AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತಕ್ಕೆ ಶೇ.100ರಷ್ಟು ಸುಂಕದ ಬೆದರಿಕೆ, ತನಗೆ ಬೇಕಾದಾಗ ಯುರೇನಿಯಂ ಖರೀದಿಗಿಲ್ಲ ನಿರ್ಬಂಧ, ಅಮೆರಿಕದ ಇಬ್ಬಗೆ ನೀತಿ ಜಗಜ್ಜಾಹೀರು

ಅಮೆರಿಕ ರಷ್ಯಾದಿಂದ ತೈಲ ಖರೀದಿಸುವ ಭಾರತದ ಮೇಲೆ ಶೇ.100 ಆಮದು ಸುಂಕ ವಿಧಿಸುವ ಬೆದರಿಕೆ ಹಾಕಿದೆ. ಆದರೆ, ತನ್ನ ನಾಗರಿಕ ಪರಮಾಣು ರಿಯಾಕ್ಟರ್‌ಗಳಿಗೆ ಅಗತ್ಯವಾದ ಯುರೇನಿಯಂ ಅನ್ನು ರಷ್ಯಾದಿಂದಲೇ ಆಮದು ಮಾಡಿಕೊಳ್ಳಲು ಮಸೂದೆಯಲ್ಲಿ ವಿನಾಯಿತಿ ಕಾಯ್ದಿರಿಸಿದೆ. ಇದು ಅಮೆರಿಕದ ಇಬ್ಬಗೆ ನೀತಿಯನ್ನು ಸ್ಪಷ್ಟಪಡಿಸುತ್ತದೆ, ಮತ್ತು ಭಾರತಕ್ಕೆ ಬಲವಾದ ರಾಜತಾಂತ್ರಿಕ ಅಸ್ತ್ರವಾಗಿದೆ.

ಭಾರತಕ್ಕೆ ಶೇ.100ರಷ್ಟು ಸುಂಕದ ಬೆದರಿಕೆ, ತನಗೆ ಬೇಕಾದಾಗ ಯುರೇನಿಯಂ ಖರೀದಿಗಿಲ್ಲ ನಿರ್ಬಂಧ, ಅಮೆರಿಕದ ಇಬ್ಬಗೆ ನೀತಿ ಜಗಜ್ಜಾಹೀರು
ಡೊನಾಲ್ಡ್​ ಟ್ರಂಪ್ Image Credit source: PTI
ನಯನಾ ರಾಜೀವ್
|

Updated on: Sep 18, 2026 | 9:41 AM

Share

ವಾಷಿಂಗ್ಟನ್, ಸೆಪ್ಟೆಂಬರ್ 18: ರಷ್ಯಾದಿಂದ ಕಚ್ಚಾ ತೈಲ ಮತ್ತು ಅನಿಲ ಖರೀದಿಸುತ್ತಿರುವ ಭಾರತ ಹಾಗೂ ಚೀನಾದಂತಹ ದೇಶಗಳ ಮೇಲೆ ಶೇ. 100 ರಷ್ಟು ಆಮದು ಸುಂಕ ವಿಧಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅಧಿಕಾರ ನೀಡುವ ಕಠಿಣ ಮಸೂದೆಯನ್ನು ಅಮೆರಿಕ ಕಾಂಗ್ರೆಸ್ ಅಂಗೀಕರಿಸಿದೆ. ಆದರೆ, ಪ್ರಪಂಚದ ಇತರ ರಾಷ್ಟ್ರಗಳಿಗೆ ಕಠಿಣ ನಿರ್ಬಂಧ ವಿಧಿಸಲು ಮುಂದಾಗಿರುವ ಇದೇ ಅಮೆರಿಕ, ತನ್ನ ನಾಗರಿಕ ಪರಮಾಣು ರಿಯಾಕ್ಟರ್‌ಗಳ ಅಗತ್ಯಕ್ಕಾಗಿ ರಷ್ಯಾದಿಂದ ಯುರೇನಿಯಂ ಆಮದು ಮಾಡಿಕೊಳ್ಳುವುದನ್ನು ಮುಂದುವರೆಸಲು ಮಸೂದೆಯಲ್ಲಿ ಗೌಪ್ಯ ವಿನಾಯಿತಿಗಳನ್ನು ಕಾಯ್ದಿರಿಸಿಕೊಂಡಿರುವುದು ಅದರ ಇಬ್ಬಗೆಯ ನಿಲುವನ್ನು ಬಯಲು ಮಾಡಿದೆ.

ಯುಎಸ್ ಸಂಸತ್ತು ಅಂಗೀಕರಿಸಿರುವ ‘ಲಿಂಡ್ಸೆ ಒ. ಗ್ರಹಾಂ ರಷ್ಯಾ ಮತ್ತು ಇರಾನ್ ನಿರ್ಬಂಧ ಕಾಯ್ದೆ 2026’ ರ ಸೆಕ್ಷನ್ 111 ರಷ್ಯಾದ ರೊಸಾಟಮ್ ಸಂಸ್ಥೆಯ ಯುರೇನಿಯಂ ಆಮದನ್ನು ನಿಯಂತ್ರಿಸುತ್ತದೆ ಎಂದು ಹೇಳಿದರೂ, ಸೆಕ್ಷನ್ 114 ರ ಅಡಿಯಲ್ಲಿ ಅಮೆರಿಕ-ರಷ್ಯಾ ನಾಗರಿಕ ಪರಮಾಣು ಒಪ್ಪಂದ ಮತ್ತು ವೈದ್ಯಕೀಯ ಐಸೊಟೋಪ್‌ಗಳ ಜೊತೆಗೆ ರಿಯಾಕ್ಟರ್‌ಗಳಿಗೆ ಬೇಕಾಗುವ ಕಡಿಮೆ-ಪುಷ್ಟೀಕರಿಸಿದ ಯುರೇನಿಯಂಗೆ (LEU) ವಿನಾಯಿತಿ ನೀಡಲಾಗಿದೆ.

ಅಮೆರಿಕಕ್ಕೆ ರಷ್ಯಾದ ಯುರೇನಿಯಂ ಏಕೆ ಅನಿವಾರ್ಯ?: 2025ರ ಅಂಕಿಅಂಶಗಳ ಪ್ರಕಾರ, ಯುಎಸ್ ನಾಗರಿಕ ಪರಮಾಣು ವಿದ್ಯುತ್ ಸ್ಥಾವರಗಳು ಬಳಸಿದ ಒಟ್ಟು ಯುರೇನಿಯಂ ಪುಷ್ಟೀಕರಣ ಸೇವೆಗಳಲ್ಲಿ ಸುಮಾರು ಶೇಕಡಾ 26 ರಷ್ಟು ಕೇವಲ ರಷ್ಯಾದಿಂದಲೇ ಸರಬರಾಜಾಗಿದೆ. ಅಮೆರಿಕದ ಸ್ವಂತ ಪುಷ್ಟೀಕರಣ ಸಾಮರ್ಥ್ಯ ಕೇವಲ ಶೇ. 23 ರಷ್ಟಿದೆ.

ದ್ವಿಮುಖ ನೀತಿಗೆ ಆಕ್ಷೇಪ: ಭಾರತ ಮತ್ತು ಚೀನಾ ತನ್ನ ನಾಗರಿಕರ ಇಂಧನ ಭದ್ರತೆಗಾಗಿ ರಷ್ಯಾದಿಂದ ತೈಲ ಖರೀದಿಸಿದರೆ ಅದನ್ನು ಉಕ್ರೇನ್ ಯುದ್ಧಕ್ಕೆ ನೆರವು ಎಂದು ದಂಡಿಸಲು ಹೊರಟಿರುವ ಅಮೆರಿಕ, ತನ್ನ ವಿದ್ಯುತ್ ಗ್ರಿಡ್‌ಗಳು ಸ್ಥಗಿತಗೊಳ್ಳಬಾರದು ಎಂಬ ಕಾರಣಕ್ಕೆ ರಷ್ಯಾದಿಂದ ಪರಮಾಣು ಇಂಧನ ಪಡೆಯುತ್ತಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮತ್ತಷ್ಟು ಓದಿ: ಟ್ರಂಪ್ ಕೈಗೆ ಸುಂಕದ ಚಾವಟಿ: ರಷ್ಯಾ-ಭಾರತ ಇಂಧನ ವ್ಯಾಪಾರದ ಮೇಲೆ ಅಮೆರಿಕ ಸಂಸತ್ತಿನ ಕಣ್ಣು

ಮಸೂದೆಗೆ ಟ್ರಂಪ್ ಅಂಕಿತ ಬಾಕಿ: ಪ್ರತಿನಿಧಿ ಸಭೆಯಲ್ಲಿ262-159೯ ಮತಗಳಿಂದ ಮತ್ತು ಸೆನೆಟ್‌ನಲ್ಲಿ 86-11 ಮತಗಳ ಭಾರಿ ಅಂತರದಿಂದ ಅಂಗೀಕಾರಗೊಂಡಿರುವ ಈ ಮಸೂದೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಿಗೆ ರವಾನೆಯಾಗಿದ್ದು, ಶೀಘ್ರದಲ್ಲೇ ಜಾರಿಗೆ ಬರಲಿದೆ.

2028 ರವರೆಗಿನ ವಿನಾಯಿತಿ ಹಿನ್ನೆಲೆ: ಯುಎಸ್ ಈ ಹಿಂದೆ ಮೇ 2024 ರಲ್ಲಿ ರಷ್ಯಾದ ಯುರೇನಿಯಂ ಆಮದನ್ನು ಸಂಪೂರ್ಣ ನಿಷೇಧಿಸುವ ಕಾನೂನು ತಂದಿತ್ತಾದರೂ, ದೇಶೀಯ ಪರ್ಯಾಯ ಪೂರೈಕೆ ಕೊರತೆಯಿಂದಾಗಿ ಅಲ್ಲಿನ ವಿದ್ಯುತ್ ಕಂಪನಿಗಳಿಗೆ ಜನವರಿ 1, 2028 ರವರೆಗೆ ವಿನಾಯಿತಿ ನೀಡುವ ಷರತ್ತನ್ನು ಸೇರಿಸಿತ್ತು. ಅಲ್ಲದೆ, ಸ್ವಾವಲಂಬನೆ ಸಾಧಿಸಲು 2.72 ಶತಕೋಟಿ ಡಾಲರ್ ಅನುದಾನ ಮೀಸಲಿಟ್ಟಿದ್ದರೂ ತಕ್ಷಣಕ್ಕೆ ರಷ್ಯಾವನ್ನು ಸಂಪೂರ್ಣವಾಗಿ ಕೈಬಿಡಲು ಸಾಧ್ಯವಾಗಿಲ್ಲ.

ಜಾಗತಿಕ ಯುರೇನಿಯಂ ಪುಷ್ಟೀಕರಣ ಮಾರುಕಟ್ಟೆ: ರಷ್ಯಾ ವಿಶ್ವದ ಅತ್ಯಂತ ದೊಡ್ಡ ವಾಣಿಜ್ಯ ಯುರೇನಿಯಂ ಪುಷ್ಟೀಕರಣ ಮೂಲಸೌಕರ್ಯವನ್ನು ಹೊಂದಿದೆ. ಕಚ್ಚಾ ತೈಲವನ್ನು ಬೇರೆ ದೇಶಗಳಿಂದ ಸುಲಭವಾಗಿ ಬದಲಾಯಿಸಬಹುದಾದರೂ, ಪರಮಾಣು ರಿಯಾಕ್ಟರ್‌ಗಳಿಗೆ ಬೇಕಾದ ಪುಷ್ಟೀಕರಿಸಿದ ಇಂಧನವನ್ನು ತಕ್ಷಣಕ್ಕೆ ಬೇರೆಡೆಯಿಂದ ಸರಬರಾಜು ಮಾಡುವುದು ತಾಂತ್ರಿಕವಾಗಿ ಅತ್ಯಂತ ಜಟಿಲವಾಗಿದೆ.

ಭಾರತದ ಪಾಲಿಗೆ ಬಲವಾದ ರಾಜತಾಂತ್ರಿಕ ಅಸ್ತ್ರ: ಅಮೆರಿಕವು ರಷ್ಯಾ ತೈಲ ಖರೀದಿಯ ವಿಚಾರದಲ್ಲಿ ಭಾರತಕ್ಕೆ ಶೇ.100 ಸುಂಕದ ಎಚ್ಚರಿಕೆ ನೀಡುತ್ತಿರುವ ಈ ಸಂದರ್ಭದಲ್ಲಿ, ಅಮೆರಿಕ ಸ್ವತಃ ರಷ್ಯಾದಿಂದ ಬಿಲಿಯನ್ ಡಾಲರ್ ಮೌಲ್ಯದ ಯುರೇನಿಯಂ ಆಮದು ಮಾಡಿಕೊಳ್ಳುತ್ತಿರುವ ಈ ವಿಚಾರವು ಭಾರತದ ವಿದೇಶಾಂಗ ಸಚಿವಾಲಯಕ್ಕೆ ಜಾಗತಿಕ ವೇದಿಕೆಯಲ್ಲಿ ಅಮೆರಿಕದ ಒತ್ತಡವನ್ನು ಸಮರ್ಥವಾಗಿ ಎದುರಿಸಲು ಬಲವಾದ ಅಸ್ತ್ರವಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!