AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಿಬಿಯಾದ ಮಾಜಿ ಸರ್ವಾಧಿಕಾರಿ ಗಡಾಫಿಯ ಮಗ ಸೈಫ್ ಅಲ್-ಇಸ್ಲಾಂನ ಗುಂಡಿಕ್ಕಿ ಹತ್ಯೆ

ಲಿಬಿಯಾದ ಮಾಜಿ ಸರ್ವಾಧಿಕಾರಿ ಗಡಾಫಿಯ ಪುತ್ರ ಸೈಫ್ ಅಲ್-ಇಸ್ಲಾಂರನ್ನು ಜಿಂಟಾನ್‌ನಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಘಟನೆ ಲಿಬಿಯಾದಲ್ಲಿ ಮತ್ತೊಮ್ಮೆ ರಾಜಕೀಯ ಉದ್ವಿಗ್ನತೆ ಹೆಚ್ಚಿಸಿದೆ. ಅವರ ಹತ್ಯೆಯ ಉದ್ದೇಶ ಸ್ಪಷ್ಟವಾಗಿಲ್ಲವಾದರೂ, ಇದು ದೇಶದ ಅಸ್ಥಿರ ಭದ್ರತಾ ವ್ಯವಸ್ಥೆ ಮತ್ತು ದೀರ್ಘಕಾಲದ ಸಂಘರ್ಷವನ್ನು ಎತ್ತಿ ತೋರಿಸುತ್ತದೆ. 2021ರಲ್ಲಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಯತ್ನಿಸಿದ್ದ ಸೈಫ್, ತೀವ್ರ ವಿರೋಧ ಎದುರಿಸಿದ್ದರು.

ಲಿಬಿಯಾದ ಮಾಜಿ ಸರ್ವಾಧಿಕಾರಿ ಗಡಾಫಿಯ ಮಗ ಸೈಫ್ ಅಲ್-ಇಸ್ಲಾಂನ ಗುಂಡಿಕ್ಕಿ ಹತ್ಯೆ
ಸೈಫ್
ನಯನಾ ರಾಜೀವ್
|

Updated on: Feb 04, 2026 | 9:49 AM

Share

ಲಿಬಿಯಾ, ಫೆಬ್ರವರಿ 04: ಲಿಬಿಯಾದಲ್ಲಿ ರಾಜಕೀಯ ಉದ್ವಿಗ್ನತೆ ಮತ್ತೊಮ್ಮೆ ಉತ್ತುಂಗಕ್ಕೇರಿದೆ. ಜಿಂಟಾನ್ ನಗರದ ಮನೆಯೊಂದಕ್ಕೆ ನುಗ್ಗಿದ ನಾಲ್ವರು ಅಪರಿಚಿತ ಬಂದೂಕುಧಾರಿಗಳು ಲಿಬಿಯಾದ ಮಾಜಿ ಸರ್ವಾಧಿಕಾರಿ ಗಡಾಫಿಯ ಮಗ  ಸೈಫ್ ಅಲ್-ಇಸ್ಲಾಂ ಗಡಾಫಿಯನ್ನು ಹತ್ಯೆ(Murder)ಗೈದಿದ್ದಾರೆ. ತಮ್ಮ ತೋಟದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಸೈಫ್ ಅಲ್-ಇಸ್ಲಾಂಗೆ 53 ವರ್ಷ ವಯಸ್ಸಾಗಿತ್ತು. ಲಿಬಿಯಾದ ಅಧಿಕಾರಿಗಳು ಮತ್ತು ಕುಟುಂಬ ಮೂಲಗಳು ಮಂಗಳವಾರ ಈ ಘಟನೆಯನ್ನು ದೃಢಪಡಿಸಿವೆ.

ಸೈಫ್ ಅಲ್-ಇಸ್ಲಾಂ ಗಡಾಫಿ ಲಿಬಿಯಾದ ಮಾಜಿ ಸರ್ವಾಧಿಕಾರಿ ಮುಅಮ್ಮರ್ ಗಡಾಫಿಯವರ ಮಗ, ಅವರು ತಮ್ಮ ತಂದೆಯ ಆಡಳಿತದಲ್ಲಿ ಅತ್ಯಂತ ಶಕ್ತಿಶಾಲಿ ವ್ಯಕ್ತಿಯಾಗಿದ್ದರು. ಅವರ ಹತ್ಯೆಯ ಉದ್ದೇಶ ಸ್ಪಷ್ಟವಾಗಿಲ್ಲವಾದರೂ, ಈ ಘಟನೆಯು ಮತ್ತೊಮ್ಮೆ ಲಿಬಿಯಾದ ಅಸ್ಥಿರ ಭದ್ರತಾ ವ್ಯವಸ್ಥೆ ಮತ್ತು ದೀರ್ಘಕಾಲದ ರಾಜಕೀಯ ಸಂಘರ್ಷವನ್ನು ಬೆಳಕಿಗೆ ತಂದಿದೆ.

ಲಿಬಿಯಾದ ಮಾಧ್ಯಮಗಳ ಪ್ರಕಾರ, ಸೈಫ್ ಅಲ್-ಇಸ್ಲಾಂ ಅವರ ವಕೀಲ ಖಲೀದ್ ಅಲ್-ಝೈದಿ ಮತ್ತು ರಾಜಕೀಯ ಪ್ರತಿನಿಧಿಗಳು ವಾಯುವ್ಯ ಲಿಬಿಯಾದ ಜಿಂಟಾನ್ ನಗರದಲ್ಲಿರುವ ಅವರ ಮನೆಯಲ್ಲಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ದೃಢಪಡಿಸಿದ್ದಾರೆ. ಅವರ ರಾಜಕೀಯ ತಂಡದ ಹೇಳಿಕೆಯ ಪ್ರಕಾರ, ನಾಲ್ವರು ಮುಸುಕುಧಾರಿ ಬಂದೂಕುಧಾರಿಗಳು ಅವರ ನಿವಾಸಕ್ಕೆ ಪ್ರವೇಶಿಸಿ, ಭದ್ರತಾ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಿ, ಘರ್ಷಣೆಯ ನಂತರ ಗುಂಡು ಹಾರಿಸಿದ್ದಾರೆ.

ಲಿಬಿಯಾದ ಅಧಿಕಾರಿಗಳು ಹತ್ಯೆಯ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಆದಾಗ್ಯೂ, ಹತ್ಯೆಯ ಹಿಂದಿನ ಉದ್ದೇಶ ಅಥವಾ ಸಂಚು ರೂಪಿಸಿದವರು ಯಾರು ಎಂಬುದರ ಕುರಿತು ಇನ್ನೂ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ದಾಳಿಕೋರರು ಕಮಾಂಡೋ ಘಟಕದವರೆಂದು ಹೇಳಲಾಗುತ್ತದೆ.

ಮತ್ತಷ್ಟು ಓದಿ: ಒಂದೇ ಮಹಿಳೆಯ ಜತೆಗೆ ಇಬ್ಬರ ಅನೈತಿಕ ಸಂಬಂಧ: ಚಾಕುವಿನಿಂದ ಇರಿದು ಕೊಲೆ

ಜೂನ್ 1972 ರಲ್ಲಿ ಟ್ರಿಪೋಲಿಯಲ್ಲಿ ಜನಿಸಿದ ಸೈಫ್ ಅಲ್-ಇಸ್ಲಾಂ, ಗಡಾಫಿ , ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಪಿಎಚ್‌ಡಿ ಪದವಿ ಪಡೆದಿದ್ದರು.ನಾಲ್ಕು ದಶಕಗಳ ಅಧಿಕಾರದ ನಂತರ 2011 ರಲ್ಲಿ ನ್ಯಾಟೋ ಬೆಂಬಲಿತ ದಂಗೆಯಲ್ಲಿ ಮೊಅಮ್ಮರ್ ಗಡಾಫಿ ಅವರನ್ನು ಪದಚ್ಯುತಗೊಳಿಸಲಾಯಿತು. ಆ ವರ್ಷದ ಕೊನೆಯಲ್ಲಿ ದೇಶವು ಸಂಘರ್ಷಕ್ಕೆ ಸಿಲುಕಿದಾಗ ಅವರನ್ನು ಕೊಲ್ಲಲಾಯಿತು.

ನವೆಂಬರ್ 2021 ರಲ್ಲಿ, ಅವರು ಲಿಬಿಯಾದ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಉಮೇದುವಾರಿಕೆಯನ್ನು ಘೋಷಿಸುವ ಮೂಲಕ ರಾಜಕೀಯ ಪುನರಾಗಮನಕ್ಕೆ ಪ್ರಯತ್ನಿಸಿದರು. ಅವರ ನಿರ್ಧಾರವು ದೇಶಾದ್ಯಂತ ಗಡಾಫಿ ವಿರೋಧಿ ಗುಂಪುಗಳಿಂದ ತೀವ್ರ ವಿರೋಧವನ್ನು ಹುಟ್ಟುಹಾಕಿತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ತಡರಾತ್ರಿ ಗ್ರಾಮದಲ್ಲಿ ಓಡಾಡಿದ ಕಾಡಾನೆಗಳ ಹಿಂಡು!
ತಡರಾತ್ರಿ ಗ್ರಾಮದಲ್ಲಿ ಓಡಾಡಿದ ಕಾಡಾನೆಗಳ ಹಿಂಡು!
ರಾಜ್ಯ ಸರ್ಕಾರ ದಿವಾಳಿ, ಸಂಬಳ ನೀಡಲೂ ಹಣವಿಲ್ಲ: ಅಶೋಕ್​​ ಸ್ಫೋಟಕ ಆರೋಪ
ರಾಜ್ಯ ಸರ್ಕಾರ ದಿವಾಳಿ, ಸಂಬಳ ನೀಡಲೂ ಹಣವಿಲ್ಲ: ಅಶೋಕ್​​ ಸ್ಫೋಟಕ ಆರೋಪ
ಉದ್ಯೋಗಾಕಾಂಕ್ಷಿಗಳ ಕಿಚ್ಚು: ಅನುಮತಿ ನಿರಾಕರಣೆ ನಡುವೆಯೂ ಬೃಹತ್​ ಪ್ರತಿಭಟನೆ
ಉದ್ಯೋಗಾಕಾಂಕ್ಷಿಗಳ ಕಿಚ್ಚು: ಅನುಮತಿ ನಿರಾಕರಣೆ ನಡುವೆಯೂ ಬೃಹತ್​ ಪ್ರತಿಭಟನೆ
ಪೊಲೀಸರ ವಿರೋಧದ ಮಧ್ಯೆಯೇ ಜಯನಗರ ವೃತ್ತದ ಕಡೆಗೆ ಯುವಕರ ಮೆರವಣಿಗೆ!
ಪೊಲೀಸರ ವಿರೋಧದ ಮಧ್ಯೆಯೇ ಜಯನಗರ ವೃತ್ತದ ಕಡೆಗೆ ಯುವಕರ ಮೆರವಣಿಗೆ!
Live: ಧಾರವಾಡದಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ
Live: ಧಾರವಾಡದಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ
ಬೆಂಗಳೂರು: ಸೈರನ್​ನಿಂದ ತಪ್ಪಿತು ಕೆನರಾ ಬ್ಯಾಂಕ್ ಕಳ್ಳತನ ಯತ್ನ!
ಬೆಂಗಳೂರು: ಸೈರನ್​ನಿಂದ ತಪ್ಪಿತು ಕೆನರಾ ಬ್ಯಾಂಕ್ ಕಳ್ಳತನ ಯತ್ನ!
ರೇಣುಕಾಸ್ವಾಮಿ ಕೊಲೆ ಕೇಸ್​​​ನಲ್ಲಿ ತನಿಖಾಧಿಕಾರಿಗಳಿಂದ ನಡೆದಿದೆ ಎಡವಟ್ಟು?
ರೇಣುಕಾಸ್ವಾಮಿ ಕೊಲೆ ಕೇಸ್​​​ನಲ್ಲಿ ತನಿಖಾಧಿಕಾರಿಗಳಿಂದ ನಡೆದಿದೆ ಎಡವಟ್ಟು?
ಮನೆಯಲ್ಲಿ ಅಗ್ನಿ ಅವಘಡ, ಅವಳಿ ಶಿಶುಗಳು ಸೇರಿ ಆರು ಮಂದಿ ಸಜೀವದಹನ
ಮನೆಯಲ್ಲಿ ಅಗ್ನಿ ಅವಘಡ, ಅವಳಿ ಶಿಶುಗಳು ಸೇರಿ ಆರು ಮಂದಿ ಸಜೀವದಹನ
ಕೃತಿ ಸನೋನ್ ಮನಗೆದ್ದ ನಾಲ್ಕು ಸಾವಿರ ಕೋಟಿ ಒಡೆಯ; ಧೋನಿಗೆ ಅತ್ಯಾಪ್ತ
ಕೃತಿ ಸನೋನ್ ಮನಗೆದ್ದ ನಾಲ್ಕು ಸಾವಿರ ಕೋಟಿ ಒಡೆಯ; ಧೋನಿಗೆ ಅತ್ಯಾಪ್ತ
ಅಡಿಗೆ ಮನೆ ಹೇಗಿರಬೇಕು? ಈ ವಸ್ತುಗಳಿದ್ರೆ ಕಷ್ಟ ತಪ್ಪಿದ್ದಲ್ಲ!
ಅಡಿಗೆ ಮನೆ ಹೇಗಿರಬೇಕು? ಈ ವಸ್ತುಗಳಿದ್ರೆ ಕಷ್ಟ ತಪ್ಪಿದ್ದಲ್ಲ!