AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾನ್​ನ ಜನನಿಬಿಡ ಪ್ರದೇಶದ ಮೇಲೆ ಹೊಸ ಸೂಪರ್ ಕ್ಷಿಪಣಿ ಪ್ರಯೋಗಿಸಿದ ಯುಎಸ್ ಸೇನೆ

ಇರಾನ್‌ನ ಜನನಿಬಿಡ ಪ್ರದೇಶದ ಮೇಲೆ ಅಮೆರಿಕ ಸೇನೆ ಪ್ರಯೋಗಿಸಿದ ಲಾಕ್‌ಹೀಡ್ ಮಾರ್ಟಿನ್‌ನ PrSM ಕ್ಷಿಪಣಿಯಿಂದ ಭಾರಿ ನಾಗರಿಕ ಸಾವುನೋವು ಸಂಭವಿಸಿದೆ. ಕ್ರೀಡಾ ಸಂಕೀರ್ಣ ಮತ್ತು ವಸತಿ ಪ್ರದೇಶಗಳು ಗುರಿಯಾಗಿದ್ದು, ಯುದ್ಧ ನಿಯಮಗಳ ಉಲ್ಲಂಘನೆಯ ಆರೋಪ ಕೇಳಿಬಂದಿದೆ. ಈ ಭೀಕರ ದಾಳಿಯ ನಂತರವೂ ಪೆಂಟಗನ್, PrSM ಉತ್ಪಾದನೆಯನ್ನು ಹೆಚ್ಚಿಸಲು 4 ಬಿಲಿಯನ್‌ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದೆ.

ಇರಾನ್​ನ ಜನನಿಬಿಡ ಪ್ರದೇಶದ ಮೇಲೆ ಹೊಸ ಸೂಪರ್ ಕ್ಷಿಪಣಿ ಪ್ರಯೋಗಿಸಿದ ಯುಎಸ್ ಸೇನೆ
ಕ್ಷಿಪಣಿ ದಾಳಿ
ನಯನಾ ರಾಜೀವ್
|

Updated on: Sep 01, 2026 | 7:55 AM

Share

ಟೆಹ್ರಾನ್, ಸೆಪ್ಟೆಂಬರ್ 1: ಅಮೆರಿಕ ಸೇನೆಯು ಇರಾನ್(Iran) ವಿರುದ್ಧದ ಯುದ್ಧದಲ್ಲಿ ಮೊದಲ ಬಾರಿಗೆ ಪ್ರಯೋಗಿಸಿದ ಲಾಕ್‌ಹೀಡ್ ಮಾರ್ಟಿನ್ (Lockheed Martin) ನಿರ್ಮಿತ ಅತ್ಯಾಧುನಿಕ ಪ್ರೆಸಿಷನ್ ಸ್ಟ್ರೈಕ್ ಮಿಸೈಲ್ (PrSM) ನಿಂದಾಗಿ ಭಾರೀ ಪ್ರಮಾಣದ ನಾಗರಿಕ ಸಾವು-ನೋವುಗಳು ಸಂಭವಿಸಿರುವುದು ಬಯಲಾಗಿದೆ.

ಕ್ರೀಡಾ ಸಂಕೀರ್ಣ ಮತ್ತು ವಸತಿ ಪ್ರದೇಶದ ಮೇಲೆ ದಾಳಿ: ಲ್ಯಾಮರ್ಡ್‌ನ ಶಾಹಿದ್ ನೈಮಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮತ್ತು ಎರಡು ಜನನಿಬಿಡ ವಸತಿ ಬಡಾವಣೆಗಳ ಮೇಲೆ ಕ್ಷಿಪಣಿಗಳು ಅಪ್ಪಳಿಸಿವೆ. ತಾಲ್-ಎ ಖಾಂದಾಗ್ ಪ್ರದೇಶದಲ್ಲಿ ಮನೆಯ ಹೊರಗೆ ಆಟವಾಡುತ್ತಿದ್ದ 2 ವರ್ಷದ ಬಾಲಕಿ ಅವಿನಾ ಬರ್ಜೆಗರ್, ಸ್ಫೋಟದ ಕೇಂದ್ರದಿಂದ ಬರೋಬ್ಬರಿ 50 ಮೀಟರ್ ದೂರದಲ್ಲಿದ್ದರೂ ಕ್ಷಿಪಣಿಯಿಂದ ಸಿಡಿದ  ಚೂರುಗಳು ತಲೆಗೆ ತಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಸ್ಫೋಟಗೊಂಡ ಸ್ಥಳದಿಂದ ಸುಮಾರು 170 ಮೀಟರ್ ದೂರದಲ್ಲಿದ್ದ ಶಾಲೆಯೊಂದರ ಗೋಡೆಗಳು ಮತ್ತು ಕಿಟಕಿಗಳು ಛಿದ್ರಗೊಂಡಿವೆ. ಉಪಗ್ರಹ ಚಿತ್ರಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳು ಕಟ್ಟಡಗಳು ಮತ್ತು ವಾಹನಗಳ ಮೇಲೆ ಕ್ಷಿಪಣಿಯ  ಚೂರುಗಳು ರಂಧ್ರ ಕೊರೆದಿರುವುದನ್ನು ಖಚಿತಪಡಿಸಿವೆ.

ಯುದ್ಧ ಕಾನೂನುಗಳ ಕುರಿತು ಮಾಜಿ ಅಮೆರಿಕ ಸೇನಾ ಸಲಹೆಗಾರ ಮೈಕೆಲ್ ಮೀಯರ್ ಸೇರಿದಂತೆ ಆರು ಪ್ರಮುಖ ಶಸ್ತ್ರಾಸ್ತ್ರ ತಜ್ಞರು, “ಜನನಿಬಿಡ ನಾಗರಿಕ ಪ್ರದೇಶಗಳಲ್ಲಿ ಇಂತಹ ಭಾರೀ ವಿನಾಶಕಾರಿ ಮತ್ತು ವ್ಯಾಪಕವಾಗಿ  ಇಂಥಾ  ಕ್ಷಿಪಣಿಗಳನ್ನು ಬಳಸುವುದು ಯುದ್ಧ ನಿಯಮಾವಳಿಗಳಿಗೆ ವಿರುದ್ಧ” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಓದಿ: ಮುಸ್ಲಿಂ ರಾಷ್ಟ್ರಗಳನ್ನು ಒಡೆಯಲು ಅಮೆರಿಕ-ಇಸ್ರೇಲ್ ಸಂಚು: ಇಸ್ಲಾಮಿಕ್ ಒಕ್ಕೂಟಕ್ಕೆ ಇರಾನ್‌ನಿಂದ ತುರ್ತು ಕರೆ

ಅಮೆರಿಕದ ಸೆಂಟ್ರಲ್ ಕಮಾಂಡ್ ಈ ದಾಳಿಯ ನೇರ ಹೊಣೆಯನ್ನು ನಿರಾಕರಿಸಿದರೂ, ಇರಾನ್ ಕಾರ್ಯಾಚರಣೆಯಲ್ಲಿ ಮೊದಲ ಬಾರಿಗೆ ಐತಿಹಾಸಿಕ ಕ್ಷಿಪಣಿ ಯಶಸ್ವಿಯಾಗಿ ಉಡಾಯಿಸಲಾಗಿದೆ ಎಂದು ಮಾರ್ಚ್ ಆರಂಭದಲ್ಲೇ ಪ್ರಕಟಿಸಿತ್ತು.

ಈ ಭೀಕರ ದಾಳಿಯ ಬೆನ್ನಲ್ಲೇ, ಪೆಂಟಗನ್ ಈ ಕ್ಷಿಪಣಿಯ ಉತ್ಪಾದನೆಯನ್ನು ನಾಲ್ಕು ಪಟ್ಟು ಹೆಚ್ಚಿಸಲು ಲಾಕ್‌ಹೀಡ್ ಮಾರ್ಟಿನ್ ಸಂಸ್ಥೆಯೊಂದಿಗೆ 4 ಬಿಲಿಯನ್‌ ಡಾಲರ್​ಗಿಂತಲೂ ಹೆಚ್ಚು ಮೌಲ್ಯದ ಬೃಹತ್ ರಕ್ಷಣಾ ಒಪ್ಪಂದವನ್ನು ಮಾಡಿಕೊಂಡಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಮಂಜನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ: ಸಂಗೀತಾ ಭಟ್ ಅಚ್ಚರಿಯ ಹೇಳಿಕೆ
ಮಂಜನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ: ಸಂಗೀತಾ ಭಟ್ ಅಚ್ಚರಿಯ ಹೇಳಿಕೆ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ