ದೃಶ್ಯಗಳು ಬಹುಬೇಗನೇ ನೆಟ್ಟಿಗರ ಗಮನ ಸೆಳೆಯುತ್ತವೆ. ಇದೀಗ ಕೋತಿಯೊಂದು ಸಲೂನ್ ಗ್ರಾಹಕರ ಸಾಲಿನಲ್ಲಿ ನಿಂತುಕೊಂಡಿದೆ. ಹೌದು, ಕೋತಿಯೊಂದು ಕುರ್ಚಿಯ ಮೇಲೆ ಆರಾಮವಾಗಿ ಕುಳಿತು ಮಸಾಜ್ ಮಾಡಿಸಿಕೊಳ್ಳುವ ವಿಡಿಯೋ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಸಲೂನ್ ಶಾಪ್‌ಗೆ ತೆರಳಿ ಮಸಾಜ್ ಮಾಡಿಸಿಕೊಂಡ ಕೋತಿ, ವೈರಲ್‌ ಆಯ್ತು ದೃಶ್ಯ
ವೈರಲ್‌ ವಿಡಿಯೋ
Image Credit source: Instagram

Updated on: Sep 21, 2026 | 6:47 PM

ಕೋತಿಗಳು (monkey) ಮಾಡುವ ಚೇಷ್ಟೆಗಳು ಅಷ್ಟಿಷ್ಟಲ್ಲ. ಸೋಶಿಯಲ್ ಮೀಡಿಯಾದಲ್ಲೋ ಇಂತಹ ದೃಶ್ಯಗಳು ವೈರಲ್ ಆಗುತ್ತಿರುತ್ತವೆ. ಇದೀಗ ಕೋತಿಯೊಂದು ಸಲೂನ್ ಶಾಪ್‌ಗೆ ಗ್ರಾಹಕರಂತೆ ಬಂದಿದೆ. ಕ್ಷೌರಿಕನು ಕುರ್ಚಿ ಮೇಲೆ ಕುಳಿತ ಕೋತಿಯ ತಲೆಗೆ ಮೃದುವಾಗಿ ಮಸಾಜ್ ಮಾಡಿದ್ದಾನೆ. ಈ ದೃಶ್ಯವು ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.

ಗ್ರಾಹಕರಂತೆ ಸಲೂನ್ ಶಾಪ್‌ಗೆ ಬಂದ ಕೋತಿ

ದಿವ್ಯಾ ಕುಮಾರಿ (Divya Kumari) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಇಲ್ಲಿ ಕೋತಿಯೊಂದು ಸಲೂನ್ ಶಾಪ್‌  ಒಳಗೆ ಹೋಗಿ ಕುರ್ಚಿ ಮೇಲೆ ಕುಳಿತುಕೊಳ್ಳುತ್ತದೆ. ಕ್ಷೌರಿಕನು ಕೋತಿಯ ತಲೆಗೆ ನಿಧಾನವಾಗಿ ಮಸಾಜ್ ಮಾಡುತ್ತಿದ್ದು, ಈ ಮಂಗ ಮಾತ್ರ ಅಲುಗಾಡದೇ ಸುಮ್ಮನೆ ಮಲಗಿಕೊಂಡಿರುವುದನ್ನು ಕಾಣಬಹುದು. ಈ ಸಲೂನ್ ಶಾಪ್‌ಗೆ ಬಂದ ಗ್ರಾಹಕರು ಈ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಗೇಮ್ ಆಡುತ್ತಿದ್ದ ಯುವಕನ ಮೊಬೈಲ್ ಸ್ಕ್ರೀನ್‌ ನೋಡುತ್ತಾ ಕುಳಿತ ಕೋತಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ವಿಶೇಷ ಅತಿಥಿಗೆ ಸ್ಪೆಷಲ್ ಸರ್ವಿಸ್ ಎಂದಿದ್ದಾರೆ. ಇನ್ನೊಬ್ಬರು, ಈ ದಿನದ ಸುಂದರ ವಿಡಿಯೋ ಎಂದು ಹೇಳಿದ್ದಾರೆ. ಮತ್ತೊಬ್ಬರು, ಹನುಮಂತನ ಸೇವೆ ಮಾಡುವ ಸೌಭಾಗ್ಯ ನಿಮ್ಗೆ ಸಿಕ್ಕಿದೆ ಎಂದು ಕಾಮೆಂಟ್ ನಲ್ಲಿ ಬರೆದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 6:45 pm, Mon, 21 September 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us