Video: ತಾಲಿಬಾನಿಗಳ ಆಡಳಿತದ ಬೆನ್ನಲ್ಲೇ ಅಫ್ಘಾನಿಸ್ತಾನಕ್ಕೆ ಕಾಲಿಟ್ಟ ಅಲ್​ ಖೈದಾ ಉಗ್ರ; ಲಾಡೆನ್​ಗೆ ಅತ್ಯಾಪ್ತನಾಗಿದ್ದ ಈತ

Video: ತಾಲಿಬಾನಿಗಳ ಆಡಳಿತದ ಬೆನ್ನಲ್ಲೇ ಅಫ್ಘಾನಿಸ್ತಾನಕ್ಕೆ ಕಾಲಿಟ್ಟ ಅಲ್​ ಖೈದಾ ಉಗ್ರ; ಲಾಡೆನ್​ಗೆ ಅತ್ಯಾಪ್ತನಾಗಿದ್ದ ಈತ
ಅಫ್ಘಾನ್​ಗೆ ಮರಳಿದ ಅಮಿನ್ ಉಲ್​ ಹಕ್​

Afghanistan: ಅಮಿನ್​ ಉಲ್​ ಹಕ್​ ನಂಗರ್​ಹಾರ್​ಗೆ ಬಂದಿರುವ ವಿಡಿಯೋವನ್ನು ಅಫ್ಘಾನಿಸ್ತಾನ ಪತ್ರಕರ್ತ ಬಿಲಾಲ್ ಸರ್ವಾರಿ ಶೇರ್​ ಮಾಡಿಕೊಂಡಿದ್ದಾರೆ.

TV9kannada Web Team

| Edited By: Lakshmi Hegde

Aug 30, 2021 | 4:04 PM

ಇದೀಗ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಆಡಳಿತ (Taliban) ಶುರುವಾದ ಬೆನ್ನಲ್ಲೇ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಇದೀಗ ಅಲ್​ ಖೈದಾ ಉಗ್ರಸಂಘಟನೆ (Al-Qaeda) ಯ ಪ್ರಮುಖ ಉಗ್ರ, ಒಂದು ಕಾಲದಲ್ಲಿ ಒಸಾಮಾ ಬಿನ್​ ಲಾಡೆನ್ (Osama bin Laden) ಸಹಾಯಕನಾಗಿದ್ದ ಅಮಿನ್​ ಉಲ್​ ಹಕ್ (Amin-ul-Haq) ಇದೀಗ ಅಫ್ಘಾನ್​ಗೆ ವಾಪಸ್​ ಬಂದಿದ್ದಾನೆ ಎನ್ನಲಾಗಿದೆ. ಅಮಿನ್​ ಉಲ್​ ಹಕ್​ ತನ್ನ ಹುಟ್ಟೂರಾದ ಅಫ್ಘಾನಿಸ್ತಾನದ ನಂಗರ್​ಹಾರ್​ ಪ್ರಾಂತ್ಯಕ್ಕೆ, ಕಾರಿನಲ್ಲಿ ಬಂದಿರುವ ವಿಡಿಯೋ ವೈರಲ್ ಆಗಿದೆ.

ಅಮಿನ್​ ಉಲ್​ ಹಕ್​ ನಂಗರ್​ಹಾರ್​ಗೆ ಬಂದಿರುವ ವಿಡಿಯೋವನ್ನು ಅಫ್ಘಾನಿಸ್ತಾನ ಪತ್ರಕರ್ತ ಬಿಲಾಲ್ ಸರ್ವಾರಿ ಶೇರ್​ ಮಾಡಿಕೊಂಡಿದ್ದಾರೆ. ಅಲ್​ ಖೈದಾದ ಅತ್ಯುಗ್ರ​, 80ರ ದಶಕದಲ್ಲಿ ಒಸಾಮಾ ಬಿನ್​ ಲಾಡೆನ್​ ಆಪ್ತ ಸಹಾಯಕ ಹಾಗೂ ಸೆಕ್ಯೂರಿಟಿ ಇನ್​​ಚಾರ್ಜ್​ ಆಗಿದ್ದ ಡಾ. ಅಮಿನ್​ ಉಲ್​ ಹಕ್ ತನ್ನ ಹುಟ್ಟೂರಾದ ನಂಗರ್​ಹಾರ್​ ಪ್ರಾಂತ್ಯಕ್ಕೆ ಆಗಮಿಸಿದ್ದಾನೆ ಎಂದು ಕ್ಯಾಪ್ಷನ್​ ಬರೆದುಕೊಂಡಿದ್ದಾರೆ. ಈ ಪ್ರಾಂತ್ಯ ಅದಾಗಲೇ ತಾಲಿಬಾನಿಗಳ ಕೈವಶವಾಗಿದೆ. ಒಸಾಮಾ ಬಿನ್​ ಲಾಡೆನ್​​ನನ್ನು ಅಮೆರಿಕ ಸೇನೆ ಪಾಕಿಸ್ತಾನದ 2011 ರಲ್ಲಿ ಅಬೋಟಾಬಾದ್​ನಲ್ಲಿ ಹತ್ಯೆ ಮಾಡಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಅಮೆರಿಕ ಬಿಟ್ಟುಹೋದ 200ಕ್ಕೂ ಹೆಚ್ಚು ವಿಮಾನ, ಹೆಲಿಕಾಪ್ಟರ್​ಗಳು ತಾಲಿಬಾನ್ ವಶಕ್ಕೆ

ಶಾಲೆ ಆರಂಭ ಮಾಡುವುದಕ್ಕೆ ಆತುರ ಬೇಡ; ಮನೆಯಲ್ಲಿ ಗಣೇಶ ಹಬ್ಬ ಆಚರಣೆ ಮಾಡಿ: ಫನಾ ಅಧ್ಯಕ್ಷ ಹೇಳಿಕೆ

Follow us on

Related Stories

Most Read Stories

Click on your DTH Provider to Add TV9 Kannada