ಈ ಟೊಮೆಟೊದ ಬೆಲೆ 1,300 ರೂ., ಇದು ಯಾಕಿಷ್ಟು ದುಬಾರಿ, ಇಲ್ಲಿದೆ ನೋಡಿ
ಈ ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ವಸ್ತುಗಳ ಬೆಲೆಯ ಬಗ್ಗೆ ಪೋಸ್ಟ್ಗಳು ವೈರಲ್ ಆಗುತ್ತಿದೆ. ಇದನ್ನು ನಾವು ಊಹಿಸಲು ಸಾಧ್ಯವಿಲ್ಲ ಅಷ್ಟೊಂದು ಬೆಲೆ ಇರುತ್ತದೆ. ಅದರೂ ಅದಕ್ಕೊಂದು ಕಾರಣ ಹಾಗೂ ವಿಶೇಷತೆಗಳು ಇರುತ್ತದೆ. ಇಂತಹದೇ ಒಂದರ ಬಗ್ಗೆ ಒಬ್ಬ ಯೂಟ್ಯೂಬ್ ವ್ಲಾಗರ್ ಟೊಮೆಟೊ ದರ ಬಗ್ಗೆ ಅಚ್ಚರಿಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾನೆ. ಈ ಟೊಮೆಟೊ ಬಲೆ ಕೇಳಿದ್ರೆ ನೀವು ಶಾಕ್ ಆಗುವುದು ಖಂಡಿತ, ಅಷ್ಟಕ್ಕೂ ಈ ಟೊಮೆಟೊ ಬೆಲೆ ಯಾಕಿಷ್ಟು ದುಬಾರಿ ಎಂಬ ಬಗ್ಗೆಯೂ ವಿವರಿಸಿದ್ದಾರೆ.

ಈ ಟೊಮೆಟೊ (tomato) ಬೆಲೆ ಅಬ್ಬಾಬ್ಬ ಅಂದ್ರೆ ಎಷ್ಟಿರಬಹುದು. ಕೆಜಿಗೆ 20 ಅಥವಾ 50 ಇರಬಹುದು ಆದರೆ ಇಲ್ಲೊಂದು ಫೋಸ್ಟ್ ಭಾರಿ ವೈರಲ್ ಆಗಿದೆ. ಒಂದು ಟೊಮೆಟೊ ಬೆಲೆಯನ್ನು ಕೇಳಿದ್ರೆ ಖಂಡಿತ ನೀವು ಶಾಕ್ ಆಗುತ್ತೀರಾ! ಈ ಟೊಮೆಟೊದ ಬೆಲೆ 1,300 ರೂ. ಇಷ್ಟು ಈ ಟೊಮೆಟೊ ಬೆಲೆ ಯಾಕಿಷ್ಟು ದುಬಾರಿ ಎಂಬ ಪ್ರಶ್ನೆ ಮೂಡಿರಬಹುದು ಹಾಗೂ ಇದೆ ವಿಶೇಷತೆಗಳೇನು? ಎಂಬು ಕುತೂಹಲ ಮೂಡಿರಬಹುದು. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಒಬ್ಬ ಯೂಟ್ಯೂಬ್ ವ್ಲಾಗರ್ ಸೂಪರ್ ಮಾರುಕಟ್ಟೆಯಲ್ಲಿ ಈ ಟೊಮೆಟೊವನ್ನು ಖರೀದಿ ಮಾಡಿದ್ದಾರೆ. ಈ ಟೊಮೆಟೊದ ಚೀಲದಲ್ಲಿ ಒಂದು ಸಣ್ಣ ಕಾಗದವನ್ನು ಇರಿಸಲಾಗಿತ್ತು. ಅದರಲ್ಲಿ ಈ ಟೊಮೆಟೊ ವಿಶೇಷತೆಗಳನ್ನು ಹೇಳಿದ್ದಾರೆ. ಹಾಗೂ ಈ ಟೊಮೆಟೊವನ್ನು ಒಬ್ಬ ರೈತ ಪಟ್ಟ ಕಷ್ಟವನ್ನು ಕೂಡ ತಿಳಿಸಿದ್ದಾರೆ. ಅಷ್ಟು ಈ ಟೊಮೆಟೊ ವಿಶೇಷತೆಗಳೇನು? ಎಂಬುದು ಇಲ್ಲಿದೆ ನೋಡಿ.
ಹೈಪರ್-ಆರ್ಗಾನಿಕ್ ಎಂಬ ಸಣ್ಣ ಬ್ಯಾಚ್ ಟೊಮೆಟೊವನ್ನು ರೈತರು ಬೆಳೆದಿದ್ದಾರೆ. ಇದನ್ನು ಸೌಮ್ಯವಾದ ಬೆಳೆ ಎಂದು ಹೇಳುತ್ತಾರೆ. ಇದನ್ನು ಬೆಳೆಯುವುದು ಕೂಡ ಒಂದು ಸೂಕ್ಷ್ಮತೆಯಲ್ಲಿ, ಮಳೆಗಾಲದಲ್ಲಿ ಇದನ್ನು ಬಿತ್ತನೆ ಮಾಡುತ್ತಾರೆ. ಇದಕ್ಕೆ ನೈಸರ್ಗಿಕವಾದ ನೀರು ಬೇಕು. ಅದಕ್ಕಾಗಿ ಇದನ್ನು ಮಳೆ ನೀರಿಗೆ ಬೆಳೆಯುತ್ತಾರೆ. ಜತೆಗೆ ಇದನ್ನು ಬಿತ್ತನೆ ಮಾಡು ನೆಲೆ ಕೂಡ ಅಷ್ಟೇ ಪರಿಶುದ್ಧವಾಗಿರುಬೇಕು ಆ ಬೆಳೆಗೆ ನೋವು ಆಗದಂತೆ 55 ಡೆಸಿಬಲ್‌ಗಳಿಗಿಂತ ಕಡಿಮೆ ಶಬ್ದ ಮಟ್ಟವನ್ನು ಕಾಯ್ದುಕೊಳ್ಳುವುದು, ಅಂದರೆ ಟ್ರಾಕ್ಟರ್‌ಗಳಲ್ಲಿ ಇದನ್ನು ಬಿತ್ತನೆ ಮಾಡುವಂತೆ ಇಲ್ಲ. ಇದನ್ನು ಒಂದು ಬಿದಿರಿನ ಉಪಕರಣಗಳನ್ನು ಬಳಸಿ ಮಾಡುವುದು. ಇದನ್ನು ಪ್ಯಾಕ್ ಮಾಡುವಾಗ ಕೂಡ ಅಷ್ಟೇ ತುಂಬಾ ಕಾಳಜಿಯಿಂದ ಮಾಡಬೇಕು. ಸ್ವಲ್ಪ ವ್ಯತ್ಯಾಸವಾದ ಇದು ಕೆಟೋಗುತ್ತದೆ. ಅದಕ್ಕೆ ಇದನ್ನು ಮೆನುಕಾ ಜೇನುಮೇಣದ ಕ್ರಯೋನ್‌ಗಳೊಂದಿಗೆ ಸೆಣಬಿನ ಚೀಲದಲ್ಲಿ ಹಾಕಿ ಪ್ಯಾಕ್ ಮಾಡಿ ಮಾರುಕಟ್ಟೆಗಳಿಗೆ ಕಳುಹಿಸಲಾಗುವುದು. ಇನ್ನು ಇದನ್ನು ಎಲ್ಲರಿಗೂ ಕಾಣುವಂತೆ ಪ್ಯಾಕ್ ಮಾಡಲಾಗುತ್ತದೆ.
ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ನಲ್ಲಿ ಹಾಯ್ಯಿಂದ ಪ್ರಾರಂಭವಾದ ಪ್ರೀತಿ, ಅಮೆರಿಕದ ಹುಡುಗಿಯನ್ನು ವರಿಸಿದ ಆಂಧ್ರ ಹುಡುಗ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಯೂಟ್ಯೂಬ್ ವ್ಲಾಗರ್ ಈ ಫೋಟೋ ಹಾಗೂ ಟೊಮೆಟೊ ದರವನ್ನು ನೋಡಿ ಅಚ್ಚರಿಗೊಂಡಿದ್ದಾನೆ, ಯಾಕೆಂದರೆ ಇದರ ಬೆಲೆ ಅಷ್ಟು ದುಬಾರಿಯಾಗಿದೆ. ಇದನ್ನು ಆ ಯೂಟ್ಯೂಬ್ ವ್ಲಾಗರ್ ಖರೀದಿ ಮಾಡಿ ಕತ್ತರಿಸಿ, ರುಚಿ ನೋಡಿದ್ದಾನೆ. ಆ ಹೇಳಿದೆ ಮಾತು ಹೀಗಿತ್ತು ನೋಡಿ, ನಾನು 1,300 ಕೊಟ್ಟದಕ್ಕೆ ನನಗೆ ಬೇಜಾರಿಲ್ಲ, ಮತ್ತೆ ಅದಕ್ಕೆ ಸಾವಿರ ನೀಡುತ್ತೇನೆ ಎಂದು ಹೇಳಿದ್ದಾರೆ. ಇನ್ನು ಈ ವಿಡಿಯೋವನ್ನು ನೋಡಿ ಅನೇಕರು ಕಮೆಂಟ್ ಮಾಡಿದ್ದಾರೆ. ನಾನು ಈ ಟೊಮೆಟೊ ಕೃಷಿಯನ್ನು ಮಾಡುತ್ತೇನೆ, ಒಳ್ಳೆಯ ಹಣ ಗಳಿಸಬಹುದು ಎಂದು ಹೇಳಿದ್ದಾರೆ. ಇನ್ನೊಬ್ಬ ಇದನ್ನು ಎಲ್ಲಿ ಬೆಳೆಯುತ್ತಾರೆ. ಇದರ ಬಗ್ಗೆ ಮಾಹಿತಿ ನೀಡಿ ಎಂದು ಹೇಳಿದ್ದಾರೆ. ನಮಗಿಂತ ಈ ಟೊಮೆಟೊ ಬೆಳೆಯುವ ರೈತ ಹೆಚ್ಚು ಸಂಪಾದಿಸುತ್ತಾನೆ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ