AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಂಪ್ ಹತ್ಯೆ ಯತ್ನ: ಶ್ವೇತಭವನದಲ್ಲಿ ಗುಂಡು ಹಾರಿಸಿದ ಶೂಟರ್ ವಿರುದ್ಧ ಅಧಿಕೃತ ದೂರು ದಾಖಲು, ದೋಷಿ ಸಾಬೀತಾದರೆ ಜೀವಾವಧಿ ಶಿಕ್ಷೆ

ಶ್ವೇತಭವನದ ಭೋಜನಕೂಟದಲ್ಲಿ ಟ್ರಂಪ್ ಹತ್ಯೆಗೆ ಯತ್ನಿಸಿದ ಕೋಲ್ ಥಾಮಸ್ ಅಲೆನ್ ವಿರುದ್ಧ ಅಧ್ಯಕ್ಷರ ಹತ್ಯೆ ಯತ್ನ ಸೇರಿದಂತೆ ಗಂಭೀರ ಫೆಡರಲ್ ಆರೋಪಗಳನ್ನು ದಾಖಲಿಸಲಾಗಿದೆ. ಇವು ಸಾಬೀತಾದರೆ ಆತನಿಗೆ ಜೀವಾವಧಿ ಶಿಕ್ಷೆ ಎದುರಾಗಲಿದೆ. ಉನ್ನತ ಶಿಕ್ಷಣ ಪಡೆದ ಅಲೆನ್, ಟ್ರಂಪ್ ವಿರೋಧಿ ಪ್ರಣಾಳಿಕೆ ಬರೆದು ದಾಳಿ ನಡೆಸಿದ್ದ.

ಟ್ರಂಪ್ ಹತ್ಯೆ ಯತ್ನ: ಶ್ವೇತಭವನದಲ್ಲಿ ಗುಂಡು ಹಾರಿಸಿದ ಶೂಟರ್ ವಿರುದ್ಧ ಅಧಿಕೃತ ದೂರು ದಾಖಲು, ದೋಷಿ ಸಾಬೀತಾದರೆ ಜೀವಾವಧಿ ಶಿಕ್ಷೆ
ಆಲೆನ್Image Credit source: Truth Social
ನಯನಾ ರಾಜೀವ್
|

Updated on: Apr 28, 2026 | 7:42 AM

Share

ವಾಷಿಂಗ್ಟನ್,ಏಪ್ರಿಲ್ 28: ಶ್ವೇತಭವನದ ಪತ್ರಿಕಾ ಭೋಜನಕೂಟದ ವೇಳೆ ಗುಂಡಿನ ದಾಳಿ(Firing) ನಡೆಸಿ ಸಂಚಲನ ಮೂಡಿಸಿದ್ದ ಕ್ಯಾಲಿಫೋರ್ನಿಯಾದ 31 ವರ್ಷದ ಕೋಲ್ ತೋಮಸ್ ಅಲೆನ್ ವಿರುದ್ಧ ಅಮೆರಿಕದ ಫೆಡರಲ್ ನ್ಯಾಯಾಲಯವು ‘ಅಧ್ಯಕ್ಷರ ಹತ್ಯೆ ಯತ್ನ’ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಹೊರಿಸಿದೆ. ಈ ಅಪರಾಧಗಳು ಸಾಬೀತಾದಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆಯಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಸೋಮವಾರ ವಾಷಿಂಗ್ಟನ್‌ನ ಫೆಡರಲ್ ನ್ಯಾಯಾಲಯಕ್ಕೆ ಅಲೆನ್‌ನನ್ನು ಹಾಜರುಪಡಿಸಲಾಯಿತು. ಹಂಗಾಮಿ ಅಟಾರ್ನಿ ಜನರಲ್ ಟಾಡ್ ಬ್ಲಾಂಚೆ ಅವರ ಪ್ರಕಾರ, ಅಲೆನ್ ಈ ದಾಳಿಗಾಗಿ ವ್ಯವಸ್ಥಿತವಾಗಿ ಸಿದ್ಧತೆ ನಡೆಸಿದ್ದ. ಉನ್ನತ ಶಿಕ್ಷಣ ಪಡೆದ ಅಲೆನ್ ಇಂತಹ ಕೃತ್ಯಕ್ಕೆ ಮುಂದಾಗಿರುವುದು ತನಿಖಾಧಿಕಾರಿಗಳನ್ನು ಬೆಚ್ಚಿಬೀಳಿಸಿದೆ.

ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವೀಧರನಾಗಿರುವ ಈತ, ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾನೆ.ಈತ ಒಬ್ಬ ಹವ್ಯಾಸಿ ವಿಡಿಯೋ ಗೇಮ್ ಡೆವಲಪರ್ ಎಂದು ಗುರುತಿಸಿಕೊಳ್ಳುತ್ತಿದ್ದ.

ಮತ್ತಷ್ಟು ಓದಿ: ಟ್ರಂಪ್ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ, ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಜಾಗವಿಲ್ಲ: ಪ್ರಧಾನಿ ಮೋದಿ

ದಾಳಿಗೂ ಮುನ್ನ ತನ್ನ ಕುಟುಂಬಕ್ಕೆ ಕಳುಹಿಸಿದ ಪ್ರಣಾಳಿಕೆಯಲ್ಲಿ ತನ್ನನ್ನು ‘ಫ್ರೆಂಡ್ಲಿ ಫೆಡರಲ್ ಅಸಾಸಿನ್’ ಎಂದು ಬಣ್ಣಿಸಿಕೊಂಡಿದ್ದ. ಅಧ್ಯಕ್ಷ ಟ್ರಂಪ್ ಅವರನ್ನು ದುಷ್ಟ ವ್ಯಕ್ತಿ ಎಂದು ಕರೆದಿದ್ದ ಆತ, ಆಡಳಿತದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದ.

ಆರೋಪಿಯು ಕ್ಯಾಲಿಫೋರ್ನಿಯಾದಿಂದ ಚಿಕಾಗೋಗೆ ರೈಲಿನಲ್ಲಿ ಪ್ರಯಾಣಿಸಿ, ನಂತರ ವಾಷಿಂಗ್ಟನ್‌ಗೆ ಬಂದಿದ್ದ. ಕಾರ್ಯಕ್ರಮ ನಡೆಯುತ್ತಿದ್ದ ಹಿಲ್ಟನ್ ಹೋಟೆಲ್‌ನಲ್ಲಿ ಅತಿಥಿಯಾಗಿ ಚೆಕ್-ಇನ್ ಆಗಿದ್ದನು. ಭದ್ರತಾ ಬ್ಯಾರಿಕೇಡ್‌ಗಳನ್ನು ದಾಟಿ ಓಡಿಬಂದು ಹಲವು ಸುತ್ತು ಗುಂಡು ಹಾರಿಸುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಅಂತಿಮವಾಗಿ ಭದ್ರತಾ ಸಿಬ್ಬಂದಿ ಆತನನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದರು.

ಅಲೆನ್ ಪರವಾಗಿ ವಕೀಲರು ವಾದ ಮಂಡಿಸಿದ್ದು, ಆತನಿಗೆ ಯಾವುದೇ ಹಳೆಯ ಕ್ರಿಮಿನಲ್ ಹಿನ್ನೆಲೆ ಇಲ್ಲ ಎಂದು ತಿಳಿಸಿದ್ದಾರೆ. ಆದರೆ, ಆತನ ಪ್ರಣಾಳಿಕೆ ಮತ್ತು ಸಾಮಾಜಿಕ ಮಾಧ್ಯಮಗಳ ಬರಹಗಳು ಆತನ ಕ್ರೂರ ಉದ್ದೇಶಕ್ಕೆ ಸಾಕ್ಷಿಯಾಗಿವೆ ಎಂದು ಪ್ರಾಸಿಕ್ಯೂಟರ್‌ಗಳು ವಾದಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ
ಕರ್ನಾಟಕಕ್ಕೆ ಕೇರಳದ ಮೆಡಿಕಲ್ ತ್ಯಾಜ್ಯ ಡಂಪ್
ಕರ್ನಾಟಕಕ್ಕೆ ಕೇರಳದ ಮೆಡಿಕಲ್ ತ್ಯಾಜ್ಯ ಡಂಪ್
ಸೌಜನ್ಯ ಕೇಸ್​: SITಗೆ ನೀಡಿದ ಮುಚ್ಚಿದ ಲಕೋಟೆ ಬಗ್ಗೆ ಜಯಂತ್ ಸ್ಫೋಟಕ ಹೇಳಿಕೆ
ಸೌಜನ್ಯ ಕೇಸ್​: SITಗೆ ನೀಡಿದ ಮುಚ್ಚಿದ ಲಕೋಟೆ ಬಗ್ಗೆ ಜಯಂತ್ ಸ್ಫೋಟಕ ಹೇಳಿಕೆ
‘ನಿಮಗೆ ಪಾಠ ಕಲಿಸೋದು ಹೇಗೆಂದು ಗೊತ್ತು’: ಕಿಚ್ಚನ ಕ್ಲಾಸ್​​ಗೆ ರೆಡಿಯಾಗಿ
‘ನಿಮಗೆ ಪಾಠ ಕಲಿಸೋದು ಹೇಗೆಂದು ಗೊತ್ತು’: ಕಿಚ್ಚನ ಕ್ಲಾಸ್​​ಗೆ ರೆಡಿಯಾಗಿ
ಮಾವಿನಕೆರೆ ರಂಗನಾಥ ಸ್ವಾಮಿ ದೇವಾಲಯದಲ್ಲಿ ದೇವೇಗೌಡ ಪೂಜೆ
ಮಾವಿನಕೆರೆ ರಂಗನಾಥ ಸ್ವಾಮಿ ದೇವಾಲಯದಲ್ಲಿ ದೇವೇಗೌಡ ಪೂಜೆ
ಮಹಾಲಯ ಅಮಾವಾಸ್ಯೆಯಂದೇ ಪಿಡಬ್ಲೂಡಿ ಕಚೇರಿಯಲ್ಲಿ ವಾಮಾಚಾರ!
ಮಹಾಲಯ ಅಮಾವಾಸ್ಯೆಯಂದೇ ಪಿಡಬ್ಲೂಡಿ ಕಚೇರಿಯಲ್ಲಿ ವಾಮಾಚಾರ!