Year-End Offers: ಎಸ್ ಯುವಿ ಕಾರುಗಳ ಮೇಲೆ ಭರ್ಜರಿ ಇಯರ್ ಎಂಡ್ ಆಫರ್ ಘೋಷಣೆ
ವರ್ಷಾಂತ್ಯದ ಹೊಸ ಆಫರ್ ಗಳಲ್ಲಿ ಕಾರು ಖರೀದಿಸುವ ಗ್ರಾಹಕರು ಗರಿಷ್ಠ ಎರಡೂವರೆ ಲಕ್ಷದ ತನಕ ಆಫರ್ ಪಡೆದುಕೊಳ್ಳಬಹುದಾಗಿದ್ದು, ಹೊಸ ಕಾರು ಆಫರ್ ಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಕಾರು ಮಾರುಕಟ್ಟೆಯಲ್ಲಿ ಸದ್ಯ ಎಸ್ ಯುವಿ(SUV’s) ಟ್ರೆಂಡ್ ಏರಿಕೆಯಲ್ಲಿದ್ದು, ಗ್ರಾಹಕರ ಪ್ರಮುಖ ಆಕರ್ಷಣೆಯಾಗಿವೆ. ಕಳೆದ ಎರಡು ವರ್ಷಗಳಲ್ಲಿ ಎಸ್ ಯುವಿ ಮಾರಾಟವು ಗಮನಾರ್ಹ ಬೆಳವಣಿಗೆ ಕಂಡಿದ್ದು, ಈ ವರ್ಷಾಂತ್ಯದಲ್ಲಿ ಮತ್ತಷ್ಟು ಮಾರಾಟವಾಗುವ ನೀರಿಕ್ಷೆಯಿದೆ. ಹೀಗಾಗಿ ಹೊಸ ಎಸ್ ಯುವಿ ಕಾರುಗಳ ಮೇಲೆ ಭರ್ಜರಿ ಆಫರ್ ನೀಡಲಾಗುತ್ತಿದೆ. ಹೊಸ ಆಫರ್ ಗಳಲ್ಲಿ ಪ್ರಮುಖ ಕಾರುಗಳು ಮೇಲೆ ಗ್ರಾಹಕರು ಎರಡೂವರೆ ಲಕ್ಷದ ತನಕ ಆಫರ್ ಪಡೆದುಕೊಳ್ಳಬಹುದಾಗಿದೆ.
ಎಸ್ ಯುವಿ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್, ಜೀಪ್, ಸ್ಕೋಡಾ ಮತ್ತು ಫೋಕ್ಸ್ ವ್ಯಾಗನ್ ಕಂಪನಿಗಳು ಹಲವಾರು ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್ ಗಳಲ್ಲಿ ಗ್ರಾಹಕರು ಕ್ಯಾಶ್ ಬ್ಯಾಕ್, ಎಕ್ಸ್ ಚೆಂಜ್ ಮತ್ತು ಕಾರ್ಪೊರೇಟ್ ಆಫರ್ ನೀಡಲಾಗುತ್ತಿದೆ.
ಟಾಟಾ ಸಫಾರಿ ಮತ್ತು ಹ್ಯಾರಿಯರ್
ಹೊಸ ಆಫರ್ ಗಳಲ್ಲಿ ಮೊದಲಿಗೆ ನೋಡುವುದಾದರೆ ಟಾಟಾ ಮೋಟಾರ್ಸ್ ಕಂಪನಿಯು ಹ್ಯಾರಿಯರ್ ಮತ್ತು ಸಫಾರಿ ಕಾರುಗಳ ಮೇಲೆ ಅತ್ಯುತ್ತಮ ಉಳಿತಾಯದ ಆಫರ್ ನೀಡುತ್ತಿದೆ. ಹ್ಯಾರಿಯರ್ ಮತ್ತು ಸಫಾರಿ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಗರಿಷ್ಠ ರೂ. 1 ಲಕ್ಷ ಆಫರ್ ಲಭ್ಯವಿದೆ. ಹೊಸ ಆಫರ್ ಗಳಲ್ಲಿ ಹೆಚ್ಚಿನ ಮಟ್ಟದ ಎಕ್ಸ್ ಚೆಂಜ್ ಆಫರ್ ಲಭ್ಯವಿದ್ದು, ಆಯ್ದ ವೆರಿಯೆಂಟ್ ಗಳಲ್ಲಿ ಕ್ಯಾಶ್ ಬ್ಯಾಕ್ ಆಫರ್ ಪಡೆಯಬಹುದಾಗಿದೆ.
ಇದನ್ನೂ ಓದಿ: ರೂ. 10 ಲಕ್ಷ ಬಜೆಟ್ ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಕಾರುಗಳಿವು!
ಫೋಕ್ಸ್ ವ್ಯಾಗನ್ ಟೈಗನ್
ಹೊಸ ಆಫರ್ ಗಳಲ್ಲಿ ಫೋಕ್ಸ್ ವ್ಯಾಗನ್ ಕೂಡಾ ಉತ್ತಮ ಆಫರ್ ನೀಡುತ್ತಿದೆ. ಟೈಗನ್ ಕಾರು ಖರೀದಿಯ ಮೇಲೆ ಜರ್ಮನ್ ಕಾರು ಕಂಪನಿಯು ರೂ. 1 ಲಕ್ಷದ ಆಫರ್ ನೀಡುತ್ತಿದೆ. ರೂ. 1 ಲಕ್ಷ ಆಫರ್ ನಲ್ಲಿ ಕ್ಯಾಶ್ ಬ್ಯಾಕ್ ಜೊತೆ ಎಕ್ಸ್ ಚೆಂಜ್ ಆಫರ್ ಲಭ್ಯವಿದೆ. ಸದ್ಯ ಮಾರುಕಟ್ಟೆಯಲ್ಲಿ ಟೈಗನ್ ಕಾರು ಮಾದರಿಯು ಪ್ರೀಮಿಯಂ ಎಸ್ ಯುವಿಯಾಗಿ ಮಾರಾಟಗೊಳ್ಳುತ್ತಿದ್ದು, 1.0 ಲೀಟರ್ ಮತ್ತು 1.5 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ.
ಸ್ಕೋಡಾ ಕುಶಾಕ್
ಫೋಕ್ಸ್ ವ್ಯಾಗನ್ ಕಂಪನಿಯ ಆಫರ್ ಮಾದರಿಯಲ್ಲಿ ಸ್ಕೋಡಾ ಕಂಪನಿಯು ಕೂಡಾ ಅತ್ಯುತ್ತಮ ಆಫರ್ ನೀಡುತ್ತಿದೆ. ಟೈಗುನ್ ಪ್ಲ್ಯಾಟ್ ಫಾರ್ಮ್ ಹೊಂದಿರುವ ಕುಶಾಕ್ ಕಾರು ಮಾದರಿಯ ಮೇಲೆ ರೂ. 1.25 ಲಕ್ಷ ಆಫರ್ ನೀಡುತ್ತಿದೆ. ಇಂಡಿಯಾ 2.0 ಯೋಜನೆ ಅಡಿಯಲ್ಲಿ ನಿರ್ಮಾಣವಾಗಿರುವ ಸ್ಕೋಡಾ ಕುಶಾಕ್ ಕಾರು ಫೋಕ್ಸ್ ವ್ಯಾಗನ್ ಟೈಗುನ್ ಮಾದರಿಯಲ್ಲಿ ತಾಂತ್ರಿಕ ಸೌಲಭ್ಯ ಹೊಂದಿದೆ. ಇದು ಕೂಡಾ 1.0 ಲೀಟರ್ ಮತ್ತು 1.5 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಹಲವಾರು ಪ್ರೀಮಿಮಂ ಸೌಲಭ್ಯಗಳಿವೆ.
ಇದನ್ನೂ ಓದಿ: ಕರ್ನಾಟಕ ಕೈ ತಪ್ಪಿತು ರೂ. 10 ಸಾವಿರ ಕೋಟಿ ಮೌಲ್ಯದ ಮಹೀಂದ್ರಾ ಬೃಹತ್ ಯೋಜನೆ
ಜೀಪ್ ಕಂಪಾಸ್ ಮತ್ತು ಮೆರಿಡಿಯನ್
ಜೀಪ್ ಇಂಡಿಯಾ ಕಂಪನಿಯು ಕೂಡಾ ಮೆರಿಡಿಯನ್ ಮತ್ತು ಕಂಪಾಸ್ ಕಾರು ಮಾದರಿಗಳ ಮೇಲೆ ಭರ್ಜರಿ ಆಫರ್ ನೀಡುತ್ತಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಮೆರಿಡಿಯನ್ ಕಾರು ಫುಲ್ ಸೈಜ್ ಎಸ್ ಯುವಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ. ಇದರೊಂದಿಗೆ ಕಂಪಾಸ್ ಕಾರು ಕೂಡಾ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ. ಈ ಎರಡು ಹೊಸ ಕಾರು ಮಾದರಿಗಳಿಗಾಗಿ ಜೀಪ್ ಕಂಪನಿಯು ಆಫರ್ ನೀಡುತ್ತಿದ್ದು, ಮೆರಿಡಿಯನ್ ಕಾರಿನ ಮೇಲೆ ರೂ. 2.50 ಲಕ್ಷ ಆಫರ್ ನೀಡುತ್ತಿದೆ. ಹಾಗೆಯೇ ಕಂಪಾಸ್ ಕಾರಿನ ಮೇಲೆ 1.50 ಲಕ್ಷ ಆಫರ್ ನೀಡುತ್ತಿದ್ದು, ಹೊಸ ಆಫರ್ ಗಳು ಈ ತಿಂಗಳಾಂತ್ಯದ ತನಕ ಮಾತ್ರ ಲಭ್ಯವಿರಲಿವೆ.
Published On - 7:48 pm, Mon, 19 December 22