AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿನ್ ಲ್ಯಾಡನ್​​ನನ್ನು ಬೇಟೆಯಾಡಿದ್ದ ಮಾಜಿ ಸಿಐಎ ಮುಖ್ಯಸ್ಥ ಟ್ರಂಪ್ ಹಾಗೂ ಯುದ್ಧದ ಬಗ್ಗೆ ಹೇಳಿದ್ದೇನು?

ಇರಾನ್ ಯುದ್ಧದ ಬಗ್ಗೆ ಅಮೆರಿಕದ ಮಾಜಿ ಸಿಐಎ ಮುಖ್ಯಸ್ಥ ಲಿಯಾನ್ ಪನೆಟ್ಟಾ ಟ್ರಂಪ್‌ರನ್ನು ತೀವ್ರವಾಗಿ ಟೀಕಿಸಿದ್ದಾರೆ. ಯುದ್ಧದ ಪ್ರಸ್ತುತ ಪರಿಸ್ಥಿತಿಗೆ ಟ್ರಂಪ್ ಅವರೇ ನೇರ ಹೊಣೆ ಎಂದಿದ್ದಾರೆ. ಇರಾನ್ ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಿ ಜಾಗತಿಕ ತೈಲ ಪೂರೈಕೆಗೆ ಅಡ್ಡಿಪಡಿಸುವ ಅಪಾಯದ ಬಗ್ಗೆ ಪನೆಟ್ಟಾ ಎಚ್ಚರಿಸಿದ್ದಾರೆ. ಯುದ್ಧ ಮುಂದುವರಿದಂತೆ ಅಮೆರಿಕದಲ್ಲಿ ಟ್ರಂಪ್‌ಗೆ ಬೆಂಬಲ ಕುಸಿಯುತ್ತಿದ್ದು, ಸಾರ್ವಜನಿಕ ಒತ್ತಡ ಹೆಚ್ಚುತ್ತಿದೆ.

ಬಿನ್ ಲ್ಯಾಡನ್​​ನನ್ನು ಬೇಟೆಯಾಡಿದ್ದ ಮಾಜಿ ಸಿಐಎ ಮುಖ್ಯಸ್ಥ ಟ್ರಂಪ್ ಹಾಗೂ ಯುದ್ಧದ ಬಗ್ಗೆ ಹೇಳಿದ್ದೇನು?
ಲಿಯಾನ್Image Credit source: C4isrNet
ನಯನಾ ರಾಜೀವ್
|

Updated on:Mar 23, 2026 | 7:24 AM

Share

ವಾಷಿಂಗ್ಟನ್, ಮಾರ್ಚ್​ 23: ಇರಾನ್ ವಿರುದ್ಧ ಅಮೆರಿಕದ ಯುದ್ಧ ಆರಂಭವಾಗಿ ಮೂರು ವಾರಗಳಿಗೂ ಹೆಚ್ಚು ಸಮಯ ಕಳೆದಿದೆ. ಆದರೆ ಅದು ಕೊನೆಗೊಳ್ಳುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump)​​ಗೆ ಸುಲಭವಾದ ದಾರಿಯೂ ಕೂಡ ಗೋಚರಿಸುತ್ತಿಲ್ಲ. ಯುದ್ಧ ಮುಂದುವರೆದಂತೆ , ತಮ್ಮ ದೇಶದಲ್ಲೂ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ಮತ್ತು ಮಾಜಿ ಸಿಐಎ ಮುಖ್ಯಸ್ಥ ಲಿಯಾನ್ ಪನೆಟ್ಟಾ, ಪ್ರಸ್ತುತ ಪರಿಸ್ಥಿತಿಗೆ ಕಾರಣವಾಗಿರುವ ಟ್ರಂಪ್​​ರನ್ನು ಟೀಕಿಸಿದ್ದಾರೆ.

ಬ್ರಿಟಿಷ್ ಪತ್ರಿಕೆ ಗಾರ್ಡಿಯನ್‌ಗೆ ಮಾತನಾಡಿದ ಪನೆಟ್ಟಾ, ಡೊನಾಲ್ಡ್ ಟ್ರಂಪ್ ತುಂಬಾ ಕಠಿಣ ಪರಿಸ್ಥಿತಿಯಲ್ಲಿದ್ದಾರೆ ಮತ್ತು ಅದಕ್ಕೆ ಅವರೇ ಕಾರಣ ಎಂದು ಹೇಳಿದ್ದಾರೆ. ಇರಾನ್ ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಬಹುದು, ಜಾಗತಿಕ ತೈಲ ಪೂರೈಕೆಯನ್ನು ಅಡ್ಡಿಪಡಿಸಬಹುದು ಎಂದು ಅಮೆರಿಕದ ಭದ್ರತಾ ಅಧಿಕಾರಿಗಳಿಗೆ ವರ್ಷಗಳಿಂದ ತಿಳಿದಿದೆ ಎಂದು ಪನೆಟ್ಟಾ ಹೇಳಿದ್ದಾರೆ. ಇದು ತಿಳಿದಿರುವ ಬೆದರಿಕೆಯಾಗಿದ್ದು, ಸಂಘರ್ಷದ ಸಮಯದಲ್ಲಿ ಇದನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸುವ ಮೂಲಕ ಇರಾನ್ ಜಾಗತಿಕ ತೈಲ ಸರಬರಾಜನ್ನು ಅಡ್ಡಿಪಡಿಸಬಹುದು ಎಂದು ಅಮೆರಿಕದ ಭದ್ರತಾ ಸಂಸ್ಥೆಗಳು ಬಹಳ ಹಿಂದಿನಿಂದಲೂ ತಿಳಿದಿದ್ದವು, ಆದರೆ ಈ ಬೆದರಿಕೆಯನ್ನು ನಿರ್ಲಕ್ಷಿಸಲಾಗಿತ್ತು. ಆರಂಭಿಕ ಮಿಲಿಟರಿ ಕಾರ್ಯಾಚರಣೆಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಲಿ ಖಮೇನಿ ಹತ್ಯೆಯ ಪರಿಣಾಮಗಳ ಬಗ್ಗೆಯೂ ಪ್ರಶ್ನಿಸಿದ್ದಾರೆ.

ಆರಂಭಿಕ ಮಿಲಿಟರಿ ಕ್ರಮವು ಇರಾನ್​ ಅನ್ನು ದುರ್ಬಲಗೊಳಿಸಲಿಲ್ಲ ಬದಲಾಗಿ ಅದರ ನಾಯಕತ್ವವನ್ನು ಬಲಪಡಿಸಿತು. ಈಗ ಕಠಿಣ ನಾಯಕತ್ವ ಹೊರಹೊಮ್ಮಿದ್ದು, ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ. ಯುದ್ಧವು ನಾಲ್ಕನೇ ವಾರಕ್ಕೆ ಕಾಲಿಡುತ್ತಿದ್ದಂತೆ ಅಮೆರಿಕದಲ್ಲಿ ಟ್ರಂಪ್ ಮೇಲೆ ಒತ್ತಡ ಹೆಚ್ಚುತ್ತಿದೆ.

ಮತ್ತಷ್ಟು ಓದಿ: ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ: ಟ್ರಂಪ್

ಏರುತ್ತಿರುವ ಇಂಧನ ಬೆಲೆಗಳು ಮತ್ತು ಅನಿಶ್ಚಿತತೆಯು ಸಾರ್ವಜನಿಕ ಬೆಂಬಲವನ್ನು ಕಳೆದುಕೊಳ್ಳುತ್ತಿದೆ. ಒಂದು ಸಮೀಕ್ಷೆ ಪ್ರಕಾರ, ಶೇ.59ರಷ್ಟು ಅಮೆರಿಕನ್ನರು ಇರಾನ್ ಮೇಲಿನ ದಾಳಿಯನ್ನು ವಿರೋಧಿಸುತ್ತಿದ್ದಾರೆ.

ಟ್ರಂಪ್ ಹೋಗುತ್ತಿರುವುದು ಸುಲಭದ ಹಾದಿಯೆಂದು ಅನಿಸುತ್ತಿಲ್ಲ, ಯುದ್ಧದಿಂದ ಹಿಂದೆ ಸರಿಯುವುದು ಅವರಿಗೆ ದೌರ್ಬಲ್ಯವೆನಿಸಬಹುದು ಆದರೆ ಅದು ಉಲ್ಬಣಗಗೊಂಡರೆ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು. ಈ ಪರಿಸ್ಥಿತಿಗೆ ಟ್ರಂಪ್ ಸ್ವತಃ ಜವಾಬ್ದಾರರಾಗುತ್ತಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಅಮೆರಿಕ ತನ್ನ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡಿದರೆ ಅದು ಗಲ್ಫ್​ ರಾಷ್ಟ್ರಗಳ ಇಂಧನ ಮತ್ತು ಜಲ ಮೂಲಸೌಕರ್ಯವನ್ನು ಗುರಿಯಾಗಿಸಿಕೊಳ್ಳುತ್ತದೆ ಎಂದು ಇರಾನ್ ಎಚ್ಚರಿಕೆ ನೀಡಿದೆ. ಇದು ಪ್ರಪಂಚದಾದ್ಯಂತ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಬಹುದು. 2011ರ ಮೇ 2ರಂದು ಒಸಾಮಾ ಬಿನ್ ಲ್ಯಾಡನ್​ನನ್ನು ಅಮೆರಿಕವು ಆಪರೇಷನ್ ನೆಪ್ಚೂನ್ ಸ್ಪಿಯರ್ ಅಡಿ ಹತ್ಯೆ ಮಾಡಿತ್ತು, ಅದರ ನೇತೃತ್ವವನ್ನು ಪನೆಟ್ಟಾ ಹೊತ್ತಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:22 am, Mon, 23 March 26

Follow Us
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಬೈಕ್​​ ತಪ್ಪಿಸಲು ಹೋಗಿ ಖಾಸಗಿ ಬಸ್​​ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
ಬೈಕ್​​ ತಪ್ಪಿಸಲು ಹೋಗಿ ಖಾಸಗಿ ಬಸ್​​ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
ಬಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ, ಮಗು ಸಾವು ಆರೋಪ!
ಬಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ, ಮಗು ಸಾವು ಆರೋಪ!
ನಾರಿ ಶಕ್ತಿ ವಂದನ ಸಮ್ಮೇಳನ, ಪ್ರಧಾನಿ ಮೋದಿ ಭಾಷಣದ ನೇರ ಪ್ರಸಾರ
ನಾರಿ ಶಕ್ತಿ ವಂದನ ಸಮ್ಮೇಳನ, ಪ್ರಧಾನಿ ಮೋದಿ ಭಾಷಣದ ನೇರ ಪ್ರಸಾರ
ಬಿಯರ್ ಬಾಕ್ಸ್ ಲಾರಿ ಪಲ್ಟಿ, ಅಡಿಕೆ ತೋಟದಲ್ಲಿ ಬಿಯರ್ ಬಾಟಲಿಗಳ ಸುರಿಮಳೆ!
ಬಿಯರ್ ಬಾಕ್ಸ್ ಲಾರಿ ಪಲ್ಟಿ, ಅಡಿಕೆ ತೋಟದಲ್ಲಿ ಬಿಯರ್ ಬಾಟಲಿಗಳ ಸುರಿಮಳೆ!
ಸಹೋದರರ ನಡುವೆ ಬಿರುಕು? ಹಾರ್ದಿಕ್ ಔಟಾದಾಗ ಕೃನಾಲ್ ಅತಿರೇಕದ ಸಂಭ್ರಮ
ಸಹೋದರರ ನಡುವೆ ಬಿರುಕು? ಹಾರ್ದಿಕ್ ಔಟಾದಾಗ ಕೃನಾಲ್ ಅತಿರೇಕದ ಸಂಭ್ರಮ
ಚಹಾಲ್ ಮೆಸೇಜ್ ಸ್ಕ್ರೀನ್ ಶಾಟ್ ಹಂಚಿಕೊಂಡ ಉಲ್ಲು ನಟಿ ತಾನಿಯಾ
ಚಹಾಲ್ ಮೆಸೇಜ್ ಸ್ಕ್ರೀನ್ ಶಾಟ್ ಹಂಚಿಕೊಂಡ ಉಲ್ಲು ನಟಿ ತಾನಿಯಾ
ಡಿಕೆಡಿ ಟ್ರೋಫಿ ಎತ್ತಿದ್ದ ಸಿದ್ದೇಗೌಡ-ದೀಶಲ್; ಸಿಕ್ಕ ಹಣ ಎಷ್ಟು?
ಡಿಕೆಡಿ ಟ್ರೋಫಿ ಎತ್ತಿದ್ದ ಸಿದ್ದೇಗೌಡ-ದೀಶಲ್; ಸಿಕ್ಕ ಹಣ ಎಷ್ಟು?
VIDEO: ದಿಢೀರ್ ಚೆಂಡು ಬದಲಿಸಿದ ಅಂಪೈರ್​: ಟಿಮ್ ಡೇವಿಡ್​ಗೆ ಡೌಟ್..!
VIDEO: ದಿಢೀರ್ ಚೆಂಡು ಬದಲಿಸಿದ ಅಂಪೈರ್​: ಟಿಮ್ ಡೇವಿಡ್​ಗೆ ಡೌಟ್..!
ಊಟದ ಬಳಿಕ ನೀವೇ ತಟ್ಟೆ ತೆಗೆಯುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ?
ಊಟದ ಬಳಿಕ ನೀವೇ ತಟ್ಟೆ ತೆಗೆಯುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ?