AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ವಿಟ್ಟರ್ ಹೊಸ ಮುಂದುವರಿದ ಸರ್ಚ್ ಫಿಲ್ಟರ್ಸ್ ಬಳಕೆದಾರರಿಗೆ ಕೊವಿಡ್ ಮೂಲಗಳನ್ನು ಶೀಘ್ರವಾಗಿ ತಲುಪಲು ನೆರವಾಗುತ್ತದೆ

ಟ್ವಿಟ್ಟರ್​ ಹೊಸದಾಗಿ ವಿನ್ಯಾಸಗೊಳಿಸಿರುವ ಸರ್ಚ್ ಜನರಿಗೆ ಬೇಕಿರುವ ವೈದ್ಯಕೀಯ ಅಥವಾ ಅದಕ್ಕೆ ಸಂಬಂಧಿಸಿದ ನೆರವಿನ ಟ್ವೀಟ್​ಗಳನ್ನು ಫಿಲ್ಟರ್ ಮಾಡಲು ನೆರವಾಗುತ್ತದೆ. ದೇಶದೆಲ್ಲೆಡೆ ಜನರು ತಾಜಾ ಮಾಹಿತಿಗಾಗಿ ಮತ್ತು ವೈದ್ಯಕೀಯ ಮೂಲಗಳ ಬಗ್ಗೆ ಮಾಹಿತಿ ಪಡೆಯಲು ಟ್ವಿಟ್ಟರ್​ ಅನ್ನು ಉಪಯೋಗಿಸುತ್ತಿದ್ದಾರೆ.

ಟ್ವಿಟ್ಟರ್ ಹೊಸ ಮುಂದುವರಿದ ಸರ್ಚ್ ಫಿಲ್ಟರ್ಸ್ ಬಳಕೆದಾರರಿಗೆ ಕೊವಿಡ್ ಮೂಲಗಳನ್ನು ಶೀಘ್ರವಾಗಿ ತಲುಪಲು ನೆರವಾಗುತ್ತದೆ
ಟ್ವಿಟ್ಟರ್ ವೇದಿಕೆ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Apr 24, 2021 | 12:01 AM

ಕೊವಿಡ್-19 ಸಾಂಕ್ರಾಮಿಕ ಪಿಡುಗು ಜನರನ್ನು ಅಲ್ಲೋಲ ಕಲ್ಲೋಲಗೊಳಿಸುತ್ತಿರುವ ಪ್ರಸ್ತುತ ಸ್ಥಿತಿಯಲ್ಲಿ ವೈದ್ಯಕೀಯ ನೆರವು ಪಡೆಯಲು ಪರದಾಡುತ್ತಿರುವ ಜನರಿಗೆ ನೆರವಾಗಲು ಟ್ಚಿಟ್ಟರ್​ ಇಂಡಿಯಾ ಕೆಲವು ಸುಧಾರಿತ ಮತ್ತು ಮುಂದುವರಿದ ಸರ್ಚ್ ಫೀಚರ್​ಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಒದಗಿಸುತ್ತಿದೆ. ಭಾರತದ ಹಲವಾರು ರಾಜ್ಯಗಳಲ್ಲಿ ಮಹಾಮಾರಿಯ ಎರಡನೇ ಅಲೆ ದಿನೇದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ನೆರವಿಗಾಗಿ ಟ್ವಿಟ್ಟರ್, ಇನ್​ಸ್ಟಾಗ್ರಾಮ್​ನಂಥ ವೇದಿಕೆಗಳ ಮೊರೆಹೊಕ್ಕು, ಆಸ್ಪತ್ರೆಗಳಲ್ಲಿ ಬೆಡ್​ಗಳ ಲಭ್ಯತೆ, ಆಮ್ಲಜನಕ ಸಿಲಿಂಡರ್​ಗಳು, ರೆಮಿಡೆಸಿವಿರ್​ನಂಥ ಔಷಧಗಳ ಬಗ್ಗೆ ವಿಚಾರಿಸುತ್ತಿದ್ದಾರೆ.

ಟ್ವಿಟ್ಟರ್​ ಹೊಸದಾಗಿ ವಿನ್ಯಾಸಗೊಳಿಸಿರುವ ಸರ್ಚ್ ಜನರಿಗೆ ಬೇಕಿರುವ ವೈದ್ಯಕೀಯ ಅಥವಾ ಅದಕ್ಕೆ ಸಂಬಂಧಿಸಿದ ನೆರವಿನ ಟ್ವೀಟ್​ಗಳನ್ನು ಫಿಲ್ಟರ್ ಮಾಡಲು ನೆರವಾಗುತ್ತದೆ. ದೇಶದೆಲ್ಲೆಡೆ ಜನರು ತಾಜಾ ಮಾಹಿತಿಗಾಗಿ ಮತ್ತು ವೈದ್ಯಕೀಯ ಮೂಲಗಳ ಬಗ್ಗೆ ಮಾಹಿತಿ ಪಡೆಯಲು ಟ್ವಿಟ್ಟರ್​ ಅನ್ನು ಉಪಯೋಗಿಸುತ್ತಿದ್ದಾರೆ. ‘ಜನರ ಈ ಆಂದೋಲನ ಅನಾವರಣಗೊಳ್ಳುತ್ತಿರುವ ಹಾಗೆಯೇ, ನಿಮಗೆ ಬೇಕಿರುವ ಮಾಹಿತಿಯನ್ನು ಕ್ಷಿಪ್ರವಾಗಿ ನೀಡುವ ಕೆಲ ಫೀಚರ್​ಗಳನ್ನು ವಿನ್ಯಾಸಗೊಳಿಸಿದ್ದೇವೆ ಎನ್ನುವುದನ್ನು ನಿಮ್ಮ ಗಮನಕ್ಕೆ ತರಲು ನಾವು ಬಯಸುತ್ತೇವೆ,’ ಎಂದು ಟ್ವಿಟ್ಟರ್ ಇಂಡಿಯಾ ಹೇಳಿದೆ.

ಟ್ವಿಟ್ಟರ್​ನ ಹೊಸ ಫೀಚರ್​ಗಳು ಬಳಕೆದಾರರಿಗೆ ತಾವಿರುವ ಸ್ಥಳಕ್ಕೆ ಹತ್ತಿರದಲ್ಲಿರುವ ಜನರ ಟ್ವೀಟ್​ಗಳನ್ನು ನೋಡಲು ನೆರವಾಗಿ ಸಕಾಲಕ್ಕೆ ನೆರವು ಸಿಗುವ ಸಂದರ್ಭವನ್ನು ಸೃಷ್ಟಿಸುತ್ತವೆ. ಸರ್ಚ್ ಬಾರ್ ಬಲಭಾಗಕ್ಕಿರುವ ಟಾಗಲ್​ ಗುಂಡಿಯು ‘ನೀಯರ್ ಯೂ ’ ಲೊಕೇಶನ್ ಅಡಿಯಲ್ಲಿ ತೆರೆದುಕೊಳ್ಳಲು ನೆರವಾಗುತ್ತದೆ. ಈ ಕೆಲಸಕ್ಕಾಗಿ ಬಳಕೆದಾರರು ತಮ್ಮ ಲೊಕೇಶನ್ ಆನ್​ನಲ್ಲೇ ಇಡಬೇಕಿರುವುದು ಆವಶ್ಯಕವಾಗಿದೆ.

ತೀರಾ ಇತ್ತೀಚಿನ ಅಂದರೆ ಹೊಸ ಟ್ವೀಟ್​ಗಳನ್ನು ತಮ್ಮ ಟೈಮ್​ಲೈನ್​ನ ಮೇಲ್ಭಾಗದಲ್ಲೇ ಇರುವಂತಾಗಲು ಟ್ವಿಟ್ಟರ್​ ಬಳಕೆದಾರರು ತಮ್ಮ ಹೋಮ್​ ಟೈಮ್​ಲೈನ್ ಬಲಬದಿಯ ಮೇಲ್ಭಾಗದಲ್ಲಿರುವ ಸ್ಪಾರ್ಕಲ್​ ಗುಂಡಿಯನ್ನು ಟ್ಯಾಪ್​ ಮಾಡಬೇಕು.

ಟ್ವಿಟ್ಟರ್ ಜಾಲತಾಣದ ಹೊಸ ಫೀಚರ್​ಗಳು ಬಳಕೆದಾರರಿಗೆ ಸಂಬಂಧಪಟ್ಟ ಮಾಹಿತಿ ಬೇಗ ಲಭ್ಯವಾಗಲು ಸಹಾಯ ಮಾಡುತ್ತಿದ್ದಾಗ್ಯೂ, ಬಳಕೆದಾರರು ಒಂದು ನಿರ್ದಿಷ್ಟ ಟ್ವೀಟ್​ನಲ್ಲಿ ಉಲ್ಲೇಖಿಸಿರುವ ಮಾಹಿತಿ ಬರಿದಾದಾಗ ಅದನ್ನು ಗುರುತಿಸಲು ನೆರವಾಗುವ ಹಾಗೆ ಮಾರ್ಕಿಂಗ್ ಫೀಚರ್ ಅನ್ನು ಒದಗಿಸುವಂತೆ ಕೇಳುತ್ತಿದ್ದಾರೆ. ಇದು ಬಳಕೆದಾರರಿಗೆ ಅದಾಗಲೇ ನಶಿಸಿರುವ ಇಲ್ಲವೇ ಮಹತ್ವ ಕಳೆದುಕೊಂಡಿರುವ ಟ್ವೀಟ್​ಗಳನ್ನು ಮತ್ತೊಮ್ಮೆ ಸಂಪರ್ಕಿಸದಂಥ ಸನ್ನಿವೇಶ ಸೃಷ್ಟಿಸಿ ಸಮಯ ಉಳಿಸುತ್ತದೆ. ಟ್ವಿಟ್ಟರ್ ಪ್ಲಾಟ್​ಫಾರ್ಮ್ ಈ ಸಲಹೆ ಅಥವಾ ಬೇಡಿಕೆಯನ್ನು ಮನ್ನಿಸುವುದೇ ಎನ್ನುವುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ: ಗೂಗಲ್ ಮ್ಯಾಪ್ಸ್, ಗೂಗಲ್ ಸರ್ಚ್​ನಲ್ಲಿ ಕೋವಿಡ್- 19 ಲಸಿಕೆ ಕೇಂದ್ರಗಳ ಬಗ್ಗೆ ಸಂಪೂರ್ಣ ಮಾಹಿತಿ

ಇದನ್ನೂ ಓದಿ: Health Tips During Covid Pandemic: ಕೊರೊನಾ ಕಾಲದಲ್ಲಿ ಆರೋಗ್ಯ ರಕ್ಷಣೆಗೆ 9 ಸೂತ್ರಗಳು