AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

2022ರ ಅಂತ್ಯದ ಹೊತ್ತಿಗೆ ಭಾರತದಲ್ಲಿ ಶತಕೋಟಿ ಡೋಸ್​ಗಳಷ್ಟು ಕೊರೊನಾ ಲಸಿಕೆ ಉತ್ಪಾದನೆ ಗುರಿ: ಅಮೆರಿಕ ಅಧ್ಯಕ್ಷ ಜೋ ಬೈಡನ್​

ಕೊವ್ಯಾಕ್ಸ್​ ಜಾಗತಿಕ ಪೂರೈಕೆ ಕಾರ್ಯಕ್ರಮದಡಿ ಅಮೆರಿಕ ಈಗಾಗಲೇ 160 ಮಿಲಿಯನ್​ ಡೋಸ್​ಗಳಷ್ಟು ಕೊರೊನಾ ಲಸಿಕೆಯನ್ನು 100ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಕಳಿಸಿಕೊಟ್ಟಿದೆ. 

2022ರ ಅಂತ್ಯದ ಹೊತ್ತಿಗೆ ಭಾರತದಲ್ಲಿ ಶತಕೋಟಿ ಡೋಸ್​ಗಳಷ್ಟು ಕೊರೊನಾ  ಲಸಿಕೆ ಉತ್ಪಾದನೆ ಗುರಿ: ಅಮೆರಿಕ ಅಧ್ಯಕ್ಷ ಜೋ ಬೈಡನ್​
ಜೋ ಬೈಡನ್​
TV9 Web
| Edited By: |

Updated on: Sep 23, 2021 | 1:41 PM

Share

ವಾಷಿಂಗ್ಟನ್​: ಕ್ವಾಡ್​ ಸಹಭಾಗಿತ್ವ (Quad Partnership)ದಲ್ಲಿ ಭಾರತದಲ್ಲಿ 2022ರ ಹೊತ್ತಿಗೆ ಕನಿಷ್ಠ ಒಂದು ಶತಕೋಟಿ (ಒಂದು ಬಿಲಿಯನ್​) ಡೋಸ್​ಗಳಷ್ಟು ಕೊರೊನಾ ಲಸಿಕೆ ಉತ್ಪಾದನೆ ಮಾಡುವ ಗುರಿಯಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್​ ಬುಧವಾರ ಹೇಳಿದ್ದಾರೆ. ಸದ್ಯದ ಮಟ್ಟಿಗೆ ಕೊವಿಡ್​ 19 ವಿರುದ್ಧ ಎಲ್ಲರೂ ಒಂದಾಗಿ ಹೋರಾಡುವುದನ್ನು ಬಿಟ್ಟು ಇನ್ಯಾವುದೇ ತುರ್ತು ಕೆಲಸ ಇಲ್ಲ ಎಂದೂ ಹೇಳಿದ್ದಾರೆ. 

ಕೊವಿಡ್​ 19 ಸಂಬಂಧಪಟ್ಟಂತೆ ಜಾಗತಿಕ ಶೃಂಗಸಭೆಯಲ್ಲಿ ವರ್ಚ್ಯುವಲ್​ ಆಗಿ ಭಾಷಣ ಮಾಡಿದ ಬೈಡನ್​, ಕೊವಿಡ್​ 19 ವಿರುದ್ಧ ಹೋರಾಡಲು, ಪರಿಣಾಮಕಾರಿ ಕೊರೊನಾ ಲಸಿಕೆ ಉತ್ಪಾದನೆ ಮಾಡುವ ಸಂಬಂಧ ಕ್ವಾಡ್​ ಸಹಭಾಗಿ ದೇಶಗಳು, ಅಲ್ಲಿನ ಔಷಧಿ ಕಂಪನಿಗಳ ಜತೆ ಕೆಲಸ ಮಾಡಲಾಗುತ್ತಿದೆ. ಎಲ್ಲರೂ ಒಟ್ಟಾಗಿ ಕೊವಿಡ್​ 19 ಲಸಿಕೆಗಳ ಉತ್ಪಾದನೆಯನ್ನು ಹೆಚ್ಚಿಸುವುದೇ ಆದ್ಯತೆಯಾಗಿದೆ ಎಂದು ಬೈಡನ್​ ತಿಳಿಸಿದ್ದಾರೆ.  ಭಾರತದಲ್ಲಿ 2022ರ ಅಂತ್ಯದೊಳಗೆ ಬಿಲಿಯನ್​​ಗಳಷ್ಟು ಡೋಸ್​ ಕೊವಿಡ್​ 19 ಲಸಿಕೆ ಉತ್ಪಾದನೆ ಮಾಡಲು ನಮ್ಮ ಕ್ವಾಡ್​ ಸಹಭಾಗಿತ್ಯ ಮುಂದಾಗಿದೆ. ಅಷ್ಟೇ ಅಲ್ಲ, ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಅಮೆರಿಕದ ಜಾನ್ಸನ್​ ಆ್ಯಂಡ್ ಜಾನ್ಸನ್​ ಕಂಪನಿಯ ಕೊವಿಡ್​ 19 ಲಸಿಕೆಯನ್ನು 500 ಮಿಲಿಯನ್​ ಡೋಸ್​ಗೂ ಅಧಿಕ ಉತ್ಪಾದನೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಕೊವ್ಯಾಕ್ಸ್​ ಜಾಗತಿಕ ಪೂರೈಕೆ ಕಾರ್ಯಕ್ರಮದಡಿ ಅಮೆರಿಕ ಈಗಾಗಲೇ 160 ಮಿಲಿಯನ್​ ಡೋಸ್​ಗಳಷ್ಟು ಕೊರೊನಾ ಲಸಿಕೆಯನ್ನು 100ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಕಳಿಸಿಕೊಟ್ಟಿದೆ.  ಅಮರಿಕದಿಂದ ಅರ್ಧ ಶತಕೋಟಿ ಡೋಸ್​ಗಳಷ್ಟು ಫೈಜರ್​ ಲಸಿಕೆಯನ್ನು ದೇಣಿಗೆ ನೀಡುವುದಾಗಿ ಜೂನ್​​ನಲ್ಲಿ ಜಿ-7 ಶೃಂಗಸಭೆಗೂ ಮೊದಲು ಬೈಡನ್​ ಘೋಷಿಸಿದ್ದರು. ಅದರ ಸಂಬಂಧ ಇತರ ದೇಶಗಳಿಗೆ ಲಸಿಕೆ ಸಾಗಣೆ ಕಾರ್ಯ ಈಗಾಗಲೇ ಪ್ರಾರಂಭವಾಗಿದೆ ಎಂದು ಬೈಡನ್​ ತಿಳಿಸಿದ್ದಾರೆ.  ಅಷ್ಟೇ ಅಲ್ಲ, ಇನ್ನೂ ಅರ್ಧ ಶತಕೋಟಿ ಡೋಸ್​ಗಳಷ್ಟು ಫೈಜರ್​ ಲಸಿಕೆಯನ್ನು ಮುಂದಿನ ವರ್ಷದ ಹೊತ್ತಿಗೆ, ಬಡ ಮತ್ತು ಮಧ್ಯಮ ರಾಷ್ಟ್ರಗಳಿಗೆ ಕಳಿಸಲಾಗುವುದು ಎಂದೂ ಘೋಷಿಸಿದ್ದಾರೆ.

ಇದನ್ನೂ ಓದಿ: Redmi Smart TV: ಭಾರತದಲ್ಲಿ ಬಿಡುಗಡೆ ಆಯ್ತು ಅತ್ಯಂತ ಕಡಿಮೆ ಬೆಲೆ, ಭರ್ಜರಿ ಫೀಚರ್ಸ್​ನ ಹೊಸ ರೆಡ್ಮಿ ಸ್ಮಾರ್ಟ್​ ಟಿವಿ

Viral News: ವಿಚ್ಛೇದನದ ಬಳಿಕ ಪಾರ್ಟಿ ಆಯೋಜಿಸಿ ಸಂಭ್ರಮಿಸಿದ 45ರ ಮಹಿಳೆ! 17 ವರ್ಷದ ದಾಂಪತ್ಯ ಜೀವನದ ಕೊನೆಯ ದಿನವದು

(Produce 1 Billion Covid Jabs In India Says US President Joe Biden)

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ