AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ರಾತ್ರಿ 11 ಗಂಟೆಗೆ ರಜೆ ಬೇಕೆಂದು ಮೆಸೇಜ್ ಮಾಡಿದ ಉದ್ಯೋಗಿ, ಸಿಇಒ ಕೊಟ್ಟ ರಿಪ್ಲೈಗೆ ಯುವತಿ ಫುಲ್‌ ಶಾಕ್

ಹೆಚ್ಚಿನ ಉದ್ಯೋಗಿಗಳ ದೂರು ಅಂದ್ರೆ ಹುಷಾರಿಲ್ಲ ಅಂದ್ರು ರಜೆ ಕೊಡಲ್ಲ ಅನ್ನೋದು. ಆದರೆ ಇಲ್ಲೊಬ್ಬರು ವ್ಯಕ್ತಿ ಹುಷಾರಿಲ್ಲ ರಜೆ ಬೇಕೆಂದು ರಾತ್ರಿ 11 ಕ್ಕೆ ಮೆಸೇಜ್ ಮಾಡಿದ್ದು ಸಿಇಒ ರಜೆ ತೆಗೆದುಕೊಳ್ಳಿ ಕೆಲಸಕ್ಕಿಂತ ಆರೋಗ್ಯ ಮುಖ್ಯ ಎಂದು ಹೇಳಿದ್ದಾರಂತೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಿಇಒ ನಡೆಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ರಾತ್ರಿ 11 ಗಂಟೆಗೆ ರಜೆ ಬೇಕೆಂದು ಮೆಸೇಜ್ ಮಾಡಿದ ಉದ್ಯೋಗಿ, ಸಿಇಒ ಕೊಟ್ಟ ರಿಪ್ಲೈಗೆ ಯುವತಿ ಫುಲ್‌ ಶಾಕ್
ಸಾಂದರ್ಭಿಕ ಚಿತ್ರImage Credit source: ingwervanille/Moment/Getty Images
ಸಾಯಿನಂದಾ
|

Updated on:Oct 28, 2026 | 6:24 PM

Share

ಕಾರ್ಪೊರೇಟ್ (corporate) ಹಾಗೂ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಕಷ್ಟ ಹೇಳಲಾಗದು. ಒತ್ತಡ ತುಂಬಿದ ಕೆಲಸ, ರಜೆ ಅಂತೂ ಸಿಗೋದೇ ಇಲ್ಲ. ಆದರೆ ರಜೆ ತೆಗೊಳ್ಳಿ ರೆಸ್ಟ್ ಮಾಡಿ ಎಂದು ಹೇಳೋ ಮ್ಯಾನೇಜರ್ ಅಥವಾ ಬಾಸ್ ಸಿಕ್ಕರೆ ಅದಕ್ಕಿಂತ ಅದೃಷ್ಟ ಮತ್ತೊಂದಿಲ್ಲ. ಇಲ್ಲೊಬ್ಬರು ಉದ್ಯೋಗಿಗೆ ಕಂಪನಿ ಸಂಸ್ಥಾಪಕರು ಹುಷಾರಿಲ್ಲ ಎಂದಾಗ, ಎರಡು ಬಾರಿ ಯೋಚಿಸಬೇಡಿ ಎನ್ನುವ ಮೂಲಕ ರಜೆ ತೆಗೆದುಕೊಳ್ಳಿ ಎಂದಿದ್ದಾರೆ. ಸಿಇಒ ಅವರ ನಡವಳಿಕೆ ನೋಡಿ ಉದ್ಯೋಗಿಗೆ ಅಚ್ಚರಿಯಾಗಿದೆ. ಈ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರಜೆ ಕೇಳಿದ್ದಕ್ಕೆ ಉದ್ಯೋಗಿಗೆ ಶಾಕಿಂಗ್ ಉತ್ತರ ಕೊಟ್ಟ ಸಿಇಒ

ರೆವ್ವ್ ಗ್ರೋಥ್ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಕಾರ್ತಿಕ್ ರಾಜಾ (Karthick Raajha) ಅವರು ಉದ್ಯೋಗಿಯ ಜತೆಗೆ ನಡೆಸಿದ ಸಂಭಾಷಣೆಯನ್ನು ಲಿಂಕ್ಡ್ ಇನ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಉದ್ಯೋಗಿಯ ಪಾವತಿಸ ರಜೆಗಳೆಲ್ಲ ಮುಗಿದು ಹೋಗಿದೆ. ಆರೋಗ್ಯ ಸರಿಯಿಲ್ಲದ ಕಾರಣ ರಜೆ ಅವಶ್ಯಕತೆಯಿತ್ತು. ಹೀಗಾಗಿ ಮಂಗಳವಾರ ರಾತ್ರಿ ಸುಮಾರು 11 ಗಂಟೆಗೆ ನನಗೆ ಸಂದೇಶ ಕಳುಹಿಸಿದರು. ಆರೋಗ್ಯ ಸರಿಯಿಲ್ಲ ಹೀಗಾಗಿ ರಜೆ ತೆಗೆದುಕೊಳ್ಳಬಹುದೇ ಎಂದು ಕೇಳಿದ್ದು, ಎರಡು ಬಾರಿ ಯೋಚಿಸಬೇಡಿ ಎಂದೆ ಎನ್ನುವುದು ಇಲ್ಲಿ ಹೇಳಿದ್ದಾರೆ.

ಲಿಂಕ್ಡ್ ಇನ್ ಪೋಸ್ಟ್ ಇಲ್ಲಿದೆ

ವರ್ಕ್ ಫ್ರಮ್ ಉದ್ಯೋಗಿಗಳ ಕಷ್ಟ ಯಾರಿಗೂ ತಿಳಿಯಲ್ಲ

ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆಯಲ್ಲಿ ಉದ್ಯೋಗಿಗಳು ಎದುರಿಸುವ ಸಮಸ್ಯೆಗಳು ಮ್ಯಾನೇಜರ್‌ಗಳ ಗಮನಕ್ಕೆ ಬರುವುದೇ ಇಲ್ಲ. ಆಫೀಸಿಗೆ ಬಂದರೆ ಉದ್ಯೋಗಿಯ ಮುಖದ ಬದಲಾವಣೆ ಹಾಗೂ ಆರೋಗ್ಯದಲ್ಲಿನ ಬದಲಾವಣೆಗಳನ್ನು ಗಮನಿಸುತ್ತೇವೆ. ಆದರೆ ಈ ವರ್ಕ್ ಫ್ರಮ್ ಹೋಮ್ ಕೆಲಸದಲ್ಲಿ ಉದ್ಯೋಗಿ ತನ್ನ ಸಮಸ್ಯೆಯನ್ನು ಹೇಳಿಕೊಳ್ಳದಿದ್ದರೆ ಬಾಸ್ ಗಳಿಗೆ ಅಥವಾ ಸಹೋದ್ಯೋಗಿಗಳಿಗೆ ತಿಳಿಯುವುದಿಲ್ಲ. ಇಲ್ಲಿ ನಿಮ್ಮ ತಂಡ ಕೇವಲ ಒಂದು ಸಂಪನ್ಮೂಲವಾಗಿರಲ್ಲ. ನಿಮ್ಮೊಂದಿಗೆ ಏನನ್ನಾದರೂ ನಿರ್ಮಿಸಲು ತಮ್ಮ ದಿನದ ಎಂಟು ಗಂಟೆಗಳನ್ನು ಮೀಸಲಿಡುವ ಜನರು ಅವರಾಗಿರುತ್ತಾರೆ. ಆದ್ರೆ ಅವರಿಗೂ ಕೂಡ ವೈಯಕ್ತಿಕ ಜೀವನ, ಕುಟುಂಬ ಮತ್ತು ಆರೋಗ್ಯದ ಜವಾಬ್ದಾರಿಗಳಿವೆ. ಇವುಗಳನ್ನು ಕಂಪನಿಗಳು ಅರ್ಥಮಾಡಿಕೊಳ್ಳಬೇಕು ಎಂದು ಇಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Viral: ಮ್ಯಾನೇಜರ್‌ನ ಕಣ್ಣುಕುಕ್ಕಿದ ಉದ್ಯೋಗಿಯ ಸ್ಯಾಲರಿ, ರಾಜೀನಾಮೆ ನೀಡುವಂತೆ ಒತ್ತಾಯ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ನಿಮ್ಮ ನಿಲುವನ್ನು ಒಪ್ಪುತ್ತೇನೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಎಲ್ಲಾ ಬಾಸ್ ಗಳ ಮನಸ್ಥಿತಿ ನಿಮ್ಮಂತೆ ಇರಲ್ಲ, ಉದ್ಯೋಗಿಗಳಿಂದ ಫಲಿತಾಂಶವನ್ನು ಬಯಸುವವರು ಇದ್ದಾರೆ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರ, ನೀವು ಉದ್ಯೋಗಿಗಳನ್ನು ನಮ್ಮವರು ಎಂಬಂತೆ ಭಾವಿಸಿದರೆ ಮಾತ್ರ ಅಲ್ಲಿ ನಂಬಿಕೆ, ಪ್ರಾಮಾಣಿಕತೆ ಹಾಗೂ ಉತ್ತಮ ಬಾಂಧವ್ಯ ಬೆಳೆಯಲು ಸಾಧ್ಯ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:22 pm, Wed, 28 October 26

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More