AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾನ್‌ನ ಪ್ರಮುಖ ತೈಲ ಕೇಂದ್ರ ಖಾರ್ಗ್ ದ್ವೀಪದ ಬಳಿ ಅಮೆರಿಕ ಕ್ಷಿಪಣಿ ದಾಳಿ: ತೈಲ ಟ್ಯಾಂಕರ್ ಧ್ವಂಸ, ಸರಣಿ ಸ್ಫೋಟ

ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಇರಾನ್‌ನ ಪ್ರಮುಖ ತೈಲ ಕೇಂದ್ರ ಖಾರ್ಗ್ ದ್ವೀಪದ ಬಳಿ ಅಮೆರಿಕ ಕ್ಷಿಪಣಿ ದಾಳಿ ನಡೆಸಿದೆ. ತೈಲ ಟ್ಯಾಂಕರ್ ಧ್ವಂಸಗೊಂಡು ಸರಣಿ ಸ್ಫೋಟಗಳು ಸಂಭವಿಸಿವೆ. ಹಾರ್ಮುಜ್ ಜಲಸಂಧಿಯಲ್ಲಿನ ಉದ್ವಿಗ್ನತೆ ಜಾಗತಿಕ ಇಂಧನ ಪೂರೈಕೆ ಹಾಗೂ ಕಚ್ಚಾ ತೈಲ ಬೆಲೆಗಳ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ಹೆಚ್ಚಿಸಿದೆ. ಇದು ಎರಡು ದೇಶಗಳ ನಡುವೆ ಸಮುದ್ರ ಯುದ್ಧದ ಭೀತಿ ಮೂಡಿಸಿದೆ.

ಇರಾನ್‌ನ ಪ್ರಮುಖ ತೈಲ ಕೇಂದ್ರ ಖಾರ್ಗ್ ದ್ವೀಪದ ಬಳಿ ಅಮೆರಿಕ ಕ್ಷಿಪಣಿ ದಾಳಿ: ತೈಲ ಟ್ಯಾಂಕರ್ ಧ್ವಂಸ, ಸರಣಿ ಸ್ಫೋಟ
ಖಾರ್ಗ್​ Image Credit source: Iran Observer
ನಯನಾ ರಾಜೀವ್
|

Updated on: Sep 05, 2026 | 1:42 PM

Share

ಟೆಹ್ರಾನ್, ಸೆಪ್ಟೆಂಬರ್ 05: ಅಮೆರಿಕ ಮತ್ತು ಇರಾನ್ ನಡುವಿನ ಕಾದಾಟವು ತೀವ್ರಗೊಂಡಿದ್ದು, ಇರಾನ್‌ನ ಪ್ರಮುಖ ಕಚ್ಚಾ ತೈಲ ರಫ್ತು ಕೇಂದ್ರವಾದ ‘ಖಾರ್ಗ್ ದ್ವೀಪ’ದ ಸಮೀಪ ಶನಿವಾರ ಭಾರೀ ಸ್ಫೋಟಗಳು ಸಂಭವಿಸಿವೆ. ಇರಾನ್‌ನ ತೈಲ ಟ್ಯಾಂಕರ್ ಮೇಲೆ ಅಮೆರಿಕ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಈ ಸರಣಿ ಸ್ಫೋಟಗಳು ಕೇಳಿಬಂದಿವೆ ಎಂದು ರಾಯಿಟರ್ಸ್ ವರದಿ ಮಾಡಿವೆ. ಜಾಗತಿಕ ಇಂಧನ ಪೂರೈಕೆಯ ಪ್ರಮುಖ ಜೀವನಾಡಿಯಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಉಭಯ ದೇಶಗಳ ಸೇನಾ ಮುಖಾಮುಖಿಯು ಸಮುದ್ರ ಯುದ್ಧವಾಗಿ ಬದಲಾಗುತ್ತಿರುವುದು ಜಾಗತಿಕ ಮಾರುಕಟ್ಟೆಯಲ್ಲಿ ಆತಂಕ ಮೂಡಿಸಿದೆ.

ಖಾರ್ಗ್ ದ್ವೀಪದ ಬಳಿ ಟ್ಯಾಂಕರ್ ಗುರಿ: ಇರಾನ್‌ನ ಎಸ್‌ಎನ್‌ಎನ್ (SNN) ಮತ್ತು ಫಾರ್ಸ್ ಸುದ್ದಿ ಸಂಸ್ಥೆಗಳ ಪ್ರಕಾರ, ಖಾರ್ಗ್ ದ್ವೀಪದ ಸಮೀಪದಲ್ಲಿದ್ದ ಇರಾನ್ ತೈಲ ಟ್ಯಾಂಕರ್ ಒಂದನ್ನು ಅಮೆರಿಕ ಸೇನೆ ಗುರಿಯಾಗಿಸಿಕೊಂಡಿದೆ. ಸತತ ಸ್ಫೋಟಗಳ ಶಬ್ದ ಸುತ್ತಮುತ್ತಲ ಕರಾವಳಿ ಪ್ರದೇಶಕ್ಕೆ ಕೇಳಿಬಂದಿದ್ದು, ಹಾನಿಯ ಪ್ರಮಾಣವನ್ನು ಪರಿಶೀಲಿಸಲಾಗುತ್ತಿದೆ.

ಆಗಸ್ಟ್ 30 ರಂದು ಅಮೆರಿಕವು ಹಾರ್ಮುಜ್ ಸಮೀಪದ ಲಾರಕ್ ದ್ವೀಪದಲ್ಲಿದ್ದ ಇರಾನ್ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ಜೋರ್ಡಾನ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿತ್ತು.

ಸೆಪ್ಟೆಂಬರ್ 1 ರ ವಾಯುದಾಳಿ: ಸೆಪ್ಟೆಂಬರ್ ಆರಂಭದಲ್ಲೇ ಅಮೆರಿಕವು ಇರಾನ್‌ನ ಕಡಲ ಕಣ್ಗಾವಲು, ರೇಡಾರ್, ಸಂವಹನ ಗೋಪುರಗಳು ಮತ್ತು ಗಣಿ ಹಾಕುವ ವ್ಯವಸ್ಥೆಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ಇರಾಕ್, ಬಹ್ರೇನ್ ಮತ್ತು ಜೋರ್ಡಾನ್‌ನಲ್ಲಿರುವ ಯುಎಸ್ ಪಡೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿ ಎಚ್ಚರಿಕೆ ನೀಡಿತ್ತು.

ಮತ್ತಷ್ಟು ಓದಿ: ಇರಾನ್‌ ಜೊತೆ ಮಾತುಕತೆ ಓಕೆ, ವ್ಯಾಪಾರ ಒಪ್ಪಂದಕ್ಕೆ ಕೈಹಾಕಬೇಡಿ: ಭಾರತಕ್ಕೆ ನಯವಾಗಿಯೇ ಎಚ್ಚರಿಕೆ ರವಾನಿಸಿದ ಅಮೆರಿಕ

ಹಾರ್ಮುಜ್ ಜಲಸಂಧಿ ಮತ್ತು ಜಾಗತಿಕ ಇಂಧನ ಆತಂಕ

ತೈಲ ಸರಬರಾಜಿನ ಕುತ್ತು: ವಿಶ್ವದ ಒಟ್ಟು ಸಮುದ್ರ ಮಾರ್ಗದ ಕಚ್ಚಾ ತೈಲ ಸಾಗಣೆಯ ಸುಮಾರು ಶೇ.20 ಕ್ಕೂ ಹೆಚ್ಚು ಪಾಲು ಹಾರ್ಮುಜ್ ಜಲಸಂಧಿಯ ಮೂಲಕವೇ ಹಾದುಹೋಗುತ್ತದೆ. ಈ ಜಲಮಾರ್ಗದಲ್ಲಿ ಇರಾನ್ ವಿಧಿಸಿರುವ ನಿರ್ಬಂಧಗಳನ್ನು ಮುರಿಯಲು ಅಮೆರಿಕ ನೌಕಾಪಡೆ ಯತ್ನಿಸುತ್ತಿದ್ದು, ಎರಡೂ ಕಡೆಯ ಕ್ಷಿಪಣಿ ಕಾಳಗದಿಂದಾಗಿ ವಾಣಿಜ್ಯ ಹಡಗುಗಳ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ತೈಲ ದರ ಏರಿಕೆ ಭೀತಿ: ಖಾರ್ಗ್ ದ್ವೀಪವು ಇರಾನ್‌ನ ಒಟ್ಟು ಕಚ್ಚಾ ತೈಲ ರಫ್ತಿನ ಶೇ. 90 ರಷ್ಟನ್ನು ನಿರ್ವಹಿಸುವ ಪ್ರಮುಖ ಟರ್ಮಿನಲ್ ಆಗಿದೆ. ಈ ಪ್ರದೇಶದಲ್ಲಿ ಯುದ್ಧದ ಕಾರ್ಮೋಡ ಕವಿದಿರುವುದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ (Crude Oil) ಬೆಲೆ ದಿಢೀರ್ ಏರಿಕೆಯಾಗುವ ಸಾಧ್ಯತೆಯನ್ನು ಹೆಚ್ಚಿಸಿದೆ.

ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ಇರಾನ್ ಸಮುದ್ರ ಗಣಿಗಳನ್ನು ಅಳವಡಿಸಿ ಜಾಗತಿಕ ಸರಕು ಸಾಗಣೆಗೆ ಬೆದರಿಕೆ ಒಡ್ಡುತ್ತಿದೆ ಎಂದು ಪೆಂಟಗನ್ ಆರೋಪಿಸಿದೆ. ಇದೇ ಕಾರಣಕ್ಕೆ ಅಮೆರಿಕ ಸೆಂಟ್ರಲ್ ಕಮಾಂಡ್ ಇರಾನ್‌ನ ಕಡಲ ಸ್ವತ್ತುಗಳನ್ನು ನಾಶಪಡಿಸಲು ಕಾರ್ಯಾಚರಣೆ ಚುರುಕುಗೊಳಿಸಿದೆ.

ಈ ಹಿಂದಿನ ಕದನ ವಿರಾಮಗಳು ಮುರಿದುಬಿದ್ದ ನಂತರ, ಸಂಘರ್ಷವು ಭೂಪ್ರದೇಶದಿಂದ ಕಡಲ ಮಾರ್ಗಕ್ಕೆ ಸ್ಥಳಾಂತರಗೊಂಡಿದೆ. ಇರಾನ್ ಮಿತ್ರಪಡೆಗಳು ಮತ್ತು ಅಮೆರಿಕದ ಜಂಟಿ ಸೇನೆಗಳ ನಡುವಿನ ಗುಂಡಿನ ಚಕಮಕಿಯು ಇಡೀ ಗಲ್ಫ್ ಪ್ರಾಂತ್ಯವನ್ನು ಪೂರ್ಣ ಪ್ರಮಾಣದ ಸಮರಕ್ಕೆ ದೂಡುವ ಆತಂಕವನ್ನು ಹೆಚ್ಚಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಬೀದಿದೀಪ ನಿರ್ವಹಣೆಯಲ್ಲಿ ಲೋಪ: ಗುತ್ತಿಗೆದಾರರಿಗೆ 13 ಲಕ್ಷ ರೂ ದಂಡ
ಬೀದಿದೀಪ ನಿರ್ವಹಣೆಯಲ್ಲಿ ಲೋಪ: ಗುತ್ತಿಗೆದಾರರಿಗೆ 13 ಲಕ್ಷ ರೂ ದಂಡ
ಬಾಲ್ಕನಿ ತಡೆಗೋಡೆ ಕುಸಿದು ರಸ್ತೆಗೆ ಬಿದ್ದ ವಿದ್ಯಾರ್ಥಿಗಳು
ಬಾಲ್ಕನಿ ತಡೆಗೋಡೆ ಕುಸಿದು ರಸ್ತೆಗೆ ಬಿದ್ದ ವಿದ್ಯಾರ್ಥಿಗಳು
ಪ್ರಣಾಳಿಕೆ ಫೈಟ್: BR ಪಾಟೀಲ್​​ ಬೆನ್ನಲ್ಲೇ ಸಿಎಂಗೆ ಬಿಕೆ ಹರಿಪ್ರಸಾದ್ ಪತ್ರ
ಪ್ರಣಾಳಿಕೆ ಫೈಟ್: BR ಪಾಟೀಲ್​​ ಬೆನ್ನಲ್ಲೇ ಸಿಎಂಗೆ ಬಿಕೆ ಹರಿಪ್ರಸಾದ್ ಪತ್ರ
ಕಳ್ಳಾಟ ಆಡಿ ಸಿಕ್ಕಿಬಿದ್ದ ಕಿರಣ್​​ಗೆ ಕಿಚ್ಚನ ಕ್ಲಾಸ್: ವಿಡಿಯೋ ನೋಡಿ
ಕಳ್ಳಾಟ ಆಡಿ ಸಿಕ್ಕಿಬಿದ್ದ ಕಿರಣ್​​ಗೆ ಕಿಚ್ಚನ ಕ್ಲಾಸ್: ವಿಡಿಯೋ ನೋಡಿ
ಬಂಗಾಳದಲ್ಲಿ ಟಿಎಂಸಿ ಶಾಸಕ ಕುನಾಲ್ ಘೋಷ್ ಕಾರಿನ ಮೇಲೆ ಮೊಟ್ಟೆ, ಕಲ್ಲು ತೂರಾಟ
ಬಂಗಾಳದಲ್ಲಿ ಟಿಎಂಸಿ ಶಾಸಕ ಕುನಾಲ್ ಘೋಷ್ ಕಾರಿನ ಮೇಲೆ ಮೊಟ್ಟೆ, ಕಲ್ಲು ತೂರಾಟ
ಮೆಚ್ಚಿನ ಶಿಕ್ಷಕನಿಗೆ ಮಕ್ಕಳ ಕಣ್ಣೀರಿನ ವಿದಾಯ
ಮೆಚ್ಚಿನ ಶಿಕ್ಷಕನಿಗೆ ಮಕ್ಕಳ ಕಣ್ಣೀರಿನ ವಿದಾಯ
ಹಾಲಿನ ದರ ಏರಿಕೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಪಿತೃಪಕ್ಷದ ಮಹತ್ವವೇನು? ಈ 15 ದಿನಗಳಲ್ಲಿ ಪಿತೃಕಾರ್ಯ ಏಕೆ ಮಾಡಬೇಕು?
ಪಿತೃಪಕ್ಷದ ಮಹತ್ವವೇನು? ಈ 15 ದಿನಗಳಲ್ಲಿ ಪಿತೃಕಾರ್ಯ ಏಕೆ ಮಾಡಬೇಕು?
ವಿಷ್ಣುವರ್ಧನ್ ಅಮೃತ ಮಹೋತ್ಸವ; ಕಾರ್ಯಕ್ರಮದ ವಿವರ ಹೀಗಿದೆ
ವಿಷ್ಣುವರ್ಧನ್ ಅಮೃತ ಮಹೋತ್ಸವ; ಕಾರ್ಯಕ್ರಮದ ವಿವರ ಹೀಗಿದೆ
ರಾಜೀನಾಮೆ ಬಗ್ಗೆ ಕೇಳಿಬರ್ತಿರೋ ಟೀಕೆಗಳಿಗೆ ಯಶವಂತರಾಯ ಗೌಡ ಏನಂದ್ರು ನೋಡಿ
ರಾಜೀನಾಮೆ ಬಗ್ಗೆ ಕೇಳಿಬರ್ತಿರೋ ಟೀಕೆಗಳಿಗೆ ಯಶವಂತರಾಯ ಗೌಡ ಏನಂದ್ರು ನೋಡಿ