ಮಹಾಮಾರಿ ಕೊರೊನಾ ಕ್ರಿಮಿ ಪತ್ತೆಗೆ ಬಂತು Smart Helmet! ಎಲ್ಲಿ?
ಕೊರೊನಾ ಸೋಂಕು ಪತ್ತೆ ಹಚ್ಚೋದೆ ಕಷ್ಟವಾಗ್ತಿದೆ. ಹೀಗಾಗಿ, ಒಂದೊಂದು ದೇಶ ಒಂದೊಂದು ರೀತಿ ಸೋಂಕು ಪತ್ತೆಗೆ ಕಸರತ್ತು ನಡೆಸ್ತಿದ್ದಾರೆ. ಕೊರೊನಾದಿಂದ ಸಾಕಷ್ಟು ಹೊಡೆತ ತಿಂದಿರೋ ಇಟಲಿ ದೇಶ, ಈಗ ಎಚ್ಚೆತ್ತುಕೊಂಡಿದ್ದು ವಿಮಾನ ನಿಲ್ದಾಣಗಳಲ್ಲಿ ಸೋಂಕಿತರನ್ನ ಪತ್ತೆ ಹಚ್ಚಲು ಸ್ಮಾರ್ಟ್ ಹೆಲ್ಮೆಟ್ ಬಳಸುತ್ತಿದ್ದಾರೆ. ಸೋಂಕಿತ ವ್ಯಕ್ತಿ ಸಮೀಪ ಬರುತ್ತಿದ್ದಂತೆ ಸೋಂಕು ಇರೋದನ್ನ ಈ ಸ್ಮಾರ್ಟ್ ಹೆಲ್ಮೆಟ್ ಪತ್ತೆ ಹಚ್ಚುತ್ತೆ. ಬಿಸಾಡಿದ್ದ ಮಾಸ್ಕ್ಗಳ ಮಾರಾಟ…! ಕೊರೊನಾ ಸೋಂಕು ತಡೆಗೆ ಮಾಸ್ಕ್ ಧರಿಸೋದೇ ರಕ್ಷಣೆಗಿರೋ ವಸ್ತು. ಆದ್ರೆ, ಕೆಲ ಮಾಸ್ಕ್ಗಳನ್ನ ಒಮ್ಮೆ […]
ಕೊರೊನಾ ಸೋಂಕು ಪತ್ತೆ ಹಚ್ಚೋದೆ ಕಷ್ಟವಾಗ್ತಿದೆ. ಹೀಗಾಗಿ, ಒಂದೊಂದು ದೇಶ ಒಂದೊಂದು ರೀತಿ ಸೋಂಕು ಪತ್ತೆಗೆ ಕಸರತ್ತು ನಡೆಸ್ತಿದ್ದಾರೆ. ಕೊರೊನಾದಿಂದ ಸಾಕಷ್ಟು ಹೊಡೆತ ತಿಂದಿರೋ ಇಟಲಿ ದೇಶ, ಈಗ ಎಚ್ಚೆತ್ತುಕೊಂಡಿದ್ದು ವಿಮಾನ ನಿಲ್ದಾಣಗಳಲ್ಲಿ ಸೋಂಕಿತರನ್ನ ಪತ್ತೆ ಹಚ್ಚಲು ಸ್ಮಾರ್ಟ್ ಹೆಲ್ಮೆಟ್ ಬಳಸುತ್ತಿದ್ದಾರೆ. ಸೋಂಕಿತ ವ್ಯಕ್ತಿ ಸಮೀಪ ಬರುತ್ತಿದ್ದಂತೆ ಸೋಂಕು ಇರೋದನ್ನ ಈ ಸ್ಮಾರ್ಟ್ ಹೆಲ್ಮೆಟ್ ಪತ್ತೆ ಹಚ್ಚುತ್ತೆ.
ಬಿಸಾಡಿದ್ದ ಮಾಸ್ಕ್ಗಳ ಮಾರಾಟ…! ಕೊರೊನಾ ಸೋಂಕು ತಡೆಗೆ ಮಾಸ್ಕ್ ಧರಿಸೋದೇ ರಕ್ಷಣೆಗಿರೋ ವಸ್ತು. ಆದ್ರೆ, ಕೆಲ ಮಾಸ್ಕ್ಗಳನ್ನ ಒಮ್ಮೆ ಬಳಸಿ ಬಿಸಾಡಬೇಕು. ಮೆಕ್ಸಿಕೋದಲ್ಲಿ ಮಾತ್ರ ಕೆಲ ಗುಂಪು ಬಳಸಿ ಬಿಸಾಡಿದ್ದ ಮಾಸ್ಕ್ಗಳನ್ನ ಆಯ್ಕು ಮತ್ತೆ ಮಾರಾಟ ಮಾಡುತ್ತಿದ್ದಾರೆ. ಮಾಸ್ಕ್ಗಳನ್ನ ರಸ್ತೆ ಬದಿ ಎಲ್ಲೆಂದರಲ್ಲಿ ಮಾರಾಟ ಮಾಡುವುದರಿಂದ ಅದರ ಗುಣಮಟ್ಟ ಪತ್ತೆ ಹಚ್ಚುವುದು ಕಷ್ಟವಾಗ್ತಿದೆ ಅಂತಾ ಮೆಕ್ಸಿಕನ್ ಫಾರ್ಮಸಿ ಮಾಲೀಕರು ಆರೋಪಿಸಿದ್ದಾರೆ.
ಲಾಕ್ಡೌನ್ ಉಲ್ಲಂಘಿಸಿದ ಯಹೂದಿಗಳು: ಇಂಗ್ಲೆಂಡ್ನಲ್ಲಿ ಕೊರೊನಾ ವೈರಸ್ ಇನ್ನಿಲ್ಲದಂತೆ ಕಾಡ್ತಿದ್ದು, ಲಾಕ್ಡೌನ್ ವಿಸ್ತರಣೆ ಬಗ್ಗೆ ಪ್ರಧಾನಿ ಬೋರಿಸ್ ಜಾನ್ಸನ್ಗೆ ಗೊಂದಲ ಮೂಡ್ತಿದೆ. ಇದ್ರ ಮಧ್ಯೆ ಕೆಲ ಯಹೂದಿಗಳು ಲಾಕ್ಡೌನ್ ನಿಯಮಗಳನ್ನ ಉಲ್ಲಂಘಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಸುಮಾರು 300 ಯಹೂದಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಗೊರಿಲ್ಲಾ ಮುಖವಾಡ ಧರಿಸಿ ಕೆಲವರು ಪಾಲ್ಗೊಂಡಿದ್ದು, ಕೊರೊನಾ ಹರಡುವ ಭೀತಿ ಶುರುವಾಗಿದೆ.
ಕೊರೊನಾ ಗೆದ್ದ ಮಕ್ಕಳು..! ಕೊರೊನಾ ವೈರಸ್ ವಯಸ್ಸಿನ ಅಂತರವಿಲ್ಲದೇ ದೊಡ್ಡವರಿಂದ ಹಿಡಿದು ಚಿಕ್ಕವರಿಗೂ ಹರಡುತ್ತಿದೆ. ಇದ್ರ ಬೆನ್ನಲ್ಲೇ, ಕೆಲ ಮಕ್ಕಳು ಕ್ರೂರಿ ವೈರಸ್ ವಿರುದ್ಧ ಹೋರಾಡಿ ಗುಣಮುಖರಾಗುತ್ತಿದ್ದಾರೆ. ನ್ಯೂಯಾರ್ಕ್ ಸ್ಟೇಟ್ನಲ್ಲಿ ಸುಮಾರು 100ಕ್ಕೂ ಹೆಚ್ಚು ಮಕ್ಕಳು ಸೋಂಕಿನಿಂದ ನರಳುತ್ತಿದ್ರು. ಆದ್ರೀಗ, ಕೆಲವರು ಗುಣಮುಖರಾಗಿದ್ದು ಡಿಸ್ಚಾರ್ಜ್ ಆಗಿದ್ದು, ಸಂಬಂಧಿಕರು ಮತ್ತು ಸ್ಥಳೀಯರು ಸಂತೋಷದಿಂದ ಮಕ್ಕಳನ್ನ ಬರಮಾಡಿಕೊಳ್ತಿದ್ದಾರೆ.
ಇಟಲಿ ರೈತರಿಗೆ ನಿಂಬೆ‘ಹುಳಿ’: ಕೊರೊನಾ ಲಾಕ್ಡೌನ್ನಿಂದಾಗಿ ಉದ್ಯಮಗಳು ಮಾತ್ರವಲ್ಲಾ, ಕೃಷಿ ಕ್ಷೇತ್ರ ಕೂಡ ನೆಲಕಚ್ಚಿದೆ. ಇಟಲಿಯಲ್ಲಿ ನಿಂಬೆ ಹಣ್ಣು ಬೆಳೆದ ರೈತರು ಮಾರಾಟ ಮಾಡಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ವ್ಯಾಪಾರ ವಹಿವಾಟಿಗೆ ಅವಕಾಶ ಇಲ್ಲದೇ ಇರೋದ್ರಿಂದ ನಿಂಬೆಹಣ್ಣು ಮರದಲ್ಲೇ ಹಣ್ಣಾಗಿ ಕೆಳ ಬೀಳ್ತಿವೆ. ಸೋಂಕು ಹರಡುವ ಭೀತಿಯಿಂದಾಗಿ ಕೊರೊನಾ ಇಟಲಿಯಲ್ಲೂ ಕೃಷಿ ಉತ್ಪನ್ನ ಮಾರುಕಟ್ಟೆಗೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.
ಕೊರೊನಾಗೆ ಸುಮೊ ಕುಸ್ತಿಪಟು ಬಲಿ: ಕೊರೊನಾ ವೈರಸ್ ತಡೆಗೆ ಹೆಚ್ಚು ಮುಂಜಾಗ್ರತೆ ವಹಿಸಿದ್ದ ಜಪಾನ್ಲ್ಲೂ ವೈರಸ್ ತನ್ನ ಅಟ್ಟಹಾಸ ಮಾತ್ರ ನಿಲ್ಲಿಸುತ್ತಲೇ ಇದೆ. ಕೊರೊನಾ ವೈರಸ್ಗೆ 28 ವರ್ಷ ಸುಮೊ ಕುಸ್ತಿಪಟು ಕೊರೊನಾಗೆ ಬಲಿಯಾಗಿದ್ದಾರೆ. ಜಪಾನ್ನ ಸುಮೊ ಕುಸ್ತಿಪಟು ಕಳೆದ ತಿಂಗಳು ಟೋಕಿಯಾದ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
Published On - 6:07 pm, Wed, 13 May 20