
ಮುಂಬೈ: ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಬಿಸಿ ಶಾಖ ತಡೆಯಲಾದರೆ ಕೋತಿಗಳ ಗುಂಪೊಂದು ರೆಸಾರ್ಟ್ವೊಂದರ ಕಡೆ ಬಂದಿದ್ದು, ಅಲ್ಲಿನ ಸ್ವಿಮಿಂಗ್ ಫೂಲ್ನಲ್ಲಿ ಸಖತ್ ಆಗಿ ಸ್ವಿಮಿಂಗ್ ಮಾಡಿದೆ. ಸದ್ಯ ಕೋತಿಗಳ ಗುಂಪು ಈಜುಕೊಳದಲ್ಲಿ ಬೇಸಿಗೆಯನ್ನು ಆನಂದಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ದೃಶ್ಯ ಕಂಡು ಬಂದಿದ್ದು ಮುಂಬೈನ ಬೊರಿವಲಿ ಪ್ರದೇಶದ ರೆಸಾರ್ಟ್ವೊಂದರಲ್ಲಿ. ಸ್ವಿಮಿಂಗ್ ಫೂಲ್ನಲ್ಲಿ ಆರರಿಂದ ಏಳು ಕೋತಿಗಳು ಆಟವಾಡುತ್ತಾ ಸ್ವಿಮಿಂಗ್ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಎರಡು ಪೂಲ್ಗಳಲ್ಲಿ ಕೋತಿಗಳೆಲ್ಲಾ ಒಟ್ಟಾಗಿ ಸಂತೋಷದಿಂದ ಈಜುತ್ತಾ ಆಟವಾಡುತ್ತಿರುವುದನ್ನು ಕಾಣಬಹುದು. @MumbaiMarch ಎಂಬ ಟ್ವಿಟರ್ ಖಾತೆಯಲ್ಲಿ ಮೇ 01ರಂದು ವಿಡಿಯೋ ಹಂಚಿಕೊಳ್ಳಲಾಗಿದೆ. ಸದ್ಯ ವಿಡಿಯೋ ಹಂಚಿಕೊಂಡ ಕೇವಲ ಒಂದೇ ದಿನದಲ್ಲಿ 14 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.
ಇದನ್ನೂ ಓದಿ: ಬಿರು ಬೇಸಿಗೆಯಿಂದ ಪಾರಾಗಲು ಆಟೋ ಚಾಲಕನ ಮಸ್ತ್ ಐಡಿಯಾ; ವೈರಲ್ ಆಯ್ತು ವಿಡಿಯೋ
ವಿಡಿಯೋ ಎಲ್ಲಡೆ ವೈರಲ್ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಬಿಸಿಲಿನ ಬೇಗೆ ತಡೆಯಲಾರದೇ ರೆಸಾರ್ಟ್ ಒಳಗೆ ಬಂದಿದೆ. ಅದಿಕ್ಕೆ ಏನೂ ತೊಂದರೆ ಕೊಡದಿರಿ. ಸಂತೋಷದಿಂದ ಆಟವಾಡಲಿ” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:40 pm, Thu, 2 May 24