ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.
ಭಾರತ ವಿಭಾಗದ ಬಾಗಿಲು ಮುಚ್ಚಿದ ಅಮೆರಿಕದ ಓಪನ್‌ಡೋರ್; ಕಂಪನಿಯ ಎಲ್ಲಾ 250 ಭಾರತೀಯ ಉದ್ಯೋಗಿಗಳಿಗೆ ಗೇಟ್ಪಾಸ್
Opendoor Closes India Ops: ಅಮೆರಿಕದ ರಿಯಲ್ ಎಸ್ಟೇಟ್ ಟೆಕ್ ಕಂಪನಿ ಓಪನ್‌ಡೋರ್ ತನ್ನ ಭಾರತದ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದ್ದು, ಸುಮಾರು 250 ಉದ್ಯೋಗಿಗಳಿಗೆ ಕೆಲಸ ಕಡಿತವಾಗಿದೆ. ಕಂಪನಿಯು ತನ್ನ ಗಮನವನ್ನು ಅಮೆರಿಕದಲ್ಲಿರುವ ಗ್ರಾಹಕರಿಗೆ ಮತ್ತು AI-ನೇಟಿವ್ ವ್ಯವಸ್ಥೆಗಳಿಗೆ ಬದಲಾಯಿಸಿದೆ. ಕೆಲಸ ಕಳೆದುಕೊಂಡವರಿಗೆ ಪರಿಹಾರ ಪ್ಯಾಕೇಜ್ ನೀಡಲಾಗುವುದು ಎಂದು ಸಿಇಒ ಕಾಜ್ ನೆಜಾಟಿಯನ್ ತಿಳಿಸಿದ್ದಾರೆ. ಇದು ತಂತ್ರಜ್ಞಾನದಲ್ಲಿ AI ಪ್ರಭಾವದಿಂದಾದ ಮತ್ತೊಂದು ಉದ್ಯೋಗ ಕಡಿತವಾಗಿದೆ.
- Vijaya Sarathy SN
- Updated on: Jun 11, 2026
- 12:57 pm
ಪೆಟ್ರೋಲ್ ಬೆಲೆ ಇಳಿಯುತ್ತಾ? ಎಥನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಸುಂಕ ರದ್ದುಗೊಳಿಸಿರುವುದು ಯಾರಿಗೆ ಲಾಭ?
Excise Duty Waived, But Petrol Price Won't Drop Yet: ಕೇಂದ್ರ ಸರ್ಕಾರವು ಹೆಚ್ಚಿನ ಎಥೆನಾಲ್ ಮಿಶ್ರಿತ ಪೆಟ್ರೋಲ್ (E22-E30) ಮೇಲಿನ ಅಬಕಾರಿ ಸುಂಕವನ್ನು ರದ್ದುಗೊಳಿಸಿದೆ. ಆದರೆ, ದೇಶದಲ್ಲಿ ಪ್ರಚಲಿತದಲ್ಲಿರುವ E20 ಪೆಟ್ರೋಲ್ ಗ್ರಾಹಕರಿಗೆ ತಕ್ಷಣಕ್ಕೆ ಬೆಲೆ ಇಳಿಕೆಯಾಗುವುದಿಲ್ಲ. ಈ ನಿರ್ಧಾರವು ಭಾರತದ E30 ಎಥೆನಾಲ್ ಗುರಿಯ ಭಾಗವಾಗಿದೆ. ಇದು ರೈತರ ಆದಾಯ ಹೆಚ್ಚಿಸಲು, ಕಚ್ಚಾ ತೈಲ ಆಮದು ವೆಚ್ಚ ಕಡಿಮೆ ಮಾಡಲು ಮತ್ತು ದೀರ್ಘಾವಧಿಯಲ್ಲಿ ಆರ್ಥಿಕತೆಗೆ ಪ್ರಯೋಜನ ನೀಡಲು ಸಹಾಯಕವಾಗಿದೆ.
- Vijaya Sarathy SN
- Updated on: Jun 11, 2026
- 12:15 pm
Gold Rate: ಬಂಗಾರ ಮತ್ತಷ್ಟು ಅಗ್ಗ; ನಿನ್ನೆ 395 ರೂ, ಇವತ್ತು 195 ರೂ ಕುಸಿತ
Gold Price 11 June 2026: ಚಿನ್ನದ ಬೆಲೆಯ ಇಳಿಕೆ ಮುಂದುವರಿದಿದೆ. ನಿನ್ನೆ 395 ರೂ ಇಳಿದಿದ್ದ ಇದರ ಬೆಲೆ ಗುರುವಾರ 195 ರೂ ತಗ್ಗಿದೆ. ಆಭರಣ ಚಿನ್ನದ ಬೆಲೆ 13,645 ರೂನಿಂದ 13,350 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 14,564 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ ಗ್ರಾಮ್ಗೆ 250 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 260 ರೂ ಇದೆ.
- Vijaya Sarathy SN
- Updated on: Jun 11, 2026
- 11:24 am
ಸೆಮಿಕಂಡಕ್ಟರ್ ಉದ್ಯಮಕ್ಕೆ ಭಾರತ್ ಫೋರ್ಜ್ ಎಂಟ್ರಿ; ಮೂರು ವರ್ಷಗಳ ಸತತ ಪ್ರಯತ್ನ, ಶ್ರಮಕ್ಕೆ ಸಿಕ್ಕ ಫಲ
Bharat Forge Enters Chip Manufacturing: ಭಾರತ್ ಫೋರ್ಜ್, ಆಟೋ ಬಿಡಿಭಾಗಗಳಿಂದ ಜಾಗತಿಕ ಸೆಮಿಕಂಡಕ್ಟರ್ ಉದ್ಯಮಕ್ಕೆ ಪ್ರವೇಶಿಸಿದೆ. ಮೂರು ವರ್ಷಗಳ ಪರಿಶ್ರಮದ ನಂತರ, ಕಂಪನಿಯು ವಿಶ್ವದ ಪ್ರಮುಖ ಚಿಪ್ ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದು ಭವಿಷ್ಯದ ತಂತ್ರಜ್ಞಾನಕ್ಕೆ ಬೇಕಾದ ನಿಖರ ಯಂತ್ರೋಪಕರಣಗಳ ಬಿಡಿಭಾಗಗಳನ್ನು ಪೂರೈಸಲಿದೆ. ಬಾಬಾ ಕಲ್ಯಾಣಿ ಪ್ರಕಾರ, ಇದು ಕಂಪನಿಯ ಇತಿಹಾಸದಲ್ಲೇ ಅತಿದೊಡ್ಡ ಮೈಲಿಗಲ್ಲು, ಭಾರತವನ್ನು ಜಾಗತಿಕ ಚಿಪ್ ಹಬ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
- Vijaya Sarathy SN
- Updated on: Jun 10, 2026
- 6:54 pm
ಮ್ಯೂಚುವಲ್ ಫಂಡ್ಗಿಂತಲೂ ಹೆಚ್ಚಿನ ಲಾಭ ನೀಡುತ್ತಾ ಇಪಿಎಫ್? ಪಿಂಚಣಿ ಸ್ಕೀಮ್ನಲ್ಲಿ ಹೆಚ್ಚಿನ ಜನರಿಗೆ ಗೊತ್ತಿಲ್ಲದ ಸಂಗತಿಯೊಂದಿದೆ
EPF vs Mutual Funds: ಇಪಿಎಫ್ ಸಾಮಾನ್ಯ ಎಫ್ಡಿಗಳಿಗಿಂತ ಹೆಚ್ಚಿನ ಬಡ್ಡಿ ಮತ್ತು ಮ್ಯೂಚುಯಲ್ ಫಂಡ್ಗಳಿಗಿಂತ ಸುರಕ್ಷಿತ ಹೂಡಿಕೆ. ಇದರ E-E-E ಸ್ಥಾನಮಾನ ಮತ್ತು ₹2.5 ಲಕ್ಷದವರೆಗಿನ ಬಡ್ಡಿಯ ಮೇಲಿನ ತೆರಿಗೆ ವಿನಾಯಿತಿ ತೆರಿಗೆದಾರರಿಗೆ ಅದ್ಭುತ ಲಾಭ ನೀಡುತ್ತದೆ. ಮಾರುಕಟ್ಟೆ ಅಪಾಯವಿಲ್ಲದೆ, ಸರ್ಕಾರ ಖಾತರಿಪಡಿಸಿದ ಶೇ. 8.25 ರಿಟರ್ನ್ಸ್ ಜೊತೆಗೆ, ದೀರ್ಘಾವಧಿಯಲ್ಲಿ ಇದು ನಿವೃತ್ತಿ ಯೋಜನೆಗೆ ಅತಿ ಉತ್ತಮ ಆಯ್ಕೆಯಾಗಿದೆ.
- Vijaya Sarathy SN
- Updated on: Jun 10, 2026
- 6:08 pm
ಹಾರ್ಮುಜ್ನಲ್ಲಿ ಅಮೆರಿಕದ ಪೈಲಟ್‌ಗಳ ಜೀವ ಉಳಿಸಿದ ಡ್ರೋನ್ ಬೋಟ್; ಇದರ ಹಿಂದಿರುವ ಶಕ್ತಿ ವಿಭವ್ ಅಲ್ಟೇಕರ್
Vibhav Altekar's Drone Boat: ಭಾರತೀಯ ಮೂಲದ ಇಂಜಿನಿಯರ್ ವಿಭವ್ ಅಲ್ಟೇಕರ್ ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ಪೈಲಟ್‌ಗಳ ರಕ್ಷಣೆಯಲ್ಲಿ ಜಾಗತಿಕ ಗಮನ ಸೆಳೆದಿದ್ದಾರೆ. ಸಾರೋನಿಕ್ ಟೆಕ್ನಾಲಜೀಸ್‌ನ ಸಹ-ಸಂಸ್ಥಾಪಕರಾದ ಇವರು ವಿನ್ಯಾಸಗೊಳಿಸಿದ ಅತ್ಯಾಧುನಿಕ ಡ್ರೋನ್ ಬೋಟ್ (ಕಾರ್ಸ್ಏರ್), ಸಮುದ್ರಕ್ಕೆ ಬಿದ್ದ ಹೆಲಿಕಾಪ್ಟರ್‌ನ ಪೈಲಟ್‌ಗಳನ್ನು ಯಶಸ್ವಿಯಾಗಿ ರಕ್ಷಿಸಿತು. ಈ AI ಆಧಾರಿತ, ಮಾನವರಹಿತ ನೌಕೆಯು (USV) ಅದರ ವಿಶಿಷ್ಟ ವೈಶಿಷ್ಟ್ಯಗಳಿಂದಾಗಿ ಮಿಲಿಟರಿ ರಕ್ಷಣೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
- Vijaya Sarathy SN
- Updated on: Jun 10, 2026
- 5:35 pm
ಟಿಸಿಎಸ್ನಲ್ಲಿ 3 ವರ್ಷದಲ್ಲಿ ಎಐ ಏಜೆಂಟ್ಗಳು ಉದ್ಯೋಗಿಗಳ ಸಮಕ್ಕೆ ಬರಲಿವೆಯಂತೆ
TCS's AI Future: ಟಿಸಿಎಸ್ ಭವಿಷ್ಯದ ಕಾರ್ಮಿಕ ನೀತಿ: ಮುಂದಿನ 3 ವರ್ಷಗಳಲ್ಲಿ 5 ಲಕ್ಷ ಎಐ ಏಜೆಂಟ್‌ಗಳನ್ನು ಹೊಂದಲು ಟಿಸಿಎಸ್ ಸಿದ್ಧವಾಗಿದ್ದು, ಮಾನವ ಉದ್ಯೋಗಿಗಳಿಗೆ ಸಮಾನ ಸಂಖ್ಯೆಯಲ್ಲಿ ಎಐ ಕಾರ್ಯನಿರ್ವಹಿಸಲಿದೆ. ನೇಮಕಾತಿ ಕುಸಿತವಾದರೂ, ಲೇ-ಆಫ್ ಇಲ್ಲ, ಆದರೆ ಎಐ ಕೌಶಲ್ಯ ಅತ್ಯಗತ್ಯ. ಎಐ ಮೂಲಕ ಟಿಸಿಎಸ್ $2.5 ಬಿಲಿಯನ್ ಆದಾಯ ಗಳಿಸುತ್ತಿದ್ದು, ಇದು ಕಂಪನಿಯ ಮುಂದಿನ ಬೆಳವಣಿಗೆಗೆ ಪ್ರಮುಖ ಕಾರಣವಾಗಲಿದೆ ಎಂದು ಅಧ್ಯಕ್ಷ ಎನ್. ಚಂದ್ರಶೇಖರನ್ ತಿಳಿಸಿದ್ದಾರೆ.
- Vijaya Sarathy SN
- Updated on: Jun 10, 2026
- 3:56 pm
ಒಮಾನ್-ಭಾರತ ಗ್ಯಾಸ್ ಪೈಪ್‌ಲೈನ್ ಪ್ರಾಜೆಕ್ಟ್ಗೆ ಮರುಜೀವ; ಸಾಧ್ಯತಾ ವರದಿಗೆ ಸರ್ಕಾರ ಆದೇಶ; ಈ ಯೋಜನೆಯಿಂದ ಭಾರತಕ್ಕಿದೆಯಾ ಲಾಭ?
Oman-Gujarat deep-sea gas pipeline project, feasibility study ordered: ಪಶ್ಚಿಮ ಏಷ್ಯಾ ಉದ್ವಿಗ್ನತೆಯ ನಡುವೆ, ಭಾರತವು ₹40,000 ಕೋಟಿ ವೆಚ್ಚದ 'ಒಮಾನ್-ಗುಜರಾತ್ ಆಳಸಮುದ್ರ ನೈಸರ್ಗಿಕ ಅನಿಲ ಪೈಪ್‌ಲೈನ್' ಯೋಜನೆಗೆ ಮರುಜೀವ ನೀಡಿದೆ. ಇದು ಭಾರತದ ಇಂಧನ ಭದ್ರತೆಯನ್ನು ಹೆಚ್ಚಿಸಿ, ಹಾರ್ಮುಜ್ ಜಲಸಂಧಿ ಮತ್ತು ಪಾಕಿಸ್ತಾನದ ಹಸ್ತಕ್ಷೇಪವನ್ನು ತಪ್ಪಿಸುತ್ತದೆ. ಗೇಲ್, IOCL, EIL ಸಂಸ್ಥೆಗಳಿಗೆ ಸಾಧ್ಯತಾ ವರದಿ ಸಿದ್ಧಪಡಿಸಲು ನಿರ್ದೇಶಿಸಲಾಗಿದ್ದು, ಭಾರತದ 2030ರ ಇಂಧನ ಗುರಿ ತಲುಪಲು ಇದು ನಿರ್ಣಾಯಕವಾಗಿದೆ.
- Vijaya Sarathy SN
- Updated on: Jun 10, 2026
- 2:53 pm
ವಿಶ್ವದಾಖಲೆ ಸನಿಹದಲ್ಲಿ 23 ವರ್ಷದ ಆದಿತ್ ಪಲಿಚಾ; ಲಿಸ್ಟೆಡ್ ಕಂಪನಿಯ ಅತಿ ಕಿರಿಯ ಸಿಇಒ ಎನಿಸಲಿದ್ದಾರೆ ಝೆಪ್ಟೋ ಸಂಸ್ಥಾಪಕ
Aadit Palicha Poised to Be Youngest MD/CEO of a Publicly Listed Company: ಕ್ವಿಕ್ ಕಾಮರ್ಸ್ ದೈತ್ಯ ಝೆಪ್ಟೋದ ಸಹ-ಸ್ಥಾಪಕ ಆದಿತ್ ಪಲಿಚಾ, ತಮ್ಮ 23ನೇ ವಯಸ್ಸಿನಲ್ಲಿ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆದ ಕಂಪನಿಯ ಅತಿ ಕಿರಿಯ MD/CEO ಆಗಲು ಸಿದ್ಧರಾಗಿದ್ದಾರೆ. ಐದು ವರ್ಷಗಳ ಹಿಂದೆ ಸ್ಟ್ಯಾನ್‌ಫೋರ್ಡ್ ತೊರೆದು, 10 ನಿಮಿಷಗಳಲ್ಲಿ ದಿನಸಿ ವಿತರಣೆಯೊಂದಿಗೆ ಝೆಪ್ಟೋ ಆರಂಭಿಸಿದ ಆದಿತ್ ಮತ್ತು ಕೈವಲ್ಯ ವೋಹ್ರಾ, ಈಗ 9,000-10,000 ಕೋಟಿ ರೂ. IPOಗೆ ಮುಂದಾಗಿದ್ದು, ಭಾರತೀಯ ಸ್ಟಾರ್ಟ್‌ಅಪ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.
- Vijaya Sarathy SN
- Updated on: Jun 10, 2026
- 1:03 pm
ಕಳೆದ 12 ವರ್ಷದಲ್ಲಿ ಆಡಳಿತ ಮತ್ತು ಹಣಕಾಸು ವ್ಯವಸ್ಥೆಯಲ್ಲಿ ಸಂಚಲನ ಸೃಷ್ಟಿಸಿದ ಡಿಜಿಟಲ್ ಸೇವೆಗಳು
Modi Govt's Digital Transformation: ಮೋದಿ ಸರ್ಕಾರದ 12 ವರ್ಷಗಳ ಅವಧಿಯಲ್ಲಿ ಡಿಜಿಟಲ್ ಸೇವೆಗಳು ಭಾರತೀಯರ ದೈನಂದಿನ ಜೀವನವನ್ನು ಪರಿವರ್ತಿಸಿವೆ. ಯುಪಿಐ, ಜನ ಧನ್ ಖಾತೆ, ಆಧಾರ್, ಡಿಬಿಟಿ, ಫಾಸ್ಟ್‌ಟ್ಯಾಗ್‌ನಂತಹ ಯೋಜನೆಗಳು ಹಣಕಾಸು ಸೇರ್ಪಡೆ, ಆಡಳಿತದ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಿವೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ನಾಗರಿಕರಿಗೆ ಸುಲಭ ಹಾಗೂ ಸುಗಮ ಸೇವೆಗಳನ್ನು ಒದಗಿಸಿ, ಡಿಜಿಟಲ್ ನಂಬಿಕೆಯನ್ನು ಮೂಡಿಸಿವೆ.
- Vijaya Sarathy SN
- Updated on: Jun 10, 2026
- 11:55 am
Gold Rate: ಹತ್ತು ಗ್ರಾಮ್ ಚಿನ್ನದ ಬೆಲೆ 3,950 ರೂ ಕುಸಿತ; ಬೆಳ್ಳಿಯೂ ಭರ್ಜರಿ ಇಳಿಕೆ
Gold Price 10 June 2026: ಚಿನ್ನ, ಬೆಳ್ಳಿ ಬೆಲೆಗಳು ಬುಧವಾರ ಇಳಿಕೆ ಕಂಡಿವೆ. ಚಿನ್ನದ ಬೆಲೆ ಗ್ರಾಮ್ಗೆ 395 ರೂ, ಬೆಳ್ಳಿ ಬೆಲೆ 10 ರೂ ಕುಸಿತ ಕಂಡಿವೆ. 22 ಕ್ಯಾರಟ್ ಚಿನ್ನದ ಬೆಲೆ 14,040 ರೂನಿಂದ 13,645 ರೂಗೆ ಇಳಿದಿದೆ. 24 ಕ್ಯಾರಟ್ ಚಿನ್ನದ ಬೆಲೆ 14,886 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ ಗ್ರಾಮ್ಗೆ 250 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 260 ರೂ ಇದೆ.
- Vijaya Sarathy SN
- Updated on: Jun 10, 2026
- 11:00 am
ಆನ್ಲೈನ್ನಲ್ಲಿ ಶಾಪಿಂಗ್ ಮಾಡುವ ಹೆಚ್ಚಿನವರಿಗೆ ಟೊಪ್ಪಿಹಾಕುತ್ತಿವೆ ಡಾರ್ಕ್ ಪ್ಯಾಟರ್ನ್ಸ್; ಬೆಚ್ಚಿಬೀಳಿಸುತ್ತಿದೆ ಈ ವರದಿ
India's face severe dark patterns during online shopping: 'ಡಾಟಮ್ ಇಂಟೆಲಿಜೆನ್ಸ್' (Datum Intelligence) ಸಂಸ್ಥೆ ಬಿಡುಗಡೆ ಮಾಡಿರುವ ಹೊಸ ವರದಿಯು ಡಾರ್ಕ್ ಪ್ಯಾಟರ್ನ್ಗಳ ಬಗ್ಗೆ ಬೆಚ್ಚಿಬೀಳಿಸುವ ಸಂಗತಿ ಹೊರಗೆಡವಿದೆ. ಭಾರತದ ಆನ್‌ಲೈನ್ ಶಾಪಿಂಗ್ ಕ್ಷೇತ್ರದಲ್ಲಿ ಗ್ರಾಹಕರು ಭಾರಿ ಪ್ರಮಾಣದ ಹಣವನ್ನು ಕಳೆದುಕೊಳ್ಳುತ್ತಿದ್ದಾರೆಂದು ವರದಿ ಹೇಳುತ್ತದೆ. ಅನೇಕ ಪ್ಲಾಟ್ಫಾರ್ಮ್ಗಳು ಗ್ರಾಹಕರನ್ನು ಮರುಳು ಮಾಡುವ ರೀತಿಯಲ್ಲಿ ಮಾರ್ಕೆಟಿಂಗ್ ಮಾಡಿ, ವಂಚನೆ ಎಸಗುತ್ತಿವೆ, ಅಥವಾ ಬಲವಂತವಾಗಿ ಸರಕುಗಳನ್ನು ಮಾರುತ್ತಿವೆ.
- Vijaya Sarathy SN
- Updated on: Jun 9, 2026
- 7:12 pm