AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indonesia Earthquake: ಇಂಡೋನೇಷ್ಯಾದಲ್ಲಿ ಒಂದೇ ವಾರದಲ್ಲಿ 2ನೇ ಬಾರಿಗೆ 6.2 ತೀವ್ರತೆಯ ಪ್ರಬಲ ಭೂಕಂಪ

ಒಂದು ವಾರದ ಹಿಂದೆ ಕೂಡ ಭಾರೀ ಪ್ರಮಾಣದ ಭೂಕಂಪ ಉಂಟಾಗಿತ್ತು. ಇಲ್ಲಿನ ತನಿಂಬಾರ್ ಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ 7.7 ತೀವ್ರತೆ ದಾಖಲಾಗಿತ್ತು. ಇದೀಗ ಮತ್ತೊಂದು ಬಾರಿ ಭೂಕಂಪ ಸಂಭವಿಸಿದೆ.

Indonesia Earthquake: ಇಂಡೋನೇಷ್ಯಾದಲ್ಲಿ ಒಂದೇ ವಾರದಲ್ಲಿ 2ನೇ ಬಾರಿಗೆ 6.2 ತೀವ್ರತೆಯ ಪ್ರಬಲ ಭೂಕಂಪ
ಭೂಕಂಪ
TV9 Web
| Updated By: ಸುಷ್ಮಾ ಚಕ್ರೆ|

Updated on: Jan 16, 2023 | 8:46 AM

Share

ಜಕಾರ್ತ: ಇಂಡೋನೇಷ್ಯಾದಲ್ಲಿ ಮತ್ತೆ ಪ್ರಬಲ ಭೂಕಂಪ (Indonesia Earthquake) ಸಂಭವಿಸಿದೆ. ಕಳೆದ ಒಂದೇ ವಾರದ ಅಂತರದಲ್ಲಿ 2 ಬಾರಿ ಭೂಮಿ ಕಂಪಿಸಿದೆ. ಇಂದು ಬೆಳಗಿನ ಜಾವ ಇಂಡೋನೇಷ್ಯಾದಲ್ಲಿ 6.2 ತೀವ್ರತೆಯ ಭಾರೀ ಭೂಕಂಪವಾಗಿದೆ. ಇದರಿಂದ ಮಲಗಿದ್ದ ಜನರೆಲ್ಲ ಮನೆಯಿಂದ ಹೊರಗೆ ಓಡಿಬಂದಿದ್ದು, ಇದುವರೆಗೂ ಯಾವುದೇ ಆಸ್ತಿಪಾಸ್ತಿ ಹಾನಿ, ಸಾವಿನ ಬಗ್ಗೆ ವರದಿಯಾಗಿಲ್ಲ.

ಸಿಂಗಿಲ್ ನಗರದ ದಕ್ಷಿಣ-ಆಗ್ನೇಯಕ್ಕೆ 48 ಕಿಲೋಮೀಟರ್ (30 ಮೈಲುಗಳು) ದೂರದಲ್ಲಿ 37 ಕಿಲೋಮೀಟರ್ ಈ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಸರ್ವೆ ತಿಳಿಸಿದೆ. ಇಂದು ಮುಂಜಾನೆ ಸ್ಥಳೀಯ ಸಮಯ ಬೆಳಗ್ಗೆ 6:30ರ ಸುಮಾರಿಗೆ ಈ ಭೂಕಂಪ ಸಂಭವಿಸಿದೆ. ಇಂಡೋನೇಷ್ಯಾದಲ್ಲಿ ಒಟ್ಟು 17,000ಕ್ಕೂ ಹೆಚ್ಚು ದ್ವೀಪಗಳಿವೆ.

ಇದನ್ನೂ ಓದಿ: Earthquake: ಹಿಮಾಚಲ ಪ್ರದೇಶದ ಧರ್ಮಶಾಲಾ ವ್ಯಾಪ್ತಿಯಲ್ಲಿ ಭೂಕಂಪ

ಒಂದು ವಾರದ ಹಿಂದೆ ಕೂಡ ಭಾರೀ ಪ್ರಮಾಣದ ಭೂಕಂಪ ಉಂಟಾಗಿತ್ತು. ಇಲ್ಲಿನ ತನಿಂಬಾರ್ ಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ 7.7 ತೀವ್ರತೆ ದಾಖಲಾಗಿತ್ತು. ಇದೀಗ ಮತ್ತೊಂದು ಬಾರಿ ಭೂಕಂಪ ಸಂಭವಿಸಿದೆ. ಇಂದು ಬೆಳಗ್ಗೆ ಉಂಟಾದ ಭೂಕಂಪನವು ಜನರನ್ನು ಭಯಭೀತಗೊಳಿಸಿತು. ಉತ್ತರ ಸುಮಾತ್ರಾ ಪ್ರಾಂತ್ಯದ 4 ಜಿಲ್ಲೆಗಳಲ್ಲಿ 3ರಿಂದ 10 ಸೆಕೆಂಡುಗಳ ನಡುವೆ ಭೂಕಂಪದ ಅನುಭವವಾಯಿತು ಎಂದು ಬಿಎನ್‌ಪಿಬಿ ವಿಪತ್ತು ತಗ್ಗಿಸುವ ಏಜೆನ್ಸಿಯ ವಕ್ತಾರ ಅಬ್ದುಲ್ ಮುಹಾರಿ ತಿಳಿಸಿದ್ದಾರೆ.

ಇದನ್ನೂ ಓದಿ: Kashmir Earthquake: ಕಣಿವೆ ರಾಜ್ಯ ಕಾಶ್ಮೀರ, ದೆಹಲಿಯಲ್ಲಿ ಭೂಕಂಪ: 5.9 ರಷ್ಟು ತೀವ್ರತೆ ದಾಖಲು

2004ರ ಡಿಸೆಂಬರ್ 26ರಂದು ಸುಮಾತ್ರಾ ದ್ವೀಪದ ಅತ್ಯಂತ ಭೀಕರ ಭೂಕಂಪಗಳು ಸಂಭವಿಸಿದವು. ಇದು ಹಿಂದೂ ಮಹಾಸಾಗರದಲ್ಲಿ ಸುನಾಮಿಯನ್ನು ಹುಟ್ಟುಹಾಕಿತು. ಇದು ಶ್ರೀಲಂಕಾ, ಭಾರತ ಮತ್ತು ಥೈಲ್ಯಾಂಡ್‌ನ 2,30,000ಕ್ಕೂ ಹೆಚ್ಚು ಜನರನ್ನು ಕೊಂದಿತು. 2021ರ ನವೆಂಬರ್​​ನಲ್ಲಿ ಇಂಡೋನೇಷ್ಯಾದಲ್ಲಿ ಉಂಟಾದ ಭೂಕಂಪದಲ್ಲಿ 331 ಜನ ಸಾವನ್ನಪ್ಪಿದ್ದರು. 2018ರಲ್ಲಿ ಉಂಟಾದ ಭೂಕಂಪ ಮತ್ತು ಸುನಾಮಿಯಲ್ಲಿ ಸುಲಾವೇಸಿಯಲ್ಲಿ 4,340 ಜನ ಮೃತಪಟ್ಟಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ