Viral: ಸಂದರ್ಶನದಲ್ಲಿ ಪ್ರಾಮಾಣಿಕ ಉತ್ತರ ನೀಡಿ ಸಂದರ್ಶಕನ ಮನಸ್ಸು ಗೆದ್ದ ಯುವಕ

ಉದ್ಯೋಗ ಅತ್ಯವಶ್ಯಕ. ಕಡಿಮೆ ಸಂಬಳವಿದ್ರೂ ತೊಂದರೆಯಿಲ್ಲ, ಕೆಲಸ ಇದ್ದರೆ ಸಾಕು ಎನ್ನುವವರೇ ಹೆಚ್ಚು. ಆದರೆ, ಸಂದರ್ಶನದ ವೇಳೆ ಯುವಕನೊಬ್ಬ ನೀಡಿದ ಉತ್ತರ ಸಂದರ್ಶಕರ ಮನಸ್ಸು ಗೆದ್ದಿದೆ. ನಮ್ಮ ಕಂಪನಿಯಲ್ಲಿ ನೀವು ಏಕೆ ಕೆಲಸ ಮಾಡಲು ಬಯಸುತ್ತೀರಿ ಎಂಬ ಸಾಮಾನ್ಯ ಪ್ರಶ್ನೆಗೆ ಅಭ್ಯರ್ಥಿಯೊಬ್ಬ ಪ್ರಾಮಾಣಿಕ ಉತ್ತರ ನೀಡಿದ್ದಾನೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಸಂದರ್ಶನದಲ್ಲಿ ಪ್ರಾಮಾಣಿಕ ಉತ್ತರ ನೀಡಿ ಸಂದರ್ಶಕನ ಮನಸ್ಸು ಗೆದ್ದ ಯುವಕ
ಸಾಂದರ್ಭಿಕ ಚಿತ್ರ
Image Credit source: DrRave/E+/Getty Images

Updated on: Nov 03, 2026 | 2:47 PM

ಉದ್ಯೋಗ (job) ಮಾಡುವುದೇ ಹಣಕ್ಕಾಗಿ, ತಮ್ಮ ವೈಯಕ್ತಿಕ ಖರ್ಚು ವೆಚ್ಚಗಳ ಜತೆಗೆ ಕುಟುಂಬ ನಿರ್ವಹಣೆಗಾಗಿ. ಆದರೆ ಹೆಚ್ಚಿನವರು ಯಾಕೆ ಕೆಲ್ಸ ಮಾಡುವುದು ಎಂದು ಕೇಳಿದರೆ ಪ್ರಾಮಾಣಿಕ ಉತ್ತರ ಕೊಡಲು ಹಿಂದೇಟು ಹಾಕ್ತಾರೆ. ಆದರೆ ಇಲ್ಲೊಬ್ಬ ಯುವಕ ಸಂದರ್ಶನದಲ್ಲಿ ಸಂದರ್ಶಕರಿಗೆ ಪ್ರಾಮಾಣಿಕ ಉತ್ತರ ನೀಡಿದ್ದಾನೆ. ನಮ್ಮ ಕಂಪನಿಯಲ್ಲಿ ನೀವು ಏಕೆ ಕೆಲಸ ಮಾಡಲು ಬಯಸುತ್ತೀರಿ ಎಂದು ಸಂದರ್ಶಕ ಕೇಳಿದ ಸಾಮಾನ್ಯ ಪ್ರಶ್ನೆಗೆ ನನಗೆ ಹಣದ ಅವಶ್ಯಕತೆ ತುಂಬಾ ಇದೆ ಎಂದು ನೇರವಾಗಿ ಹೇಳಿದ್ದಾನೆ. ಯುವಕನ ಪ್ರಾಮಾಣಿಕ ಉತ್ತರವು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ಯುವಕನ ಪ್ರಾಮಾಣಿಕ ಉತ್ತರಕ್ಕೆ ಸಂದರ್ಶಕ ಶಾಕ್

ಕೆರಿಯರ್ ಅಡ್ವೈಸ್ (Careeradvice) ಹೆಸರಿನ ರೆಡ್ಡಿಟ್ ಪೋಸ್ಟ್ ನಲ್ಲಿ ಯುವಕನೊಬ್ಬ ಪೋಸ್ಟ್ ಹಂಚಿಕೊಂಡಿದ್ದಾನೆ. ಇದರಲ್ಲಿ ಉದ್ಯೋಗ ಹುಡುಕಾಟದಲ್ಲಿದ್ದ ನಾನು ಸಂದರ್ಶಕರೊಬ್ಬರು ಕೇಳಿದ ಪ್ರಶ್ನೆಗೆ ಹೇಗೆ ಉತ್ತರಿಸಿದೆ ಎಂದು ಉಲ್ಲೇಖಿಸಿದ್ದಾನೆ. ಈ ಪೋಸ್ಟ್ ನಲ್ಲಿ ಕಳೆದ ಒಂದು ತಿಂಗಳಿನಿಂದ ಸುಮಾರು 7 ರಿಂದ 8 ಕಂಪನಿಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದೇನೆ. ಕೆಲಸವಿಲ್ಲದೇ, ತೀವ್ರ ಒತ್ತಡ ಮತ್ತು ದಣಿದಿದ್ದೇನೆ. ನೀಡಿದ ಸಂದರ್ಶನದಲ್ಲಿ ಅದೇ ಹಳೆಯ ಪ್ರಶ್ನೆಯನ್ನು ಎದುರಿಸಿ ಅವರು ಬೇಸತ್ತಿದ್ದೆ. ಹೀಗಾಗಿ ಯಾವುದೇ ಮುಚ್ಚುಮರೆ ಮಾಡದೇ ಇದ್ದ ವಿಷ್ಯ ನೇರವಾಗಿ ಹೇಳಲು ನಿರ್ಧರಿಸಿದೆ ಎಂದು ಹೇಳಿದ್ದಾನೆ.

ರೆಡ್ಡಿಟ್ ಪೋಸ್ಟ್ ಇಲ್ಲಿದೆ

I answered honestly to the “why do you want to work here” and hiring manager respected it
by
u/Potential_Shelter449 in
careeradvice

ಕೆಲ್ಸ ಬೇಕು, ದುಡ್ಡಿನ ಅವಶ್ಯಕತೆ ತುಂಬಾ ಇದೆ

ಸಂದರ್ಶಕರು ನಮ್ಮ ಕಂಪನಿಯಲ್ಲಿ ನೀವು ಏಕೆ ಕೆಲಸ ಮಾಡಲು ಬಯಸುತ್ತೀರಿ ಎಂದು ಕೇಳಿದಾಗ ನಾನು ದೀರ್ಘ ಉಸಿರು ತೆಗೆದುಕೊಂಡೆ. ನಿಜ ಹೇಳಬೇಕೆಂದರೆ, ಈ ಉದ್ಯೋಗ ಹುದ್ದೆ ಉತ್ತಮ ಸಂಬಳವನ್ನು ನೀಡುತ್ತದೆ. ನನಗೆ ಈಗ ನಿಜವಾಗಿಯೂ ಹಣದ ಅವಶ್ಯಕತೆಯಿದೆ. ನೀವು ಹುಡುಕುತ್ತಿರುವ ಕೆಲಸಕ್ಕೆ ನಾನು ಪರಿಪೂರ್ಣವಾಗಿ ಹೊಂದಿಕೊಳ್ಳುತ್ತೇನೆ. ಈ ಕೆಲಸವನ್ನು ಬಹಳ ಪರಿಣಾಮಕಾರಿಯಾಗಿ ನಿಭಾಯಿಸಬಲ್ಲೆ ಎಂಬ ನನಗೆ ವಿಶ್ವಾಸವಿದೆ ಎಂದು ಉತ್ತರಿಸಿದ್ದಾನೆ.

ಯುವಕನ ಪ್ರಾಮಾಣಿಕ ಉತ್ತರ ಮೆಚ್ಚಿಕೊಂಡ ಸಂದರ್ಶಕ

ನನ್ನ ಉತ್ತರಕ್ಕೆ ಸಂದರ್ಶನದಲ್ಲಿ ತನ್ನನ್ನು ತಿರಸ್ಕರಿಸಲಾಗುತ್ತದೆ ಎಂದು ಭಾವಿಸಿದ್ದೆ. ಆದರೆ ಅನಿರೀಕ್ಷಿತವಾಗಿ ವ್ಯವಸ್ಥಾಪಕರು ನಾನು ನೀಡಿದ ಉತ್ತರದಿಂದ ತೃಪ್ತನಾಗಿ ತಲೆಯಾಡಿಸಿದರು. ನಿಮ್ಮ ಪ್ರಾಮಾಣಿಕತೆ ನನಗೆ ನಿಜವಾಗಿಯೂ ಇಷ್ಟವಾಯಿತು. ಅನೇಕ ಜನರು ಇಲ್ಲಿ ಕಥೆಯನ್ನು ಹೆಣೆಯಲು ಪ್ರಯತ್ನಿಸುತ್ತಾರೆ ಎಂದು ಹೇಳಿರುವುದನ್ನು ಇಲ್ಲಿ ಉಲ್ಲೇಖಿಸಿದ್ದಾನೆ.

ಇದನ್ನೂ ಓದಿ: ರಾತ್ರಿ 11 ಗಂಟೆಗೆ ರಜೆ ಬೇಕೆಂದು ಮೆಸೇಜ್ ಮಾಡಿದ ಉದ್ಯೋಗಿ, ಸಿಇಒ ಕೊಟ್ಟ ರಿಪ್ಲೈಗೆ ಯುವತಿ ಫುಲ್‌ ಶಾಕ್

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಪ್ರಾಮಾಣಿಕ ಉದ್ಯೋಗಿಗಳು ಸಿಗುವುದು ಕಷ್ಟ ಎಂದಿದ್ದಾರೆ. ಮತ್ತೊಬ್ಬರು, ಎಲ್ಲರೂ ಕೆಲಸ ಮಾಡುವುದೇ ಸಂಬಳಕ್ಕಾಗಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ಯುವಕನ ಇದ್ದ ವಿಷ್ಯವನ್ನು ನೇರವಾಗಿ ಹೇಳಿದ್ದಕ್ಕಾಗಿ ಅಭಿನಂದಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us