ಮುಖದಲ್ಲಿ ಕೂದಲು ಬೆಳೆದಿದೆ ಎಂದು ಅಪಹಾಸ್ಯ ಆದರೆ ಈಕೆ ಬೋರ್ಡ್ ಪರೀಕ್ಷೆಯಲ್ಲಿ ಟಾಪರ್​

ಇದೀಗ ಈ ಬಾಲಕಿಗೆ ಅಪಹಾಸ್ಯ ಮಾಡುತ್ತಿರುವ ಟ್ರೋಲ್​ಗಳು ಹೆಚ್ಚಾಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಬಾಲಕಿಯ ಬೆಂಬಲಕ್ಕೆ ನಿಂತಿದ್ದಾರೆ. "ಯುಪಿ ಬೋರ್ಡ್ ಹೈಸ್ಕೂಲ್ ಪರೀಕ್ಷೆಯಲ್ಲಿ ಟಾಪರ್​ ಆದ ಪ್ರಾಚಿ ನಿಗಮ್ ಅವರನ್ನು ನಾನು ಅಭಿನಂದಿಸುತ್ತೇನೆ . ಜನರು ಅವಳನ್ನು ಟ್ರೋಲ್ ಮಾಡುತ್ತಿದ್ದಾರೆ ಎಂದು ತಿಳಿದು ಬೇಸರವಾಗಿದೆ " ಎಂದು ಆರೋಗ್ಯ ತರಬೇತುದಾರ ಪ್ರಿಯಾಂಕಾ ಮಾತನ್ಹೆಲಿಯಾ ಬರೆದಿದ್ದಾರೆ.

ಮುಖದಲ್ಲಿ ಕೂದಲು ಬೆಳೆದಿದೆ ಎಂದು ಅಪಹಾಸ್ಯ ಆದರೆ ಈಕೆ ಬೋರ್ಡ್ ಪರೀಕ್ಷೆಯಲ್ಲಿ ಟಾಪರ್​
ಪ್ರಾಚಿ ನಿಗಮ್

Updated on: Apr 22, 2024 | 5:14 PM

ಉತ್ತರ ಪ್ರದೇಶದ 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಶೇಕಡಾ 98.5 ರಷ್ಟು ಅಂಕ ಗಳಿಸಿದ್ದ ಪ್ರಾಚಿ ನಿಗಮ್ ಎಂಬ ಬಾಲಕಿ ಫೋಟೋ ಎಲ್ಲೆಡೆ ವೈರಲ್​​ ಆಗಿತ್ತು. ಆದರೆ ಆಕೆಯ ಫೋಟೋ ಸಾಕಷ್ಟು ಟ್ರೋಲ್​ಗಳಿಗೆ ಕಾರಣವಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದರೂ ಕೂಡ ಈ ಬಾಲಕಿ ತನ್ನ ನೋಟದಿಂದಲೇ ಸಾಕಷ್ಟು ಟೀಕೆಗೆ ಕಾರಣಳಾಗಿದ್ದಾಳೆ. ಇದೀಗ ಈ ಬಾಲಕಿಗೆ ಅಪಹಾಸ್ಯ ಮಾಡುತ್ತಿರುವ ಟ್ರೋಲ್​ಗಳು ಹೆಚ್ಚಾಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಬಾಲಕಿಯ ಬೆಂಬಲಕ್ಕೆ ನಿಂತಿದ್ದಾರೆ.

ಪ್ರಾಚಿ ನಿಗಮ್ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS) ನಿಂದ ಬಳಲುತ್ತಿದ್ದು, ಆಕೆಯ ಮುಖದಲ್ಲಿ ಅತಿಯಾಗಿ ಕೂದಲು ಬೆಳದುಕೊಂಡಿದೆ. ಅಂಡಾಶಯಗಳು ಅಸಹಜ ಪ್ರಮಾಣದ ಆಂಡ್ರೋಜೆನ್‌ಗಳು, ಪುರುಷ ಲೈಂಗಿಕ ಹಾರ್ಮೋನುಗಳನ್ನು ಉತ್ಪಾದಿಸುವ ಸ್ಥಿತಿಯನ್ನು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಈ ಸಮಸ್ಯೆ ಹದಿಹರೆಯವರಲ್ಲಿ ಕಂಡು ಬರುತ್ತಿದ್ದು, ಇದರಿಂದಾಗಿ ಪುರುಷರಂತೆ ಮಹಿಳೆಯರ ಮುಖದಲ್ಲೂ ಕೂದಲು ಬೆಳೆಯುತ್ತದೆ.

ಇದನ್ನೂ ಓದಿ: ಹುಬ್ಬು ಸುಂದರವಾಗಿಸಲು ಬ್ಯೂಟಿ ಪಾರ್ಲರ್​​ ಹೋದ ಮಹಿಳೆಯ ಮುಖ ಹೇಗಾಯಿತು ನೋಡಿ

ಇದೀಗ ಈ ಬಾಲಕಿಗೆ ಅಪಹಾಸ್ಯ ಮಾಡುತ್ತಿರುವ ಟ್ರೋಲ್​ಗಳು ಹೆಚ್ಚಾಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಬಾಲಕಿಯ ಬೆಂಬಲಕ್ಕೆ ನಿಂತಿದ್ದಾರೆ. “ಯುಪಿ ಬೋರ್ಡ್ ಹೈಸ್ಕೂಲ್ ಪರೀಕ್ಷೆಗಳಲ್ಲಿ ಅಗ್ರಸ್ಥಾನ ಗಳಿಸಿದ್ದಕ್ಕಾಗಿ ಪ್ರಾಚಿ ನಿಗಮ್ ಅವರನ್ನು ನಾನು ಅಭಿನಂದಿಸುತ್ತೇನೆ . ಜನರು ಅವಳನ್ನು ಟ್ರೋಲ್ ಮಾಡುತ್ತಿದ್ದಾರೆ ಎಂದು ತಿಳಿದು ಬೇಸರವಾಗಿದೆ.PCOS ದೈಹಿಕವಾಗಿ ಮಾತ್ರವಲ್ಲದೆ ಸಾಮಾಜಿಕವಾಗಿ ಮತ್ತು ಮಾನಸಿಕವಾಗಿ ದುರ್ಬಲ ಸ್ಥಿತಿಯಾಗಿದೆ. ಅವಳ ಹೊರತಾಗಿಯೂ ಅವಳು ಈ ಯಶಸ್ಸನ್ನು ಸಾಧಿಸಿದ್ದಕ್ಕಾಗಿ ತುಂಬಾ ಹೆಮ್ಮೆಪಡುತ್ತೇನೆ” ಎಂದು ಆರೋಗ್ಯ ತರಬೇತುದಾರ ಪ್ರಿಯಾಂಕಾ ಮಾತನ್ಹೆಲಿಯಾ (@SavvyPriya) ಬರೆದಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:59 pm, Mon, 22 April 24

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us