ಯುನೈಟೆಡ್​ ಕಿಂಗ್​ಡಮ್ 30ರೊಳಗಿನ ವಯಸ್ಸಿನವರಿಗೆ ಆಸ್ಟ್ರಾಜೆನೆಕಾ ಬದಲು ಪರ್ಯಾಯ ಲಸಿಕೆ ನೀಡಲಿದೆ

ಯುಕೆಯ ಔಷಧಿ ಮತ್ತು ಹೆಲ್ತ್​ಕೇರ್ ನಿಯಂತ್ರಣ ಸಂಸ್ಥೆ (ಎಮ್ ಎಚ್ ಆರ್​ ಎ) ಸಹ ಆಕ್ಸಫರ್ಡ್/ಆಸ್ಟ್ರಾಜೆನಿಕಾ ಮತ್ತು ರಕ್ತ ಹೆಪದಪುಗಟ್ಟುವಿಕೆ ನಡುವೆ ಬಲವಾದ ಸಾಧ್ಯತೆ ಇದೆಯೆನ್ನುವುದು ನಿಯಮಿತ ಮಾನಿಟರಿಂಗ್ ಮೂಲಕ ಪತ್ತಯಾಗಿದೆ, ಅದರೆ ಅದು ತೀರ ಕಡಿಮೆ ಪ್ರಮಾಣದ ಪ್ರಕರಣಗಳಲ್ಲಿ ಅದು ಕಂಡುಬಂದಿದೆ ಎಂದು ಹೇಳಿದೆ.

  • TV9 Web Team
  • Published On - 0:11 AM, 9 Apr 2021
ಯುನೈಟೆಡ್​ ಕಿಂಗ್​ಡಮ್ 30ರೊಳಗಿನ ವಯಸ್ಸಿನವರಿಗೆ ಆಸ್ಟ್ರಾಜೆನೆಕಾ ಬದಲು ಪರ್ಯಾಯ ಲಸಿಕೆ ನೀಡಲಿದೆ
ಆಸ್ಟ್ರಾಜೆನೆಕ ಲಸಿಕೆ

ಕೊವಿಡ್​ ಸೋಂಕಿನ ವಿರುದ್ಧ ಆಕ್ಸಫರ್ಡ್/ಆಸ್ಟ್ರಾಜೆನೆಕಾ ಲಸಿಕೆ ತೆಗದುಕೊಂಡ ನಂತರ ಕೆಲವರಲ್ಲಿ ರಕ್ತ ಹೆಪ್ಪುಗಟ್ಟಿವಿಕೆಯ ದೂರು ವರದಿಯಾದ ನಂತರ ಯುನೈಟೆಡ್​ ಕಿಂಗ್​​ಡಮ್​ನಲ್ಲಿ ಮೂವತ್ತಕ್ಕಿಂತ ಕಡಿಮೆ ವಯಸ್ಸಿನವರಿಗೆ ಅದಕ್ಕೆ ಪರ್ಯಾಯವಾದ ಲಸಿಕೆ ಒದಗಿಸುವುದಾಗಿ ಆ ದೇಶದ ಔಷಧ ನಿಯಂತ್ರಣ ಸಂಸ್ಥೆ ಬುಧವಾರದಂದು ಹೇಳಿದೆ. ಏತನ್ಮಧ್ಯೆ, ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (ಈಎಮ್​ಎ) ವ್ಯಾಕ್ಸಿನ್ ಮತ್ತು ರಕ್ತ ಹೆಪ್ಪುಗಟ್ಟುವಿಕೆ ನಡುವೆ ಸಂಬಂಧವಿದೆ ಎಂದು ಹೇಳಿದೆ.

ಯುಕೆಯ ಔಷಧಿ ಮತ್ತು ಹೆಲ್ತ್​ಕೇರ್ ನಿಯಂತ್ರಣ ಸಂಸ್ಥೆ (ಎಮ್ ಎಚ್ ಆರ್​ ಎ) ಸಹ ಆಕ್ಸಫರ್ಡ್/ಆಸ್ಟ್ರಾಜೆನೆಕಾ ಮತ್ತು ರಕ್ತ ಹೆಪದಪುಗಟ್ಟುವಿಕೆ ನಡುವೆ ಬಲವಾದ ಸಾಧ್ಯತೆ ಇದೆಯೆನ್ನುವುದು ನಿಯಮಿತ ಮಾನಿಟರಿಂಗ್ ಮೂಲಕ ಪತ್ತಯಾಗಿದೆ, ಅದರೆ ಅದು ತೀರ ಕಡಿಮೆ ಪ್ರಮಾಣದ ಪ್ರಕರಣಗಳಲ್ಲಿ ಅದು ಕಂಡುಬಂದಿದೆ ಎಂದು ಹೇಳಿದೆ.

ಮಾರ್ಚ್ ಕೊನೆಭಾಗದಲ್ಲಿ ಎಮ್ ಎಚ್ ಆರ್​ ಎ ನಡೆಸಿದ ಒಂದು ಪರಿಶೀಲನೆ ಪ್ರಕಾರ, ಆಸ್ಟ್ರಾಜೆನೆಕಾ ಲಸಿಕೆ ತೆಗದುಕೊಂಡ ನಂತರ ಯುನೈಟೆಡ್​ ಕಿಂಗಡಮ್​​ನಲ್ಲಿ 79 ಜನರಲ್ಲಿ ರಕ್ತ ಹೆಪ್ಪುಗಟ್ಟಿದ್ದು ಕಂಡುಬಂದಿದೆ ಮತ್ತು ಅವರಲ್ಲಿ 19 ಜನ ಮರಣ ಹೊಂದಿದ್ದಾರೆ. ಲಸಿಕೆ ತೆಗೆದುಕೊಂಡ ಕಾರಣ ಅವರಲ್ಲಿ ರಕ್ತ ಹೆಪ್ಪುಗಟ್ಟಿತು ಎನ್ನುವುದಕ್ಕೆ ಪುರಾವೆ ಲಭ್ಯವಾಗಿಲ್ಲ, ಆದರೆ ಗಮನಿಸಬೇಕಾದ ಸಂಗತಿಯೇನೆಂದರೆ ಈ ಲಸಿಕೆಯು ಕೊವಿಡ್-19 ಸೋಂಕಿನಿಂದ ಜನರಿಗೆ ರಕ್ಷಣೆ ನೀಡುತ್ತಿದೆ ಎನ್ನುವುದು ಅದರಿಂದ ಅಪಾಯವಿದೆಯೆನ್ನುವುದು ಸಂಗತಿಯನ್ನು ನಗಣ್ಯವಾಗಿಸುತ್ತದೆ ಎಂದು ಎಮ್ ಎಚ್ ಆರ್​ ಎ ಹೇಳಿದೆ

ಇದನ್ನೂ ಓದಿ: ಆಸ್ಟ್ರಾಜೆನೆಕಾ ಅಡ್ಡಪರಿಣಾಮದ ಬಗ್ಗೆ WHO ಸ್ಪಷ್ಟನೆ; ಲಸಿಕೆ ಬಳಕೆ ಮಾಡಬಹುದು ಎಂದ ವಿಶ್ವ ಆರೋಗ್ಯ ಸಂಸ್ಥೆ