ಆ ಸೂಪರ್​ ಮಾಡಲ್​ ವರ್ಷದಿಂದ ನಾಪತ್ತೆ! ಈಗ ಸ್ಲಂನಲ್ಲಿ ದಯನೀಯ ಸ್ಥಿತಿಯಲ್ಲಿ ಪತ್ತೆ: ಏನ್ ಕಥೆ?

ಜಗತ್ತಿನ ಪ್ರತಿಷ್ಠಿತ ಎಲ್​ ಌಂಡ್​ ಗ್ರಾಜಿಯಾ (Elle and Grazia) ಫ್ಯಾಷನ್​ ಮ್ಯಾಗಜೀನ್​ನ ಮುಖಪುಟವನ್ನು ರಾರಾಜಿಸುತ್ತಿದ್ದ ಸೂಪರ್​ ಮಾಡಲ್ ಒಬ್ಬಳ ದುರಂತ ಕಥೆಯಿದು. ಕಳೆದ ಒಂದು ವರ್ಷದ ಹಿಂದೆ ಕಾಣೆಯಾಗಿದ್ದ ಈ ರೂಪದರ್ಶಿ ಇದೀಗ ದಯನೀಯ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಹೌದು, ಎಲ್​ ಌಂಡ್​ ಗ್ರಾಜಿಯಾ ಮ್ಯಾಗ್​ಜೀನ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಎಲಾಯ್ಸಾ ಪಿಂಟೋ ಫಾಂಟೆಸ್​ ಎಂಬ ಬ್ರೆಜಿಲ್​ ಮೂಲದ ಈ ಮದನಾರಿ ಕಳೆದ ಒಂದು ವರ್ಷದ ಹಿಂದೆ ಅಮೆರಿಕದ ನ್ಯೂ ಯಾರ್ಕ್​ನಲ್ಲಿ ನಾಪತ್ತೆಯಾಗಿದ್ದಳು. ಆದರೆ ಇದೀಗ ಎಲ್ಲರ ಕಣ್ಮನದಿಂದ ಕಣ್ಮರೆಯಾಗಿದ್ದ […]

ಆ ಸೂಪರ್​ ಮಾಡಲ್​ ವರ್ಷದಿಂದ ನಾಪತ್ತೆ! ಈಗ ಸ್ಲಂನಲ್ಲಿ ದಯನೀಯ ಸ್ಥಿತಿಯಲ್ಲಿ ಪತ್ತೆ: ಏನ್ ಕಥೆ?
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Oct 12, 2020 | 6:49 PM

ಜಗತ್ತಿನ ಪ್ರತಿಷ್ಠಿತ ಎಲ್​ ಌಂಡ್​ ಗ್ರಾಜಿಯಾ (Elle and Grazia) ಫ್ಯಾಷನ್​ ಮ್ಯಾಗಜೀನ್​ನ ಮುಖಪುಟವನ್ನು ರಾರಾಜಿಸುತ್ತಿದ್ದ ಸೂಪರ್​ ಮಾಡಲ್ ಒಬ್ಬಳ ದುರಂತ ಕಥೆಯಿದು. ಕಳೆದ ಒಂದು ವರ್ಷದ ಹಿಂದೆ ಕಾಣೆಯಾಗಿದ್ದ ಈ ರೂಪದರ್ಶಿ ಇದೀಗ ದಯನೀಯ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಹೌದು, ಎಲ್​ ಌಂಡ್​ ಗ್ರಾಜಿಯಾ ಮ್ಯಾಗ್​ಜೀನ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಎಲಾಯ್ಸಾ ಪಿಂಟೋ ಫಾಂಟೆಸ್​ ಎಂಬ ಬ್ರೆಜಿಲ್​ ಮೂಲದ ಈ ಮದನಾರಿ ಕಳೆದ ಒಂದು ವರ್ಷದ ಹಿಂದೆ ಅಮೆರಿಕದ ನ್ಯೂ ಯಾರ್ಕ್​ನಲ್ಲಿ ನಾಪತ್ತೆಯಾಗಿದ್ದಳು. ಆದರೆ ಇದೀಗ ಎಲ್ಲರ ಕಣ್ಮನದಿಂದ ಕಣ್ಮರೆಯಾಗಿದ್ದ ಎಲಾಯ್ಸಾ ಬ್ರೆಜಿಲ್​ನ ಕೊಳೆಗೇರಿಯಲ್ಲಿ ಕಂಡುಬಂದಿದ್ದಾಳೆ.

ಸ್ಲಂನ ರಕ್ಷಣೆಗಾಗಿ ನಿಯೋಜಿತವಾಗಿದ್ದ ಸ್ವಸಹಾಯಕರ ತಂಡಕ್ಕೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ರೂಪದರ್ಶಿಯನ್ನು ರಕ್ಷಿಸಿದ್ದಾರೆ. ಮಾನಸಿಕ ಅಸ್ವಸ್ಥೆಯಾಗಿ ಕಾಣಿಸಿಕೊಂಡ ಎಲಾಯ್ಸಾ ಅರೆ ನಗ್ನಾವಸ್ಥೆಯಲ್ಲಿ ಅಲೆದಾಡುತ್ತಿರುವುದನ್ನ ಕಂಡು ಸ್ಥಳೀಯರು ತಂಡಕ್ಕೆ ಮಾಹಿತಿ ನೀಡಿದ್ದರು. ಇದೀಗ, ಎಲಾಯ್ಸಾಳನ್ನು ಮಾನಸಿಕ ಆರೋಗ್ಯ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿದೆ.

ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ