Airstrike: ಇಸ್ರೇಲ್ನಿಂದ ಗಾಜಾದ ಶಾಲೆ, ಮನೆಗಳ ಮೇಲೆ ವೈಮಾನಿಕ ದಾಳಿ, 34 ಮಂದಿ ಸಾವು
ಇಸ್ರೇಲ್ ಸೇನೆಯು ಗಾಜಾದಾದ್ಯಂತ ಬುಧವಾರ ನಡೆಸಿದ ವೈಮಾನಿಕ ದಾಳಿಯಲ್ಲಿ 34 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗಾಜಾದ ಶಾಲೆ ಹಾಗೂ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. 19 ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 34 ಜನರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಸತ್ತವರಲ್ಲಿ ಆರು ಸಿಬ್ಬಂದಿ ಸೇರಿದ್ದಾರೆ ಎಂದು ಯುಎನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಸ್ರೇಲ್(Israel) ಗಾಜಾದಾದ್ಯಂತ ಬುಧವಾರ ನಡೆಸಿದ ವೈಮಾನಿಕ ದಾಳಿಯಲ್ಲಿ 34 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗಾಜಾದ ಶಾಲೆ ಹಾಗೂ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. 19 ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 34 ಜನರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಸತ್ತವರಲ್ಲಿ ಆರು ಸಿಬ್ಬಂದಿ ಸೇರಿದ್ದಾರೆ ಎಂದು ಯುಎನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಾಜಾದಲ್ಲಿ ಕಳೆದ 11 ತಿಂಗಳಿನಿಂದ ಯುದ್ಧದ ವಾತಾವರಣವಿದೆ, ಇಸ್ರೇಲ್ ಹಾಗೂ ಹಮಾಸ್ ಉಗ್ರರ ಕದನಕ್ಕೆ ವಿರಾಮ ಹಾಕಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿದ್ದರೂ, ಅವರ ಬೇಡಿಕೆ ಸ್ವೀಕಾರಾರ್ಹವಲ್ಲವಾದ್ದರಿಂದ ಯುದ್ಧ ಮುಂದುವರೆದಿದೆ.
ಮೃತ ಮಕ್ಕಳಲ್ಲಿ ಒಬ್ಬಳನ್ನು ಗಾಜಾದ ನಾಗರಿಕ ರಕ್ಷಣಾ ಸಂಸ್ಥೆಯ ಸದಸ್ಯ ಮೊಮಿನ್ ಸೆಲ್ಮಿ ಅವರ ಪುತ್ರಿ ಎಂದು ಗುರುತಿಸಲಾಗಿದೆ. ಸೆಲ್ಮಿ ತನ್ನ ಮಗಳನ್ನು 10 ತಿಂಗಳುಗಳವರೆಗೆ ನೋಡಿರಲಿಲ್ಲ, ಏಕೆಂದರೆ ಅವರು ಉತ್ತರ ಗಾಜಾದಲ್ಲಿ ಉಳಿದುಕೊಂಡಿದ್ದರು ಮತ್ತು ಅವನ ಕುಟುಂಬವು ದಕ್ಷಿಣ ಭಾಗದಲ್ಲಿತ್ತು.
ಮತ್ತಷ್ಟು ಓದಿ:ಗಾಜಾದಲ್ಲಿ ಹಮಾಸ್ ಸೇನಾ ಕಮಾಂಡರ್ನ ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ, 90 ಮಂದಿ ಸಾವು
ಗಾಜಾದಲ್ಲಿ ಇಸ್ರೇಲ್‌ನ ಅಭಿಯಾನವು 11 ತಿಂಗಳ ಹಿಂದೆ ಪ್ರಾರಂಭವಾದಾಗಿನಿಂದ, ಕನಿಷ್ಠ 41,084 ಪ್ಯಾಲೆಸ್ತೇನ್ ನಾಗರಿಕರು ಮೃತಪಟ್ಟಿದ್ದಾರೆ ಮತ್ತು 95,029 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.
ಹಮಾಸ್ ಉಗ್ರಗಾಮಿಗಳು ಅಕ್ಟೋಬರ್ 7 ರಂದು ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ ಈ ಅಭಿಯಾನವನ್ನು ಪ್ರಾರಂಭಿಸಲಾಯಿತು, ಇದು ಸರಿಸುಮಾರು 1,200 ಇಸ್ರೇಲ್ ಜನರ ಸಾವು ಮತ್ತು 250 ಕ್ಕೂ ಹೆಚ್ಚು ಜನರ ಅಪಹರಣಕ್ಕೆ ಕಾರಣವಾಯಿತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:32 am, Thu, 12 September 24