ಬ್ರಿಟನ್ನಲ್ಲಿ ಕೊರೊನಾ ಅವತಾರ್ 2 ಮಧ್ಯೆಯೇ.. ದಕ್ಷಿಣ ಆಫ್ರಿಕಾದಲ್ಲಿ ಹೊಸ ಕೊರೊನಾವತಾರ ಪತ್ತೆ!
ವೈರಸ್ ಮತ್ತೊಂದು ರೂಪಾಂತರ ಪಡೆದಿದ್ದು ಈ ಹೊಸ ಪ್ರಭೇದ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದೆ. ಅಂದ ಹಾಗೆ, ಈ ಹೊಸ ಪ್ರಭೇದ ಬ್ರಿಟನ್ ಭೂತಕ್ಕಿಂತಲೂ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ.
ಇಷ್ಟು ತಿಂಗಳು ಮಾನವಕುಲವನ್ನು ಬೆಚ್ಚಿಬೀಳಿಸಿದ್ದ ಕೊರೊನಾ ಮಹಾಮಾರಿ ಇದೀಗ ಹೊಸ ಅವತಾರಗಳನ್ನು ತಾಳುತ್ತಿದೆ. ಹೆಮ್ಮಾರಿಯ ರೌದ್ರನರ್ತನದ ಸೆಕೆಂಡ್ ಇನ್ನಿಂಗ್ಸ್ ಈಗಷ್ಟೇ ಶುರುವಾಗಿದ್ದು ಇಂಗ್ಲೆಂಡ್ನಲ್ಲಿ ಕಳೆದ ಕೆಲವು ದಿನಗಳ ಹಿಂದೆ ಕೊರೊನಾದ ಮತ್ತೊಂದು ಪ್ರಭೇದ ಪತ್ತೆಯಾಗಿದೆ. ಕೊರೊನಾದ ಹೊಸ ರೂಪಾಂತರವಾದ ಈ ಬ್ರಿಟನ್ ಭೂತ ಅತಿ ವೇಗವಾಗಿ ಸೋಂಕು ಹರಡುವ ಸಾಮರ್ಥ್ಯ ಹೊಂದಿದ್ದು ಇದೀಗ ಜಗತ್ತೇ ನಲುಗಿ ಹೋಗಿದೆ.
ಆದರೆ ಈಗ, ವೈರಸ್ ಮತ್ತೊಂದು ರೂಪಾಂತರ ಪಡೆದಿದ್ದು ಈ ಹೊಸ ಪ್ರಭೇದ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದೆ. ಅಂದ ಹಾಗೆ, ಈ ಹೊಸ ಪ್ರಭೇದ ಬ್ರಿಟನ್ ಭೂತಕ್ಕಿಂತಲೂ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ.
ಸದ್ಯ, ಕೊರೊನಾದ ಈ ಹೊಸ ಅವತಾರ ದಕ್ಷಿಣ ಆಫ್ರಿಕಾದಿಂದ ಬೇರೆ ದೇಶಗಳಿಗೆ ಹರಡಿದೆ ಅನ್ನೋ ಮಾಹಿತಿ ಲಭ್ಯವಾಗಿದ್ದು ಇದೀಗ ಬ್ರಿಟನ್ನಲ್ಲೂ ಸಹ ಇದು ಪತ್ತೆಯಾಗಿದೆ. ಹಾಗಾಗಿ, ಇಡೀ ವಿಶ್ವವನ್ನೇ ಆಳಿದ ಬ್ರಿಟನ್ ಸಾಮ್ರಾಜ್ಯ ಒಂದೇ ವೈರಸ್ನ ಎರಡು ರೂಪಾಂತರಗಳ ಡಬಲ್ ದಾಳಿ ಎದುರಿಸುತ್ತಿದೆ.
ಅಂದ ಹಾಗೆ, ದಕ್ಷಿಣ ಆಫ್ರಿಕಾದ ಆರೋಗ್ಯ ಇಲಾಖೆ ಕಳೆದ ವಾರವಷ್ಟೇ ಈ ಹೊಸ ರೂಪಾಂತರದ ಬಗ್ಗೆ ವರದಿಮಾಡಿದೆ. ಆಫ್ರಿಕಾ ಖಂಡದ ಈ ರಾಷ್ಟ್ರದಲ್ಲಿರುವ ಜನರ ಆನುವಂಶಿಕ ವೈವಿಧ್ಯತೆಯಲ್ಲಿ ಇದು ಹುಟ್ಟಿದ್ದು ಬ್ರಿಟನ್ನಲ್ಲಿ ಪತ್ತೆಯಾಗಿರುವ ಪ್ರಭೇದಕ್ಕಿಂತ ಮತ್ತಷ್ಟು ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ಸದ್ಯ, ತಜ್ಞರ ಪ್ರಕಾರ, ಎರಡೂ ಪ್ರಭೇದಗಳು ಒಂದೇ ರೂಪಾಂತರದ ಅಂಶ (N501Y) ಹೊಂದಿದ್ದು ಈ ರೂಪಾಂತರಗಳ ಬಗ್ಗೆ ಮತ್ತಷ್ಟು ಸಂಶೋಧನೆ ನಡೆಯುತ್ತಿದೆ.
ಕೊರೊನಾ ಎರಡನೇ ಅಲೆ ಭೀತಿ ಬೆನ್ನಲ್ಲೇ ರಾಜ್ಯದಲ್ಲಿ ಇಳಿಮುಖವಾಯ್ತು ಕೊವಿಡ್ ಪ್ರಕರಣ