ಅಬುಧಾಬಿಯಲ್ಲಿ ಹಿಂದೂ ದೇವಾಲಯವನ್ನು ನಿರ್ಮಿಸಲು ಬೆಂಬಲ ನೀಡಿದ ಯುಎಇ ಅಧ್ಯಕ್ಷರಿಗೆ ಮೋದಿ ಧನ್ಯವಾದ

ನಿಮ್ಮ ಆತ್ಮೀಯ ಸ್ವಾಗತಕ್ಕಾಗಿ ಧನ್ಯವಾದಗಳು. ನಾನು ನಿಮ್ಮನ್ನು ಭೇಟಿಯಾಗಲು ಇಲ್ಲಿಗೆ ಬಂದಾಗ, ನಾನು ನನ್ನ ಕುಟುಂಬವನ್ನು ಭೇಟಿಯಾಗಲು ಬಂದಿದ್ದೇನೆ ಎಂದು ನಾನು ಯಾವಾಗಲೂ ಭಾವಿಸುತ್ತೇನೆ. ಕಳೆದ 7 ತಿಂಗಳಲ್ಲಿ ನಾವು 5 ಬಾರಿ ಭೇಟಿಯಾಗಿದ್ದೇವೆ, ಇದು ತುಂಬಾ ಅಪರೂಪ ಮತ್ತು ನಮ್ಮ ನಿಕಟ ಸಂಬಂಧವನ್ನು ಪ್ರತಿಬಿಂಬಿಸುತ್ತದೆ."ಎಂದು ಯುಎಇ ಅಧ್ಯಕ್ಷರಿಗೆ ಮೋದಿ ಧನ್ಯವಾದ ಅರ್ಪಿಸಿದ್ದಾರೆ.

ಅಬುಧಾಬಿಯಲ್ಲಿ ಹಿಂದೂ ದೇವಾಲಯವನ್ನು ನಿರ್ಮಿಸಲು ಬೆಂಬಲ ನೀಡಿದ ಯುಎಇ ಅಧ್ಯಕ್ಷರಿಗೆ ಮೋದಿ ಧನ್ಯವಾದ
ಯುಎಇ ಅಧ್ಯಕ್ಷರೊಂದಿಗೆ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on: Feb 13, 2024 | 8:30 PM

ಅಬುಧಾಬಿ ಫೆಬ್ರುವರಿ 13: ಅಬುಧಾಬಿಯಲ್ಲಿ (Abu Dhabi) ಮೊದಲ ಹಿಂದೂ ದೇವಾಲಯವನ್ನು ಉದ್ಘಾಟಿಸುವ ಒಂದು ದಿನ ಮೊದಲು, ಪ್ರಧಾನಿ ನರೇಂದ್ರ ಮೋದಿ (Narendra Modi)ಮಂಗಳವಾರ ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ (Sheikh Mohamed bin Zayed Al Nahyan) ಅವರ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. “ನಿಮ್ಮ ಬೆಂಬಲವಿಲ್ಲದೆ ಇಲ್ಲಿ BAPS (ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ) ದೇವಾಲಯದ ನಿರ್ಮಾಣವು ಸಾಧ್ಯವಾಗುತ್ತಿರಲಿಲ್ಲ” ಎಂದು ಮೋದಿ ಯುಎಇ ಅಧ್ಯಕ್ಷರಿಗೆ ದ್ವಿಪಕ್ಷೀಯ ಸಭೆಯ ಸಂದರ್ಭದಲ್ಲಿ ಹೇಳಿದರು ಎಂದು ಎಎನ್ಐ ವರದಿ ಮಾಡಿದೆ. ಎರಡು ದಿನಗಳ ಭೇಟಿಗಾಗಿ ಮಧ್ಯಾಹ್ನ ಅಬುಧಾಬಿಗೆ ಬಂದಿಳಿದ ಮೋದಿ ಅವರು ಮಂಗಳವಾರ ಅಬುಧಾಬಿಯಲ್ಲಿ ಕಲ್ಲಿನಿಂದ ನಿರ್ಮಿತವಾಗಿರುವ ಮೊದಲ ಹಿಂದೂ ದೇವಾಲಯವಾದ ಬೋಚಸನ್ವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (BAPS) ಮಂದಿರವನ್ನು ಉದ್ಘಾಟಿಸಲಿದ್ದಾರೆ.

ಇಂದು ಬೆಳಗ್ಗೆ, ಅಬುಧಾಬಿಗೆ ಬಂದಿಳಿದ ನಂತರ, ಪ್ರಧಾನಿ ಮೋದಿ ಅವರು ಯುಎಇ ಅಧ್ಯಕ್ಷರಿಗೆ ಆತ್ಮೀಯ ಸ್ವಾಗತಕ್ಕಾಗಿ ಧನ್ಯವಾದ ಅರ್ಪಿಸಿದರು.

“ನಿಮ್ಮ ಆತ್ಮೀಯ ಸ್ವಾಗತಕ್ಕಾಗಿ ಧನ್ಯವಾದಗಳು. ನಾನು ನಿಮ್ಮನ್ನು ಭೇಟಿಯಾಗಲು ಇಲ್ಲಿಗೆ ಬಂದಾಗ, ನಾನು ನನ್ನ ಕುಟುಂಬವನ್ನು ಭೇಟಿಯಾಗಲು ಬಂದಿದ್ದೇನೆ ಎಂದು ನಾನು ಯಾವಾಗಲೂ ಭಾವಿಸುತ್ತೇನೆ. ಕಳೆದ 7 ತಿಂಗಳಲ್ಲಿ ನಾವು 5 ಬಾರಿ ಭೇಟಿಯಾಗಿದ್ದೇವೆ, ಇದು ತುಂಬಾ ಅಪರೂಪ ಮತ್ತು ನಮ್ಮ ನಿಕಟ ಸಂಬಂಧವನ್ನು ಪ್ರತಿಬಿಂಬಿಸುತ್ತದೆ.” ನಹ್ಯಾನ್‌ಗೆ ಮೋದಿ ತಿಳಿಸಿದ್ದಾರೆ.

ವೈಬ್ರೆಂಟ್ ಗುಜರಾತ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಗುಜರಾತ್‌ಗೆ ಭೇಟಿ ನೀಡಿದ್ದಕ್ಕಾಗಿಯೂ ಮೋದಿ ಧನ್ಯವಾದ ಅರ್ಪಿಸಿದರು.

“ನನ್ನ ಆಹ್ವಾನವನ್ನು ಸ್ವೀಕರಿಸಿ ವೈಬ್ರಂಟ್ ಗುಜರಾತ್ ಶೃಂಗಸಭೆಗಾಗಿ ನನ್ನ ತವರು ರಾಜ್ಯ ಗುಜರಾತ್‌ಗೆ ಬಂದಿದ್ದಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳುತ್ತೇನೆ. ನೀವು ಈ ಕಾರ್ಯಕ್ರಮವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದೀರಿ ಮತ್ತು ವಿಶ್ವದಲ್ಲಿ ಅದರ ಖ್ಯಾತಿಯನ್ನು ಹೆಚ್ಚಿಸಿದ್ದೀರಿ…” ಎಂದು ಪ್ರಧಾನಿ ಹೇಳಿದರು.

ದ್ವಿಪಕ್ಷೀಯ ಸಭೆಯ ಸಂದರ್ಭದಲ್ಲಿ ಉಭಯ ನಾಯಕರು ಬಹು ಒಪ್ಪಂದಗಳ ವಿನಿಮಯಕ್ಕೆ ಸಾಕ್ಷಿಯಾದರು. ಅವರು ಒಟ್ಟಿಗೆ ಯುಪಿಐ ರುಪೇ ಕಾರ್ಡ್ ಸೇವೆಯನ್ನು ಪ್ರಾರಂಭಿಸಿದರು.

ಇದನ್ನೂ ಓದಿ: ಯುಎಇಗೆ ಆಗಮಿಸಿದ ಪ್ರಧಾನಿ ಮೋದಿಗೆ ರಾಯಲ್ ಅಪ್ಪುಗೆ : ಉಭಯ ನಾಯಕರ ನಡುವೆ ಮಹತ್ವದ ಒಪ್ಪಂದ

ಯುಎಇಯಲ್ಲಿರುವ BAPS ಹಿಂದೂ ಮಂದಿರ

ಬೋಚಸನ್ವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (BAPS) ಮಂದಿರವನ್ನು ಫೆಬ್ರವರಿ 14 ರಂದು ಅಬುಧಾಬಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.  ಉದ್ಘಾಟನೆಯ ಅಧ್ಯಕ್ಷತೆಯನ್ನು ಆಧ್ಯಾತ್ಮಿಕ ಗುರು ಮಹಾಂತ ಸ್ವಾಮಿ ಮಹಾರಾಜರು ವಹಿಸುವರು.

BAPS ಹಿಂದೂ ಮಂದಿರವನ್ನು ಗುಲಾಬಿ ರಾಜಸ್ಥಾನ ಮರಳುಗಲ್ಲು ಮತ್ತು ಬಿಳಿ ಇಟಾಲಿಯನ್ ಮಾರ್ಬಲ್ ಕಲ್ಲಿನಿಂದ ಮಾಡಲಾಗಿದ್ದು, ಭಾರತದಲ್ಲಿ ಕೆತ್ತಲಾಗಿದ್ದು ಜೋಡಣೆಗಾಗಿ ಯುಎಇಗೆ ಸಾಗಿಸಲಾಗಿದೆ. ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು 2015 ರಲ್ಲಿ ಪ್ರಧಾನಿ ಮೋದಿ ದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಂದಿರ ನಿರ್ಮಾಣಕ್ಕಾಗಿ 13.5 ಎಕರೆ ಭೂಮಿಯನ್ನು ದಾನ ಮಾಡಿದ್ದರು.

ಜನವರಿ 2019 ರಲ್ಲಿ, ಯುಎಇ ಸರ್ಕಾರವು ಇನ್ನೂ 13.5 ಎಕರೆ ಭೂಮಿಯನ್ನು ಮಂಜೂರು ಮಾಡಿತು, ಹೀಗೆ ಒಟ್ಟು 27 ಎಕರೆ ಭೂಮಿಯನ್ನು ದೇವಾಲಯಕ್ಕೆ ಉಡುಗೊರೆಯಾಗಿ ನೀಡಿತು.  2017 ರಲ್ಲಿ ಪ್ರಧಾನಿ ಮೋದಿ ಇದಕ್ಕೆ ಅಡಿಪಾಯ ಹಾಕಿದ್ದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತ್ರಿವಿಕ್ರಮ ಜೊತೆ ಗೆಳೆತನ ಅಷ್ಟೇ, ಪೊಸ್ಸೆಸ್ಸಿವ್​ನೆಸ್ ಇರಲಿಲ್ಲ: ಭವ್ಯಾ
ತ್ರಿವಿಕ್ರಮ ಜೊತೆ ಗೆಳೆತನ ಅಷ್ಟೇ, ಪೊಸ್ಸೆಸ್ಸಿವ್​ನೆಸ್ ಇರಲಿಲ್ಲ: ಭವ್ಯಾ
‘ನನ್ನ, ತ್ರಿವಿಕ್ರಮ್ ನಡುವೆ ಏನೂ ಇಲ್ಲ, ಪದೇ ಪದೇ ಇದೇ ಹೇಳೋಕಾಗಲ್ಲ’: ಭವ್ಯಾ
‘ನನ್ನ, ತ್ರಿವಿಕ್ರಮ್ ನಡುವೆ ಏನೂ ಇಲ್ಲ, ಪದೇ ಪದೇ ಇದೇ ಹೇಳೋಕಾಗಲ್ಲ’: ಭವ್ಯಾ
ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್
ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್
ಹೊಸ ಗೆಟಪ್ ನಲ್ಲಿ ಸಭೆಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್!
ಹೊಸ ಗೆಟಪ್ ನಲ್ಲಿ ಸಭೆಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್!
ರೈಲ್ವೆ ಟಿಕೆಟ್ ಕಲೆಕ್ಟರ್ ವೇಗಕ್ಕೆ ಶರಣಾದ ಕ್ರಿಕೆಟ್ ಸಾಮ್ರಾಟ..!
ರೈಲ್ವೆ ಟಿಕೆಟ್ ಕಲೆಕ್ಟರ್ ವೇಗಕ್ಕೆ ಶರಣಾದ ಕ್ರಿಕೆಟ್ ಸಾಮ್ರಾಟ..!
ಪಕ್ಷದ ನಾಯಕರು ಒಂದೆಡೆ ಸೇರಿ ಊಟ ಮಾಡುವುದು ತಪ್ಪಲ್ಲ: ಸಿದ್ದರಾಮಯ್ಯ
ಪಕ್ಷದ ನಾಯಕರು ಒಂದೆಡೆ ಸೇರಿ ಊಟ ಮಾಡುವುದು ತಪ್ಪಲ್ಲ: ಸಿದ್ದರಾಮಯ್ಯ
ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್
ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್
ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್
ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್
ವಿರಾಟ್ ಕೊಹ್ಲಿ ಒಂದಂಕಿಗೆ ಔಟ್ ಆಗುತ್ತಿದ್ದಂತೆ ಸ್ಟೇಡಿಯಂ ಖಾಲಿ ಖಾಲಿ
ವಿರಾಟ್ ಕೊಹ್ಲಿ ಒಂದಂಕಿಗೆ ಔಟ್ ಆಗುತ್ತಿದ್ದಂತೆ ಸ್ಟೇಡಿಯಂ ಖಾಲಿ ಖಾಲಿ
ರೀಲ್ಸ್​​ ನೋಡುತ್ತಾ ಸರ್ಕಾರಿ ಬಸ್ ​ಚಲಾಯಿಸಿದ್ದ ಚಾಲಕ ಅಮಾನತು
ರೀಲ್ಸ್​​ ನೋಡುತ್ತಾ ಸರ್ಕಾರಿ ಬಸ್ ​ಚಲಾಯಿಸಿದ್ದ ಚಾಲಕ ಅಮಾನತು